ಭಾರತದಲ್ಲಿ ಕೊರೋನಾ ಪ್ರಕರಣ ತೀವ್ರಗತಿಯಲ್ಲಿ ಹೆಚ್ಚಾಗುತ್ತಿದೆ. ಕರ್ನಾಟಕದಲ್ಲಿ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಕೆಲ ರಾಜ್ಯಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಇದರ ನಡುವೆ ದೇಶಕ್ಕೆ ಮತ್ತೊಂದು ಆತಂಕ ಎದುರಾಗಿದೆ. ಭಾರತದಲ್ಲಿ ಅತೀ ವೇಗವಾಗಿ ಹರಡಬಲ್ಲ ಹಾಗೂ ಅಪಾಯ ತಂದೊಡ್ಡಬಲ್ಲ ಹೊಸ ಒಮಿಕ್ರಾನ್ ಉಪತಳಿ ಪತ್ತೆಯಾಗಿದೆ.
ನವದೆಹಲಿ(ಆ.11): ಕೊರೋನಾ ವೈರಸ್ ದೇಶದ ಆತಂಕ ಹೆಚ್ಚಿಸಿದೆ. ಈಗಾಗಲೇ ಹಲವು ಅವಾಂತರಗಳಿಗೆ ಕಾರಣವಾಗಿರುವ ಕೋವಿಡ್ ಕಳೆದೊಂದು ವರ್ಷದಿಂದ ನಿಧಾನವಾಗಿ ಭಾರತೀಯರ ಮನಸ್ಸಿನಿಂದ ದೂರವಾಗುತ್ತಿತ್ತು. ಇದೀಗ ಕೋವಿಡ್ ಮತ್ತೆ ಸ್ಫೋಟಗೊಳ್ಳುತ್ತಿದೆ. ಭಾರತದಲ್ಲಿ ಪ್ರತಿ ದಿನ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ನಡುವೆ ದೆಹಲಿಯಲ್ಲಿ ಒಮಿಕ್ರಾನ್ ಹೊಸ ಉಪತಳಿ ಪತ್ತೆಯಾಗಿದೆ. BA 2.75 ಹೊಸ ವೇರಿಯೆಂಟ್ ಅತೀ ವೇಗವಾಗಿ ಹರಡಲಿದೆ. ಹಾಗೂ ಅಪಾಯವೂ ಹೆಚ್ಚಾಗಿದೆ ಎಂದು ತಜ್ಞರು ಹೇಳಿದ್ದಾರೆ. ದೆಹಲಿಯ ಲೋಕನಾಯಕ ಜಯ ಪ್ರಕಾಶ್ ನಾರಾಯಣ ಆಸ್ಪತ್ರೆಯಲ್ಲಿ ದಾಖಲಾಗಿರುವ ಕೋವಿಡ್ ಸೋಂಕಿತ ವ್ಯಕ್ತಿಯ ಮಾದರಿ ಪರೀಕ್ಷಾ ಫಲಿತಾಂಶದಲ್ಲಿ ಈ ಹೊಸ ವೇರಿಯೆಂಟ್ ಬೆಳಕಿಗೆ ಬಂದಿದೆ. ಕಳೆದ ಬಾರಿ ಭಾರತದಲ್ಲಿ ಪತ್ತೆಯಾದ ಓಮಿಕ್ರಾನ್ ಹಾಗೂ ಒಮಿಕ್ರಾನ್ ಉಪತಳಿಗಿಂತ ಈ ಬಾರಿ ಪತ್ತೆಯಾಗಿರುವ ಹೊಸ BA 2.75 ವೇರಿಯೆಂಟ್ ಹೆಚ್ಚು ಅಪಾಯಕಾರಿ ಎಂದು ತಜ್ಞರು ಎಚ್ಚರಿಸಿದ್ದಾರೆ.
90 ಕೋವಿಡ್ ಸೋಂಕಿತರ ಮಾದರಿ ವರದಿಯಲ್ಲಿ ಅರ್ಧಕ್ಕೂ ಹೆಚ್ಚು ಮಂದಿಯಲ್ಲಿ BA 2.75 ಓಮಿಕ್ರಾನ್ ತಳಿ ಪತ್ತೆಯಾಗಿದೆ. ಇದರ ತೀವ್ರತೆ ಕುರಿತು ಅಧ್ಯಯನ ನಡೆಯುತ್ತಿದೆ. BA 2.75 ವೇರಿಯೆಂಟ್ ತಳಿ ಅಪಾಯಕಾರಿಯಾಗಿರುವುದರಿಂದ ಆಗಸ್ಟ್ ತಿಂಗಳು ಅತೀವ ಎಚ್ಚರಿಕೆ ಅಗತ್ಯ. ಕಾರಣ ಇದು ಹರಡುವಿಕೆ ವೇಗ ಹೆಚ್ಚಾಗಿರುವ ಕಾರಣ ಆಸ್ಪತ್ರೆ ದಾಖಲಾಗುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಹೀಗಾಗಿ ಅಪಾಯದ ಪ್ರಮಾಣ ಕೂಡ ಹೆಚ್ಚಾಗಿದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.
ರಾಜ್ಯದಲ್ಲಿ ಇಂದಿನಿಂದ ಮಾಸ್ಕ್ ಕಡ್ಡಾಯ: ಸಚಿವ ಸುಧಾಕರ್
ದೆಹಲಿಯಲ್ಲಿ 2,146 ಕೋವಿಡ್ ಪ್ರಕರಣ ಪತ್ತೆ
ಕಳೆದ 24 ಗಂಟೆಯಲ್ಲಿ ದೆಹಲಿಯಲ್ಲಿ 2,146 ಹೊಸ ಕೋವಿಡ್ ಪ್ರಕರಣ ಪತ್ತೆಯಾಗಿದೆ. 8 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಕೋವಿಡ್ ಪ್ರಕರಣ ಹೆಚ್ಚಳದಿಂದ ದೆಹಲಿ ಸರ್ಕಾರ ತುರ್ತು ಸಭೆ ನಡೆಸಿ ಮಹತ್ವದ ಮಾರ್ಗಸೂಚಿ ಬಿಡುಗಡೆ ಮಾಡಿದೆ. ದೆಹಲಿಯಲ್ಲಿ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಮಾಸ್ಕ್ ಧರಿಸಿದಿದ್ದರೆ 500 ರೂಪಾಯಿ ದಂಡ ವಿಧಿಸುವುದಾಗಿ ದೆಹಲಿ ಸರ್ಕಾರ ಎಚ್ಚರಿಸಿದೆ.
ಕರ್ನಾಟಕದಲ್ಲಿ ಕೋವಿಡ್ ಏರಿಕೆ, ಮಾಸ್ಕ್ ಕಡ್ಡಾಯ
ಕಳೆದೊಂದು ತಿಂಗಳಿನಿಂದ ಕೋವಿಡ್ ಪ್ರಕರಣಗಳಲ್ಲಿ ಏರಿಕೆ ಕಂಡಿದ್ದ ರಾಜ್ಯದಲ್ಲಿ ಇದೀಗ ಸೋಂಕಿತರ ಸಾವಿನ ಪ್ರಮಾಣವೂ ಏರುತ್ತಿದೆ. ಹೀಗಾಗಿ ಕರ್ನಾಟಕದಲ್ಲಿ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಇದರ ಜೊತೆಗೆ ಮಂಕಾಪಾಕ್ಸ್ ಪ್ರಕರಣ ಕುರಿತು ಎಚ್ಚರಿಕೆ ವಹಿಸಲಾಗಿದೆ.
Corona Crisis: ಕರ್ನಾಟಕದಲ್ಲಿ ಕೋವಿಡ್‌ಗೆ ಒಂದೇ ದಿನ 5 ಬಲಿ: 145 ದಿನದ ಗರಿಷ್ಠ
ದ.ಕ. ಜಿಲ್ಲೆಯಲ್ಲಿ ಬುಧವಾರ 17 ಮಂದಿಯಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ. 18 ಮಂದಿ ಗುಣಮುಖರಾಗಿದ್ದಾರೆ. ಬಹಳ ದಿನಗಳ ಬಳಿಕ ಕೊರೋನಾದಿಂದ ಒಬ್ಬರು ಮೃತಪಟ್ಟಿದ್ದಾರೆ. ಜಿಲ್ಲೆಯ ಪಾಸಿಟಿವಿಟಿ ದರ ಶೇ.2.11 ದಾಖಲಾಗಿದೆ. ಜಿಲ್ಲೆಯಲ್ಲಿ ಈಗ ಒಟ್ಟು ಸೋಂಕಿತರ ಸಂಖ್ಯೆ1,36,378 ಕ್ಕೆ ಏರಿಕೆಯಾಗಿದೆ. ಈ ಪೈಕಿ 62 ಸಕ್ರಿಯ ಪ್ರಕರಣಗಳು. 1,34,459 ಮಂದಿ ಗುಣಮುಖರಾಗಿದ್ದಾರೆ. ಮೃತರ ಸಂಖ್ಯೆ 1,857 ತಲುಪಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.