ಭಾರತಕ್ಕೆ ಕೊರೋನಾ 3ನೇ ಅಲೆ ಭೀತಿ, ಕಂಗನಾಗೆ ಅತ್ಯುತ್ತಮ ನಟಿ ಪ್ರಶಸ್ತಿ; ಅ.25ರ ಟಾಪ್ 10 ಸುದ್ದಿ!

By Suvarna NewsFirst Published Oct 25, 2021, 4:20 PM IST
Highlights

ಬ್ರಿಟನ್ ಹಾಗೂ ಭಾರತದಲ್ಲಿ ಕೊರೋನಾ ಹೊಸ ತಳಿ ಪತ್ತೆಯಾಗಿದ್ದು, 3ನೇ ಅಲೆ ಭೀತಿ ಎದುರಾಗಿದೆ. ಪ್ರಧಾನಿ ಮೋದಿ, ಉತ್ತರ ಪ್ರದೇಶದಲ್ಲಿ 9 ವೈದ್ಯಕೀಯ ಕಾಲೇಜು ಉದ್ಘಾಟಿಸಿದ್ದಾರೆ. ಕಂಬಳಿ ಹಾಕಲು ಯೋಗ್ಯತೆ ಬೇಕು ಎಂದು ಸಿದ್ದುಗೆ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ಪಾಕ್ ಪತ್ರಕರ್ತನ ಪ್ರಶ್ನೆಗೆ ಕೊಹ್ಲಿ ಗರಂ, ಕಂಗನಾಗೆ ಅತ್ಯುತ್ತಮ ನಟಿ ಪ್ರಶಸ್ತಿ ಸೇರಿದಂತೆ ಅಕ್ಟೋಬರ್ 25ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

ಕಾಶ್ಮೀರ ಯುವಕರ ಜೊತೆ ಮಾತನಾಡುತ್ತೇನೆ, ಪಾಕ್ ಜೊತೆಗಲ್ಲ; ಕುಟುಕಿದ ನಾಯಕರಿಗೆ ಶಾ ತಿರುಗೇಟು!

ಅಮಿತ್ ಶಾ ಜಮ್ಮು ಮತ್ತು ಕಾಶ್ಮೀರ ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆ ತನ್ನ ಕಾಶ್ಮೀರ ಪ್ರವಾಸ ಕುಟುಕಿದ ನಾಯಕರಿಗೆ ಸಭೆಯೊಂದರಲ್ಲಿ ತಿರುಗೇಟು ನೀಡಿದ್ದಾರೆ. ನಾನು ಜಮ್ಮು ಕಾಶ್ಮೀರದ ಯುವಕರ ಜೊತೆ ಮಾತನಾಡುತ್ತೇನೆ. ಪಾಕಿಸ್ತಾನದ ಜೊತೆ ಮಾತನಾಡುವ ಅವಶ್ಯಕತೆ ಇಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ.

3ನೇ ಅಲೆ ಭೀತಿ ಹುಟ್ಟಿಸಿದ ಕೊರೋನಾ ಹೊಸ ತಳಿ, ಬ್ರಿಟನ್‌, ಭಾರತದಲ್ಲಿ ಪತ್ತೆ

ಇನ್ನೇನು ಕೊರೋನಾ ಅಟ್ಟಹಾಸ ತಗ್ಗುತ್ತಿದೆ ಎಂಬ ಆಶಾಭಾವನೆಯ ಬೆನ್ನಲ್ಲೇ ಬ್ರಿಟನ್‌ ಮತ್ತು ಭಾರತದಲ್ಲಿ ಹೊಸದಾಗಿ ಎವೈ.4.2 ಎಂಬ ಕೊರೋನಾ ತಳಿಯೊಂದು ಪತ್ತೆಯಾಗಿರುವುದು ಹೊಸ ಆತಂಕಕ್ಕೆ ಕಾರಣವಾಗಿದೆ. ಈಗಾಗಲೇ ಈ ಹೊಸ ತಳಿಯಿಂದಾಗಿ ಬ್ರಿಟನ್‌ನಲ್ಲಿ ಭಾರೀ ಪ್ರಮಾಣದಲ್ಲಿ ಹೊಸ ಕೇಸು, ಸಾವು ದಾಖಲಾಗುತ್ತಿದ್ದು, ಭಾರತದಲ್ಲೂ ಅಂಥದ್ದೇ ಆತಂಕಕ್ಕೆ ಕಾರಣವಾಗಿದೆ.

ವಾರಾಣಸಿಯ ಅತೀ ದೊಡ್ಡ ಆರೋಗ್ಯ ಯೋಜನೆ ಉದ್ಘಾಟಿಸಿದ ಪಿಎಂ ಮೋದಿ!

 ಪ್ರಧಾನಿ ನರೇಂದ್ರ ಮೋದಿ(Narendra Modi) ಇಂದು ಯುಪಿ(Uttar Pradesh) ಪ್ರವಾಸದಲ್ಲಿದ್ದಾರೆ. ಅವರು ಸಿದ್ಧಾರ್ಥನಗರದ(Siddharth Nagar) ಬಳಿಕ ವಾರಾಣಸಿ ತಲುಪಿದ್ದಾರೆ. ಅವರು ಸಿದ್ಧಾರ್ಥನಗರದಲ್ಲಿ ಒಂಭತ್ತು ವೈದ್ಯಕೀಯ ಕಾಲೇಜುಗಳನ್ನು(Medical Colleges) ಉದ್ಘಾಟಿಸಿದ್ದಾರೆ. ಈ ಮೂಲಕ ಉತ್ತರ ಪ್ರದೇಶಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಇದನ್ನು ವರ್ಚುವಲ್ ಕಾರ್ಯಕ್ರಮದ ಮೂಲಕ ಉದ್ಘಾಟಿಸಿ ಬಳಿಕ ಬಿಎಸ್ಎ ಮೈದಾನದಲ್ಲಿ(BSA Ground) ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. 

ಕಂಬಳಿ ಹೊದ್ದುಕೊಳ್ಳಲೂ ಯೋಗ್ಯತೆ ಬೇಕು: ಸಿಎಂ

ಯಾರು ಬೇಕಾದರೂ ಕಂಬಳಿ ಹಾಕಿಕೊಂಡರೆ ಅದಕ್ಕೆ ಯೋಗ್ಯತೆ ಬರುವುದಿಲ್ಲ. ಹಾಲು ಮತ ಸಮಾಜವನ್ನು ಸರಿಯಾದ ರೀತಿ ಅಭಿವೃದ್ಧಿ ಮಾಡಿದವರಿಗೆ ಮಾತ್ರ ಆ ಯೋಗ್ಯತೆ ಬರುತ್ತದೆ ಎಂದು ಹೇಳುವ ಮೂಲಕ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಟಾಂಗ್‌ ನೀಡಿದ್ದಾರೆ.

ಪಾಕ್‌ ಪತ್ರಕರ್ತನ ಪ್ರಶ್ನೆಗೆ ಕೊಹ್ಲಿ ಗರಂ, ರೋಹಿತ್ ಶರ್ಮಾರನ್ನು ಹೊರಗಾಗ್ಬೇಕಾ ಅನ್ನೋದಾ?

ಭಾರತ ಪಾಕಿಸ್ತಾನದ ವಿರುದ್ಧ ಹೀನಾಯ ಸೋಲು ಕಂಡಿದೆ. ಈ ಪಂದ್ಯದುದ್ದಕ್ಕೂ ಭಾರತ ತಂಡವು ಬಹಳಷ್ಟು ಒತ್ತಡದಲ್ಲಿರುವಂತೆ ಕಾಣಿಸಿತ್ತು. ಪಂದ್ಯದ ನಂತರ ಪತ್ರಿಕಾಗೋಷ್ಠಿಗೆ ಬಂದಿದ್ದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ(Virat kohli), ಪತ್ರಕರ್ತರೊಬ್ಬರು, ರೋಹಿತ್ ಶರ್ಮಾ ಬದಲಿಗೆ ಇಶಾನ್ ಕಿಶನ್(Ishan Kishan) ಅವರನ್ನು ಆಟವಾಡಿಸಬೇಕಿತ್ತಾ? ಎಂದು ಪ್ರಶ್ನಿಸಿದ್ದಾಗ ಕೊಹ್ಲಿ ಕೆಂಡಾಮಂಡಲಗೊಂಡಿದ್ದಾರೆ

National Film Awards 2021: 4ನೇ ಬಾರಿ ಅತ್ಯುತ್ತಮ ನಟಿ ಪ್ರಶಸ್ತಿ ಮುಡಿಗೇರಿಸಿಕೊಂಡ ಕಂಗನಾ

ಕಾಂಟ್ರವರ್ಸಿಗಳಿರಲಿ, ವಿಪರೀತ ಹೇಳಿಕೆಗಳಿರಲಿ, ಏನೇ ಆದ್ರೂ ನಟಿ ಕಂಗನಾ ರಣಾವತ್(Kangana Ranaut) ಅವರ ನಟನೆಯ ಬಗ್ಗೆ ಎರಡು ಮಾತಿಲ್ಲ. ಅವರನ್ನು ಎಷ್ಟೇ ಹೇಟ್ ಮಾಡುವವರಿದ್ದರೂ ಅವರ ನಟನೆಗೆ ಸೋಲದೆ ಇರರು. ಅಂಥಹಾ ಅದ್ಭುತ ಪ್ರತಿಭೆಯ ನಟಿ ಕಂಗನಾ. ಈಗ ನಾಲ್ಕನೇ ಬಾರಿಗೆ National Film Awards 2021ನಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ.

ಹಬ್ಬದ ಖರ್ಚಿಗೆ ಕಡಿವಾಣ ಹಾಕೋದು ಹೇಗೆ? ಇಲ್ಲಿದೆ ಟಿಪ್ಸ್

ಹಬ್ಬವೆಂದ್ರೆ ಆ ತಿಂಗಳು ಖರ್ಚು ಹೆಚ್ಚೆಂದೇ ಅರ್ಥ. ಅನಗತ್ಯವಾಗಿ ಹಬ್ಬಕ್ಕೆ ಖರ್ಚು ಮಾಡೋದು ಖಂಡಿತಾ ಜೇಬಿಗೆ ಹೊರೆ. ಹಾಗಾದ್ರೆ ಹಬ್ಬದ ಖರ್ಚಿನ ಹೊರೆ ತಗ್ಗಿಸೋದು ಹೇಗೆ?

IPL Bidding : ಇಂದು 2 ಹೊಸ ಐಪಿಎಲ್ ತಂಡಗಳಿಗೆ ಬಿಡ್ಡಿಂಗ್..!

2022ರ ಐಪಿಎಲ್‌ನಲ್ಲಿ (IPL 2022) 10 ತಂಡಗಳು ಸ್ಪರ್ಧಿಸಲಿದ್ದು, 2 ಹೊಸ ತಂಡಗಳಿಗಾಗಿ ಸೋಮವಾರ ಬಿಡ್ಡಿಂಗ್‌ ನಡೆಯಲಿದೆ. ತಂಡ ಖರೀದಿಸಲು ಭಾರೀ ಸ್ಪರ್ಧೆ ಏರ್ಪಡುವ ನಿರೀಕ್ಷೆ ಇದ್ದು, ಪ್ರತಿ ತಂಡವು 7,000 ಕೋಟಿ ರು.ನಿಂದ 10,000 ಕೋಟಿ ರು.ವರೆಗೂ ಮಾರಾಟವಾಗಬಹುದು ಎಂದು ಅಂದಾಜಿಸಲಾಗಿದೆ.

click me!