ಜಮ್ಮು ವೈಷ್ಣೋದೇವಿ ದೇವಾಲಯದಲ್ಲಿ Amit Shah ಪ್ರಾರ್ಥನೆ: Video ನೋಡಿ

By BK AshwinFirst Published Oct 4, 2022, 12:23 PM IST
Highlights

ನವರಾತ್ರಿ ಉತ್ಸವದ 9ನೇ ದಿನ ಅಮಿತ್ ಶಾ ಪ್ರಸಿದ್ಧ ವೈಷ್ಣೋದೇವಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಜಮ್ಮು ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವರು ಹಲವು ಸಭೆಗಳನ್ನು ಸಹ ನಡೆಸಲಿದ್ದಾರೆ. 

ಜಮ್ಮು ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ (Home Minister) ಅಮಿತ್ ಶಾ ಮಂಗಳವಾರ ಬೆಳಗ್ಗೆ ಕಟ್ರಾದಲ್ಲಿರುವ (Katra) ಶ್ರೀ ಮಾತಾ ವೈಷ್ಣೋದೇವಿ ದೇಗುಲದಲ್ಲಿ (Mata Vaishnodevi Temple) ಪ್ರಾರ್ಥನೆ ಸಲ್ಲಿಸಿದರು. ಕೇಂದ್ರ ಗೃಹ ಸಚಿವರು ಸಂಜಿಚಟ್ ಹೆಲಿಪ್ಯಾಡ್ ಮೂಲಕ ಕಟ್ರಾ ದೇಗುಲಕ್ಕೆ ತೆರಳಿದ್ದಾರೆ. ಅವರೊಂದಿಗೆ ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಸಹ ಇದ್ದಾರೆ. ನವರಾತ್ರಿ ಉತ್ಸವದ 9ನೇ ದಿನ ಅಮಿತ್ ಶಾ ಪ್ರಸಿದ್ಧ ವೈಷ್ಣೋದೇವಿ ದೇವಾಲಯಕ್ಕೆ ಭೇಟಿ ನೀಡುತ್ತಿರುವುದು ಪ್ರಾಮುಖ್ಯತೆ ಪಡೆದುಕೊಂಡಿದೆ. 

 ಇನ್ನು, ವೈಷ್ಣೋದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಅಲ್ಲಿಂದ ಸುಮಾರು ಒಂದೂವರೆ ಗಂಟೆಗಳ ದೂರದಲ್ಲಿರುವ ರಜೌರಿಯಲ್ಲಿ (Rajouri) ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅಮಿತ್ ಶಾ ಮಾತನಾಡಲಿದ್ದಾರೆ. ಈ ವೇಳೆ ಕೇಂದ್ರ ಗೃಹ ಸಚಿವರು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ ಮತ್ತು ಜಮ್ಮುವಿನ ಕನ್ವೆನ್ಷನ್ ಸೆಂಟರ್‌ನಲ್ಲಿ (Convention Centre) ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ಅಲ್ಲದೆ, ಜಮ್ಮುವಿನ ರಘುನಾಥ ದೇವಾಲಯದಲ್ಲಿ ಸಹ ಕೇಂದ್ರ ಗೃಹ ಸಚಿವರು ಪ್ರಾರ್ಥನೆ ಸಲ್ಲಿಸಲಿದ್ದಾರೆ.

ಇದನ್ನು ಓದಿ: ಬಿಹಾರಕ್ಕೆ ಭೇಟಿ ನೀಡಲು ಅಮಿತ್ ಶಾಗೆ ನಿತೀಶ್ ಮತ್ತು ಲಾಲು ಅವರಿಂದ ಪಾಸ್‌ಪೋರ್ಟ್‌ ಅಗತ್ಯವಿಲ್ಲ!

| Jammu and Kashmir: Union Home Minister Amit Shah offers prayers at the Mata Vaishno Devi Temple in Katra pic.twitter.com/NbP4WDN9pP

— ANI (@ANI)

ಕಾಶ್ಮೀರ ಕಣಿವೆಗೆ ತೆರಳುವ ಮುನ್ನ ಜಮ್ಮುವಿನ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಅಮಿತ್ ಶಾ ಪರಿಶೀಲಿಸಲಿದ್ದಾರೆ. ನಂತರ ಸಂಜೆ, ಗೃಹ ಸಚಿವರು ಈ ಪ್ರದೇಶದಲ್ಲಿ ಭದ್ರತಾ ಪರಿಸ್ಥಿತಿಗೆ ಸಂಬಂಧಿಸಿದ ಸಭೆಗಳು ಸೇರಿದಂತೆ ಹಲವಾರು ನಿರ್ಣಾಯಕ ಸಭೆಗಳನ್ನು ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ಬುಧವಾರ (ಅಕ್ಟೋಬರ್ 5) ಶ್ರೀನಗರದ ರಾಜಭವನದಲ್ಲಿ ನಡೆಯಲಿರುವ ಸಭೆಯಲ್ಲಿ ಅಮಿತ್‌ ಶಾ ಅವರು ಜಮ್ಮು ಮತ್ತು ಕಾಶ್ಮೀರದ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಲಿದ್ದಾರೆ.
ನಾಳೆ ಬೆಳಗ್ಗೆ 10 ಗಂಟೆಗೆ ಪ್ರಾರಂಭವಾಗುವ ಈ ಉನ್ನತ ಮಟ್ಟದ ಸಭೆಯಲ್ಲಿ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್ ಸಿನ್ಹಾ, ಸೇನೆಯ ಉನ್ನತ ಅಧಿಕಾರಿಗಳು, ಅರೆಸೇನಾ ಪಡೆಗಳು, ರಾಜ್ಯ ಪೊಲೀಸ್ ಮತ್ತು ನಾಗರಿಕ ಆಡಳಿತ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ. 

ಸಚಿವರು ನಂತರ ಬೆಳಗ್ಗೆ 11.30 ರ ಸುಮಾರಿಗೆ ಬಾರಾಮುಲ್ಲಾದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿಮಾತನಾಡಲಿದ್ದಾರೆ. ಕೇಂದ್ರಾಡಳಿತ ಪ್ರದೇಶಕ್ಕೆ ಭೇಟಿ ನೀಡುವ ಮೊದಲು, ಅಮಿತ್ ಶಾ ಅವರು ಮಧ್ಯಾಹ್ನ 3.30 ರ ಸುಮಾರಿಗೆ ಶ್ರೀನಗರದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಇದನ್ನೂ ಓದಿ: 90ನೇ Interpol General Assemblyಯಲ್ಲಿ ಕೋನಾರ್ಕ್ ದೇಗುಲದ ರಥ ಪ್ರೇರಿತ ಲೋಗೋ

ಇನ್ನು, ಬಕರ್ವಾಲ್ (Bakarwal) ಮತ್ತು ಗುಜ್ಜರ್‌ಗಳಂತಹ (Gujjars) ಸಮುದಾಯಗಳ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಮೋದಿ ಸರ್ಕಾರದ ಪರವಾಗಿ ಅಮಿತ್‌ ಶಾ ಅವರನ್ನು ಸನ್ಮಾನಿಸಲು ಈ ಸಮುದಾಯಗಳು ನಡೆಸುವ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳು ಕಣಿವೆಗೆ ಅವರ ಭೇಟಿಯ ಸಮಯದಲ್ಲಿ ನಡೆಸಲು ನಿರ್ಧರಿಸಲಾಗಿದೆ. ಅಚ್ಚರಿಯ ನಡೆಯಲ್ಲಿ ಮೋದಿ ಸರ್ಕಾರ ಇತ್ತೀಚೆಗೆ ಗುಲಾಂ ಅಲಿ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದೆ. ಗುಲಾಂ ಅಲಿ 2008 ರಲ್ಲಿ ಬಿಜೆಪಿ ಸೇರಿದರು ಮತ್ತು ಅವರು ಗುಜ್ಜರ್ ಬುಡಕಟ್ಟಿಗೆ ಸೇರಿದವರಾಗಿದ್ದಾರೆ.

ರಾಜ್ಯ ಕೋರ್ ಗ್ರೂಪ್ ಸಭೆ ಮತ್ತು ಪಕ್ಷದ ಸಂಸದರು ಹಾಗೂ ಶಾಸಕರೊಂದಿಗಿನ ಸಭೆ ಸೇರಿದಂತೆ ಹಲವಾರು ಸಾಂಸ್ಥಿಕ ಸಭೆಗಳಲ್ಲಿ ಸಹ ಅಮಿತ್ ಶಾ ಭಾಘಿಯಾಗಲಿದ್ದಾರೆ ಎಂದು ತಿಳಿದುಬಂದಿದೆ. 2019 ರ ಆಗಸ್ಟ್‌ನಲ್ಲಿ ಮೋದಿ ಸರ್ಕಾರವು 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಅಮಿತ್ ಶಾ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ಎರಡನೇ ಬಾರಿ ಭೇಟಿ ನೀಡುತ್ತಿದ್ದಾರೆ. ಈ ಮಧ್ಯೆ, ಅಮಿತ್ ಶಾ ಸೋಮವಾರ ಗುಜ್ಜರ್-ಬಕರ್ವಾಲ್, ರಜಪೂತ್, ಪಹಾರಿ ಮತ್ತು ಜಮ್ಮು ಸಿಖ್ ಸಮುದಾಯ ಸೇರಿದಂತೆ ವಿವಿಧ ಸಮುದಾಯಗಳ ಜನರನ್ನು ಭೇಟಿಯಾಗಿದ್ದರು. 

click me!