ಪಾಸ್ ಇಲ್ಲ, ಟಿಕೆಟ್ ತಗೊಳಲ್ಲ... ಮೆಟ್ರೋ ಸ್ಟೇಷನ್‌ನಲ್ಲಿ ಕೋತಿಯ ಕರಾಮತ್ತು

Published : Nov 03, 2022, 05:01 PM IST
ಪಾಸ್ ಇಲ್ಲ, ಟಿಕೆಟ್ ತಗೊಳಲ್ಲ... ಮೆಟ್ರೋ ಸ್ಟೇಷನ್‌ನಲ್ಲಿ ಕೋತಿಯ ಕರಾಮತ್ತು

ಸಾರಾಂಶ

ಕೋತಿಯೊಂದು ಮೆಟ್ರೋ ಸ್ಟೇಷನ್‌ನಲ್ಲಿ ಸ್ವಲ್ಪವೂ ಕ್ಯಾರೇ ಇಲ್ಲದೇ ಓಡಾಡುತ್ತಿರುವ ವಿಡಿಯೋವೊಂದು ಸೆರೆ ಆಗಿದೆ. ಚಾರ್ಜ್‌ಡ್ ಕಾಯಿನ್ ಹಾಕಿದಾಗ ತೆರೆಯಬಲ್ಲ ಸ್ಟೇಟನ್ ಗೇಟ್‌ಗಳಲ್ಲಿ ಕೋತಿ ಗೇಟ್‌ನ ಕೆಳಭಾಗದಲ್ಲಿ ನುಗ್ಗಿಕೊಂಡು ಮುಂದೆ ಸಾಗುತ್ತಿದೆ.

ನವದೆಹಲಿ: ಕೋತಿಯೊಂದು ಮೆಟ್ರೋ ಸ್ಟೇಷನ್‌ನಲ್ಲಿ ಸ್ವಲ್ಪವೂ ಕ್ಯಾರೇ ಇಲ್ಲದೇ ಓಡಾಡುತ್ತಿರುವ ವಿಡಿಯೋವೊಂದು ಸೆರೆ ಆಗಿದೆ. ಚಾರ್ಜ್‌ಡ್ ಕಾಯಿನ್ ಹಾಕಿದಾಗ ತೆರೆಯಬಲ್ಲ ಸ್ಟೇಟನ್ ಗೇಟ್‌ಗಳಲ್ಲಿ ಕೋತಿ ಗೇಟ್‌ನ ಕೆಳಭಾಗದಲ್ಲಿ ನುಗ್ಗಿಕೊಂಡು ಮುಂದೆ ಸಾಗುತ್ತಿದೆ. ಕೋತಿ ಸಾಗುವುದು ನೋಡಿದರೆ ಇನ್ನೇನು ಕೋತಿ ಮೆಟ್ರೋ ರೈಲು ಮಿಸ್ ಆಗುತ್ತಿದೆಯೇನೋ ಅದಕ್ಕಾಗಿ ಓಡುತ್ತಿರಬೇಕು ಎಂದು ಭಾವಿಸುವಂತೆ ಮಾಡಿದೆ.  ಸೆರೆಯಾದ ವಿಡಿಯೋದಲ್ಲಿ ಜನರು ಮೆಟ್ರೋ ನಿಲ್ದಾಣದಲ್ಲಿ ಅತಿಂದಿತ್ತ ಓಡಾಡುತ್ತಿದ್ದರೆ ಕೋತಿಯೂ ಕೂಡ ಯಾವುದೇ ಕ್ಯಾರೇ ಇಲ್ಲದೇ ಸೆಕ್ಯೂರಿಟಿ ಚೆಕ್ ಪಾಯಿಂಟ್‌ಗಳನ್ನು ಕ್ರಮಿಸಿ ವೇಗವಾಗಿ ಮುಂದೆ ಸಾಗುವುದು ಕಾಣುತ್ತಿದೆ. ಅಂದಹಾಗೆ ಈ ದೃಶ್ಯ ಕಂಡು ಬಂದಿರುವುದು ದೆಹಲಿಯ ಮೆಟ್ರೋ ರೈಲು ನಿಲ್ದಾಣವೊಂದರಲ್ಲಿ. ದೆಹಲಿಯ ನವಾಡದ ಮೆಟ್ರೋ ರೈಲು ನಿಲ್ದಾಣದಲ್ಲಿ ಬರುವ ನೀಲಿ ಮಾರ್ಗದಲ್ಲಿ (Blue Line) ಕೋತಿ ಸಹಜವಾಗಿ ನಡೆದುಕೊಂಡು ಪ್ರಯಣಿಕರಂತೆ ಮುಂದೆ ಸಾಗುತ್ತಿದೆ. 

ಈ ನವಾಡ ರೈಲು ನಿಲ್ದಾಣದಲ್ಲಿ (Nawada Metro Station) ಕೋತಿಗಳು ಸಾಮಾನ್ಯ ಎನಿಸಿದು, ಪ್ರಯಾಣಿಕರ ಪಾಲಿಗೆ ಕೆಲವೊಮ್ಮೆ ದಾಳಿಕೋರರಾಗಿ ಮತ್ತೆ ಕೆಲವೊಮ್ಮೆ ಕುತೂಹಲಕಾರಿ ಪ್ರವಾಸಿಗರಂತೆ ಕಾಣಿಸಿಕೊಳ್ಳುತ್ತವೆ. ಆದರೆ ಈ ಕೋತಿಯನ್ನು ಅಲ್ಲಿಂದ ಮೆಟ್ರೋ ಅಧಿಕಾರಿಗಳು ಓಡಿಸಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಕೋತಿ ನಿರ್ಗಮನ ಗೇಟ್‌ನತ್ತ ಹೊರಟು ಹೋಗುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತಿದೆ. 

ಕೋತಿಗೂ ಗೊತ್ತು ಕಿಂಗ್‌ಫಿಷರ್‌ನ ಗತ್ತು... ಶರಾಬು ಕದ್ದೊಯ್ದು ಕಪಿಯ ಪಾರ್ಟಿ

ಕಳೆದ ಜೂನ್‌  ತಿಂಗಳಲ್ಲಿ ಕೋತಿಯೊಂದು ಮೆಟ್ರೋ ರೈಲೇರುವಲ್ಲಿ ಯಶಸ್ವಿಯಾಗಿದ್ದಲ್ಲದೇ ಸ್ವಲ್ಪ ದೂರ ಮೆಟ್ರೋ ರೈಲಿನಲ್ಲಿ ಪ್ರಯಾಣ ಬೆಳೆಸಲು ಯಶಸ್ವಿಯಾಗಿತ್ತು. ಅಕ್ಷರಧಾಮ ಮೆಟ್ರೋ (Akshardham Metro) ರೈಲು ನಿಲ್ದಾಣದಲ್ಲಿ ಮೆಟ್ರೋ ರೈಲೇರಿದ ಕೋತಿ ನಂತರ ಮೂರರಿಂದ ನಾಲ್ಕು ನಿಮಿಷದವರೆಗೆ ಮೆಟ್ರೋ ರೈಲಿನಲ್ಲಿ ಸಂಚರಿಸಿತ್ತು. ನಂತರ ದೆಹಲಿ ಮೆಟ್ರೋ ರೈಲು ಕಾರ್ಪೋರೇಷನ್ (Delhi Metro Railway Corporation) ಸಿಬ್ಬಂದಿ ರೈಲೇರಿ ಕೋತಿಯನ್ನು ರೈಲಿನಿಂದ ಹೊರಗೆ ಹಾಕುವಲ್ಲಿ ಯಶಸ್ವಿಯಾಗಿದ್ದರು. 

ಕೋತಿ ಮೆಟ್ರೋ ರೈಲು ಏರಿದ ಸುದ್ದಿ ತಿಳಿದ ಕೂಡಲೇ ಮೆಟ್ರೋ ಸಿಬ್ಬಂದಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಕೋತಿಯನ್ನು ಮುಂದಿನ ನಿಲ್ದಾಣದಲ್ಲಿ ರೈಲಿನಿಂದ ಹೊರಗೆ ಹಾಕುವಲ್ಲಿ ಯಶಸ್ವಿಯಾಗಿದ್ದರು ಎಂದು ಘಟನೆಯ ಬಳಿಕ ದೆಹಲಿ ಮೆಟ್ರೋ ರೈಲು ಕಾರ್ಪೋರೇಷನ್ ಸಿಬ್ಬಂದಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು. ಇಂತಹ ಘಟನೆಗಳ ಸಂದರ್ಭದಲ್ಲಿ ಪ್ರಮಾಣಿತ ನಿರ್ವಹಣಾ ಪ್ರಕ್ರಿಯೆಯನ್ನು ನಡೆಸುವ ಬಗ್ಗೆ ಅರಣ್ಯ ಇಲಾಖೆಯ ಸಿಬ್ಬಂದಿ ಜೊತೆ ಚರ್ಚಿಸಲಾಗಿದೆ. ಅಲ್ಲದೇ ಸಮಯದಿಂದ ಸಮಯಕ್ಕೆ ಜನರು ಕೂಡ ಪ್ರಾಣಿಗಳಿಗೆ ಯಾವುದೇ ಆಹಾರವನ್ನು ನೀಡದಂತೆ ನಾವು ಮನವಿ ಮಾಡುತ್ತೇವೆ ಎಂದು ಮೆಟ್ರೋ ಕಾರ್ಪೋರೇಷನ್ ಹೇಳಿದೆ.

ದಿನಾ ಆಹಾರ ತಿನ್ನಿಸುತ್ತಿದ್ದ ವ್ಯಕ್ತಿಯ ಹಣೆಗೆ ಮುತ್ತಿಟ್ಟು ವಿದಾಯ ಹೇಳಿದ ಕೋತಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

'ಲಯನ್ ಕಿಂಗ್' ನಟಿಯ ದುರಂತ ಅಂತ್ಯ: ಬಾಯ್‌ಫ್ರೆಂಡ್‌ನಿಂದಲೇ ಕೊಲೆ
ಭಾರತದ ಅತೀ ಎತ್ತರದ ಫ್ಯಾಮಿಲಿ ದಾಖಲೆ ಬರೆದ ಕುಲಕರ್ಣಿ ಕುಟುಂಬ, ಸರಾಸರಿ 7ಅಡಿ ಹೈಟ್