ವಿಮಾನದೊಳಗೆ ಸೋಷಿಯಲ್ ಈಡಿಯಾ ಸ್ಟಾರ್ ಸಿಗರೇಟ್ ಸೇದಿದ ವಿಡಿಯೋ ವೈರಲ್ ಆಗಿದೆ. ಈ ಸಂಬಂಧ ತನಿಖೆ ನಡೆಸುವುದಾಗಿ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್, ವಿಡಿಯೋ ವೈರಲ್ ಮಾಡಲು ನೆಟ್ಟಿಗರು ನಾನಾ ಸಾಹಸಗಳನ್ನು ಮಾಡುತ್ತಾರೆ. ಅದೇ ರೀತಿ, ಕೆಲವು ವಿಡಿಯೋಗಳಿಂದ ಸ್ಟಾರ್‌ಗಳಾದ ಸೋಷಿಯಲ್ ಮೀಡಿಯಾ ಸ್ಟಾರ್‌ಗಳು ಮತ್ತೆ ಮತ್ತೆ ಸುದ್ದಿಯಾಗಲು ನಾನಾ ಕಸರತ್ತುಗಳನ್ನು ಮಾಡುತ್ತಾರೆ. ಇದೇ ರೀತಿ, ವಿಮಾನದಲ್ಲಿ ಸಿಗರೇಟ್ ಸೇದಿದ ಸೋಷಿಯಲ್ ಮೀಡಿಯಾ ಸ್ಟಾರ್‌ವೊಬ್ಬರ ವಿಡಿಯೋ ವೈರಲ್ ಆಗಿದ್ದು, ಈತನ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ವಿಮಾನಯಾನ ಸಚಿವರು ಹೇಳಿದ್ದಾರೆ.
ಸೋಷಿಯಲ್ ಮೀಡಿಯಾ ಸ್ಟಾರ್ ಬಲ್ವಿಂದರ್ ಕಟಾರಿಯಾ ಅಥವಾ ಬಾಬಿ ಕಟಾರಿಯಾ ಎಂದು ಖ್ಯಾತಿ ಪಡೆದಿರುವ ಅವರು ವಿಮಾನವೊಂದರಲ್ಲಿ ಸಿಗರೇಟ್ ಸೇದುತ್ತಿರುವ ಹಳೆಯ ವಿಡಿಯೋವೊಂದು ವೈರಲ್ ಆಗಿದೆ. ಜನವರಿ 23, 2022 ರಂದು ಈ ಘಟನೆ ನಡೆದಿದೆ ಎನ್ನಲಾಗಿದ್ದು, ದುಬೈನಿಂದ ರಾಷ್ಟ್ರ ರಾಜಧಾನಿ ದೆಹಲಿಗೆ ಬರುತ್ತಿದ್ದ ಸ್ಪೈಸ್‌ಜೆಟ್ ವಿಮಾನದಲ್ಲಿ ಈ ಘಟನೆ ನಡೆದಿದೆ ಎಂದು ಸುದ್ದಿಸಂಸ್ಥೆ ಎಎನ್‌ಐ ವರದಿ ಮಾಡಿದೆ.
ಪುಟ್ಟ ಮಕ್ಕಳ ದೊಡ್ಡತನ: ತಳ್ಳು ಗಾಡಿ ಮೇಲೆತ್ತಲು ಮಹಿಳೆಗೆ ಸಹಾಯ
इस देश में एयरपोर्ट पर सुरक्षा का हाल ये है । जी जी ये व्यक्ति सरेआम देश के क़ानून की धज्जियाँ उड़ा रहा है ।कितनी चूक है सुरक्षा में ये कारनामा । pic.twitter.com/JybE1EnGJh
— Umesh Kumar (@Umeshnni)ಈ ವಿಡಿಯೋವನ್ನು ಬಲ್ವಿಂದರ್ ಕಟಾರಿಯಾ ಅವರ ಫೇಸ್‌ಬುಕ್ ಹಾಗೂ ಇನ್ಸ್ಟಾಗ್ರಾಮ್ ಪುಟಗಳಲ್ಲಿ ಅವರು ಅಪ್ಲೋಡ್ ಮಾಡಿದ್ದರು ಎಂದೂ ತಿಳಿದುಬಂದಿದ್ದು, ಸದ್ಯ ಆ ವಿಡಿಯೋಗಳನ್ನು ಅವರ ಸಾಮಾಜಿಕ ಜಾಲತಾಣಗಳ ಪುಟಗಳಲ್ಲಿ ತೆಗೆದು ಹಾಕಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ಮಾಹಿತಿ ನೀಡಿದ ಅಧಿಕಾರಿಗಳು ‘’ಅವರ ಎಫ್‌ಬಿ ಅಥವಾ ಇನ್ಸ್ಟಾ ಪೇಜ್‌ನಲ್ಲಿ ವಿಡಿಯೋ ಸದ್ಯ ಲಭ್ಯವಿಲ್ಲ. ವಿಮಾನಯಾನ ಇಲಾಖೆ ಈ ಹಿಂದೆಯೇ ಭದ್ರತಾ ಕ್ರಮ ಕೈಗೊಂಡಿದೆ’’ ಎಂದು ಮಾಹಿತಿ ನೀಡಿದ್ದಾರೆ.
ಈ ವಿಡಿಯೋ ಗುರುವಾರ ವೈರಲ್ ಆಗುತ್ತಿದ್ದಂತೆ, ಈ ಸಂಬಂಧ ಸ್ಪಷ್ಟನೆ ನೀಡಿದ ನಾಗರಿಕ ವಿಮಾನಯಾನ ಭದ್ರತೆಯ ಬ್ಯೂರೋ (Bureau of Civil Aviation Security), ಈ ವಿಡಿಯೋ ಹಳೆಯದಾಗಿದ್ದು, ಆ ಸಮಯದಲ್ಲೇ ಬಾಬಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಸುದ್ದಿಸಂಸ್ಥೆ ಎಎನ್‌ಐ ವರದಿ ಮಾಡಿದೆ.
ಸಾರಿ ಉಟ್ಟು ಕನ್ನಡಿ ಮುಂದೆ ಚಮಕ್ ಮಾಡ್ತಿರೋ ಪುಟಾಣಿ : ವಿಡಿಯೋ ವೈರಲ್
ಅಂತಹ ಅಪಾಯಕಾರಿ ಬೆಳವಣಿಗೆ ಸಹಿಸಲ್ಲ ಎಂದ ಜ್ಯೋತಿರಾದಿತ್ಯ ಸಿಂಧಿಯಾ..!
ಈ ವಿಡಿಯೋ ಗುರುವಾರ ವೈರಲ್ ಆಗುತ್ತಿದ್ದಂತೆ ಹಲವು ನೆಟ್ಟಿಗರು ಇದನ್ನು ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಶೇರ್ ಮಾಡಿಕೊಂಡಿದ್ದರು. ಬಾಬಿ ಕಟಾರಿಯಾ ಅವರಿಗೆ ಯಾವ ನಿಯಮಗಳೂ ಅನ್ವಯವಾಗುವುದಿಲ್ಲವೇ..? ಅವರಿಗೆ ಹೊಸ ನಿಯಮಗಳೇ..? ದೊಡ್ಡ ಮಟ್ಟದ ಭದ್ರತಾ ವೈಫಲ್ಯ, ಅವರನ್ನು ವಿಮಾನ ಪ್ರಯಾಣದಿಂದ ಅಜೀವಪರ್ಯಂತ ಬ್ಯಾನ್ ಮಾಡಬೇಕು ಎಂದು ಹಲವು ನೆಟ್ಟಿಗರು ಈ ವಿಡಿಯೋಗೆ ಪ್ರತಿಕ್ರಿಯೆ ನೀಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು, ಈ ವೈರಲ್ ವಿಡಿಯೋ ಬಗ್ಗೆ ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಪ್ರತಿಕ್ರಿಯೆ ನೀಡಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಅಂತಹ ಅಪಾಯಕಾರಿ ನಡವಳಿಕೆಯನ್ನು ಸಹಿಸುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
Investigating it. There will be no tolerance towards such hazardous behaviour.
— Jyotiraditya M. Scindia (@JM_Scindia)