ಭಾರತ ಏಕತೆಗಾಗಿ ಧ್ವನಿ ಎತ್ತಿದವರ ವಿರುದ್ಧ ತನಿಖೆ; ಮಹಾರಾಷ್ಟ್ರ ಕ್ರಮ ಖಂಡಿಸಿದ ಬಿಜೆಪಿ!

By Suvarna NewsFirst Published Feb 8, 2021, 6:30 PM IST
Highlights

ರೈತ ಪ್ರತಿಭಟನೆ ಹೆಸರಿನಲ್ಲಿ ಪಿತೂರಿ ನಡೆಸಲು ಯತ್ನಿಸಿದ ವಿದೇಶಿ ಸೆಲೆಬ್ರೆಟಿಗಳಗೆ ತಕ್ಕ ಉತ್ತರ ನೀಡಿ, ಭಾರತದ ಸಾರ್ವಭೌಮತ್ವಕ್ಕಾಗಿ ಧ್ವನಿ ಎತ್ತಿದ ಸಚಿನ್ ತೆಂಡುಲ್ಕರ್ ಸೇರಿದಂತೆ ಸೆಲೆಬ್ರೆಟಿಗಳ ವಿರುದ್ಧವೇ ಮಹಾರಾಷ್ಟ್ರ ಸರ್ಕಾರ ತನಿಖೆಗೆ ಆದೇಶಿದೆ. ಈ ನಡೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ.

ಮುಂಬೈ(ಫೆ.08): ರೈತ ಪ್ರತಿಭಟನೆ ಭಾರತದ ಸಾರ್ವಭೌಮತ್ವದ ಪಶ್ನೆ ಹುಟ್ಟುಹಾಕಿದೆಯಾ ಅನ್ನೋ ಅನುಮಾನ ಮೂಡತೊಡಗಿದೆ. ಕಾರಣ ಪ್ರತಿಭಟನೆ ಬೆಂಬಲಿಸಿ ವಿದೇಶಿ ಸೆಲೆಬ್ರೆಟಿಗಳು ದೇಶದ ವಿರುದ್ಧ ಪಿತೂರಿಗೆ ಮುಂದಾಗಿದ್ದರು. ಆದರೆ ಈ ಷಡ್ಯಂತ್ರಕ್ಕೆ ಭಾರತ ಸರ್ಕಾರ  ಸೇರಿದಂತೆ ಸೆಲೆಬ್ರೆಟಿಗಳು ತಿರುಗೇಟು ನೀಡಿದ್ದರು. ಇದೀಗ ಇದೇ ಅತೀ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಸೆಲೆಬ್ರೆಟಿಗಳ ಟ್ವೀಟ್ ವಿರುದ್ಧ ತನಿಖೆಗೆ ಆದೇಶಿಸಿದ ಮಹಾರಾಷ್ಟ್ರ ಸರ್ಕಾರ ನಿರ್ದಾರವನ್ನು ಬಿಜೆಪಿ ಖಂಡಿಸಿದೆ. 

ದೇಶ ಮೊದಲು ಎಂದ ಸಚಿನ್, ಮಂಗೇಶ್ಕರ್, ಸೆಲೆಬ್ರೆಟಿಗಳ ವಿರುದ್ಧ ಮಹಾರಾಷ್ಟ್ರ ಸರ್ಕಾರ ತನಿಖೆ!.

ಮಾಜಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್, ನಟ ಅಕ್ಷಯ್ ಕುಮಾರ್, ಗಾಯಕಿ ಲತಾ ಮಂಗೇಶ್ಕರ್, ನಟ ಸುನಿಲ್ ಶೆಟ್ಟಿ ಸೇರಿದಂತೆ ಹಲವರು ಟ್ವೀಟ್ ಮೂಲಕ ಭಾರತದ ಆತಂಕರಿಕ ವಿಚಾರದಲ್ಲಿ ಮೂಗು ತೂರಿಸದಂತೆ ಎಚ್ಚರಿಕೆ ನೀಡಿದ್ದರು. ಇಷ್ಟೇ ಅಲ್ಲ  ಈ ರೀತಿಯ ಪಿತೂರಿಗೆ ಭಾರತೀಯರೆಲ್ಲಾ ಒಗ್ಗಾಟ್ಟಾಗಿ ನಿಲ್ಲಬೇಕಿದೆ ಎಂದು ಕರೆ ನೀಡಿದ್ದರು. ಆದರೆ ಮಹಾರಾಷ್ಟ್ರ ಸರ್ಕಾರ ಈ ಸೆಲೆಬ್ರೆಟಿಗ ವಿರುದ್ಧ ತನಿಖೆಗೆ ಆದೇಶಿಸಿದೆ. ಈ ನಡೆಯನ್ನು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಖಂಡಿಸಿದ್ದಾರೆ.

 

Disgusting & highly deplorable❗️
Where is your Marathi Pride now❓
Where is your Maharashtra Dharma❓
We will never find such ‘ratnas’ (gems) in entire Nation who order probe against BharatRatnas who always stand strong in one voice for our Nation ❗️ https://t.co/OGPiUDMO5x

— Devendra Fadnavis (@Dev_Fadnavis)

ಸಚಿನ್ ಭಾರತ ರತ್ನಕ್ಕೆ ಅರ್ಹರಲ್ಲ, ಪವಾರ್ ಬಳಿಕ ನಾಲಿಗೆ ಹರಿಬಿಟ್ಟ ಕಾಂಗ್ರೆಸ್ ನಾಯಕ!.

ಮಹಾರಾಷ್ಟ್ರ ಸರ್ಕಾರ ನಡೆ ಅಸಹ್ಯಕರ ಹಾಗೂ ಅತ್ಯಂತ ಶೋಚನೀಯ ಎಂದು ಫಡ್ನವಿಸ್ ಟ್ವೀಟ್ ಮಾಡಿದ್ದಾರೆ. ಇಷ್ಟೇ ಅಲ್ಲ,  ನಿಮ್ಮ ಮರಾಠಿ ಪ್ರೇಮ ಹಾಗೂ ಹೆಮ್ಮೆ ಎಲ್ಲಿದೆ? ಮಹಾರಾಷ್ಟ್ರ ಧರ್ಮ ಎಲ್ಲಿದೆ? ದೇಶಕ್ಕಾಗಿ ಧ್ವನಿ ಎತ್ತಿದ ಭಾರತ ರತ್ನದ ವಿರುದ್ಧವೇ ತನಿಖಗೆ ಆದೇಶಿಸಿದ್ದು ಎಷ್ಟು ಸರಿ. ಈ ರತ್ನಗಳು ಬೇರೆಲ್ಲೂ ಸಿಗುವುದಿಲ್ಲ ಎಂದು ಫಡ್ನವಿಸ್ ಟ್ವೀಟ್ ಮಾಡಿದ್ದಾರೆ.

ಸಚಿನ್ ತೆಂಡುಲ್ಕರ್‌ಗೆ ಎಚ್ಚರಿಕೆ ನೀಡಿದ ಶರದ್ ಪವಾರ್‌ಗೆ ಭಾರತೀಯರಿಂದ ಮಂಗಳಾರತಿ!.

click me!