
ಶ್ರೀನಗರ(ಅ.25): ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) 3 ದಿನಗಳ ಜಮ್ಮು ಮತ್ತು ಕಾಶ್ಮೀರ(Jammu and Kashmir) ಪ್ರವಾಸದಲ್ಲಿದ್ದಾರೆ. ಹಲವು ಯೋಜನೆಗಳ ಉದ್ಘಾಟನೆ, ಕಣಿವೆ ರಾಜ್ಯದಲ್ಲಿ ಭದ್ರತಾ ಪರಿಶೀಲನೆ(Security) ಸೇರಿದಂತೆ ಮಹತ್ವದ ಕಾರ್ಯಕ್ರಮಗಳಿಗಾಗಿ ಅಮಿತ್ ಶಾ ಜಮ್ಮು ಮತ್ತು ಕಾಶ್ಮೀರ ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆ ತನ್ನ ಕಾಶ್ಮೀರ ಪ್ರವಾಸ ಕುಟುಕಿದ ನಾಯಕರಿಗೆ ಸಭೆಯೊಂದರಲ್ಲಿ ತಿರುಗೇಟು ನೀಡಿದ್ದಾರೆ. ನಾನು ಜಮ್ಮು ಕಾಶ್ಮೀರದ ಯುವಕರ ಜೊತೆ ಮಾತನಾಡುತ್ತೇನೆ. ಪಾಕಿಸ್ತಾನದ ಜೊತೆ ಮಾತನಾಡುವ ಅವಶ್ಯಕತೆ ಇಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ.
ಜಮ್ಮು ಕಾಶ್ಮೀರ ಹುತಾತ್ಮ ಇನ್ಸ್‌ಪೆಕ್ಟರ್ ಪರ್ವೇಜ್ ಮನೆಗೆ ಅಮಿತ್ ಶಾ ಭೇಟಿ, ಪತ್ನಿಗೆ ಸರ್ಕಾರಿ ಉದ್ಯೋಗ!
ಜಮ್ಮು ಮತ್ತು ಕಾಶ್ಮೀರ ಪ್ರವಾಸದ ವೇಳೆ ಕಣಿವೆ ರಾಜ್ಯದ ಹಲವು ನಾಯಕರು ವ್ಯಂಗ್ಯವಾಡಿದ್ದಾರೆ. ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಗೆ ಪಾಕಿಸ್ತಾನ ಜೊತೆ ಮಾತುಕತೆ ನಡೆಸಿ ಎಂದು ಜಮ್ಮು ಕಾಶ್ಮೀರ ನ್ಯಾಶನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಖ್ ಅಬ್ದುಲ್ಲಾ ಕುಟುಕಿದ್ದರು. ಶ್ರೀನಗರದಲ್ಲಿನ ಸಭೆಯೊಂದರಲ್ಲಿ ಮಾತನಾಡಿದ ಅಮಿತ್ ಶಾ, ನಾನು ಜಮ್ಮು ಮತ್ತು ಕಾಶ್ಮೀರದ ಯುವ ಜನಾಂಗದ ಜೊತೆ ಮಾತನಾಡುತ್ತೇನೆ. ಶಾಂತಿ ಸ್ಥಾಪನೆಗೆ ಪಾಕಿಸ್ತಾನದ ಜೊತೆ ಮಾತನಾಡುವ ಅಗತ್ಯ ಭಾರತಕ್ಕಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ.
ಉಗ್ರರ ಸಂಪೂರ್ಣ ಮಟ್ಟ ಹಾಕಲು ತಾಕೀತು: ಸಚಿವ ಅಮಿತ್ ಶಾ ಮಿಷನ್ ಕಾಶ್ಮೀರ ಶುರು!
ನಿಮ್ಮ ಜೊತೆಗೆ ಮುಕ್ತವಾಗಿ ಮಾತನಾಡುತ್ತೇನೆ. ಹೀಗಾಗಿ ಇಲ್ಲಿ ಬುಲೆಟ್‌ಪ್ರೂಫ್ ಸೆಕ್ಯೂರಿಟಿ ಇಲ್ಲ. ಕಾಶ್ಮೀರದ ಯುವಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತೇವೆ. ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಗೆ ಯುವ ಜನಾಂಗದ ಕೊಡುಗೆ ಮಹತ್ವದ್ದಾಗಿದೆ. ಇಲ್ಲಿನ ಅಭಿವೃದ್ಧಿ ವೇಗ ನೀವು ಗಮನಿಸಿದ್ದೀರಿ. ಹೀಗಾಗಿ ಕೇಂದ್ರ ಸರ್ಕಾರ ಸದಾ ಕಣಿವೆ ರಾಜ್ಯದ ಜೊತೆಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ.
ಶ್ರೀನಗರದಲ್ಲಿನ ಸಾರ್ವಜನಿಕ ಸಭೆಗೂ ಮೊದಲು ಅಮಿತ್ ಶಾ ಹಾಗೂ ಲೆಫ್ಟೆನೆಂಟ್ ಗರ್ವನರ್ ಮನೋಜ್ ಸಿನ್ಹ ಗಂದರ್ಬಾಲ್‌ನಲ್ಲಿನ ಖೀರ್ ಭವಾನಿ ದುರ್ಗಾ ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಇಂದು ಅಮಿತ್ ಶಾ ಶ್ರೀನಗರದಲ್ಲಿ ಹಲವು ಅಭಿವೃದ್ಧಿ ಯೋಜನೆಗಳ ಶಿಲನ್ಯಾಸ ನೆರವೇರಿಸಲಿದ್ದಾರೆ.
ಪ್ರಧಾನಿ ಮೋದಿ ಭೇಟಿಯಾದ ಅಮಿತ್ ಶಾ; ಕಾಶ್ಮೀರ, ರಾಷ್ಟ್ರೀಯ ಭದ್ರತೆ ಕುರಿತು ಮಹತ್ವದ ಚರ್ಚೆ!
ಶ್ರೀಗನಗದಲ್ಲಿನ ಸಭೆ ಬಳಿ ಅಮಿತ್ ಶಾ, ಜಮ್ಮು ಕಾಶ್ಮೀರ ಚೇಬರ್ಸ್ ಆಫ್ ಕಾಮರ್ಸ್ ಕಚೇರಿಯಲ್ಲಿ ಕಾಶ್ಮೀರ ಪಂಡಿತ್, ಗುಜ್ಜರ್, ಹಿಂದುಳಿದ ಸಮುದಾಯ ಹಾಗೂ ಪಹಾಡಿ ಸಮುದಾಯದ ಪ್ರತಿನಿಧಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಅವರ ಸಮಸ್ಯೆಗಳನ್ನು ಆಲಿಸಿ ಸೂಕ್ತ ಪರಿಹಾರದ ಭರವಸೆ ನೀಡಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ನಾಗರೀಕರ ಗುರಿಯಾಗಿಸಿ ಉಗ್ರರ ದಾಳಿ ನಡೆಯುತ್ತಿದ್ದ ಬೆನ್ನಲ್ಲೇ ಕಣಿವೆ ರಾಜ್ಯಕ್ಕೆ ಅಮಿತ್ ಶಾ ಬೇಟಿ ನೀಡಿರುವುದು ಮಹತ್ವ ಪಡೆದುಕೊಂಡಿದೆ. ಮೊದಲ ದಿನವೇ ಭಾರತೀಯ ಸೇನೆ, ಜಮ್ಮು ಕಾಶ್ಮೀರ ಪೊಲೀಸ್, ಭದ್ರತಾ ಪಡೆ ಅಧಿಕಾರಿಗಳ ಜೊತೆ ಅಮಿತ್ ಮಹತ್ವದ ಸಭೆ ನಡೆಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ