ಬುಲೆಟ್ ಏರಿ ಬಂದಳು ನಾರಿ: ವಧುವಿನ ವಿಡಿಯೋ ಸಖತ್ ವೈರಲ್

Published : Aug 18, 2022, 01:04 PM IST
ಬುಲೆಟ್ ಏರಿ ಬಂದಳು ನಾರಿ: ವಧುವಿನ ವಿಡಿಯೋ ಸಖತ್ ವೈರಲ್

ಸಾರಾಂಶ

ವಧುವೊಬ್ಬಳು ಬುಲೆಟ್ ಏರಿ ಮದುವೆ ಮಂಟಪಕ್ಕೆ ಬರುತ್ತಿರುವ ವಿಡಿಯೋವೊಂದು ಸಖತ್ ವೈರಲ್ ಆಗಿದೆ. ವೈಶಾಲಿ ಚೌಧರಿ ಖುಟೈಲ್ ಎಂಬುವವರು ಇನ್ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಮಿಲಿಯನ್‌ಗೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.

ತಮ್ಮ ಮದುವೆಯ ದಿನ ಪ್ರತಿಯೊಬ್ಬರಿಗೂ ಬದುಕಿನ ಒಂದು ವಿಶೇಷವಾದ ಕ್ಷಣ. ಮದುವೆ ದಿನ ವಿಶೇಷವಾಗಿ ಹೆಣ್ಣು ಮಕ್ಕಳು ಹಾಗೆ ರೆಡಿ ಆಗ್ಬೇಕು ಹೀಗೆ ರೆಡಿ ಆಗ್ಬೇಕು ಎಂದು ಬಹಳಷ್ಟು ಕನಸು ಕಾಣುತ್ತಾರೆ. ಮದುವೆಯ ಪ್ರತಿಯೊಂದು ಕ್ಷಣವೂ ಬೇರೆ ಮದುವೆಗಳಿಗಿಂತ ಭಿನ್ನವಾಗಿರಬೇಕು ಎಂದು ಬಯಸುವ ಜೋಡಿಗಳು ಇದಕ್ಕಾಗಿ ಹಲವು ಸಾಹಸಗಳನ್ನು ಮಾಡುತ್ತಿರುತ್ತಿರುತ್ತಾರೆ. ಮದುವೆಯ ಫೊಟೋಶೂಟ್‌ನಿಂದ ಹಿಡಿದು ಮದುವೆಗೆ ತೆರಳುವ ವಾಹನ, ದಿಬ್ಬಣ, ವೇಷಭೂಷಣ ಪ್ರತಿಯೊಂದು ವಿಭಿನ್ನವಾಗಿರುತ್ತದೆ. ಅದೇ ರೀತಿ ಇಲ್ಲೊಬ್ಬರು ಮದುವೆ ಹೆಣ್ಣು ಮದುವೆ ಮಂಟಪಕ್ಕೆ ಬುಲೆಟ್‌ ಏರಿ ಬಂದ ವಿಡಿಯೋ ಈಗ ಎಲ್ಲರ ಗಮನ ಸೆಳೆಯುತ್ತಿದೆ. 

ವಧುವೊಬ್ಬಳು ಬುಲೆಟ್ ಏರಿ ಮದುವೆ ಮಂಟಪಕ್ಕೆ ಬರುತ್ತಿರುವ ವಿಡಿಯೋವೊಂದು ಸಖತ್ ವೈರಲ್ ಆಗಿದೆ. ವೈಶಾಲಿ ಚೌಧರಿ ಖುಟೈಲ್ ಎಂಬುವವರು ಇನ್ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಮಿಲಿಯನ್‌ಗೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಜಾಟ್ನಿ ಎಂದು ಕ್ಯಾಪ್ಷನ್ ನೀಡಿ ಈ ವಿಡಿಯೋವನ್ನು ಪೋಸ್ಟ್‌ ಮಾಡಲಾಗಿದೆ. ಅಂದರೆ ಜಾಟ್ ಸಮುದಾಯದ ಯುವತಿ ಈಕೆ ಆಗಿದ್ದು, ಜಾಟ್ನಿ ಎಂದು ಬರೆಯಲಾಗಿದೆ. ವಿಡಿಯೋದಲ್ಲಿ ಉಲ್ಲೇಖಿಸಿದಂತೆ ಈಕೆ ದೆಹಲಿ ಮೂಲದ ವಧುವಾಗಿದ್ದು, ಬುಲೆಟ್ ಏರಿ ಸಿಂಗಲ್ ಹ್ಯಾಂಡ್‌ನಿಂದ ಈಕೆ ಬುಲೆಟ್‌ಅನ್ನು ಹ್ಯಾಂಡಲ್‌ ಮಾಡುತ್ತಿರುವ ರೀತಿ ನೋಡಿದರೆ ಒಂದು ಕ್ಷಣ ಯಾರಾದರೂ ಈಕೆಯ ಆಟಿಟ್ಯೂಡ್‌ಗೆ ಫಿದಾ ಆಗಿ ಬಿಡುವಂತಿದೆ. ಈಕೆಯ ಲುಕ್‌. 

ಎಲ್ಲಾ ಮದುವೆ ಹೆಣ್ಣುಗಳಂತೆ ಇವರು ಸುಂದರವಾಗಿ ತನ್ನ ವಿಶೇಷ ದಿನಕ್ಕೆ ರೆಡಿ ಆಗಿದ್ದು, ಭಾರಿ ಆಭರಣಗಳಿಂದ ಅಲಂಕೃತಗೊಂಡಿದ್ದಾರೆ. ವೈಭೋವೋಪೇತವಾಗಿರುವ ಭಾರಿ ಗಾತ್ರದ ಲೆಹೆಂಗಾ ಧರಿಸಿದ್ದು, ಇದರೊಂದಿಗೆ ಬುಲೆಟ್‌ನಲ್ಲಿ ರಾಣಿಯಂತೆ ಬಂದು ಕುಳಿತ ಈಕೆ ನಂತರ ಒಂದು ಕೈಯಲ್ಲಿ ತನ್ನ ಶಾಲು ಹಾಗೂ ಲೆಹೆಂಗಾವನ್ನು ಸರಿಪಡಿಸುತ್ತಿದ್ದು, ಮತ್ತೊಂದು ಕೈಯ್ಯಲ್ಲಿ ಬುಲೆಟ್ ಹ್ಯಾಂಡಲ್‌ ಹಿಡಿದುಕೊಂಡು ಬಿಂದಾಸ್ ಆಗಿ ಕೆಂಪು ಬಣ್ಣದ ರಾಯಲ್ ಏನ್‌ಫೀಲ್ಡ್ ಗಾಡಿಯನ್ನು ರೈಡ್ ಮಾಡುತ್ತಿದ್ದರೆ, ನೋಡುಗರು ಒಂದು ಕ್ಷಣ ಈಕೆಯ ಗತ್ತಿಗೆ ದಂಗಾಗಿದ್ದಾರೆ.

ಮದುವೆ ಮಂಟಪದಲ್ಲೇ ಹೊಡೆದಾಡಿಕೊಂಡ ಗಂಡು ಹೆಣ್ಣು: ಹೀಗೂ ಇರುತ್ತೆ..!

ಇನ್ನು ವಿಡಿಯೋ ನೋಡಿದ ಅನೇಕರು ಸಖತ್ ಆಗಿ ಕಾಮೆಂಟ್ ಮಾಡಿದ್ದು, ಆಕೆಯ ಸುರಕ್ಷತೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಈಕೆ ತಲೆಗೆ ಧರಿಸಿದ ಶಾಲು ರಾಯಲ್‌ ಎನ್‌ಫೀಲ್ಡ್‌ ಗಾಡಿಯ ಟಯರ್‌ಗೆ ಸಿಲುಕುವಂತಿದ್ದು, ಇದನ್ನು ನೋಡಿದ ನೆಟ್ಟಿಗರು ಶಾಲನ್ನು ಸರಿ ಮಾಡಿಕೋ ಇಲ್ಲದಿದ್ದರೆ ಜಾಟ್ನಿ ಕತೆ ಚಟ್ನಿ ಆಗುವುದು ಎಂದು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೋ ನೋಡಿದವರೆಲ್ಲಾ ಯುವತಿ ಮೇಲೆ ಫಿದಾ ಆಗಿದ್ದಾರೆ.

 ಇಲ್ಲಿ ಒಂದೇ ರಾತ್ರಿಗಾಗಿ ಮದ್ವೆ ನಡೆಯುತ್ತೆ… ಮರುದಿನ ಪತಿ -ಪತ್ನಿ ಬೇರೆಯಾಗ್ತಾರೆ 

ಇತ್ತೀಚೆಗೆ ಮದುವೆ ಸಂಭ್ರಮದ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಮದುವೆ ಎಂದ ಮೇಲೆ ಅಲ್ಲಿ ತುಂಟಾಟ ತರಲೆಗಳಿಗೆ ಯಾವುದೇ ಮಿತಿ ಇರುವುದಿಲ್ಲ. ವಧು ವರನ ಸ್ನೇಹಿತರು, ಸಿಕ್ಕಿದೆ ಛಾನ್ಸ್ ಅಂತ ವಧು ವರರ ಕಾಲೆಳೆಯುವ ಜೊತೆ ಇನ್ನಿಲ್ಲದ ಕಿತಾಪತಿ ಮಾಡುತ್ತಾರೆ. ಇನ್ನು ಅಣ್ಣ ತಮ್ಮಂದಿರು ಅಕ್ಕಂದಿರು, ಕಸಿನ್ಸ್‌ಗಳು ಎಲ್ಲರಿಗೂ ಕುಟುಂಬದ ಮದುವೆಯೊಂದು ಎಂಜಾಯ್ ಮಾಡಲು ಇರುವ ಒಂದು ಅಪರೂಪದ ಅವಕಾಶ, ಇದನ್ನು ಯಾರೂ ಮಿಸ್ ಮಾಡುವುದಿಲ್ಲ. ಆದರೆ ಇಂತಹ ಮದುವೆಗಳಲ್ಲೇ ಕೆಲವೊಮ್ಮ ಆಘಾತಕಾರಿ ಘಟನೆಗಳು ನಡೆಯುತ್ತವೆ. ಇದರಿಂದ ಕೆಲವೊಮ್ಮ ಮದುವೆಯೇ ಮುರಿದು ಬೀಳುವವರೆಗೂ ಹೋಗುತ್ತವೆ. ಅದೇ ರೀತಿ ಇಲ್ಲೊಂದು ಕಡೆ ವಧು ವರರು ಪರಸ್ಪರ ಮದುವೆ ಮಂಟಪದಲ್ಲೇ ರಸ್ಲಿಂಗ್ ತರ ಒಬ್ಬರ ಮೇಲೆ ಒಬ್ಬರು ಬಿದ್ದು ಹೊಡೆದಾಡಿಕೊಂಡಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Indigo Crisis: ಮಗಳಿಗೆ ರಕ್ತ ಸೋರ್ತಿದೆ, ಸ್ಯಾನಿಟರಿ ಪ್ಯಾಡ್​ ಕೊಡಿ: ಬೆಂಗಳೂರು ಏರ್​ಪೋರ್ಟ್​ನಲ್ಲಿ ತಂದೆಯ ಕಣ್ಣೀರು
ಬಿಹಾರದಲ್ಲಿ NDA ಗೆಲುವು ನಿಜ, ಆದ್ರೆ ಸೋತಿದ್ದು ಪ್ರಜಾಪ್ರಭುತ್ವ: ತೇಜಸ್ವಿ ಯಾದವ್