ಸೇವೆ ಸಲ್ಲಿಸಲು ಅವಕಾಶ ನೀಡಿದ ಎಲ್ಲರಿಗೂ ಧನ್ಯವಾದ, ಬೀಳ್ಗೊಡುಗೆ ಸಮಾರಂಭದಲ್ಲಿ ಕೋವಿಂದ್ ಭಾಷಣ!

By Suvarna NewsFirst Published Jul 23, 2022, 6:20 PM IST
Highlights

ಬೀಳ್ಗೊಡುಗೆ ಸಮಾರಂಭದಲ್ಲಿ ನಿರ್ಗಮಿತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಷಣ ಮಾಡಿದ್ದಾರೆ. ಈ ವೇಳೆ ಪ್ರಧಾನಿ ಮೋದಿ, ಸರ್ಕಾರ, ಜನಪ್ರತಿನಿದಿಗಳು ಸೇರಿದಂತೆ ಭಾರತೀಯರಿಗೆ ಧನ್ಯವಾದ ಹೇಳಿದ್ದಾರೆ. ಕೋವಿಂದ್ ಭಾಷಣದ ವಿವರ ಇಲ್ಲಿವೆ.

ನವದೆಹಲಿ(ಜು.23):  ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ ಎಲ್ಲಾ ಭಾರತೀಯರಿಗೆ ನನ್ನ ಧನ್ಯವಾದ. 5 ವರ್ಷದ ಹಿಂದೆ ಇದೇ ವೇದಿಕೆಯಲ್ಲಿ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ್ದೆ. ಇದೀಗ ಹಲವು ಸ್ಮರಣೀಯ ನೆನೆಪಗಳು, ತೃಪ್ತ ಭಾವದಿಂದ ವಿದಾಯ ಹೇಳುತ್ತಿದ್ದೇನೆ ಎಂದು ನಿರ್ಗಮಿತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಆಯೋಜಿಸಿದ ಬೀಳ್ಗೊಡುಗೆ ಹಾಗೂ ಔತಣಕೂಟ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಿರ್ಗಮಿತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಷಣ ಮಾಡಿದರು.  ಕೋವಿಡ್ ಮಹಾಮಾರಿ ವಿರುದ್ಧ ಭಾರತ ಶಕ್ತವಾಗಿ ಹೋರಾಟ ಮಾಡಿದೆ. ಅತ್ಯಲ್ಪ ಸಮಯದಲ್ಲಿ 200 ಕೋಟಿ ಲಸಿಕೆ ನೀಡುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಕಡಿಮೆ ಅವಧಿಯಲ್ಲಿ ಲಸಿಕೆ ಅಭಿವೃದ್ಧಿ ಪಡಿಸಿ, ಸೋಂಕು ನಿಯಂತ್ರಿಸಿದ್ದೇವೆ. ಇದರಿಂದ ಭವಿಷ್ಯದಲ್ಲಿ ಎದುರಾಗಲು ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಮಾರ್ಗಸೂಚಿಯನ್ನು ನಿರ್ಮಿಸಲಾಗಿದೆ. ಇದು ಅಭಿನಂದನೆಗೆ ಅರ್ಹ ಎಂದು ರಾಮನಾಥ್ ಕೋವಿಂದ್ ಹೇಳಿದ್ದಾರೆ.

ಹಳ್ಳಿ ಹಳ್ಳಿಯ ಮನಗೆ ಶುದ್ಧ ಕುಡಿಯು ನೀರನ್ನು ಒದಗಿಸಲಾಗಿದೆ. ಈ ಮೂಲಕ ಪ್ರತಿಯೊಬ್ಬ ನಾಗರೀಕನಿಗೆ ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ಸರ್ಕಾರ ಯಶಸ್ವಿಯಾಗಿದೆ.  ಇನ್ನು ಪ್ರತಿ ಮನೆಗೆ ಶೌಚಾಲಯ ಸೌಲಭ್ಯವನ್ನೂ ಕೇಂದ್ರ ಒದಗಿಸುತ್ತಿದೆ. ಉಡಾನ್ ಯೋಜನೆಯಡಿಯಲ್ಲಿ ವಿಮಾನ ನಿಲ್ದಾಣ, ವಿಮಾನ ಪ್ರಯಾಣವನ್ನು ದೇಶದ ಮೂಲೆ ಮೂಲೆಗೂ ವಿಸ್ತರಿಸಲಾಗಿದೆ. ಇದೆಲ್ಲವೂ ಸರ್ಕಾದ ಅವಿರತ ಪರಿಶ್ರಮದ ಫಲಾವಾಗಿದೆ ಎಂದು ರಾಷ್ಟ್ರಪತಿ ಹೇಳಿದ್ದಾರೆ.

 

ಸೊಸೆ, ಮಗ, ಮಗಳು ಏರ್‌ಲೈನ್ಸ್‌ನಲ್ಲಿ: 7 ಮಕ್ಕಳಿದ್ದ ಕುಟುಂಬದಲ್ಲಿ ಅತ್ಯಂತ ಕಿರಿಯರು ಕೋವಿಂದ್!

ರಾಷ್ಟ್ರಪತಿ ಅವಧಿಯಲ್ಲಿ ಎರಡು ಮಹತ್ವದ ಹಾಗೂ ಸ್ಮರಣೀಯ ಕಾರ್ಯಕ್ರಮ ನಡಿದೆ. ಒಂದು 150ನೇ ವರ್ಷದ ಮಹಾತ್ಮಾ ಗಾಂಧಿ ಜಯಂತಿ ಆಚರಣೆ ಹಾಗೂ 75ನೇ ವರ್ಷದ ಅಮೃತಮಹೋತ್ಸವ ಕಾರ್ಯಕ್ರಮ. ಎರಡೂ ಕಾರ್ಯಕ್ರಮಗಳನ್ನು ವಿಶೇಷವಾಗಿ ಆಯೋಜಿಸಿದ ಸರ್ಕಾರಕ್ಕೆ ಕೋವಿಂದ್ ಧನ್ಯವಾದ ಹೇಳಿದ್ದಾರೆ. 

ದೇಶದ ಪ್ರತಿಯೊಬ್ಬ ಮಗುವಿಗೆ ಉತ್ತಮ ಶಿಕ್ಷಣ ನೀಡುವ ಜವಾಬ್ದಾರಿ ಸರ್ಕಾರದ್ದಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ರಾಷ್ಟ್ಪೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದೆ.  ಹಲವು ಯೋಜನೆಗಳು ಭಾರತೀಯರ ಬದುಕಿನ ಮಟ್ಟವನ್ನು ಉನ್ನತೀಕರಿಸಿದೆ ಎಂದು ಕೋವಿಂದ್ ಹೇಳಿದ್ದಾರೆ.

ಟಿಎಂಸಿ ಶಾಸಕ, ಸಂಸದರಿಂದಲೂ ದ್ರೌಪದಿ ಮುರ್ಮುಗೆ ಮತದಾನ..?

ರಾಷ್ಟ್ರಪತಿ ಚುನಾವಣೆಯಲ್ಲಿ ಆಯ್ಕೆಯಾಗಿರುವ ದ್ರೌಪದಿ ಮುರ್ಮುಗೆ ಅಭಿನಂದನೆ ಸಲ್ಲಿಸಿದ ರಾಮನಾಥ್ ಕೋವಿಂದ್, ಶುಭಕೋರಿದ್ದಾರೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಜೊತೆಗೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಎಲ್ಲರಿಗೂ ನನ್ನ ಧನ್ಯವಾದಗಳು. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳು ಸೇರಿದಂತೆ ಜನಪ್ರತಿನಿಧಿಗಳಿಗೆ, ಸರ್ಕಾರಿ ಅಧಿಕಾರಿಗಳಿಗೆ ಕೋವಿಂದ್ ಧನ್ಯವಾದ ಹೇಳಿದ್ದಾರೆ. 

 

LIVE: President Kovind's address at the farewell function in the Central Hall of Parliament https://t.co/1QtA47lozY

— President of India (@rashtrapatibhvn)

 

click me!