
ನವದೆಹಲಿ (ಮಾ.16): ನಾಲ್ಕು ವರ್ಷಗಳಿಂದ ಖಾಲಿಯಾಗಿದ್ದ ಪ್ರಸಾರ ಭಾರತಿಯ ಅಧ್ಯಕ್ಷ ಸ್ಥಾನಕ್ಕೆ ನಿವೃತ್ತ ಅಧಿಕಾರಿ ನವನೀತ್ ಕುಮಾರ್ ಸೆಹಗಲ್ ಅವರನ್ನು ನೇಮಕ ಮಾಡಲಾಗಿದೆ. 2020ರ ಫೆಬ್ರವರಿಯಲ್ಲಿ ಪ್ರಸಾರ ಭಾರತಿಯ ಚೇರ್ಮನ್ ಆಗಿದ್ದ ಎಸ್. ಸೂರ್ಯಪ್ರಕಾಶ್ ಕಡ್ಡಾಯ ನಿವೃತ್ತಿಯ 60ರ ವಯಸ್ಸನ್ನು ತಲುಪಿದ ಕಾರಣ ಅವರು ಹುದ್ದೆ ತೊರೆದಿದ್ದರು. ಈ ಸ್ಥಾನಕ್ಕೆ ನವನೀತ್ ಕುಮಾರ್ ಸೆಹಗಲ್ ನೇಮಕವಾಗಿದ್ದಾರೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮಾರ್ಚ್ 15 ರಂದು ಹೊರಡಿಸಿದ ಆದೇಶದ ಪ್ರಕಾರ ನೇಮಕಾತಿ ಜಾರಿಯಾಗಿದೆ. ಸೆಹಗಲ್ ಅವರ ಅವಧಿಯು ಮೂರು ವರ್ಷಗಳವರೆಗೆ ಇರುತ್ತದೆ ಅಥವಾ ಅವರು ಎಪ್ಪತ್ತು ವರ್ಷವನ್ನು ತಲುಪುವವರೆಗೆ ಈ ಅಧಿಕಾರದಲ್ಲಿ ಇರಲಿದ್ದಾರೆ.
ಆಯ್ಕೆ ಪ್ರಕ್ರಿಯೆಯ ಅಧ್ಯಕ್ಷತೆಯನ್ನು ಉಪಾಧ್ಯಕ್ಷ ಜಗದೀಪ್ ಧನಕರ್ ವಹಿಸಿದ್ದರು, ಅವರು ರಾಜ್ಯಸಭೆಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಪ್ರಸಾರ ಭಾರತಿ ಅಧ್ಯಕ್ಷರ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿದ್ದಾರೆ. ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷರು ಮತ್ತು ರಾಷ್ಟ್ರಪತಿಗಳ ನಾಮನಿರ್ದೇಶಿತ ಸದಸ್ಯರನ್ನು ಒಳಗೊಂಡ ಸಮಿತಿಯು ಸಭೆ ಚೇರ್ಮನ್‌ಅನ್ನು ಆಯ್ಕೆ ಮಾಡಿದೆ. ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಅಧ್ಯಕ್ಷೆ ನ್ಯಾಯಮೂರ್ತಿ ರಂಜನಾ ದೇಸಾಯಿ (ನಿವೃತ್ತ) ಮತ್ತು ಮಾಹಿತಿ ಮತ್ತು ಪ್ರಸಾರ ಕಾರ್ಯದರ್ಶಿ ಸಂಜಯ್ ಜಾಜು ಭಾಗವಹಿಸಿದ್ದರು.
ಉದ್ಘಾಟನೆಯಾದ ನಾಲ್ಕೇ ವರ್ಷದಲ್ಲಿ ಪ್ರಸಾರ ಭಾರತಿ ನ್ಯೂಸ್ ಸರ್ವೀಸ್ ಬಂದ್?
ರಾಷ್ಟ್ರೀಯ ಟೆಲಿವಿಷನ್ ನೆಟ್‌ವರ್ಕ್ ಅಗಿರುವ ದೂರದರ್ಶನ ಮತ್ತು ರಾಷ್ಟ್ರೀಯ ಸಾರ್ವಜನಿಕ ರೇಡಿಯೊ ಪ್ರಸಾರಕ ಆಲ್ ಇಂಡಿಯಾ ರೇಡಿಯೊದ ಕಾರ್ಯಾಚರಣೆಗಳನ್ನು ಪ್ರಸಾರ ಭಾರತಿ ನೋಡಿಕೊಳ್ಳುತ್ತದೆ. ಖಾಯಂ ಮುಖ್ಯಸ್ಥರಿಲ್ಲದೆ ನಾಲ್ಕು ವರ್ಷ ಕಳೆದಿದ್ದ ಪ್ರಸಾರ ಭಾರತಿಗೆ ಹೊಸ ಅಧ್ಯಕ್ಷರ ನೇಮಕವು ಮುಂದಿನ ದಿನಗಳಲ್ಲಿ ತಾಜಾತನಕ್ಕೆ ಸಾಕ್ಷಿಯಾಗಲಿದೆ ಎಂದು ನಂಬಲಾಗಿದೆ. ಆಡಳಿತಾಧಿಕಾರಿಯಾಗಿ ಸೆಹಗಲ್ ಅವರಿಗೆ ವ್ಯಾಪಕ ಅನುಭವವಿದೆ. ಸೆಹಗಲ್ ಅವರು ಭಾರತೀಯ ಸಾರ್ವಜನಿಕರ ವೈವಿಧ್ಯಮಯ ಹಿತಾಸಕ್ತಿಗಳನ್ನು ಅದರ ವಿವಿಧ ವೇದಿಕೆಗಳು ಮತ್ತು ಚಾನೆಲ್‌ಗಳ ಮೂಲಕ ಸೇವೆ ಮಾಡುವ ಉದ್ದೇಶದಲ್ಲಿ ಪ್ರಸಾರ ಭಾರತಿಗೆ ಮಾರ್ಗದರ್ಶನ ನೀಡುವ ನಿರ್ಣಾಯಕ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.
Prasar Bharati Recruitment 2022: ಆಲ್ ಇಂಡಿಯಾ ರೇಡಿಯೋ ಹುದ್ದೆಗಳಿಗೆ ನೇಮಕಾತಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ