ಆದಿವಾಸಿಗಳು ಹಿಂದೂಗಳಲ್ಲ, ಅವರೂ ಎಂದಿಗೂ ಹಿಂದೂಗಳಾಗಲು ಸಾಧ್ಯವಿಲ್ಲ. ಜಾರ್ಖಂಡ್ ಮುಖ್ಯಮಂತ್ರಿ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನೀಡಿದ ಹೇಳಿಕೆ ಇದೀಗ ಭಾರಿ ವಿರೋಧಕ್ಕೆ ಕಾರಣವಾಗಿದೆ. ಜಾರ್ಖಂಡ್ ಸಿಎಂ ನೀಡಿದ ಕಾರಣಗಳೇ ಇದೀಗ ಉರುಳಾಗಿದೆ. ಜಾರ್ಖಂಡ್ ಸಿಎಂ ಹೇಳಿಕೆ, ಇದೀಗ ಹುಟ್ಟಿಕೊಂಡಿರುವ ವಿರೋಧದ ಕುರಿತ ಸಂಪೂರ್ಣ ವಿವರ ಇಲ್ಲಿದೆ.
ಜಾರ್ಖಂಡ್(ಮಾ.05): ಜಾರ್ಖಂಡ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಹೇಮಂತ್ ಸೊರೆನ್ ಒಂದಲ್ಲ ಒಂದು ಕಾರಣಕ್ಕೆ ಧರ್ಮ, ಜಾತಿ, ಪಂಗಡಗಳನ್ನು ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಗಳು ಕೇಳಿ ಬರುತ್ತಿದೆ. ಇದೀಗ ಆರೋಪಗಳಿಗೆ ಪುಷ್ಠಿ ನೀಡುವಂತ ಮತ್ತೆ ಹೇಳಿಕೆ ನೀಡಿದ್ದು ಭಾರಿ ವಿರೋಧಕ್ಕೂ ಕಾರಣವಾಗಿದೆ. ಆದಿವಾಸಿಗಳು ಹಿಂದೂಗಳಲ್ಲ, ಅವರು ಎಂದಿಗೂ ಹಿಂದುಗಳಾಗಲು ಸಾಧ್ಯವಿಲ್ಲ ಅನ್ನೋ ಹೇಳಿಕೆ ಇದೀಗ ಹಲವು ಆದಿವಾಸಿಗಳ ಆಕ್ರೋಶಕ್ಕೂ ಕಾರಣವಾಗಿದೆ.
ಆದಿವಾಸಿ ರೈತ ಮಹಿಳೆಯ ರೋಚಕ ಕತೆ :ಈಗಿವರು ಲಕ್ಷಾಧೀಶ್ವರಿ
ಹಾರ್ವಡ್ ವಿಶ್ವವಿದ್ಯಾಲಯದ 18ನೇ ವಾರ್ಷಿಕೋತ್ಸವದ ಸಮ್ಮೇಳನದಲ್ಲಿ ವಿಡಿಯೋ ಕಾನ್ಫೆರೆನ್ಸ್ ಮೂಲಕ ಪಾಲ್ಗೊಂಡ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್, ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸಮ್ಮೇಳನದಲ್ಲಿ ಭಾರತದ ಬಡುಕಟ್ಟು ಜನಾಂಗದವರು ಹಿಂದೂಗಳೇ ಅನ್ನೋ ಪ್ರಶ್ನೆಗೆ ಉತ್ತರಿಸುತ್ತಾ ಸೊರೆನ್ ಈ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.
ಆದಿವಾಸಿಗಳು ಎಂದಿಗೂ ಹಿಂದೂಗಳಲ್ಲ. ಕಾರಣ ಅವರು ಸಂಸ್ಕೃತಿ ಭಿನ್ನವಾಗಿದೆ. ಅವರು ಪ್ರಕೃತಿಯನ್ನು ಪೂಜಿಸುವವರಾಗಿದ್ದಾರೆ. ಪ್ರಕೃತಿಯೊಂದಿಗೆ ಜೀವನ ನಡೆಸುವವರಾಗಿದ್ದಾರೆ. ಆದಿವಾಸಿಗಳನ್ನು ಸ್ಥಳೀಯ ವ್ಯಕ್ತಿಗಳು ಎಂದು ಕರೆಯುತ್ತಾರೆ. ಆ ಪ್ರದೇಶದಲ್ಲಿ ವಾಸಿಸುವ ಹಾಗೂ ಭಿನ್ನ ಆಚರಣೆ ಹೊಂದಿರುವವರಾಗಿದ್ದಾರೆ ಎಂದು ಹಾರ್ವಡ್ ವಿಶ್ವವಿದ್ಯಾಲಯದಲ್ಲಿ ಹೇಳಿದ್ದಾರೆ.
ದೋಣಿ ಹುಟ್ಟು ಹಾಕಿ ಮಕ್ಕಳು, ಗರ್ಭಿಣಿಯರ ಆರೈಕೆ; ಅಂಗನವಾಡಿ ಕಾರ್ಯಕರ್ತೆಗೆ ಸಲಾಂ!
ಸೊರೆನ್ ಹೇಳಿಕೆ ಕ್ಷಣ ಹೌದು ಎನಿಸಿಬಹುದು. ಆದರೆ ಆದಿವಾಸಿಗಳು ಹಿಂದೂಗಳಲ್ಲ, ಕಾರಣ ಅವರು ಪ್ರಕೃತಿ ಆರಾಧಕರೂ ಅನ್ನೋ ವಾದ ಖಡಾಖಂಡಿತ ತಪ್ಪು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಇದಕ್ಕೆ ಹಲವು ಕಾರಣಗಳನ್ನು ನೀಡಿದ್ದಾರೆ. ಹಿಂದೂಗಳ ಆರಾಧನೆಯಲ್ಲಿ ಪ್ರಕೃತಿಯೇ ಪ್ರದಾನ. ನದಿ, ಪ್ರಕೃತಿಗಳಿಲ್ಲದೆ ಯಾವ ಮಂದಿರ, ಯಾವ ಪೂಜೆಯೂ ಪೂರ್ಣಗೊಳ್ಳುವುದಿಲ್ಲ. ಹೀಗಾಗಿ ಆದಿವಾಸಿಗಳ ಆರಾಧನೆ ಪದ್ದತಿಗೂ ಹಿಂದೂ ಪದ್ದತಿಗೂ ಯಾವುದೇ ವ್ಯತ್ಯಾಸವಿಲ್ಲ ಎಂದಿದ್ದಾರೆ.
ಕೊನಾರ್ಕ್ ಸೂರ್ಯ ದೇವಾಲಯ ಸೇರಿದಂತೆ ಹಲವು ದೇವಾಲಯಗಳು ಪ್ರಕೃತಿಯನ್ನೇ ದೇವರೆಂದು ಪೂಜಿಸುವ ದೇವಾಲಯಗಳಾಗಿವೆ. ಹಿಂದೂಗಳು ತಮ್ಮ ಹಳೆ ಪದ್ದತಿಯನ್ನು ಆಧುನಿಕರಣಗೊಳಿಸಿದ್ದಾರೆ. ಆದರೆ ಆದಿವಾಸಿಗಳು ಇನ್ನು ಪ್ರಕೃತಿ ಮಡಿಲಲ್ಲೇ ತಮ್ಮ ಜೀವನ ಸಾಗಿಸುತ್ತಿದ್ದಾರೆ. ಹೀಗಾಗಿ ಆದಿವಾಸಿಗಳು ಮೂಲ ಹಿಂದೂಗಳೇ ಅನ್ನೋ ವಾದವೂ ಇದೆ.
ಹೊಸ ವಿವಾದ ತೇಲಿಬಿಟ್ಟ ಹೇಮಂತ್ ಸೊರನ್ ಆದಿವಾಸಿಗಳಿಗಾಗಿ ಪ್ರತ್ಯೇಕ ಅಂಕಣ ತೆರೆಯಲು ಕೇಂದ್ರ ಸರ್ಕಾರವನ್ನು ಒತ್ತಾಯಿಸುವುದಾಗಿ ಹೇಳಿದ್ದಾರೆ. ಜನಗತಿಯಲ್ಲಿ ಆದಿವಾಸಿಗಳಿಗಾಗಿ ಪ್ರತ್ಯೇಕ ಅಂಕಣ ಅಗತ್ಯವಿದೆ ಎಂದು ಸೊರೆನ್ ಪ್ರತಿಪಾದಿಸಿದ್ದಾರೆ. ಹೇಮಂತ್ ಸೊರೆನ್ ಹೇಳಿಕೆ ಬುಡಕಟ್ಟು ಜನಾಂಗದ ಪರ ಧನಿ ಎತ್ತಿದ್ದ ಹೋರಾಟಗಾರ ಬಿರ್ಸಾ ಮುಂಡಾ ನಿಲುವುಗಳಿಗೆ ವಿರುದ್ಧವಾಗಿ ಅನ್ನೋ ಕೂಗು ಜೋರಾಗಿ ಕೇಳಿ ಬರುತ್ತಿದೆ.