ಅರೆಸ್ಟ್ ಆದ ಪಾಕಿಸ್ತಾನಿ ಎಜೆಂಟ್‌ಗಳೆಲ್ಲಾ ಆರ್‌ಎಸ್ಎಸ್ ಹಾಗೂ ಹಿಂದುಗಳು, RJD ನಾಯಕನ ವಿವಾದ!

By Suvarna NewsFirst Published Jul 23, 2022, 7:01 PM IST
Highlights

ರಾಷ್ಟ್ರೀಯ ಜನತಾ ದಳ ಮುಖ್ಯಸ್ಥ ಹೊಸ ವಿವಾದ ಸೃಷ್ಟಿಸಿದ್ದಾರೆ. ಭಾರತೀಯ ಸೇನೆ, ಭದ್ರತಾ ಪಡೆ ಅರೆಸ್ಟ್ ಮಾಡಿದ ಪಾಕಿಸ್ತಾನ ಎಜೆಂಟ್‌ ಎಂದು ಬಿಂಬಿಸಿರುವವರೆಲ್ಲಾ ಆರ್‌ಎಸ್ಎಸ್ ಹಾಗೂ ಹಿಂದೂ ಸಮುದಾಯಕ್ಕೆ ಸೇರಿದವರು ಎಂದಿದ್ದಾರೆ. ಆರ್‌ಜೆಡಿ ನಾಯಕನ ವಿವಾದಾತ್ಮಕ ಹೇಳಿಕೆ ಇಲ್ಲಿದೆ
 

ಪಾಟ್ನಾ(ಜು.23):  ಆರ್‌ಎಸ್ಎಸ್ ಹಾಗೂ ಹಿಂದೂಗಳನ್ನು ಭಯೋತ್ಪಾದಕರಿಗೆ ಹೋಲಿಸಿದದ ರಾಷ್ಟ್ರೀಯ ಜನತಾ ದಳ ಅಧ್ಯಕ್ಷ ಜಗದಾನಂದ ಸಿಂಗ್ ಹೊಸ ವಿವಾದ ಸೃಷ್ಟಿಸಿದ್ದಾರೆ. ಬಿಹಾರದಲ್ಲಿನ ಪಿಎಫ್‌ಐ ಸ್ಲೀಪರ್‌ಸೆಲ್ ಹಾಗೂ ಭಯೋತ್ಪಾದನಾ ಚಟುವಟಿಕೆ ಕುರಿತು ಹೇಳಿಕೆ ನೀಡುವ ಸಂದರ್ಭದಲ್ಲಿ ಆರ್‌ಜೆಡಿ ನಾಯಕ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಪಾಕಿಸ್ತಾನ ಎಜೆಂಟ್ ಎಂದು ಭಾರತೀಯ ಭದ್ರತಾ ಪಡೆ ಅರೆಸ್ಟ್ ಮಾಡಿರುವ ಎಜೆಂಟ್‌ಗಳೆಲ್ಲಾ ಆರ್‌ಎಸ್ಎಸ್ ಹಾಗೂ ಹಿಂದೂ ಸಮುದಾಯಕ್ಕೆ ಸೇರಿದವರು ಎಂದು ಜಗದಾನಂದ ಸಿಂಗ್ ಹೇಳಿದ್ದಾರೆ. ಬಿಹಾರದಲ್ಲಿ ಪಿಐಎಫ್ ಸಂಘಟನೆ ಭಯೋತ್ಪದನಾ ಚಟುವಟಿ ಕುರಿತು ತನಿಖೆ ನಡೆಯುತ್ತಿರುವ ಬೆನ್ನಲ್ಲೇ ಆರ್‌ಜೆಡಿ ನಾಯಕನ ಹೇಳಿಕೆ ಭಾರಿ ಮಹತ್ವ ಪಡೆದುಕೊಂಡಿದೆ. 

ಇಡಿ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ಹಾಗೂ ಹಣವನ್ನು ಭಯೋತ್ಪದನಾ ಚಟುವಟಿಕೆಗೆ ಬಳಸಿಕೊಂಡ ಆರೋಪದ ಮೇಲೆ  ಪಿಎಫ್ಐ ಕಚೇರಿ  ಹಾಗೂ ಸದಸ್ಯರ ಮನೆ ಮೇಲೆ ದಾಳಿ ಮಾಡಿ ಮಹತ್ವದ ದಾಖಲೆ ಕಲೆ ಹಾಕಿತ್ತು. ಈ ಕುರಿತು ಅಲರ್ಟ್ ಆದ ಬಿಹಾರ ಪೊಲೀಸರು ಹಲವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ ಬಿಹಾರದಲ್ಲಿ ಭಯೋತ್ಪಾದಕ ಸ್ಲೀಪರ್‌ಸೆಲ್ ಕುರಿತು ಮಾಹಿತಿ ಬಹಿರಂಗಗೊಂಡಿದೆ. ಪಿಎಫ್ಐ ಸಂಘಟನೆ ಮೇಲೆ ಆರೋಪ ಬಲಗೊಳ್ಳುತ್ತಿದ್ದಂತೆ ಇದೀಗ ಈ ಆರೋಪಗಳನ್ನು ಆರ್‌ಎಸ್‌ಎಸ್ ಹಾಗೂ ಹಿಂದೂಗಳ ಮೇಲೆ ಹೊರಿಸಲು ಜಗದಾನಂದ ಸಿಂಗ್ ಮುಂದಾಗಿದ್ದಾರೆ. 

ಜಿಹಾದಿಗಳ ಕೊನೆಯ ಟಾರ್ಗೆಟ್ ಭಾರತ: ಏನಿದು ಘಜ್ವ-ಇ-ಹಿಂದ್?

 

| Their (PFI) organisation is like RSS.They also want to serve their community but why do you call them anti-nationals?...Whenever dangerous persons were arrested by the security forces as Pakistani agents, all of them were related to RSS & Hindu community: Bihar RJD chief pic.twitter.com/SWOlMf439T

— ANI (@ANI)

 

ಕೋಮು ಸಂಘರ್ಷ ವಿಚಾರದಲ್ಲಿ ಈಗಾಗಲೇ ಭಾರತ ಹೊತ್ತಿ ಉರಿದಿದೆ. ಇದೀಗ ಬಿಹಾರದ ರಾಷ್ಟ್ರೀಯ ಜನತಾ ದಳ ಅಧ್ಯಕ್ಷರೇ ವಿವಾವದ ಕಿಡಿ ಹೊತ್ತಿಸಿದ್ದಾರೆ. ಜಗದಾನಂದ್ ಸಿಂಗ್ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿದೆ. ಯಾರೆಲ್ಲಾ ಅರೆಸ್ಟ್ ಆಗಿದ್ದಾರೆ ಅನ್ನೋದನ್ನು ಜನತೆ ನೋಡಿದ್ದಾರೆ. ಇದರ ನಡುವೆ ಆರ್‌ಎಸ್ಎಸ್ ಹಾಗೂ ಹಿಂದೂಗಳ ತರುವ ಯತ್ನ ಮಾಡಬೇಡಿ. ತನಿಖೆಯಲ್ಲಿ ಎಲ್ಲಾ ಸತ್ಯ ಬಯಲಾಗಲಿದೆ ಎಂದು ಬಿಜೆಪಿ ತಿರುಗೇಟು ನೀಡಿದೆ.

ಆರ್‌ಎಸ್ಎಸ್ ಸಂಘಟನೆಯನ್ನು ಪಿಎಫ್ಐ ಸಂಘಟನೆ ಜೊತೆ ಹೋಲಿಕೆ ಮಾಡಿದ್ದಾರೆ. ಆರ್‌ಎಸ್ಎಸ್ ಒಂದು ಸಮುದಾಯಕ್ಕಾಗಿ ಕೆಲಸ ಮಾಡುತ್ತದೆ. ಪಿಎಫ್ಐ ಆವರ ಸಮುದಾಯಕ್ಕಾಗಿ ಕೆಲಸ ಮಾಡುತ್ತದೆ. ಆದರೆ ಪಿಎಫ್ಐ ಸಂಘಟನೆಯನ್ನು ದೇಶದ್ರೋಹಿ ಸಂಘಟನೆ  ಎಂದು ಯಾಕೆ ಕರೆಯಬೇಕು? ಆರ್‌ಎಸ್ಎಸ್ ಕೂಡ ದೇಶದ್ರೋಹಿ ಸಂಘಟನೆಯಲ್ಲವೇ ಎಂದು ಜಗದಾನಂದ್ ಸಿಂಗ್ ಹೇಳಿದ್ದಾರೆ. 

ಇಸ್ಲಾಮಿಕ್ ದೇಶಕ್ಕಾಗಿ ಸಂವಿಧಾನ, ಅಂಬೇಡ್ಕರ್‌ ಹೆಸರೇ ಗುರಾಣಿ, ಪಿಎಫ್​ಐನ ಮಹಾ ಷಡ್ಯಂತ್ರ!

ಇತ್ತೀಚೆಗೆ ಬಿಹಾರ ಪೊಲೀಸ್ ಅಧಿಕಾರಿಯೊಬ್ಬರು ಆರ್‌ಎಸ್ಎಸ್ ಸಂಘಟನೆಯನ್ನು ಪಿಎಫ್ಐ ಜೊತೆ ಹೋಲಿಕೆ ಮಾಡಿದ್ದರು.  ಬಿಹಾರದ ಪೊಲೀಸ್‌ ಅಧಿಕಾರಿಯೊಬ್ಬರು ತಾವು ಬಂಧಿಸಿದ ಭಯೋತ್ಪಾದಕ ಗುಂಪಿನ ಬಗ್ಗೆ ವಿವರಿಸುವಾದ ಅನ್ನು ಆರೆಸ್ಸೆನ್‌ಗೆ ಹೋಲಿಕೆ ಮಾಡಿದ್ದಾರೆ. ಇದು ಭಾರಿ ವಿವಾದಕ್ಕೆ ಕಾರಣವಾಗಿದೆ. ‘ತಮ್ಮ ಸಿದ್ಧಾಂತವನ್ನು ಹರಡಲು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹೇಗೆ ಯುವಕರ ಕೈಗೆ ಲಾಠಿ ನೀಡಿ ನೇಮಕ ಮಾಡಿಕೊಳ್ಳುತ್ತದೋ ಅದೇ ರೀತಿ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ ಸಹ ತನ್ನ ಸಿದ್ಧಾಂತವನ್ನು ಹರಡಲು ಯುವಕರನ್ನು ನೇಮಕ ಮಾಡಿಕೊಳ್ಳುತ್ತದೆ ಮತ್ತು ಅವರ ಬ್ರೈನ್‌ ವಾಶ್‌ ಮಾಡುತ್ತದೆ’ ಎಂದು ಪಟನಾದ ಹಿರಿಯ ಪೊಲೀಸ್‌ ಅಧೀಕ್ಷಕ ಮಾನವ್‌ಜೀತ್‌ ಸಿಂಗ್‌ ಧಿಲ್ಲೋನ್‌ ಹೇಳಿದ್ದಾರೆ. ಈ ಹೇಳಿಕೆಯನ್ನು ಬಿಜೆಪಿ ನಾಯಕರು ಕಟುವಾಗಿ ಟೀಕಿಸಿದ್ದು, ಹೇಳಿಕೆಯನ್ನು ಕೂಡಲೇ ಹಿಂಪಡೆದು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

click me!