
ದಿಸ್ಪುರ್(ಮಾ.05): ಅಸ್ಸಾಂ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ಕಾಂಗ್ರೆಸ್ ಪ್ರಚಾರ ಬಿರುಸಾಗಿದೆ. ಕಾಂಗ್ರೆಸ್ ಗೆದ್ದು ಬಂದರೆ ಉದ್ಯೋಗಕ್ಕಾಗಿಯೇ ಪ್ರತ್ಯೇಕ ಸಚಿವಾಲಯ ರಚಿಸುವ ಭರವಸೆ ನೀಡಿದೆ ಕಾಂಗ್ರೆಸ್.
ಪಬ್ಲಿಕ್ ಸೆಕ್ಟರ್ನಲ್ಲಿ 5 ಲಕ್ಷ ಉದ್ಯೋಗ ಮತ್ತು ಪ್ರೈವೇಟ್ ಸೆಕ್ಟರ್ನಲ್ಲಿ ಸುಮಾರು 25 ಲಕ್ಷ ಉದ್ಯೋಗ ಸೃಷ್ಟಿಸುವ ಭರವಸೆಯನ್ನು ನೀಡಿದೆ ಕಾಂಗ್ರೆಸ್.
ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ರೈತರ ರಣಕಹಳೆ!
ಇತ್ತೀಚೆಗೆ ಕಾಂಗ್ರೆಸ್ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಪಕ್ಷದ 5 ಭರವಸೆ ಅಭಿಯಾನವನ್ನು ಲಾಂಚ್ ಮಾಡಿದ್ದರು. ತೇಝ್ಪುರನಲ್ಲಿ ಚುನಾವಣೆ ಪ್ರಚಾರ ಸಂದರ್ಭ ಇದನ್ನು ಲಾಂಚ್ ಮಾಡಿದ್ದರು ಪ್ರಿಯಾಂಕ.
ಸಿಎಎ ರದ್ದು ಮಾಡುವ ಕಾನೂನು, 5 ಲಕ್ಷ ಸರ್ಕಾರಿ ಕೆಲಸ, ಚಹಾ ಕೆಲಸಗಾರರ ವೇತನ 365ಕ್ಕೆ ಏರಿಸುವುದು, ಪ್ರತಿ ಮನೆಗೆ 200 ಯುನಿಟ್ ವಿದ್ಯುತ್, ಗೃಹಿಣಿಯರಿಗೆ 2 ಸಾವಿರ ಮಾಸಿಕ ವೇತನ ಇವು ಕಾಂಗ್ರೆಸ್ ನೀಡಿದ ಭರವಸೆಗಳು.
ಎಲೆಕ್ಷನ್ ಸಮೀಪಿಸ್ತಿದ್ದಂತೆ ಮಾ ಕ್ಯಾಂಟೀನ್ ಆರಂಭಿಸಿದ ದೀದಿ: 5 ರೂಪಾಯಿ ಊಟ
ಪ್ರಚಾರ ಅಭಿಯಾನದಲ್ಲಿ ಮತ್ತೊಮ್ಮೆ ಭರವಸೆಗಳ ಕುರಿತು ಮಾತನಾಡಿ ಇದು ಪ್ರಾಮಿಸ್ ಅಲ್ಲ, ಗ್ಯಾರಂಟಿ ಎಂದು ಹೇಳಿದ್ದಾರೆ. ಈ ಭರವಸೆಗಳಿಗೆ ಸಂಬಂಧಿಸಿದ ಎಲ್ಲಾ ಹೋಂವರ್ಕ್ಗಳೂ ಮುಗಿದಿವೆ. ಅನುಷ್ಠಾನಕ್ಕೆ ಬೇಕಾದ ಕಾರ್ಯಗಳನ್ನು ಮುಗಿಸುತ್ತಿದ್ದೇವೆ ಎಂದಿದ್ದಾರೆ.
ಯುವ ಜನರು ಉದ್ಯೋಗವಿಲ್ಲದೆ ಕಷ್ಟಪಡುತ್ತಿದ್ದಾರೆ. ಸಿಕ್ಕಿದವರಿಗೆ ಕನಿಷ್ಠ ವೇತನ ನೀಡಲಾಗುತ್ತಿದೆ. 25 ಲಕ್ಷ ಉದ್ಯೋಗ ಸೃಷ್ಟಿಸುವ ಭರವಸೆ ಕೊಟ್ಟೋರು ಸಿಎಎ ಕೊಟ್ಟಿದ್ದಾರೆ ಎಂದಿದ್ದಾರೆ.
ಚಿನ್ನ ಸಾಲ ಮನ್ನಾ: ಚುನಾವಣೆ ಪ್ರಕಟಕ್ಕೂ ಮುನ್ನ ವಿವಿಧ ರಾಜ್ಯಗಳಲ್ಲಿ ಭರ್ಜರಿ ಗಿಫ್ಟ್!
ಇದೇ ಅಭಿಯಾನದಲ್ಲಿ ಕಾಂಗ್ರೆಸ್ ಆನ್ಲೈನ್ ಉದ್ಯೋಗ ನೋಂದಣಿ ವೆಬ್ಸೈಟ್ ಆರಂಭಿಸಿದೆ. www.congressor5guarantee.in. ನಲ್ಲಿ ನೋಂದಣಿ ಮಾಡಬಹುದಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ