ಮುಗಿಯದ ಕರೋನಾ ಕಾಟ, ಏನು ಹೇಳೋದು ದಿಶಾ ಮೈಮಾಟ..ಮಾ. 16 ರ ಟಾಪ್ 10 ಸುದ್ದಿಗಳು

By Suvarna News  |  First Published Mar 16, 2020, 6:24 PM IST

ಚೆನ್ನೈ ತೊರೆದರಾ ಟೀಂ ಇಂಡಿಯಾದ ದಿಗ್ಗಜ ಕ್ರಿಕೆಟಿಗ ಎಂಎಎಸ್ ಧೋನಿ/ ಕರೋನಾ ತಡೆಗೆ ಕರ್ನಾಟಕ ಸರ್ಕಾರ ತೆಗೆದುಕೊಂಡ ಕ್ರಮಗಳು ಏನು?/ ಸಿದ್ದರಾಮಯ್ಯ ಅವರಿಗೆ ನೀಡಿರುವ ಭದ್ರತೆ ಸಾಕಾಗುತ್ತಿಲ್ಲವವಾ?/ ದಿಶಾ ಪಟಾಣಿ ಹೇಳಿಕೆ ಹಿಂದಿನ ಅಸಲಿಯತ್ತು ಏನು?


ಒಂದು ಕಡೆ ಕರೋನಾ ಕಾಟ ಮುಂದುವರಿದೆ ಇದೆ. ಆರೋಗ್ಯದ ಮೇಲೆ ಮಾತ್ರವಲ್ಲ, ಆರ್ಥಿಕ ವ್ಯವಸ್ಥೆ, ವ್ಯಾಪಾರ-ವಹಿವಾಟು ಕೊನೆಗೆ ದೈನಂದಿನ ಜೀವನದ ಮೇಲೂ ಕರೋನಾ ಪರಿಣಾಮ ಬೀರಿ ನಿಂತಿದೆ. ದೇವಾಲಯಗಳಿಗೂ ಕರೋನಾ ಭೀತಿ ಆವರಿಸಿದೆ. ಷೇರು ಮಾರುಕಟ್ಟೆ ತಲ್ಲಣ ಹಾಗೇ ಮುಂದುವರಿದಿದೆ.   ಇದೆಲ್ಲದರ ನಡುವೆ ಮಾರ್ಚ್ 16 ರ ಟಾಪ್ 10 ಸುದ್ದಿಗಳು ಇಲ್ಲಿವೆ.

ಇದೇ ಮೊದಲ ಬಾರಿ ತಿಮ್ಮಪ್ಪನ ಪೂಜೆ ಸ್ಥಗಿತ!

Tap to resize

Latest Videos

ಕೊರೋನಾ ವೈರಸ್‌ ಭೀತಿ ಲಕ್ಷಾಂತರ ಜನರು ಸೇರುವ ತಿರುಮಲ ವೆಂಕಟೇಶ್ವರನ ಸನ್ನಿಧಿಗೂ ತಟ್ಟಿದೆ. ಕೊರೋನಾ ಹಿನ್ನೆಲೆಯಲ್ಲಿ ಕೆಲವು ನಿತ್ಯ ಪೂಜಾ ಸೇವೆಗಳು ಹಾಗೂ ಸಾಪ್ತಾಹಿಕ ಪೂಜಾ ಸೇವೆಗಳನ್ನು ಕೈಬಿಡಲು ತಿರುಪತಿ-ತಿರುಮಲ ದೇವಸ್ಥಾನ ಸಮಿತಿ (ಟಿಟಿಡಿ) ನಿರ್ಧರಿಸಿದೆ.

 

ಕೊರೋನಾವೈರಸ್‌ ಸೋಂಕು ಪತ್ತೆಗೆ ಗೂಗಲ್‌ನಿಂದ ಹೊಸ ವೆಬ್‌ಸೈಟ್‌ ಶುರು

 

ಅಮೆರಿಕಾದ ಲಾಸಂಜಲೀಸ್‌ನಿಂದ ಹಿಡಿದು ಇತ್ತ ನ್ಯೂಜಿಲ್ಯಾಂಡ್‌ವರೆಗೂ  ಕೊರೋನಾವೈರಸಿನದ್ದೇ  ಕೋಲಾಹಾಲ. ವಿದ್ಯಾರ್ಥಿಗಳಿಂದ ಹಿಡಿದು ವೃದ್ಧರವರೆಗೆ, ವಿಜ್ಞಾನಿಗಳಿಂದ ಹಿಡಿದು ರಾಜಕೀಯ ನಾಯಕರವೆರೆಗೂ ಬರೇ ಇದೇ ಚಿಂತೆ.   

ನಿರ್ಭಯಾ ಹಂತಕರ ಅಂತಿಮ ಆಟವೂ ಫೇಲ್: ಮಾ. 20ಕ್ಕೆ ಗಲ್ಲು ಫಿಕ್ಸ್!

ನಿರ್ಭಯಾ ರೇಪ್ ಪ್ರಕರಣದ ದೋಷಿ ಮುಕೇಶ್ ಕೊನೆಯ ಆಟಕ್ಕೂ ಸುಪ್ರೀಂ ಕೋರ್ಟ್ ಬ್ರೇಕ್ ಹಾಕಿದೆ. ಮುಕೇಶ್ ಗೆ ಶಾಕ್ ಕೊಟ್ಟಿರುವ ಸುಪ್ರೀಂ ಮತ್ತೊಂದು ಬಾರಿ ಕ್ಯುರೇಟಿವ್ ಹಾಗೂ ಕ್ಷಮಾದಾನ ಅರ್ಜಿ ಸಲ್ಲಿಸಲು ಅವಕಾಶ ನೀಡುವುದಿಲ್ಲ ಎಂದು ಹೇಳಿದೆ.

ಕೊರೋನಾ ಅಟ್ಟಹಾಸ, ಈ ರಾಜ್ಯದಲ್ಲಿ ಕೇವಲ 2 ರೂ.ಗೆ ಸಿಗುತ್ತೆ ಮಾಸ್ಕ್!

ಕೇರಳದಲ್ಲಿ ಈಗಾಗಲೇ 19 ಮಂದಿಯಲ್ಲಿ ಕೊರೋನಾ ವೈರಸ್ ಸೋಂಕು ಪತ್ತೆಯಾಗಿದೆ. ಇಲ್ಲಿನ ಸರ್ಕಾರ ಈಗಾಗಲೇ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ವಹಿಸಿದೆ. ಹೀಗಿದ್ದರೂ ಮಾಸ್ಕ್ ಕೊರತೆ ಎದುರಾಗಿದ್ದು, ಇದನ್ನು ನೀಗಿಸುವ ನಿಟ್ಟಿನಲ್ಲಿ ಪಿಣರಾಯಿ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ. ಇಲ್ಲಿನ ಜೈಲಿನಲ್ಲಿ ಬಂಧಿತರಾಗಿರುವ ಕೈದಿಗಳು ಮಾಸ್ಕ್ ತಯಾರಿಸುವ ಕಾಯಕದಲ್ಲಿ ತೊಡಗಿದ್ದಾರೆ. ಅದೇನಿದ್ದರೂ ಮೆಡಿಕಲ್ ಶಾಪ್ ಗಳು ಮಾತ್ರ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆ ಮಾಸ್ಕ್ ಬೆಲೆಯನ್ನೂ ಏರಿಸುತ್ತಿದ್ದಾರೆ. ಆದರೆ ಇವೆಲ್ಲದರ ನಡುವೆ ಕೊಚ್ಚಿಯ ಸರ್ಜಿಕಲ್ ಶಾಪ್ ಒಂದು ಕೇವಲ 2. ರೂಪಾಯಿಗೆ ಮಾಸ್ಕ್ ಮಾರಾಟ ಮಾಡಲಾರಂಭಿಸಿದ್ದು, ಜನರ ಸಹಾಯಕ್ಕೆ ಮುಂದಾಗಿದೆ.

ಸಿದ್ದರಾಮಯ್ಯಗೆ ಜೀವ ಬೆದರಿಕೆ:  Z+ ಭದ್ರತೆ ಮುಂದುವರಿಸುವಂತೆ ಸಿಎಂಗೆ ಮನವಿ

 

ಮಾಜಿ ಸಿಎಂ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಜೀವ ಬೆದರಿಕೆ ಇದೆಯಂತೆ. ಕೆಲವರು ಪತ್ರದ ಮೂಲಕ ಜೀವ ಬೆದರಿಕೆ ಹಾಕಿದ್ದಾರೆ ಎಂದು ಸ್ವತಃ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ.

 

ಕಾಂಗ್ರೆಸ್‌ನಲ್ಲಿ ಏಕತೆಯ ಮಂತ್ರ: ಡಿಕೆಶಿ ತಂಡದಿಂದ ಒಗ್ಗಟ್ಟು ಪ್ರದರ್ಶನ

 ರಾಜ್ಯ ಬಿಜೆಪಿಯಲ್ಲಿ ಒಳಗಿಂದೊಳಗೆ ಅಸಮಾಧಾನದ ಹೊಗೆ ಆರಂಭಿಸಿದೆ. ಬಿಎಸ್‌ವೈ ವಿರುದ್ಧವಾಗಿ ಕೆಲವು ಅಸಮಾಧಾನಿತ ಶಾಸಕರು ಹೈಕಮಾಂಡ್‌ಗೆ ದೂರು ನೀಡಲು ಮುಂದಾಗಿದ್ದಾರೆ. ಮತ್ತೊಂದೆಡೆ ಕರ್ನಾಟಕ ಪ್ರದೇಶ ಕಾಂಗ್ರೆಸ್ (ಕೆಪಿಸಿಸಿ) ನೂತನ ಪದಾಧಿಕಾರಿಗಳು ಒಗ್ಗಟ್ಟು ಪರದರ್ಶನ ಮಾಡಿ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ತುಂಬಿದರು.

 

IPL 2020: ಚೆನ್ನೈ ತೊರೆದ CSK ನಾಯಕ MS ಧೋನಿ..!

ಮಾರಕ ಕೊರೋನಾ ವೈರಸ್‌ ಭಾರತದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮಾ.29ರಿಂದ ಆರಂಭವಾಗಬೇಕಿದ್ದ 13ನೇ ಆವೃತ್ತಿಯ ಐಪಿಎಲ್‌ ಟೂರ್ನಿಯನ್ನು ಏಪ್ರಿಲ್‌ 15ರವರೆಗೆ ಅಮಾನತು ಮಾಡಿದ್ದರಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ನಾಯಕ ಎಂ.ಎಸ್‌. ಧೋನಿ ಚೆನ್ನೈನಿಂದ ರಾಂಚಿಗೆ ತೆರಳಿದ್ದಾರೆ. 

 

2009ರ IPL ಮಾದರಿ ಅನುಸರಿಸಲು  ಬಿಸಿಸಿಐ ಪ್ಲಾನ್..!

 

ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಕಾರಣ ವಿಶ್ವದಾದ್ಯಂತ ಪ್ರತಿಷ್ಠಿತ ಟೂರ್ನಿಗಳು, ಚಾಂಪಿಯನ್‌ಶಿಪ್‌ಗಳು ಮುಂದೂಡಲ್ಪಟ್ಟಿವೆ. ಕೊರೋನಾ ವಿಶ್ವದ ಶ್ರೀಮಂತ ಟಿ20 ಕ್ರಿಕೆಟ್‌ ಲೀಗ್‌ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಅನ್ನು ಸಹ ಬಿಟ್ಟಿಲ್ಲ. ಮಾರ್ಚ್ 29ರಿಂದ ಆರಂಭಗೊಳ್ಳಬೇಕಿದ್ದ 13ನೇ ಆವೃತ್ತಿಯ ಐಪಿಎಲ್‌ ಟೂರ್ನಿಯನ್ನು ಬಿಸಿಸಿಐ ಏಪ್ರಿಲ್‌ 15ರ ವರೆಗೂ ಅಮಾನತುಗೊಳಿಸಿದೆ.

ಭಾರತದ ಗಂಡಸರು ಹೆಂಗಸರನ್ನು ದಿಟ್ಟಿಸೋದರಲ್ಲಿ ನಟೋರಿಯಸ್‌!

ಭಾರತದ ಯಾವ ಪುರುಷನನ್ನೇ ನೋಡಿ, ಆತ ಬೀದಿಯಲ್ಲಿ ಹೆಣ್ಣು ಮಕ್ಕಳು ಕಂಡರೆ ಎರಡು ನಿಮಿಷ ನಿಟ್ಟಿಸಿ ನೋಡದೆ ಇರಲಾರ. ಇದು ಭಾರತೀಯ ಗಂಡಸರಿಗೆ ಸೀಮಿತವೇ, ಎಲ್ಲರೂ ಹೀಗೆ ಮಾಡುತ್ತಾರಾ, ಏನೀ ಸಮಸ್ಯೆ?

 

ಮೈಕೊಡವಿಕೊಂಡ ಚಿನ್ನ! ಕದಲದೆ ನಿಂತಿದೆ ಬೆಳ್ಳಿ; ಇಂದಿನ ದರ ಇಲ್ಲಿದೆ ಕೇಳಿ

ಒಂದು ಕಡೆ ಕೊರೋನಾವೈರಸ್ ಹಾವಳಿಯಿಂದ ಆರ್ಥಿಕತೆ ತತ್ತರಿಸಿದೆ. ಇನ್ನೊಂದು ಕಡೆ ಸೌದಿ-ರಷ್ಯಾ ನಡುವೆ ನಡೆಯುತ್ತಿರುವ 'ತೈಲ' ಸಮರ, ದರದ ಮೇಲೆ ಪರಿಣಾಮ ಬೀರಿದೆ. ಹಾಗಾದ್ರೆ, ಬೆಂಗಳೂರಿನಲ್ಲಿ ಇಂದಿನ  ಚಿನ್ನ-ಬೆಳ್ಳಿ ದರ, ಪೆಟ್ರೋಲ್-ಡೀಸೆಲ್ ಬೆಲೆ ಎಷ್ಟಿದೆ ನೋಡೋಣ ಬನ್ನಿ.

 

ಜಾರಿತು ದಿಶಾ ತುಂಡು ಬಟ್ಟೆ; ಸೈಜ್ ಕೇಳಿ ನೆಟ್ಟಿಗರು ಫುಲ್‌ ಶಾಕ್!

 

ಬಾಲಿವುಡ್‌ ಹಂಬಲ್ ಹಾಗೂ ಸಿಂಪಲ್ ಹುಡುಗಿ ದಿಶಾ ಪಟಾನಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದ್ದಾರೆ.  ಇತ್ತೀಚಿಗೆ ತೆರೆ ಕಂಡ 'Malang'ಚಿತ್ರದಲ್ಲಿ ದಿಶಾ ಪಟಾನಿ ಆದಿತ್ಯ ರಾಯ್ ಕಪೂರ್‌ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಕೊರೋನಾ ಎಫೆಕ್ಟ್‌ನಲ್ಲಿಯೂ ಚಿತ್ರ ಸೂಪರ್‌ ಡೂಪರ್‌ ಪ್ರತಿಕ್ರಿಯೇ ಪಡೆಯುತ್ತಿದೆ.  ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಬಾಚಿಕೊಳ್ಳುತ್ತಿರುವ ಚಿತ್ರತಂಡ ಸಕ್ಸಸ್‌ ಪಾರ್ಟಿ ಮಾಡಿದೆ.

click me!