ಎಲೆಕ್ಷನ್ ಸಮೀಪಿಸ್ತಿದ್ದಂತೆ ಮಾ ಕ್ಯಾಂಟೀನ್ ಆರಂಭಿಸಿದ ದೀದಿ: 5 ರೂಪಾಯಿ ಊಟ

By Suvarna News  |  First Published Mar 5, 2021, 11:10 AM IST

ಪಶ್ಚಿಮ ಬಂಗಾಳ ಚುನಾವಣೆ ಸಮೀಪಿಸುತ್ತಿರುವಂತೆ ದೀದಿ ಹೊಸ ಟ್ರಿಕ್ | 5 ರೂಪಾಯಿಯ ಮಾ ಕ್ಯಾಂಟೀನ್ ಆರಂಭ


ಕೊಲ್ಕತ್ತಾ(ಮಾ.05): ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾ ಕ್ಯಾಂಟೀನ್ ಯೋಜನೆ ಆರಂಭಿಸಿದ್ದಾರೆ. ಫೆಬ್ರವರಿಯಲ್ಲಿ ಯೋಜನೆ ಲಾಂಚ್ ಮಾಡಲಾಗಿದೆ.

ಇದೀಗ ಮಾ ಕ್ಯಾಂಟೀನ್ನಲ್ಲಿ 5 ರೂಪಾಯಿಗೆ ಆಹಾರ ಒದಗಿಸಲಾಗುತ್ತಿದೆ. ಕ್ಯಾಂಟೀನ್ಗಳು 12.30 ರಿಂದ 3 ಗಂಟೆಯ ತನಕ ತೆರೆದಿರಲಿದೆ. ಅನ್ನ, ದಾಲ್, ಸಾರು, ಮೊಟ್ಟೆ ಸಾರನ್ನೂ ನೀಡಲಾಗುತ್ತಿದೆ. ಕ್ಯಾಂಟೀನ್ ಭಾರೀ ಫೇಮಸ್ ಆಗಿದ್ದು ಕ್ಯಾಂಟೀನ್ ಮುಚ್ಚುವ ಮುನ್ನವೇ ಆಹಾರ ಖಾಲಿಯಾಗುತ್ತಿದೆ.

Tap to resize

Latest Videos

ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ರೈತರ ರಣಕಹಳೆ!

ಆಹಾರ ಚೆನ್ನಾಗಿದೆ. ನಾವೆಲ್ಲರೂ ಆಹಾರ 5 ರೂಪಾಯಿಗೆ ಪಡೆಯುತ್ತಿದ್ದೇವೆ. ಇಲ್ಲದಿದ್ದರೆ ಪ್ರತಿದಿನ ಊಟಕ್ಕೆ 35 ರೂಪಾಯಿ ವ್ಯಯಿಸುತ್ತಿದೆ. ಈಗ ಹೆಚ್ಚು ಹಣ ಸೇವ್ ಮಾಡಲು ಸಾಧ್ಯವಾಗುತ್ತಿದೆ ಎನ್ನುತ್ತಾರೆ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುವ ಜಾಕಿರ್ ನಾಸ್ಕರ್.

"আমার সন্তান যেন থাকে দুধে-ভাতে"
'মা' ক্যান্টিন নিয়ে দিদি আছেন বাংলার প্রতিটি মানুষের পাশে। pic.twitter.com/RP4ZvHfE7H

— প্রতীম সাহা (@pratimtmcp)

ಆಹಾರ ಪಡೆಯಲು ಸಾಲಿನಲ್ಲಿದ್ದ ಇತರರು ತಮ್ಮ ಸರದಿಗಾಗಿ ತಾಳ್ಮೆಯಿಂದ ಕಾಯುತ್ತಿದ್ದರು. ಈ ಯೋಜನೆ ಅನುಷ್ಠಾನಗೊಳಿಸಿದ್ದಕ್ಕಾಗಿ ಮಮತಾ ಬ್ಯಾನರ್ಜಿಯನ್ನು ಶ್ಲಾಘಿಸಿ ಆಹಾರ ಆರೋಗ್ಯಕರವಾಗಿದೆ ಎಂದು ಹೇಳಿದ್ದಾರೆ.

ಚಿನ್ನ ಸಾಲ ಮನ್ನಾ: ಚುನಾವಣೆ ಪ್ರಕಟಕ್ಕೂ ಮುನ್ನ ವಿವಿಧ ರಾಜ್ಯಗಳಲ್ಲಿ ಭರ್ಜರಿ ಗಿಫ್ಟ್!

ಟಿಎಂಸಿ ಎಂಪಿ ಪ್ರತಿಕ್ರಿಯಿಸಿ ಇದು ಬಡವರಿಗೆ ನೆರವಾಗುವ ನಿಟ್ಟಿನಲ್ಲಿ ಆರಂಭಿಸಿದ ಯೋಜನೆ ಎಂದಿದ್ದಾರೆ.  ಚುನಾವಣೆ ಸಮೀಪಿಸುವಾಗಲೇ ಯೋಜನೆ ಆರಂಭಿಸಿದ್ದರ ಬಗ್ಗೆ ಪ್ರತಿಕ್ರಿಯಸಿ, ಚುನಾವಣೆಗೆ ಮೊದಲು ಅಲ್ಲದಿದ್ದರೆ, ಮತ್ತೆ ಯಾವಾಗ ಎಂದು ಪ್ರಶ್ನಿಸಿದ್ದಾರೆ.

govt launches just ahead of state elections. Meals for ₹5 daily will be served to the people. pic.twitter.com/27tCt7pNhn

— Sreyashi Dey (@SreyashiDey)
click me!