‘20 ಲಕ್ಷ ಕೋಟಿ’ ; ಮೋದಿ ಭಾಷಣ 19 ಕೋಟಿ ಜನರಿಂದ ವೀಕ್ಷಣೆ..!

Kannadaprabha News   | Asianet News
Published : May 15, 2020, 10:49 AM ISTUpdated : May 15, 2020, 10:59 AM IST
‘20 ಲಕ್ಷ ಕೋಟಿ’ ; ಮೋದಿ ಭಾಷಣ 19 ಕೋಟಿ ಜನರಿಂದ ವೀಕ್ಷಣೆ..!

ಸಾರಾಂಶ

ಮೋದಿ ಐತಿಹಾಸಿಕ 20 ಲಕ್ಷ ಕೋಟಿ ರುಪಾಯಿ ಪ್ಯಾಕೇಜ್ ಘೋಷಿಸಿದ್ದಾರೆ. ಈ ಭಾಷಣವನ್ನು ದೇಶದ 19 ಕೋಟಿ ಜನರು ವೀಕ್ಷಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

ಮುಂಬೈ(ಮೇ.15): ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಐತಿಹಾಸಿಕ 20 ಲಕ್ಷ ಕೋಟಿ ರುಪಾಯಿ ಪ್ಯಾಕೇಜ್‌ ಘೋಷಿಸಿದ ಭಾಷಣವನ್ನು ಬರೋಬ್ಬರಿ 19.3 ಕೋಟಿ ಮಂದಿ ಟೀವಿಯಲ್ಲಿ ವೀಕ್ಷಿಸಿದ್ದಾರೆ. 

ಲಾಕ್‌ಡೌನ್ ಬಳಿಕ ಮೋದಿ ಕೊರೋನಾ ವಿಚಾರವಾಗಿ ಐದನೇ ಬಾರಿಗೆ ದೇಶವನ್ನು ಉದ್ದೇಶಿಸಿ ಮಾತನಾಡಿದರು. ಮೋದಿ ಮಾರ್ಚ್ 25ರಿಂದ ಲಾಕ್‌ಡೌನ್ ಆದೇಶ ಹೊರಡಿಸಿದ್ದರು. ಇದಾದ ಬಳಿಕ ಮೂರು ಹಂತದ ಲಾಕ್‌ಡೌನ್ ಜಾರಿಯಾಗಿದೆ. ಇದರ ಬೆನ್ನಲ್ಲೇ ಹಳಿ ತಪ್ಪಿರುವ ಆರ್ಥಿಕತೆಯನ್ನು ಸರಿದಾರಿಗೆ ತರಲು ಮಹತ್ವದ ಕಾರ್ಯ ಯೋಜನೆಯನ್ನು ರೂಪಿಸಿದ್ದು, ಐತಿಹಾಸಿಕ 20 ಲಕ್ಷ ಕೋಟಿ ರುಪಾಯಿ ಪ್ಯಾಕೇಜ್‌ ಘೋಷಿಸಿದ್ದರು. 

ಸೋಮವಾರದಿಂದ ವಿಮಾನ ಸಂಚಾರ ಆರಂಭ?

ಈ ಮೂಲಕ ಮೋದಿ ಅವರು ಕೊರೋನಾ ಹಿನ್ನೆಲೆಯಲ್ಲಿ ದೇಶವನ್ನು ಉದ್ದೇಶಿಸಿ ಮಾಡಿದ 5 ಭಾಷಣಗಳ ಪೈಕಿ ಅತಿ ಹೆಚ್ಚು ವೀಕ್ಷಕರನ್ನು ಪಡೆದ 2ನೇ ಭಾಷಣ ಇದಾಗಿದೆ. ಏ.14ರಂದು ಮೋದಿ ಮಾಡಿದ್ದ ಭಾಷಣವನ್ನು 20 ಕೋಟಿ ಮಂದಿ ವೀಕ್ಷಿಸಿದ್ದರು.

ಮಹಾರಾಷ್ಟ್ರ ಮೇಲ್ಮನೆಗೆ ಉದ್ಧವ್‌ ಅವಿರೋಧ ಆಯ್ಕೆ: ಸಿಎಂ ಪಟ್ಟಗಟ್ಟಿ

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಸೇರಿ 9 ಜನರು ವಿಧಾನ ಪರಿಷತ್‌ ಸದಸ್ಯರಾಗಿ ಗುರುವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಮುಖ್ಯಮಂತ್ರಿ ಹುದ್ದೆ ಕಳೆದುಕೊಳ್ಳುವ ಭೀತಿಯಲ್ಲಿದ್ದ ಠಾಕ್ರೆ ಸಂಪೂರ್ಣ ನಿರಾಳರಾಗಿದ್ದಾರೆ. 

ಕಳೆದ ವರ್ಷ ನ.28ರಂದು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಠಾಕ್ರೆ ಅವರಿಗೆ 6 ತಿಂಗಳ ಒಳಗಾಗಿ ಯಾವುದಾದರೊಂದು ಶಾಸನ ಸಭೆಯ ಸದಸ್ಯರಾಗಲೇಬೇಕಿದ್ದ ಅನಿವಾರ್ಯತೆ ಇತ್ತು. ಆದರೆ ಚುನಾವಣೆ ಘೋಷಣೆಯಾಗಿರಲಿಲ್ಲ. ತೆರವಾಗಿರುವ ಸ್ಥಾನಕ್ಕೆ ನೇಮಕ ಮಾಡುವಂತೆ ರಾಜ್ಯಪಾಲರಿಗೆ ಮನವಿ ಮಾಡಿದರೂ ಅವರು ಕೇಳಿರಲಿಲ್ಲ. ಹೀಗಾಗಿ ಉದ್ಧವ್‌ ಅವರು ಮೋದಿ ಅವರ ಮೊರೆ ಹೋಗಿದ್ದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!