
ಚೆನ್ನೈ(ಮಾ.16): ನಾನು ಸಚಿವನಾಗಿರುವ ಕಾರಣ ಸುಮ್ಮನೆ ಇದ್ದೇನೆ. ಹಾಗೇನಾದರೂ ಸಚಿವನಾಗದೇ ಇದ್ದಿದ್ದರೆ, ಪ್ರಧಾನಿ ಮೋದಿಯನ್ನು ಈಗಾಗಲೇ ತುಂಡು ತುಂಡಾಗಿ ಕತ್ತರಿಸುತ್ತಿದೆ ಎಂದು ತಮಿಳುನಾಡಿನ ಡಿಎಂಕೆ ಸರ್ಕಾರದ ಗ್ರಾಮೀಣ ಕೈಗಾರಿಕೆ ಸಚಿವ ಟಿ ಎಂ ಅಂಬರಸನ್ ನೀಡಿರುವ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪ್ರಧಾನಿ ಮೋದಿಗೆ ನೇರವಾಗಿ ಬೆದರಿಕೆ ಒಡ್ಡಿರುವ ವಿಡಿಯೋ ವೈರಲ್ ಆದ ಬೆನ್ನಲ್ಲಿಯೇ ಅಂಬರಸನ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಈ ಸಂಬಂಧ ದೆಹಲಿಯ ಸಂಸದ್ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಸುಪ್ರೀಂ ಕೋರ್ಟ್‌ನ ವಕೀಲರು, ಅಂಬರಸನ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ವಿಡಿಯೋದಲ್ಲಿ ಅಂಬರಸನ್ ಸಾಕಷ್ಟು ಮಾತನಾಡಿದ್ದಾರೆ. ನಾವು ಸಾಕಷ್ಟು ಪ್ರಧಾನಿ ಮಂತ್ರಿಗಳನ್ನು ನೋಡಿದ್ದೇವೆ. ಆದರೆ, ಯಾರೂ ಕೂಡ ಹೀಗೆ ಹೇಳಿರಲಿಲ್ಲ. ಮೋದಿ ನಮ್ಮನ್ನು ಕೊಲ್ಲಲು ಸಿದ್ಧವಾಗಿದ್ದಾರೆ. ಆದರೆ, ಅವರಿಗೆ ನೆನಪಿಸಲು ಬಯಸುತ್ತೇನೆ. ಡಿಎಂಕೆ ಎನ್ನುವುದು ಸಾಮಾನ್ಯ ಸಂಘಟನೆಯಲ್ಲ. ಸಾಕಷ್ಟು ತ್ಯಾಗ ಹಾಗೂ ರಕ್ತಪಾತಗಳ ಬುನಾದಿಯಲ್ಲಿ ಇದು ನಿರ್ಮಾಣವಾಗಿದೆ. ಡಿಎಂಕೆಯನ್ನು ನಾಶಪಡಿಸುವ ಬಗ್ಗೆ ಮಾತನಾಡಿದವರೇ ನಾಶವಾಗಿದ್ದಾರೆ. ಈ ಸಂಸ್ಥೆ ಶಾಶ್ವತವಾಗಿ ಉಳಿಯುತ್ತದೆ ಎಂಬುದನ್ನು ನೆನಪಿಡಿ' ಎಂದು ಎಚ್ಚರಿಸಿದ್ದಾರೆ.
ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು 'ಎಕ್ಸ್' ನಲ್ಲಿ ಈ ಕುರಿತಾಗಿ ಪೋಸ್ಟ್ ಮಾಡಿದ್ದು, ' ಇದು ಐಎನ್‌ಡಿಐ ಮೈತ್ರಿಯ ನೀತಿ. ಮೈತ್ರಿ ಇದಕ್ಕಿಂತ ಸ್ಪಷ್ಟವಾಗಿರಲು ಸಾಧ್ಯವಿಲ್ಲ. ಸನಾತನ ಧರ್ಮ ಮತ್ತು ಅದನ್ನು ನಂಬಿದವರನ್ನು ನಾಶ ಮಾಡುವ ಗುರಿ ಹೊಂದಿದ್ದಾರೆ’ ಎಂದು ಬರೆದಿದ್ದಾರೆ. ಮಾರ್ಚ್ 9 ರಂದು ಚೆನ್ನೈನ ಪಲ್ಲವರಂನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ ಅಂಬರಸನ್ ಈ ಮಾತು ಹೇಳಿದ್ದಾರೆ.
ಸದಾ ಸುಳ್ಳು ಬೊಗಳುವ ರಾಜನ ಸುಳ್ಳು ಹೇಳಲೂ ಬಾರದ ದಡ್ಡ ಗೂಂಡಾಪಡೆ ಎಸ್‌ಬಿಐ: ಕಿಶೋರ್
ಇನ್ನು ಟಿಎಂ ಅಂಬರಸನ್ ಮಾತಿಗೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಇಂಥವೇ ಮಾತುಗಳನ್ನು ದೇಶದ ನಾಯಕನ ವಿರುದ್ಧ ಮಾತನಾಡುತ್ತಿದ್ದರೆ, ಶೀಘ್ರದಲ್ಲಿಯೇ ಈ ಪಕ್ಷ ರಾಜಕೀಯ ಕ್ಷೇತ್ರದಿಂದ ಕಣ್ಮರೆಯಾಗಲಿದೆ ಎಂದು ಹೇಳಿದ್ದಾರೆ.
ಖರ್ಗೆ ತವರು ಕ್ಷೇತ್ರದಿಂದಲೇ ಮೋದಿ ರಣಕಹಳೆ; ಕಲಬುರಗಿಯಲ್ಲಿಂದು ರೋಡ್ ಶೋ
ಈ ಕುರಿತಾಗಿ ಟ್ವೀಟ್ ಮಾಡಿರುವ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ, ತಮಿಳುನಾಡಿನಲ್ಲಿ ಆಡಳಿತ ವಿರೋಧಿ ಅಲೆ ಹೆಚ್ಚಾಗುತ್ತಿರುವಂತೆ, ಡಿಎಂಕೆ ಸಚಿವರುಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆದರಿಕೆ ಒಡ್ಡುವಂಥ ಮಟ್ಟಕ್ಕೆ ಹೋಗಿದ್ದಾರೆ. ಇಂಥದ್ದೇ ಮಾತುಗಳನ್ನು ಆಡುತ್ತಿದ್ದರೆ, ಶೀಘ್ರದಲ್ಲಿಯೇ ತಮಿಳುನಾಡು ರಾಜಕೀಯ ಕ್ಷೇತ್ರದಿಂದ ಡಿಎಂಕೆ ಕಣ್ಮರೆಯಾಗಲಿದೆ. ಅದರ ವಿಭಜಕ ನೀತಿಗಳು ಹಾಗೂ ಭ್ರಷ್ಟ ಆಡಳಿತ, ಅಂತಾರಾಷ್ಟ್ರ ಡ್ರಗ್ ಪೆಡ್ಲರ್‌ಗಳ ಸಂಬಂಧ ಎಲ್ಲವನ್ನೂ ಜನರು ನೋಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ