ಶ್ವಾನವೊಂದು ತನ್ ಮಾಲೀಕನ ಜೊತೆ ಲಡಾಖ್ ಟ್ರಿಪ್ ಹೋಗಿದ್ದು, ಮಾಲೀಕನ ಹಿಂದೆ ಕುಳಿತು ಬಿಂದಾಸ್ ಆಗಿ ರೈಡ್ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಲಡಾಖ್‌ನಲ್ಲಿ ಹಿಮಶ್ರೇಣಿಗಳ ಸಮೀಪದಲ್ಲಿ ಬೈಕ್ ರೈಡ್ ಹೋಗಬೇಕು ಎಂಬುದು ಅನೇಕ ಬೈಕರ್‌ಗಳ ಕನಸು. ಅನೇಕರು ಏಕಾಂಗಿ ರೈಡ್ ಮಾಡಿ, ಮತ್ತೆ ಕೆಲವರು ಸ್ನೇಹಿತರ ಜೊತೆಗೂಡಿ ಈ ಕನಸನ್ನು ನನಸಾಗಿಸಿಕೊಂಡಿದ್ದಾರೆ. ಆದರೆ ಇಲ್ಲಿ ನಾವು ತೋರಿಸುತ್ತಿರುವುದು ಶ್ವಾನವೊಂದರ ಲಡಾಖ್ ಟ್ರಿಪ್, ಹೌದು ಶ್ವಾನವೊಂದು ತನ್ ಮಾಲೀಕನ ಜೊತೆ ಲಡಾಖ್ ಟ್ರಿಪ್ ಹೋಗಿದ್ದು, ಮಾಲೀಕನ ಹಿಂದೆ ಕುಳಿತು ಬಿಂದಾಸ್ ಆಗಿ ರೈಡ್ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಅನೇಕ ಶ್ವಾನ ಪ್ರಿಯರು ತಮ್ಮ ಪ್ರೀತಿಯ ಶ್ವಾನವನ್ನು ಮನೆ ಮಗನಿಗಿಂತ ಹೆಚ್ಚಾಗಿ ಪ್ರೇಮದಿಂದ ಸಾಕುತ್ತಾರೆ. ಕೆಲವರು ತಾವು ಹೋದಲ್ಲೆಲ್ಲಾ ಶ್ವಾನವನ್ನು ಕರೆದೊಯ್ಯುತ್ತಾರೆ. ಮಕ್ಕಳಿಗೆ ಹಾಕುವಂತೆ ಶ್ವಾನಕ್ಕೂ ಅದಕ್ಕಿಷ್ಟವಿದೆಯೋ ಇಲ್ಲವೋ ಎಂಬುದನ್ನು ನೋಡದೆ ಬಟ್ಟೆ ತೋಡಿಸುತ್ತಾರೆ. ಹುಟ್ಟುಹಬ್ಬ ಆಚರಿಸುತ್ತಾರೆ. ಹೀಗೆ ಶ್ವಾನಪ್ರಿಯರು ತಮ್ಮ ಶ್ವಾನಕ್ಕಾಗಿ ಏನು ಸಾಧ್ಯವೋ ಅದೆಲ್ಲವನ್ನು ಮಾಡುತ್ತಾರೆ. ಹಾಗೆಯೇ ಇಲ್ಲೊಬ್ಬರು ಶ್ವಾನಪ್ರಿಯರು ತಮ್ಮ ಶ್ವಾನವನ್ನು ತಮ್ಮೊಂದಿಗೆ ಲಡಾಖ್ ಪ್ರವಾಸ ಕರೆದೊಯ್ದಿದ್ದು, ಮಾಲೀಕನ ಹಿಂದೆ ಕುಳಿತು ಜಾಲಿರೈಡ್ ಮಾಡುತ್ತಿರುವ ಶ್ವಾನವೊಂದರ ವಿಡಿಯೋ ಈಗ ಇನ್ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದೆ.
undefined
45 ಸೆಕೆಂಡ್‌ಗಳ ವಿಡಿಯೋದೊಂದು ಶ್ವಾನ ಹಾಗೂ ಬೈಕರ್ ಇಬ್ಬರು ಹಿಮದಿಂದ ಆವೃತವಾದ ಹಿಮಾಲಯ ಶ್ರೇಣಿಗಳಲ್ಲಿ ಸವಾರಿ ಮಾಡುವುದನ್ನು ಮತ್ತು ಝನ್ಸ್ಕರ್ ಮತ್ತು ಲಡಾಖ್ ಪ್ರವಾಸವನ್ನು ಪೂರ್ಣಗೊಳಿಸಲು ನದಿಗಳನ್ನು ದಾಟುವುದನ್ನು ತೋರಿಸುತ್ತಿದೆ. ಟ್ರಾವೆಲ್ ಇನ್‌ಫ್ಲುಯೆನ್ಸರ್ (travel influencer) ಆಗಿ ಕೆಲಸ ಮಾಡುವ ಚೌ ಸುರೆಂಗ್ ರಾಜ್‌ಕೋನ್ವರ್ (Chow Sureng Rajkonwar) ಎಂಬುವವರೇ ಲಡಾಖ್‌ಗೆ ಪ್ರಯಾಣಿಸುವ ಸಲುವಾಗಿ ವಿಶೇಷವಾಗಿ ನಿರ್ಮಿಸಿದ (customised motorbike) ಮೋಟಾರ್ ಬೈಕ್‌ನಲ್ಲಿ ತಮ್ಮ ಶ್ವಾನದೊಂದಿಗೆ ಪ್ರವಾಸ ತೆರಳಿದವರು. ಇವರು ತಮ್ಮ ಪ್ರಯಾಣದ ಕೆಲ ತುಣುಕನ್ನು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ದೂರ ಪ್ರಯಾಣ ಆರಂಭಿಸುವ ಮೊದಲು ಇವರು ತಮ್ಮ ಬೆಲ್ಲಾ ಹೆಸರಿನ ಶ್ವಾನಕ್ಕೆ ತುಂಬಾ ದೂರದವರೆಗೆ ಸಾಗುವ ವೇಳೆ ಬೈಕ್‌ನಲ್ಲಿ ಆರಾಮದಾಯಕವಾಗಿ ಕುಳಿತುಕೊಂಡು ಪ್ರಯಾಣಿಸುವ ತರಬೇತಿ ನೀಡಿದ್ದಾರೆ. ಲಗೇಜ್ ಪ್ಯಾಕ್ ಮಾಡಿ ಇಬ್ಬರು ಲಡಾಕ್‌ನತ್ತ ಹೊರಟಿದ್ದು, ಇವರ ವಿಡಿಯೋ ಈಗ ನೋಡುಗರಿಗೆ ಬೆರಗು ಮೂಡಿಸುತ್ತಿದೆ.
ವಿಘ್ನ ನಿವಾರಕನಿಗೆ ತಲೆಬಾಗಿಸಿ ಕೈ ಮುಗಿದ ಶ್ವಾನ... ವಿಡಿಯೋ ವೈರಲ್
ನಮ್ಮ ಝಂಸ್ಕರ್ (Zanskar) ಹಾಗೂ ಲಡಾಕ್ (Ladakh) ಸ್ಟೋರಿ 45 ಸೆಕೆಂಡ್‌ನಲ್ಲಿ ಎಂದು ಬರೆದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ತನ್ನ ಮುದ್ದಿನ ಶ್ವಾನದೊಂದಿಗೆ ಜಗತ್ತಿನ ಅತ್ತಿ ಎತ್ತರದ ಮೋಟಾರು ವಾಹನ ಸಾಗುವ ರಸ್ತೆಯಾದ ಲಡಾಖ್‌ನಲ್ಲಿ ಬೈಕರ್ ಸಾಗುತ್ತಿರುವುದು ಸೆರೆಯಾಗಿದೆ. 1.4 ಮಿಲಿಯನ್‌ಗೂ ಅಧಿಕ ಜನ ಈ ವಿಡಿಯೋವನ್ನು ವೀಕ್ಷಿಸಿದ್ದು, ಶ್ವಾನ ಬೆಲ್ಲಾ ತನ್ನ ಬದುಕಿನ ಉತ್ತಮ ಸಮಯವನ್ನು ಎಂಜಾಯ್ ಮಾಡುತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದೊಂದು ಅದ್ಭುತ ದೃಶ್ಯ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ನಿಮಗೂ ಹಾಗೂ ನಿಮ್ಮ ಶ್ವಾನಕ್ಕೂ ಮುಂದಿನ ಸಾಹಸ ಕ್ರೀಡೆಗಳಿಗೆ ಶುಭಾಶಯಗಳು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೋ ಶ್ವಾನಪ್ರಿಯರ ಮನರಂಜಿಸುತ್ತಿದೆ.
Viral Video: ಯೋಧನೊಂದಿಗೆ ಯೋಗ ಮಾಡುವ ಶ್ವಾನ: ವಿಡಿಯೋ ವೈರಲ್
ನಾಯಿಗೆ ಮದುವೆ ಮಾಡಿ ಕನ್ಯಾದಾನದ ಬಯಕೆ ತೀರಿಸಿಕೊಂಡ ಮಕ್ಕಳಿಲ್ಲದ ದಂಪತಿ