ಪ್ರೆಶ್‌ ಮಿಲ್ಕ್‌ ಕೊಡು: ಹಾಲು ಕರಿಯುತ್ತಿರುವ ಮಾಲೀಕನ ಕಾಡುವ ಮಾರ್ಜಾಲ: ವಿಡಿಯೋ

Published : May 05, 2022, 10:38 AM IST
ಪ್ರೆಶ್‌ ಮಿಲ್ಕ್‌ ಕೊಡು: ಹಾಲು ಕರಿಯುತ್ತಿರುವ ಮಾಲೀಕನ ಕಾಡುವ ಮಾರ್ಜಾಲ: ವಿಡಿಯೋ

ಸಾರಾಂಶ

ಹಾಲಿಗಾಗಿ ಕಾಡುವ ಬೆಕ್ಕು ಹಾಲು ಕರೆಯುವ ವೇಳೆ ಹಾಜರ್ ಪ್ರೆಶ್‌ ಹಾಲಿಗೆ ಬೇಡಿಕೆ   

ಸಾಮಾಜಿಕ ಜಾಲತಾಣದಲ್ಲಿ ಬೆಕ್ಕು ನಾಯಿಗಳ ಹಲವು ಮುದ್ದಾದ ವಿಡಿಯೋಗಳನ್ನು ನೀವು ಈಗಾಗಲೇ ನೋಡಿರಬಹುದು. ಶ್ವಾನ ಹಾಗೂ ಬೆಕ್ಕುಗಳ ತುಂಟಾಟ ನಿಮಗೆ ಮತ್ತಷ್ಟು ಮನೋರಂಜನೆ ನೀಡುವುದರಲ್ಲಿ ಯಾವುದೇ ಸಂದೇಶವಿಲ್ಲ. ಹಾಗೆಯೇ ಇಲ್ಲೊಂದು ಬೆಕ್ಕಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಬೆಕ್ಕುಗಳು ಕದ್ದು ಮುಚ್ಚಿ ಕಣ್ಣು ಮುಚ್ಚಿ ಹಾಲು ಕುಡಿಯುವುದರಲ್ಲಿ ಎತ್ತಿದ ಕೈ. ಅಡುಗೆ ಮನೆಯಲ್ಲಿ ಮನೆಯವರ ಹಿಂದೆ ಮುಂದೆ ಸುಳಿದಾಡುತ್ತ, ಕಾಲಿಗೆ ತನ್ನ ದೇಹವನ್ನು ಒರೆಸುತ್ತಾ ಕಾಲಿಗೆ ಸಿಲುಕುತ್ತಾ ಆಹಾರ ಹಾಲಿಗಾಗಿ ಬೆಕ್ಕು ಸುಳಿದಾಡುವುದನ್ನು ನೀವೆಲ್ಲರೂ ನೋಡಿರಬಹುದು. ಆದರೆ ಇಲ್ಲೊಂದು ಬೆಕ್ಕು ಹಾಲು ನೀಡುವ ಹಸುವಿನ ಬಳಿಯೇ ಬಂದು ಹಾಲು ಕೇಳುತ್ತಿದೆ.

ವಿಡಿಯೋದಲ್ಲಿ ಕಾಣಿಸುವಂತೆ ಮಾಲೀಕ ಹಸುವಿನ ಹಾಲು ಕರೆಯುತ್ತಿದ್ದು, ಬೆಕ್ಕು ಆತನ ಬಳಿಯೇ ಇದ್ದು, ತನ್ನೆರಡು ಕೈಗಳನ್ನು ಮೇಲೆತ್ತುತ್ತಾ ಮಿಯಾಂವ್ ಮಿಯಾಂವ್ ಎನ್ನಲು ಶುರು ಮಾಡುತ್ತದೆ. ಇದನ್ನು ನೋಡಿದ ಮಾಲೀಕ ಹಸುವಿನ ಕೆಚ್ಚಲಿನಿಂದ ನೇರವಾಗಿ ಬೆಕ್ಕಿನ ಬಾಯಿಗೆ ಹಾಲು ಸುರಿಯುವಂತೆ ಮಾಡುತ್ತಾನೆ. ಆದರೂ ಬೆಕ್ಕಿಗೆ ಸಮಾಧಾನ ಆಗುವುದಿಲ್ಲ. ಅದು ಮತ್ತೆ ಮತ್ತೆ ಎರಡು ಕೈಗಳನ್ನು ಮೇಲೆತ್ತಿ ಒಂದು ಕೈಯಲ್ಲಿ ಮಾಲೀಕನನ್ನು ಮುಟ್ಟುತ್ತಾ ಹಾಲು ನೀಡುವಂತೆ ಕೇಳುತ್ತದೆ. ಕೆಂಚು ಹಾಗೂ ಬಿಳಿ ಮಿಶ್ರಿತ ಬಣ್ಣದ ಬೆಕ್ಕಿನ ಈ ಬುದ್ಧಿವಂತಿಕೆಗೆ ನೋಡುಗರು ಬೆರಗಾಗಿದ್ದಾರೆ. 

ಛತ್ತೀಸ್‌ಗಢ ಕೇಡರ್‌ನ (Chhattisgarh Cadre) IAS ಅಧಿಕಾರಿ ಅವನೀಶ್ ಶರಣ್ (Avanish Sharan) ಅವರು ಟ್ವಿಟ್ಟರ್‌ನಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಹಿಂದಿಯಲ್ಲಿ ಎಲ್ಲರ ಹಾವಭಾವವನ್ನು ಅರ್ಥಮಾಡಿಕೊಳ್ಳಬೇಕು ಎಂದು ಅವರು ಈ ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋವನ್ನು 8 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. 5,000 ರೀಟ್ವೀಟ್‌ಗಳು ಮತ್ತು 28 ಸಾವಿರ ಲೈಕ್‌ಗಳು ಬಂದಿವೆ. ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಪ್ರೀತಿ ಷರತ್ತುಗಳನ್ನು ಮೀರಿದ್ದು ಎಂದು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

ತನ್ನ ಮರಿಗಳೊಂದಿಗೆ ಬೆಕ್ಕಿಗೂ ಹಾಲುಣಿಸುವ ತಾಯಿ ಶ್ವಾನ

ಇತ್ತೀಚೆಗೆ ಪ್ರಾಣಿಗಳು ಬುದ್ಧಿವಂತರಾಗಿದ್ದು, ಮನುಷ್ಯರಂತೆ ಐಷಾರಾಮಿ ಜೀವನವನ್ನು ಅವುಗಳು ಇಷ್ಟಪಡುತ್ತವೆ. ಇದು ನಿಜ ಎಂಬುದಕ್ಕೆ ಹಲವು ಸಾಕ್ಷಿಗಳಿವೆ. ಹಾಗೆಯೇ ಇಲ್ಲೊಂದು ಬೆಕ್ಕು ಕೈ ತೊಳೆಯಲು ಬಳಸುವಂತಹ ಸಿಂಕ್‌ನಲ್ಲಿ ಮಲಗಿಕೊಂಡು ಸ್ವತಃ ತಾನೇ ಕೈಯಲ್ಲಿ ನಲ್ಲಿ ತಿರುಗಿಸಿ ಸ್ನಾನ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಬೆಕ್ಕಿನ ಸ್ಮಾರ್ಟ್‌ನೆಸ್‌ಗೆ ಎಲ್ಲರೂ ಫಿದಾ ಆಗಿದ್ದಾರೆ. ಕೈ ತೊಳೆಯುವ ಸಿಂಕ್‌ನ್ನೇ ಬೆಕ್ಕು ಬಾತ್‌ ಟಬ್‌ ಆಗಿಸಿಕೊಂಡಿದ್ದು, ಸ್ವತಃ ಅದುವೇ ನಲ್ಲಿಯನ್ನು ತಿರುಗಿಸಿಕೊಂಡು ಮೈಮೇಲೆ ನೀರು ಬಿಟ್ಟುಕೊಳ್ಳುತ್ತಿರುವ ವಿಡಿಯೋ ನೋಡುಗರಿಗೆ ಸೋಜಿಗ ಉಂಟು ಮಾಡುತ್ತಿದೆ. 

ಹಾಲುಗಲ್ಲದ ಕೂಸಿಗೆ ಮಸಾಜ್ ಮಾಡುವ ಬೆಕ್ಕು: ವಿಡಿಯೋ ವೈರಲ್
ಹೌದು ಸ್ವಾವಲಂಬನೆ ಹಾಗೂ ಐಷಾರಾಮಿ ಜೀವನ ಕೇವಲ ಮಾನವನಿಗೆ ಸೀಮಿತವಾಗಿಲ್ಲ ಕೆಲವೊಮ್ಮೆ, ಸಾಕು ಬೆಕ್ಕುಗಳು ಮತ್ತು ನಾಯಿಗಳಲ್ಲಿಯೂ ಸಹ ಇದನ್ನು ಕಾಣಬಹುದು. ಇದಕ್ಕೆ ಸಾಮಾಜಿಕ ಜಾಲತಾಣವಾದ ರೆಡ್ಡಿಟ್‌ನಲ್ಲಿ ಪೋಸ್ಟ್ ಮಾಡಲಾದ ಈ ವೀಡಿಯೊವು ಕೂಡ ಒಂದು ಉದಾಹರಣೆ. ಇಲ್ಲಿ ಬೆಕ್ಕು ತುಂಬಾ ಸ್ಮಾರ್ಟ್ ಮತ್ತು ಸ್ವತಂತ್ರವಾಗಿದ್ದು ಅದು ಯಾವುದೇ ಮಾನವ ಹಸ್ತಕ್ಷೇಪವಿಲ್ಲದೆಯೇ ಸ್ನಾನವನ್ನು ಮಾಡುತ್ತದೆ.

ಐಷಾರಾಮಿ ಜೀವನ ನಡೆಸುವ ಮನುಷ್ಯರು ಬಾತ್‌ಟಬ್‌ನಲ್ಲಿ ಮಲಗಿಕೊಂಡು ಹೇಗೆ ಸ್ನಾನ ಮಾಡುತ್ತಾರೋ ಹಾಗೆಯೇ ಈ ಬೆಕ್ಕು ಬಾತ್‌ಟಬ್‌ನಲ್ಲಿ ಆರಾಮವಾಗಿ ಮಲಗಿಕೊಂಡು ಟ್ಯಾಪ್‌ ಆನ್‌ ಮಾಡಿ ಮೇಲಿನಿಂದ ಬೀಳುವ ನೀರಿಗೆ ಮೈಯೊಡ್ಡುತ್ತದೆ. ಬೆಕ್ಕಿನ ವರ್ತನೆ ನೋಡಿದರೆ ಬಹುಶಃ ಈ ಬೆಕ್ಕು ಮನೆ ಮಂದಿ ಯಾರೋ ಬಾತ್‌ಟಬ್‌ನಲ್ಲಿ ಸ್ನಾನ ಮಾಡುವುದನ್ನು ನೋಡಿದೆ ಎಂದೆನಿಸುವುದಂತು ನಿಜ. ಒಟ್ಟಿನಲ್ಲಿ ಈ ಬೆಕ್ಕು ಸೆಲೆಬ್ರಿಟಿ ರೀತಿ ವರ್ತಿಸುತ್ತಿರುವುದಂತು ನಿಜ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!