ಇಡಿ, ಸಿಬಿಐನವರಿಗೆ ಶಾಂತಿ ತರುವುದಾದರೆ ಅವರು ನನ್ನ ಮನೆಯಲ್ಲೇ ಕಚೇರಿಗಳನ್ನು ಸ್ಥಾಪಿಸಿಕೊಳ್ಳಬಹುದು ಎಂದು ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಹೇಳಿದ್ದಾರೆ. ಅಲ್ಲದೆ, ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡುವುದಾಗಿಯೂ ಅವರು ಹೇಳಿದ್ದಾರೆ.
ಬಿಹಾರದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿದ್ದು, ನಿತೀಶ್ ಕುಮಾರ್ ಕೇಸರಿ ಪಕ್ಷದ ಸಖ್ಯ ತೊರೆದು ಆರ್‌ಜೆಡಿ ಹಾಗೂ ಇತರ ಪಕ್ಷಗಳ ಮಹಾಘಟಬಂಧನ ಸರ್ಕಾರದ ಸಿಎಂ ಆಗಿದ್ದಾರೆ. ಅಲ್ಲದೆ, ಲಾಲೂ ಪ್ರಸಾದ್ ಯಾದವ್ ಪುತ್ರ ತೇಜಸ್ವಿ ಯಾದವ್ ಎರಡನೇ ಬಾರಿಗೆ ಉಪ ಮುಖ್ಯಮಂತ್ರಿಯಾಗಿದ್ದಾರೆ. ಇನ್ನು, ಬಿಜೆಪಿ ಕೇಂದ್ರ ತನಿಖಾ ದಳಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ ತೇಜಸ್ವಿ ಯಾದವ್ ಪ್ರತಿಕ್ರಿಯೆ ನೀಡಿದ್ದು, ಇಡಿ, ಸಿಬಿಐ ನವರು ನನ್ನ ಮನೆಯಲ್ಲೇ ಕಚೇರಿಗಳನ್ನು ತೆರೆಯಬಹುದು ಎಂದು ಹೇಳಿಕೊಂಡಿದ್ದಾರೆ.
ಇಡಿ, ಸಿಬಿಐಗೆ ಹೆದರುವ ಬದಲು ಇದು "ಶಾಂತಿ" ತಂದರೆ ತನ್ನ ನಿವಾಸದಲ್ಲಿ ಕಚೇರಿಗಳನ್ನು ಸ್ಥಾಪಿಸಲು ಏಜೆನ್ಸಿಗಳಿಗೆ ಅವಕಾಶ ನೀಡಲು ಸಿದ್ಧರಾಗಿದ್ದೇನೆ ಎಂದು ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಪ್ರಸಾದ್ ಯಾದವ್ ಗುರುವಾರ ಹೇಳಿದ್ದಾರೆ. ತನ್ನ ತಾಯಿ ಹಾಗೂ ಬಿಹಾರ ಮಾಜಿ ಸಿಎಂ ರಾಬ್ರಿ ದೇವಿ ಅವರ ನಿವಾಸದಲ್ಲಿ ಕೇಂದ್ರ ತನಿಖಾ ದಳಗಳನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಆರೋಪದ ಬಗ್ಗೆ ಪತ್ರಕರ್ತರೊಂದಿಗೆ ಮಾತನಾಡುವ ವೇಳೆ ಆರ್‌ಜೆಡಿ ನಾಯಕ ಈ ಹೇಳಿಕೆ ನೀಡಿದ್ದಾರೆ. ಆದರೆ, ಇದು ಸಹ ಶಾಂತಿ ತರದಿದ್ದರೆ ನಾನು ಅದಕ್ಕೆ ಸಹಾಯ ಮಾಡಲು ಸಾಧ್ಯವಿಲ್ಲ ಎಂದೂ ಪಾಟ್ನಾದಲ್ಲಿ ಅವರು ಹೇಳಿದರು.
8ನೇ ಬಾರಿಗೆ ಬಿಹಾರ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ನಿತೀಶ್ ಕುಮಾರ್, ಡಿಸಿಎಂ ಆದ ಲಾಲೂ ಪುತ್ರ ತೇಜಸ್ವಿ ಯಾದವ್
ಅಲ್ಲದೆ, ತಾನು ಮೊದಲ ಅವಧಿಯಲ್ಲಿ ಉಪ ಮುಖ್ಯಮಂತ್ರಿ ಆಗಿದ್ದಾಗ ಈ ಏಜೆನ್ಸಿಗಳಿಗೆ ಹೆದರುತ್ತಿರಲಿಲ್ಲ ಎಂದ ತೇಜಸ್ವಿ ಯಾದವ್, ಜತೆಗೆ ಬಿಹಾರ ರಾಜ್ಯದ ಹಿತಾಸಕ್ತಿಗಾಗಿ ನಾನು ಕೇಂದ್ರ ಸರ್ಕಾರದೊದಿಗೆ ಜಗಳವಾಡುತ್ತಿದ್ದೆ ಎಂದೂ ಡಿಸಿಎಂ ಹೇಳಿಕೊಂಡಿದ್ದಾರೆ. 2015 ರಿಂದ 2017 ರ ಅವಧಿಯಲ್ಲಿ ಆರ್‌ಜೆಡಿ ನಾಯಕ ಬಿಹಾರದ ಉಪ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.
"ಅಂದಿನಿಂದ ನಾನು ಪ್ರಬುದ್ಧನಾಗಿದ್ದೇನೆ, ವಿರೋಧ ಪಕ್ಷದ ನಾಯಕನಾಗಿ ಸೇವೆ ಸಲ್ಲಿಸಿದ್ದೇನೆ ಮತ್ತು ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನ ತಂದೆ ಲಭ್ಯವಿಲ್ಲದಿದ್ದಾಗ ಪಕ್ಷದ ಪ್ರಚಾರವನ್ನು ಮುನ್ನಡೆಸಿದ್ದೇನೆ" ಎಂದು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರ ಕಿರಿಯ ಮಗ ಹೇಳಿಕೊಂಡಿದ್ದಾರೆ. ಅಲ್ಲದೆ,ನಾನು ಕ್ರಿಕೆಟ್ ಆಡುತ್ತಿದ್ದಾಗ, ಅಂದರೆ ನಾನು ಚಿಕ್ಕವನಿದ್ದಾಗಲೇ ನನ್ನ ವಿರುದ್ಧ ಪ್ರಕರಣ ದಾಖಲಾಗಿತ್ತು. ನಾನು ಯಾವುದೇ ಅಪರಾಧ ಮಾಡಿದ್ದರೆ ಈವರೆಗೆ ಏಕೆ ಕ್ರಮ ತೆಗೆದುಕೊಳ್ಳಲಿಲ್ಲ" ಎಂದು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವ ತೇಜಸ್ವಿ ಯಾದವ್ ಪ್ರಶ್ನೆ ಮಾಡಿದ್ದಾರೆ.
10 ಲಕ್ಷ ಜನರಿಗೆ ಉದ್ಯೋಗದ ಭರವಸೆಯನ್ನು ಈಡೇರಿಸುತ್ತೇವೆ
ಇನ್ನು, ಇತ್ತೀಚೆಗೆ ಸ್ಥಾಪನೆಯಾದ ತಮ್ಮ ಸರ್ಕಾರ 2020ರ ವಿಧಾನಸಭೆ ಚುನಾವಣೆ ವೇಳೆ ಆಶ್ವಾಸನೆ ನೀಡಿದಂತೆ 10 ಲಕ್ಷ ಜನರಿಗೆ ಉದ್ಯೋಗ ನೀಉವುದಾಗಿ ತೇಜಸ್ವಿ ಯಾದವ್ ಗುರುವಾರ ಭರವಸೆ ನೀಡಿದ್ದಾರೆ. ಅಲ್ಲದೆ, ತನ್ನ ಬಾಸ್ ನಿತೀಶ್ ಕುಮಾರ್ ಪ್ರಮಾಣ ವಚನ ಸ್ವೀಕರಿಸಿದ ದಿನವೇ ಉದ್ಯೋಗ ಸೃಷ್ಟಿಗೆ ಸಂಬಂಧಿಸಿದಂತೆ ಉನ್ನತ ಆದ್ಯತೆ ನೀಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದೂ ತೇಜಸ್ವಿ ಯಾದವ್ ಹೇಳಿಕೊಂಡಿದ್ದಾರೆ. ಸರ್ಕಾರಿ ಇಲಾಖೆಗಳಲ್ಲಿ ಸಾಕಷ್ಟು ಖಾಲಿ ಹುದ್ದೆಗಳಿವೆ. ಇವುಗಳನ್ನು ಭರ್ತಿ ಮಾಡುವುದನ್ನು ನಾವು ಆರಂಭಿಸುತ್ತೇವೆ. ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸಿದ ನಂತರ ಇದಕ್ಕೆ ಆದ್ಯತೆ ನೀಡುತ್ತೇವೆ ಎಂದೂ ತೇಜಸ್ವಿ ಯಾದವ್ ಹೇಳಿದ್ದಾರೆ.
ದಾಖಲೆಯ 8ನೇ ಬಾರಿಗೆ ಬಿಹಾರ ಸಿಎಂ ಆಗಿ ಇಂದು ಪ್ರಮಾಣ ವಚನ ಸ್ವೀಕರಿಸಲಿರುವ ನಿತೀಶ್ ಕುಮಾರ್
ಅಲ್ಲದೆ, ನಾವು ಚುನಾವಣೆಗೆ ಮುನ್ನ ಕೇವಲ ಆಶ್ವಾಸನೆ ನೀಡಿರಲಿಲ್ಲ, ಆದರೆ ಬಿಹಾರದಲ್ಲಿ ಉದ್ಯೋಗ ಸೃಷ್ಟಿಯ ಹೆಚ್ಚಿನ ಅಗತ್ಯಕ್ಕೆ ಮನ್ನಣೆ ಎಂದೂ ಪಾಟ್ನಾದಲ್ಲಿ ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಹೇಳಿದ್ದಾರೆ.