WorldLionDay: ಗಿರ್‌ ಅರಣ್ಯದಲ್ಲಿ ರಾಜ ರಾಣಿ ಮಕ್ಕಳು... ಅಪರೂಪದ ದೃಶ್ಯ ಸೆರೆ

By Suvarna News  |  First Published Aug 11, 2022, 4:00 PM IST

ನಿನ್ನೆಯಷ್ಟೇ ಜಾಗತಿಕ ಸಿಂಹಗಳ ದಿನ, ಪ್ರತಿವರ್ಷ ಆಗಸ್ಟ್ 10 ರಂದು ವಿಶ್ವ ಸಿಂಹಗಳ ದಿನವನ್ನು ಆಚರಿಸಲಾಗುತ್ತದೆ. ಹಾಗೆಯೇ ವಿಶ್ವ ಸಿಂಹಗಳ ದಿನವಾದ ನಿನ್ನೆ ಸಿಂಹಗಳ ಅತೀ ಅಪರೂಪದ ವೈಭವೋಪೇತ ದೃಶ್ಯವೊಂದು ಸೆರೆ ಆಗಿದ್ದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


ನಿನ್ನೆಯಷ್ಟೇ ಜಾಗತಿಕ ಸಿಂಹಗಳ ದಿನ, ಪ್ರತಿವರ್ಷ ಆಗಸ್ಟ್ 10 ರಂದು ವಿಶ್ವ ಸಿಂಹಗಳ ದಿನವನ್ನು ಆಚರಿಸಲಾಗುತ್ತದೆ. ಹಾಗೆಯೇ ವಿಶ್ವ ಸಿಂಹಗಳ ದಿನವಾದ ನಿನ್ನೆ ಸಿಂಹಗಳ ಅತೀ ಅಪರೂಪದ ವೈಭವೋಪೇತ ದೃಶ್ಯವೊಂದು ಸೆರೆ ಆಗಿದ್ದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಭಾರತೀಯ ಅರಣ್ಯ ಸೇವೆ ಅಧಿಕಾರಿ ಪ್ರವೀಣ್ ಕಸ್ವಾನ್ ಅವರು ಈ ಸುಂದರ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದು ಗುಜರಾತ್‌ ಗಿರ್ ಅರಣ್ಯದಲ್ಲಿ ಸೆರೆಯಾದ ದೃಶ್ಯವಾಗಿದ್ದು, ಸಿಂಹಗಳು ತಮ್ಮ ಕುಟುಂಬವೊಂದಿಗೆ ಅತ್ಯುನ್ನತ ಸಮಯವನ್ನು ಸುಂದರವಾಗಿ  ಕಳೆಯುತ್ತಿವೆ. ಹಲವು ಮರಿಗಳು ಅಪ್ಪ ಅಮ್ಮ ಎಲ್ಲರೂ ಈ ಸಿಂಹಗಳ ಗುಂಪಿನಲ್ಲಿವೆ. ಮಳೆಯಿಂದ ಹಸಿರಾದ ಸುಂದರ ಪರಿಸರದಲ್ಲಿ ಸಿಂಹ ಕುಟುಂಬವೂ ಸ್ವಚ್ಛಂದವಾಗಿ ವಿಹರಿಸುತ್ತಿದ್ದು, ಸಫಾರಿ ಹೊರಟವರ ಕಣ್ಣಿಗೆ ಹಬ್ಬವನ್ನುಂಟು ಮಾಡಿವೆ. ಗಿರ್‌ ಗುಜರಾತ್‌ನಲ್ಲಿರುವ ರಾಷ್ಟ್ರೀಯ ಉದ್ಯಾನವನವಾಗಿದೆ. 

ಕಾಡಿನ ರಾಜನೆನಿಸಿಕೊಂಡಿರುವ ಸಿಂಹಗಳು ತಮ್ಮ ಗುಡುಗಿನಂತಹ ಘರ್ಜನೆ ಮತ್ತು ಪರಭಕ್ಷಕ ಪ್ರವೃತ್ತಿಯೊಂದಿಗೆ,  ಅರಣ್ಯವನ್ನು ಹೆಮ್ಮೆಯಿಂದ ಆಳುತ್ತವೆ. ಗಿರ್‌ ರಾಷ್ಟ್ರೀಯ ಉದ್ಯಾನವು ಏಷಿಯಾಟಿಕ್‌ ಸಿಂಹಗಳ ಆವಾಸ ಸ್ಥಾನವೆನಿಸಿಕೊಂಡಿದೆ. ಈ ವಿಡಿಯೋದಲ್ಲಿ ಸಿಂಹಗಳು ತಮ್ಮ ಗುಂಪಿನೊಂದಿಗೆ ವಿಹರಿಸುವುದನ್ನು ಕಾಣಬಹುದು. ಈ ಸಿಂಹ ಕುಟುಂಬದಲ್ಲಿ ಹಲವು ಪುಟಾಣಿ ಮರಿಗಳು ಕೂಡ ಇವೆ. ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಪ್ರವೀಣ್ ಕಸ್ವಾನ್, ಭಾರತದ ಗಿರ್‌ ಅರಣ್ಯದಲ್ಲಿರುವ ರಾಜ ಹಾಗೂ ರಾಣಿಯರ  ಸುಂದರವಾದ ಕುಟುಂಬವಿದು, ಇಂದು ವಿಶ್ವ ಸಿಂಹಗಳ ದಿನ ಎಂದು ಅವರು ಬರೆದುಕೊಂಡಿದ್ದಾರೆ. ಈ ವಿಡಿಯೋವನ್ನು 22 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. 

Here a beautiful family of Kings & Queens from Gir forest of . Today is . pic.twitter.com/GAsWCiOnqa

— Parveen Kaswan, IFS (@ParveenKaswan)

Tap to resize

Latest Videos

Bull Drives off lions: ದಾಳಿ ಮಾಡಲು ಬಂದ ಸಿಂಹಗಳ ಬೆನ್ನಟ್ಟಿದ ಎತ್ತು

ಸಿಂಹಗಳು ವೈಭವ ಘನತೆ ಗಾಂಭೀರ್ಯದಿಂದ ಬದುಕುವ ಪ್ರಾಣಿಗಳು ಇವುಗಳು ಪ್ರೈಡ್ ಎಂದು ಕರೆಯಲ್ಪಡುವ ಗುಂಪಿನಲ್ಲಿ ವಾಸಿಸುತ್ತವೆ. ಈ ವಿಡಿಯೋದಲ್ಲಿ ಸಿಂಹ ಜೋಡಿಯೊಂದು ಜೊತೆಯಾಗಿ ಒಳ್ಳೆಯ ಸಮಯವನ್ನು ಕಳೆಯುತ್ತಿವೆ ಎಂದು ಬರೆದುಕೊಂಡಿದ್ದಾರೆ. ಸಿಂಹಗಳ ಈ ವಿಡಿಯೋಗಳು ನೋಡುಗರಿಗೆ ಸೋಜಿಗ ಮೂಡಿಸಿವೆ. ಅಲ್ಲದೇ ಈ ವಿಡಿಯೋಗಳಿಗೆ ಪ್ರತಿಯಾಗಿ ಟ್ವಿಟ್ಟರ್‌ ಬಳಕೆದಾರರೊಬ್ಬರು ಮತ್ತೊಂದು ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಸಿಂಹವೊಂದು ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದರೆ, ಅದರ ಹಿಂದೆ ವ್ಯಕ್ತಿಯೊಬ್ಬರು ತಮ್ಮ ಬೈಕ್‌ನಲ್ಲಿ ಅದೇ ರಸ್ತೆಯಲ್ಲಿ ಬರುತ್ತಿದ್ದಾರೆ. ಇದೊಂದು ನಿಜವಾಗಿಯೂ ಸಿಂಹಗಳ ಸಾಮ್ರಾಜ್ಯ ಎಂದು ವಿಡಿಯೋ ನೋಡಿದವರು ಕಾಮೆಂಟ್ ಮಾಡಿದ್ದಾರೆ. 

Lions are majestic big cats and live in a group called as Pride. Here is a couple having some good time. pic.twitter.com/WpekL761vA

— Parveen Kaswan, IFS (@ParveenKaswan)

ಕುಡುಕನ ಆರ್ಭಟಕ್ಕೆ ಮಾಂಸ ತಿಂತಿದ್ದ ಸಿಂಹಗಳೇ ದಿಕ್ಕಾಪಾಲು!

ವಿಶ್ವ ಸಿಂಹ ದಿನವನ್ನು  ಪ್ರತಿ ವರ್ಷ ಆಗಸ್ಟ್ 10 ರಂದು ಆಚರಿಸಲಾಗುತ್ತದೆ. ಸಿಂಹಗಳ ಜನಸಂಖ್ಯೆಯಲ್ಲಿನ ತ್ವರಿತ ಕುಸಿತವನ್ನು ಎತ್ತಿ ತೋರಿಸಲು ಮತ್ತು ಅವುಗಳ ಸಂರಕ್ಷಣೆಗಾಗಿ ಪ್ರಯತ್ನಗಳನ್ನು ಪ್ರೇರೇಪಿಸಲು ಲಾಭರಹಿತ ಮತ್ತು ಪ್ರವಾಸೋದ್ಯಮ ಕಂಪನಿಗಳ ಗುಂಪು ಈ ದಿನದ ಆಚರಣೆಗೆ ಮುಂದಾಗಿದೆ. 

pic.twitter.com/5Ly4aSWeBH

— Rakesh Thakor (@RakeshT78582910)
click me!