ಕೊರೊನಾ ಯುದ್ಧವೇ ಮೋದಿ ಮುಂದಿರುವ ಅಗ್ನಿಪರೀಕ್ಷೆ..!

By Kannadaprabha News  |  First Published May 15, 2020, 12:36 PM IST

ಕೋವಿಡ್ 19 ನಿಂದ ದೇಶವನ್ನು ಮುಕ್ತಿಗೊಳಿಸುವುದು ಹೇಗೆ ಎಂಬ ಸವಾಲು ಪ್ರಧಾನಿ ಮೋದಿ ಮುಂದಿದೆ. ಯುದ್ಧಗಳು, ವಿಪತ್ತುಗಳು, ಆರ್ಥಿಕ, ಆರೋಗ್ಯ, ಸಾಮಾಜಿಕ ಸಂಕಷ್ಟಗಳು ಜನಸಾಮಾನ್ಯನಿಗೆ ಜೀವನದ ಅತೀವ ಕೆಟ್ಟದಿನಗಳು ಹೌದಾದರೂ, ಒಬ್ಬ ನಾಯಕನಿಗೆ ವಿಪತ್ತು ತನ್ನ ಸಾಮರ್ಥ್ಯವನ್ನು ತೋರಿಸಲು ಅವಕಾಶವೂ ಹೌದು.


ಮಂಗಳವಾರ ರಾತ್ರಿ ದೇಶದ ಜನರನ್ನು ಉದ್ದೇಶಿಸಿ ಮೋದಿ ಸಾಹೇಬರು ಮಾತನಾಡಲು ಬಂದಾಗ ಯಾಕೋ ದಣಿದಂತೆ ಕಾಣುತ್ತಿದ್ದರು. ಹಗಲು ರಾತ್ರಿ ಕೆಲಸ ಮಾಡುತ್ತಿರುವ ಆಯಾಸ ಹಾಗೂ ಕೊರೋನಾ ಒಡ್ಡುತ್ತಿರುವ ಸವಾಲಿನ ಚಿಂತೆಯ ಜೊತೆಗೆ ದೇಶದ 130 ಕೋಟಿ ಜನರನ್ನು ಈ ವಿಪತ್ತಿನ ಕಾಲದಲ್ಲಿ ಸುರಕ್ಷಿತವಾಗಿರಿಸುವುದು ಹೇಗೆಂಬ ಯೋಚನೆ ಅವರಲ್ಲಿ ಮಡುಗಟ್ಟಿದಂತಿತ್ತು.

ಅವರ ಬೌದ್ಧಿಕದಲ್ಲಿ ಹಾಗೂ ಧ್ವನಿಯಲ್ಲಿ ಸಂಕಷ್ಟದ ತೀವ್ರತೆಯ ಆತಂಕವಿದ್ದರೆ, ಮುಖದಲ್ಲಿ ಪೆಡಂಭೂತದಿಂದ ಹೊರಬರುವುದು ಹೇಗೆಂಬ ಚಿಂತೆ ಸ್ಪಷ್ಟವಾಗಿ ಕಾಣುತ್ತಿತ್ತು. ಯುದ್ಧಗಳು, ವಿಪತ್ತುಗಳು, ಆರ್ಥಿಕ, ಆರೋಗ್ಯ, ಸಾಮಾಜಿಕ ಸಂಕಷ್ಟಗಳು ಜನಸಾಮಾನ್ಯನಿಗೆ ಜೀವನದ ಅತೀವ ಕೆಟ್ಟದಿನಗಳು ಹೌದಾದರೂ, ಒಬ್ಬ ನಾಯಕನಿಗೆ ವಿಪತ್ತು ತನ್ನ ಸಾಮರ್ಥ್ಯವನ್ನು ತೋರಿಸಲು ಅವಕಾಶವೂ ಹೌದು.

Tap to resize

Latest Videos

ಅನಿವಾಸಿ ಕನ್ನಡಿಗರ ಬಗ್ಗೆ ಸಚಿವರ ಕಾಳಜಿ

ಬೇರೆ ದೇಶಗಳಿಗೆ ಹೋಲಿಸಿದರೆ ಇಲ್ಲಿಯವರೆಗೆ ಭಾರತದಲ್ಲಿ ಕೊರೋನಾದಿಂದ ದೊಡ್ಡ ಪ್ರಮಾಣದಲ್ಲಿ ಸಾವುನೋವು ಸಂಭವಿಸದಂತೆ ನಿಯಂತ್ರಿಸುವ ಮೂಲಕ ಈ ವಿಷಯದಲ್ಲಿ ಅವರು ನಂ.1 ಜಾಗತಿಕ ನಾಯಕನೆಂಬ ಹೆಗ್ಗಳಿಕೆ ಪಡೆದಿದ್ದಾರೆ. ಭವಿಷ್ಯದ ಇತಿಹಾಸ ಅವರನ್ನು ಎಷ್ಟುಚುನಾವಣೆ ಗೆದ್ದರು, ಸೋತರು ಎನ್ನುವುದಕ್ಕಿಂತ, ಕೊರೋನಾ ವಿಪತ್ತಿನಲ್ಲಿ ಹೇಗೆ ಜನರಿಗೆ ಆರೋಗ್ಯದ ಆಪತ್ತಿನಿಂದ ಪಾರಾಗಲು ಸಹಾಯ ಮಾಡಿದರು ಮತ್ತು ಕೊರೋನಾ ನಂತರ ಹೇಗೆ ದೇಶವನ್ನು ಆರ್ಥಿಕವಾಗಿ ಪುನಃ ಗಟ್ಟಿಗೊಳಿಸಿದರು ಎಂಬ ಕೆಲಸಗಳಿಂದ ವಿಶ್ಲೇಷಣೆಗೆ ಒಳಪಡಿಸುತ್ತದೆ.

ತೆಲುಗು ಟೀವಿ ಚಾನಲ್‌ ಪತ್ರಕರ್ತನಿಗೆ ಕೊರೋನಾ ಸೋಂಕು ; ಅನೇಕ ಪತ್ರಕರ್ತರಿಗೆ ದಿಗಿಲು

ಮೋದಿ ಗೆದ್ದರು, ಸೋತರು ಎಂದು ಈಗಲೇ ಷರಾ ಬರೆಯುವುದು, ಭಾರತದ ಜಯ, ಅಪಜಯದ ಬಗ್ಗೆ ತೀರ್ಮಾನ ಕೊಡುವುದು ಸರಿಯಲ್ಲ. ಈಗಷ್ಟೇ ಯುದ್ಧ ಶುರು ಆಗಿದೆ. ಚುಚ್ಚುಮದ್ದು ರೆಡಿ ಆಗುವವರೆಗೂ ಯುದ್ಧ ನಡೆದೇ ನಡೆಯುತ್ತದೆ. ಹಲವರು ಕನಸು ಕಂಡಂತೆ ಭಾರತ ಸೂಪರ್‌ ಪವರ್‌ ಆಗುತ್ತದೆಯೇ, ಮೋದಿ ವಿಶ್ವದ ಅದ್ವಿತೀಯ ನಾಯಕ ಆಗುತ್ತಾರೆಯೇ ಈ ಎಲ್ಲ ಪ್ರಶ್ನೆಗಳಿಗೆ ಈಗ ಕೊರೋನಾ ಮಾತ್ರ ಉತ್ತರ ನೀಡಲಿದೆ. ‘ಗೋ ಕೊರೋನಾ ಗೋ’ ಎಂದು ಟಿಕ್‌ಟಾಕ್‌ನಲ್ಲಿ ಕೂಗಿಕೊಂಡಷ್ಟುಸರಳ, ಸುಲಭವಾಗಿಲ್ಲ ಈ ಯುದ್ಧ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ 

click me!