ಕೋವಿಡ್ ಆತಂಕದ ಬೆನ್ನಲ್ಲೇ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಮಹತ್ವದ ಸೂಚನೆ!

By Suvarna NewsFirst Published Aug 11, 2022, 4:04 PM IST
Highlights

ದೇಶದಲ್ಲಿ ಕೋವಿಡ್ ಪ್ರಕರಣ ಸಂಖ್ಯೆ ಗಣನೀಯ ಏರಿಕೆಯಾಗುತ್ತಿದೆ. ದೇಶದ ಹಲವು ಭಾಗಗಳಲ್ಲಿ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಮತ್ತೊಂದು ಅಲೆ ಭೀತಿ ಎದುರಾಗಿರು ಹಿನ್ನಲೆಯಲ್ಲಿ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಎನ್‌ವಿ ರಮಣ ವಿಶೇಷ ಸೂಚನೆ ನೀಡಿದ್ದಾರೆ.

ನವದೆಹಲಿ(ಆ.11): ಕೋವಿಡ್ ಪ್ರಕರಣ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬೆಂಗಳೂರು ಸೇರಿದಂತೆ ಹಲವ ನಗರಗಳಲ್ಲಿ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಮತ್ತೆ ದೇಶ ಕೊರೋನಾ ಆತಂಕದ ನಡುವೆ ಸಿಲುಕಿದೆ. ಇತ್ತ ಹೆಚ್ಚಿನ ವಕೀಲರು ಕೋವಿಡ್‌ಗೆ ತುತ್ತಾಗುತ್ತಿದ್ದಾರೆ.  ಹಲವರು ಗೈರಾಗುತ್ತಿದ್ದಾರೆ. ಹೆಚ್ಚಿನ ವಕೀಲರಲ್ಲಿ ಕೋವಿಡ್ ಬಳಿಕವೂ ಆರೋಗ್ಯ ಸಮಸ್ಯೆ ಹೆಚ್ಚಾಗಿದೆ. ಹೀಗಾಗಿ ವಕೀಲರ ಆರೋಗ್ಯ ದೃಷ್ಟಿಯಲ್ಲಿಟ್ಟುಕೊಂಡು ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಎನ್‌ವಿ ರಮಣ ಮಹತ್ವದ ಸೂಚನೆ ನೀಡಿದ್ದಾರೆ. ಕೋರ್ಟ್ ಆವರಣದಲ್ಲಿ ಎಲ್ಲಾ ನ್ಯಾಯವಾದಿಗಳು ಮಾಸ್ಕ್ ಧರಿಸಲು ಸೂಚಿಸಿದ್ದಾರೆ. ಹಲವು ಸಹೋದ್ಯೋಗಿಗಳು ಕೋವಿಡ್‌ನಿಂದ ಕರ್ತವ್ಯಕ್ಕೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಆರೋಗ್ಯ ಸಮಸ್ಯೆಯಿಂದ ಕುಟುಂಬ ಕೂಡ ಹೈರಾಣಾಗುತ್ತಿದೆ. ಹೀಗಾಗಿ ಎಲ್ಲರೂ ಮಾಸ್ಕ್ ಧರಿಸಬೇಕು ಎಂದು ಎನ್‌ವಿ ರಮಣ ಹೇಳಿದ್ದಾರೆ. ಸರ್ಕಾರದ ಉಚಿತ ಯೋಜನೆಗಳಿಂದ ಭಾರತದ ಆರ್ಥಿಕತೆಗೆ ತೀವ್ರ ಹೊಡೆತ ಬೀಳುತ್ತಿದೆ ಅನ್ನೋ ಕುರಿತು ಅರ್ಜಿ ವಿಚಾರಣೆ ವೇಳೆ ಈ ಮಹತ್ವದ ಮಾಹಿತಿಯನ್ನು ಚೀಫ್ ಜಸ್ಟೀಸ್ ಎನ್‌ವಿ ರಮಣ ನೀಡಿದ್ದಾರೆ.

ಅರ್ಜಿ ವಿಚಾರಣೆ ವೇಳೆ ಜಸ್ಟೀಸ್ ಕೃಷ್ಣ ಮುರಾರಿ ಎಲ್ಲಾ ವಕೀಲರು ಮಾಸ್ಕ್ ಧರಿಸಬೇಕು ಎಂದಿದ್ದಾರೆ. ಇದಕ್ಕೆ ಚೀಫ್ ಜಸ್ಟೀಸ್ ಎನ್‌ವಿ ರಮಣ ಕೂಡ ಧನಿಗೂಡಿಸಿದ್ದಾರೆ. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತ ತಮ್ಮ ಕೋವಿಡ್ ವರದಿ ನೆಗಟೀವ್. ಆದರೆ ಹಿರಿಯ ಅಡ್ವೋಕೇಟ್ ಜನರಲ್ ಎಎಂ ಸಿಂಗ್ವಿ ಕೋವಿಡ್‌ಗೆ ತುತ್ತಾಗಿರುವುದರಿಂದ ಗೈರಾಗಿದ್ದಾರೆ ಎಂದಿದ್ದಾರೆ. ಈ ವೇಳೆ ಎಎಂ ಸಿಂಗ್ವಿ ಶೀಘ್ರ ಗುಣಮುಖರಾಗಲಿ.  ಇಷ್ಟೇ ಅಲ್ಲ ಎಲ್ಲಾ ಸಹೋದ್ಯೋಗಿಗಳು, ಸಿಬ್ಬಂದಿಗಳು ಮಾಸ್ಕ್ ಧರಿಸಿಬೇಕು. ಕೋವಿಡ್‌ಗೆ ತುತ್ತಾಗದಂತೆ ನೋಡಿಕೊಳ್ಳುವುದು ಅತೀ ಅಗತ್ಯ ಎಂದು ಚೀಫ್ ಜಸ್ಟೀಸ್ ಎನ್‌ವಿ ರಮಣ ಹೇಳಿದ್ದಾರೆ.

ರಾಜ್ಯದಲ್ಲಿ ಇಂದಿನಿಂದ ಮಾಸ್ಕ್‌ ಕಡ್ಡಾಯ: ಸಚಿವ ಸುಧಾಕರ್

ದೆಹಲಿಯಲ್ಲಿ ಕೋವಿಡ್‌ ಮತ್ತೆ ಏರಿಕೆ: ಶಾಲೆಗಳಲ್ಲಿ ಆನ್‌ಲೈನ್‌ ಕ್ಲಾಸ್‌ ಶುರು
ರಾಜಧಾನಿ ದೆಹಲಿಯಲ್ಲಿ ಮತ್ತೆ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಾಲೆಗಳು ಆಯ್ದ ಪ್ರಕರಣಗಳಲ್ಲಿ ಆನ್‌ಲೈನ್‌ ತರಗತಿಗಳಿಗೆ ಮೊರೆ ಹೋಗಿವೆ. ವಿದ್ಯಾರ್ಥಿಗಳಿಗೆ ಸೋಂಕು ತಗುಲದಂತೆ ತಡೆಯಲು ಕೋವಿಡ್‌ನಿಂದ ಚಿಕಿತ್ಸೆ ಪಡೆಯುತ್ತಿರುವವರು ಮತ್ತು ಐಸೋಲೇಷನಲ್ಲಿರುವವರಿಗೆ ಆನ್‌ಲೈನ್‌ನಲ್ಲಿ ಪಾಠ ಕೇಳುವ ವ್ಯವಸ್ಥೆ ಮಾಡಿವೆ. ಕೋವಿಡ್‌ನಿಂದ ಗುಣಮುಖರಾಗುತ್ತಿರುವ ವಿದ್ಯಾರ್ಥಿಗಳು ಶೈಕ್ಷಣಿಕ ವರ್ಷದಲ್ಲಿ ಹಿಂದುಳಿಯದೇ ಇರಲು ರೆರ್ಕಾಡ್‌ ಮಾಡಿರುವ ಪಾಠಗಳ ವಿಡಿಯೋವನ್ನು ನೀಡುವ ವ್ಯವಸ್ಥೆ ಮಾಡಲಾಗಿದೆ. ಕೆಲ ಶಾಲೆಗಳಲ್ಲಿ ಮೇಲಿಂದ ಮೇಲೆ ಸ್ಯಾನಿಟೈಸೇಷನ್‌ ಮಾಡುವುದು, ವಿದ್ಯಾರ್ಥಿಗಳು ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ನೋಡಿಕೊಳ್ಳುವುದರ ಬಗ್ಗೆ ಗಮನಹರಿಸಲಾಗುತ್ತಿದೆ.

ಕೊರೋನಾ ಆಯ್ತು, ಈಗ ಚೀನಾದಲ್ಲಿ ಚಿಕಿತ್ಸೆ ಇಲ್ಲದ ವೈರಸ್‌ ಸೋಂಕು ಪತ್ತೆ!
ಕೊರೋನಾ ವೈರಸ್‌ ಹಾವಳಿ ಆಯ್ತು, ಈಗ ಚೀನಾದಲ್ಲಿ ‘ಲಂಗ್ಯಾ ಹೆನಿಪಾವೈರಸ್‌’ ಅಥವಾ ‘ಲೇಯ್‌ವಿ’ ಎಂಬ ಹೊಸ ವೈರಸ್‌ ಕಾಣಿಸಿಕೊಂಡಿದೆ. ಪೂರ್ವ ಚೀನಾದಲ್ಲಿ ಇದರ 35 ಸೋಂಕು ಪ್ರಕರಣಗಳು ವರದಿಯಾಗಿವೆ. ಈ ಸೋಂಕು ಪ್ರಾಣಿಗಳು ಹಾಗೂ ಮಾನವರಲ್ಲಿ ಗಂಭೀರ ಸ್ವರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಯಾವುದೇ ಪ್ರಮಾಣೀಕೃತ ಔಷಧವಾಗಲಿ ಅಥವಾ ಲಸಿಕೆಯಾಗಲಿ ಇಲ್ಲ. ‘ಲಂಗ್ಯಾ ಹೆನಿಪಾವೈರಸ್‌’ ಈ ಎಲ್ಲ ವೈರಸ್‌ಗಳಿಗಿಂತ ತೀವ್ರತರದಲ್ಲಿ ಜ್ವರ ತಂದೊಡ್ಡುತ್ತದೆ. ಪ್ರಾಣಿ ಹಾಗೂ ಮನುಷ್ಯರಿಬ್ಬರಲ್ಲೂ ಕಾಣಿಸುತ್ತದೆ. ಜ್ವರ, ಸುಸ್ತು, ಕೆಮ್ಮು, ವಾಕರಿಕೆ, ವಾಂತಿ, ತಲೆನೋವು ಈ ಸೋಂಕಿನ ಮುಖ್ಯ ಲಕ್ಷಣಗಳು. ಈ ಸೋಂಕು ಕಾಣಿಸಿಕೊಂಡರೆ ಬಿಳಿ ರಕ್ತ ಕಣದಲ್ಲಿ ಕುಸಿತವಾಗಿ, ರೋಗ ನಿರೋಧಕ ಶಕ್ತಿ ಕುಂಠಿತವಾಗುತ್ತದೆ. ಪ್ರಾಣಿಗಳಿಂದ ಮಾನವರಿಗೆ ಇದು ಹರಡುವುದು ಕಂಡುಬಂದಿದೆಯಾದರೂ ಮಾನವರಿಂದ ಮಾನವರಿಗೆ ಇದು ಹರಡುತ್ತದೆಯೇ ಎಂಬುದು ದೃಢಪಟ್ಟಿಲ್ಲ.

 

 

ಕೊರೋನಾ ಹೆಚ್ಚಳ: ಕರ್ನಾಟಕದಲ್ಲಿ ಮತ್ತೆ ಕಠಿಣ ನಿಯಮ ಜಾರಿ, ಗಣೇಶೋತ್ಸವಕ್ಕೂ ನಿರ್ಬಂಧ?
 

click me!