'ಕೃಷಿ ಮಸೂದೆ ಹಿಂಪಡೆಯದಿದ್ದರೆ ಧಾನ್ಯ ಖಜಾನೆಯಲ್ಲಿಡಬೇಕಾದ ವಸ್ತುವಾಗುತ್ತೆ, ಎಚ್ಚರ'

Published : Feb 08, 2021, 04:12 PM IST
'ಕೃಷಿ ಮಸೂದೆ ಹಿಂಪಡೆಯದಿದ್ದರೆ ಧಾನ್ಯ ಖಜಾನೆಯಲ್ಲಿಡಬೇಕಾದ ವಸ್ತುವಾಗುತ್ತೆ, ಎಚ್ಚರ'

ಸಾರಾಂಶ

ಕೇಂದ್ರದ ಕೃಷಿ ಕಾನೂನು ವಿರುದ್ಧ ರೈತರ ಪ್ರತಿಭಟನೆ| ಕೇಂದ್ರಕ್ಕೆ ವಾರ್ನಿಂಗ್ ಕೊಟ್ಟ ರೈತ ಮುಖಂಡ ಟಿಕಾಯತ್| 'ಕೃಷಿ ಮಸೂದೆ ಹಿಂಪಡೆಯದಿದ್ದರೆ ಧಾನ್ಯ ಖಜಾನೆಯಲ್ಲಿಡಬೇಕಾದ ವಸ್ತುವಾಗುತ್ತೆ, ಎಚ್ಚರ'

ನವದೆಹಲಿ(ಫೆ.08): ಕೇಂದ್ರದ ಮೂರು ಕೃಷಿ ಕಾನೂನು ವಿರುದ್ಧ ಭಾನುವಾರ ಹರ್ಯಾಣದ ಭಿವಾನಿ ಜಿಲ್ಲೆಯ ಕಿತ್ಲಾನಾದಲ್ಲಿ ಆಯೋಜಿಸಲಾಗಿದ್ದ ರೈತ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ರೈತ ನಾಯಕ ರಾಕೇಶ್ ಟಿಕಾಯತ್ ಕೃಷಿ ಮಸೂದೆ ಹಿಂಪಡೆಯದಿದ್ದರೆ, ಧಾನ್ಯಗಳನ್ನು ಖಜಾನೆಯಲ್ಲಿ ಬಚ್ಚಿಡಬೇಕಾದ ದಿನಗಳು ದೂರವಿಲ್ಲ ಎಂದು ಎಚ್ಚರಿಸಿದ್ದಾರೆ.

ಸಂಯುಕ್ತ ರೈತ ಮೋರ್ಚಾ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಸಮಾವೇಶದಲ್ಲಿ ರೈತರ ಬಳಿ ಒಗ್ಗಟ್ಟಿನಿಂದಿರಲು ಟಿಕಾಯತ್ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ ಮತ್ತಷ್ಟು ಎಚ್ಚರದಿಂದಿರುವಂತೆ ಸೂಚಿಸಿರುವ ಟಿಕಾಯತ್ ಬಿಜೆಪಿಯ ಕೆಲ ನಾಯಕರು ಈಗಾಗಲೇ ಪ್ರತಿಭಟನಾನಿರತ ರೈತರನ್ನು ಸಿಖ್ಖರು ಹಾಗೂ ಸಿಖ್‌ ಅಲ್ಲದವರು ಎಂದು ಬೇರ್ಪಡಿಸುವ ಯತ್ನ ಆರಂಭಿಸಿದ್ದಾರೆ ಎಂದಿದ್ದಾರೆ.

ಕೇಂದ್ರದ ಕಪ್ಪು ಕಾನೂನಿಂದ ರೈತನ ನಾಶ

ಇವರು ತಮ್ಮ ಉದ್ದೇಶದಲ್ಲಿ ಸಫಲರಾಗಿಲ್ಲ, ಬದಲಾಗಿ ಇದರಿಂದಾಗಿ ಹರ್ಯಾಣ ಹಾಗೂ ಪಂಜಾಬ್‌ನ ರೈತರ ನಡುವಿನ ಒಗ್ಗಟ್ಟು ಮತ್ತಷ್ಟು ಗಟ್ಟಿಯಾಗಿದೆ. ಕೆಂದ್ರದ ಮೂರು ಕಪ್ಪು ಕಾನೂನಿನಿಂದ ರೈತರು ನಾಶವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಅವರು ಆರೋಪಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?