ಇನ್ಸ್‌ಪೆಕ್ಟರ್, ಪೇದೆ ಜುಗಲ್‌ಬಂದಿ: ಪೊಲೀಸರ ನಾಗಿನ್ ಡಾನ್ಸ್ ವೈರಲ್

By Kannadaprabha NewsFirst Published Aug 18, 2022, 11:26 AM IST
Highlights

ಪೊಲೀಸರು ಕೂಡ ಜನ ಸಾಮಾನ್ಯರಂತೆ ನಾಗಿಣಿ ಡಾನ್ಸ್ ಮಾಡುತ್ತಾ ಸಂತೋಷದ ಸಮಯ ಕಳೆಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಲಕ್ನೋ: ಪೊಲೀಸರು ಸದಾ ಕಾಲ ಟಿಪ್ ಟಾಪ್ ಆಗಿ ಪೊಲೀಸ್ ಸಮವಸ್ತ್ರ ಧರಿಸಿ ಲಾಠಿ ಹಿಡಿದುಕೊಂಡು ಗಂಭೀರವಾಗಿರುವುದೇ ಹೆಚ್ಚು. ಅದಾಗ್ಯೂ ಪೊಲೀಸರು ಕೂಡ ಜನ ಸಾಮಾನ್ಯರಂತೆ ನಾಗಿಣಿ ಡಾನ್ಸ್ ಮಾಡುತ್ತಾ ಸಂತೋಷದ ಸಮಯ ಕಳೆಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಉತ್ತರಪ್ರದೇಶದ ಪೊಲೀಸ್ ಇನ್ಸ್‌ಪೆಕ್ಟರ್‌ ಹಾಗೂ ಪೊಲೀಸ್ ಪೇದೆಯೊಬ್ಬರು ಬ್ಯಾಂಡ್ ಸೆಟ್‌ನವರ ತಾಳಕ್ಕೆ ತಕ್ಕಂತೆ ನಾಗಿಣಿ ಡಾನ್ಸ್ ಮಾಡುತ್ತಿದ್ದಾರೆ. ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಜೈಕಿ ಯಾದವ್ ಎಂಬವರು ಟ್ವಿಟ್ ಮಾಡಿದ್ದಾರೆ. ಈ ವಿಡಿಯೋವನ್ನು 74 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿ ಪೊಲೀಸರ ಡಾನ್ಸ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

जब दारोगा जी बने सपेरा, नागिन कांस्टेबल को अपनी बीन पर नचाया।😂 pic.twitter.com/eVHCx3hJgo

— Jaiky Yadav (@JaikyYadav16)

 ವಿಡಿಯೋದಲ್ಲಿ ಕಾಣಿಸುವಂತೆ ಇನ್ಸ್‌ಪೆಕ್ಟರ್‌ ಪೀಪೀ ಊದುವಂತೆ ಮಾಡುತ್ತ ಪೇದೆಯ ಸುತ್ತ ಸುತ್ತ ಓಡಾಡುತ್ತಿದ್ದರೆ ಪೇದೆ ನೆಲದ ಮೇಲೆ ಮೊಣಕಾಲಿನಲ್ಲಿ ನಿಂತು ಹಾವಿನಂತೆ ಬಳುಕುತ್ತಾ ನಾಗಿಣಿ ಡಾನ್ಸ್ ಮಾಡುತ್ತಿದ್ದಾರೆ. ಈ ವೇಳೆ ಸುತ್ತಲು ಅನೇಕ ಪೊಲೀಸ್ ಸಿಬ್ಬಂದಿ ನಿಂತಿದ್ದು, ಇನ್ಸ್‌ಪೆಕ್ಟರ್ ಹಾಗೂ ಪೊಲೀಸ್ ಪೇದೆಯ ನೃತ್ಯದ ಜುಗಲ್‌ಬಂದಿ ನೋಡಿ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದ್ದಾರೆ. ಪೊಲೀಸರು ಕೂಡ ಕೆಲವೊಮ್ಮೆ ಸಂತಸದಿಂದ ಕಾಲ ಕಳೆಯುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಪೊಲೀಸರು ಬಹುಮುಖ ಪ್ರತಿಭೆಗಳಾಗಿದ್ದಾರೆ ಎಂದು ಮತ್ತೊಬ್ಬ ನೋಡುಗರು ಕಾಮೆಂಟ್ ಮಾಡಿದ್ದಾರೆ. 

Bengaluru Crime: ಡ್ಯಾನ್ಸ್‌ ಬಾರಲ್ಲಿ ಯುವತಿಯರ ಅಶ್ಲೀಲ ನೃತ್ಯ: ನಾಲ್ವರ ಬಂಧನ

ಕಳೆದ ವರ್ಷ ಮುಂಬೈನ ಪೊಲೀಸ್ ಅಧಿಕಾರಿ ಯಶವಂತ್ ಕಾಂಬ್ಳೆ ಅವರು ಡಾನ್ಸ್ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ನೈಗಾಬ್‌ ಪೊಲೀಸ್ ಕಚೇರಿಯಲ್ಲಿ ಇವರು ಡಾನ್ಸ್ ಮಾಡಿದ್ದರು. ಇವರು ತಮ್ಮ ಕೆಲಸದ ಸಮಯದ ನಂತರ ತಮ್ಮ ಹವ್ಯಾಸವಾದ ಡಾನ್ಸ್ ಮಾಡುತ್ತಿದ್ದರು. ಇವರು ತಮ್ಮ ಡಾನ್ಸ್‌ನ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ನಂತರ ಈ ವಿಡಿಯೋ ವೈರಲ್ ಆಗಿತ್ತು. 

ಕೊರೋನಾ ಜಾಗೃತಿ, ವೈರಲ್ ಆಯ್ತು ಚೆನ್ನೈ ರೈಲ್ವೇ ಪೊಲೀಸರ ಡಾನ್ಸ್!

ಕೆಲ ದಿನಗಳ ಹಿಂದೆ ಸೋಶಿಯಲ್ ಮೀಡಿಯಾ ಸ್ಟಾರ್‌ ಸಪ್ನಾ ಚೌಧರಿ ಅವರ ಹಾಡಿಗೆ ಹರಿಯಾಣದ ಮಹಿಳಾ ಪೊಲೀಸರು ಸ್ಟೇಜ್‌ನಲ್ಲಿ ಡಾನ್ಸ್ ಮಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಪೊಲೀಸ್ ಇಲಾಖೆಯಲ್ಲಿಯೂ ಹಲವು ವಿಭಿನ್ನ ಪ್ರತಿಭೆಗಳನ್ನು ಹೊಂದಿರುವ ಪೊಲೀಸ್ ಅಧಿಕಾರಿಗಳಿದ್ದಾರೆ. ಇದುವರೆಗೆ ಸರಿಯಾದ ವೇದಿಕೆಗಳಿಲ್ಲದೇ ಇಂತಹ ಅನೇಕ ಪ್ರತಿಭೆಗಳು ಎಲೆಮರೆಯ ಕಾಯಂತೆ ಯಾರಿಗೂ ಕಾಣಿಸುತ್ತಿರಲಿಲ್ಲ. ಆದರೆ ಈಗ ಸೋಶಿಯಲ್‌ ಮೀಡಿಯಾ ಯುಗವಾಗಿದ್ದು, ಯಾರೂ ಕೂಡ ನನಗೆ ಪ್ರತಿಭೆ ಇದ್ದರೂ ಪ್ರದರ್ಶಿಸಲು ವೇದಿಕೆ ಇಲ್ಲ ಎಂದು ಅಳಬೇಕಾದ ಸ್ಥಿತಿ ಇಲ್ಲ.

ಪ್ರತಿಭೆ ಇದ್ದ ಯಾರೂ ಬೇಕಾದರೂ ತಮ್ಮ ಪ್ರತಿಭೆಯನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿ ಫೇಮಸ್ ಆಗಬಹುದು. ಇನ್ಸ್ಟಾಗ್ರಾಮ್, ಫೇಸ್ಬುಕ್, ಶೇರ್‌ಚಾಟ್, ಜೋಶ್ ಮುಂತಾದ ಜಾಲತಾಣಗಳು ಪ್ರತಿಭೆಗೆ ಉತ್ತಮ ವೇದಿಕೆ ಒದಗಿಸುವುದಲ್ಲದೇ ಹೊಸ ಹೊಸ ಅವಕಾಶಗಳನ್ನು ಪ್ರತಿಭಾವಂತರಿಗೆ ತೆರೆದುಕೊಳ್ಳುವಂತೆ ಮಾಡಿದೆ ಎಂದರೆ ಸುಳ್ಳಲ್ಲ.
 

click me!