ಗುಂಡು ಹಾರಿಸಿಕೊಂಡು ಸಾವಿಗೆ ಶರಣಾದ ಡಿಐಜಿ ಸಿ ವಿಜಯ್‌ಕುಮಾರ್

Published : Jul 07, 2023, 10:55 AM ISTUpdated : Jul 07, 2023, 12:05 PM IST
 ಗುಂಡು ಹಾರಿಸಿಕೊಂಡು ಸಾವಿಗೆ ಶರಣಾದ ಡಿಐಜಿ ಸಿ ವಿಜಯ್‌ಕುಮಾರ್

ಸಾರಾಂಶ

ಡಿಐಜಿಯೊಬ್ಬರು ಗುಂಡು ಹಾರಿಸಿಕೊಂಡು ಸಾವಿಗೆ ಶರಣಾದ ಆಘಾತಕಾರಿ ಘಟನೆ ತಮಿಳುನಾಡಿನ ಕೊಯಂಬತ್ತೂರಿನಲ್ಲಿ ನಡೆದಿದೆ. ಡಿಐಜಿ ಸಿ ವಿಜಯ್‌ಕುಮಾರ್ ಸಾವಿನ ದಾರಿ ಹಿಡಿದ ಪೊಲೀಸ್ ಅಧಿಕಾರಿ.

ಕೊಯಂಬತ್ತೂರು: ಡಿಐಜಿಯೊಬ್ಬರು ಗುಂಡು ಹಾರಿಸಿಕೊಂಡು ಸಾವಿಗೆ ಶರಣಾದ ಆಘಾತಕಾರಿ ಘಟನೆ ತಮಿಳುನಾಡಿನ ಕೊಯಂಬತ್ತೂರಿನಲ್ಲಿ ನಡೆದಿದೆ. ಡಿಐಜಿ ಸಿ ವಿಜಯ್‌ಕುಮಾರ್ ಸಾವಿನ ದಾರಿ ಹಿಡಿದ ಪೊಲೀಸ್ ಅಧಿಕಾರಿ. ಕೊಯಂಬತ್ತೂರಿನ ರೇಸ್‌ಕೋರ್ಸ್ ಬಳಿಯ ಕ್ಯಾಂಪ್ ಆಫೀಸ್ ಬಳಿ ಅವರು ತಮ್ಮ ಸರ್ವಿಸ್ ಪಿಸ್ತೂಲ್‌ನಿಂದ ಗುಂಡು ಹಾರಿಸಿಕೊಂಡು ಈ ಆಘಾತಕಾರಿ ನಿರ್ಧಾರ ಕೈಗೊಂಡಿದ್ದಾರೆ. ಮುಂಜಾನೆ ಎದ್ದು ವಾಕ್ ಹೋಗಿದ್ದ ಡಿಜಿಪಿ ವಿಜಯ್‌ ಕುಮಾರ್ ಬೆಳಗ್ಗೆ 6.45ರ ವೇಳೆಗೆ ಕ್ಯಾಂಪ್ ಆಫೀಸ್ ಬಳಿ ಬಂದಿದ್ದರು. ನಂತರ ತಮ್ಮ ವೈಯಕ್ತಿಕ ಅಂಗರಕ್ಷಕ ಅಧಿಕಾರಿಗೆ ಪಿಸ್ತೂಲ್‌ ನೀಡುವಂತೆ ಕೇಳಿದ್ದು, ಆತ ಡಿಐಜಿಗೆ ಪಿಸ್ತೂಲ್ ನೀಡಿ ಕಚೇರಿಯಿಂದ ಹೊರಗೆ ಬಂದಿದ್ದಾರೆ. ಇದಾಗಿ ಐದು ನಿಮಿಷದಲ್ಲಿ ಅಂದರೆ 6.50ಕ್ಕೆ  ಡಿಐಜಿ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿದ್ದಾರೆ. 

ಘಟನೆ ಬಗ್ಗೆ ಕ್ಯಾಂಪ್ ಆಫೀಸ್ ಬಳಿ ಇದ್ದ ಇತರ ಸಿಬ್ಬಂದಿ ಹಿರಿಯ ಅಧಿಕಾರಿಗಳಿಗೆ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.  ಸಾವಿಗೂ ಕೆಲ ದಿನಗಳ ಮೊದಲೇ ವಿಜಯ್‌ಕುಮಾರ್ ಅವರು ತಮ್ಮ ಸಹೋದ್ಯೋಗಿ ಅಧಿಕಾರಿಗಳ ಜೊತೆ ತಾನು ತೀವ್ರವಾದ ಖಿನ್ನತೆ (depression)ಗೆ ಒಳಗಾಗಿದ್ದು,  ಪರಿಣಾಮ ಹಲವು ವಾರಗಳಿಂದ ತನಗೆ ಸರಿಯಾಗಿ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ. ಆದರೆ ಈ ಸಾವಿಗೆ ಕಾರಣ ಏನು ಎಂಬುದು ಇನ್ನು ತಿಳಿದು ಬಂದಿಲ್ಲ,  

ಸೌಂಡ್‌ ಕಡಿಮೆ ಮಾಡಿ ಎಂದ ಮನೆ ಮಾಲೀಕನನ್ನೇ ಹೊಡೆದು ಕೊಂದ ಟೆಕ್ಕಿಗಳು: ದುರಂತ ಸಾವು

ವಿಜಯ್‌ಕುಮಾರ್  ಮೃತದೇಹವನ್ನು ಕೊಯಂಬತ್ತೂರು ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. ಸಿ ವಿಜಯ್‌ಕುಮಾರ್ ಅವರು ಕೊಯಂಬತ್ತೂರು ವಿಭಾಗದ ಡಿಐಜಿಯಾಗಿ ಜನವರಿ 6 ರಂದು ಅಧಿಕಾರ ಸ್ವೀಕರಿಸಿದ್ದರು. 2009ರ ಬ್ಯಾಚ್‌ ಐಪಿಎಸ್ ಅಧಿಕಾರಿಯಾಗಿದ್ದ ವಿಜಯ್‌ಕುಮಾರ್,  ಈ ಹಿಂದೆ ಕಾಂಚಿಪುರಂ, ಕುಡ್ಲೂರು, ನಾಗಪಟ್ಟಿಣಂ ಹಾಗೂ ತಿರುವೂರ್ ಜಿಲ್ಲೆಯಲ್ಲಿ ಎಸ್‌ಪಿ ಆಗಿ ಕಾರ್ಯ ನಿರ್ವಹಿಸಿದ್ದರು.  ನಂತರ ಚೆನ್ನೈನ ಅಣ್ಣ ನಗರದಲ್ಲಿ ಡೆಪ್ಯೂಟಿ ಕಮೀಷನರ್ ಆಗಿ ಕಾರ್ಯನಿರ್ವಹಿಸಿದ್ದರು. ನಂತರ ಅವರಿಗೆ ಡಿಐಜಿ ಆಗಿ ಪದೋನ್ನತಿ ಆಗಿದ್ದು, ಕೊಯಂಬತ್ತೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. 

Belagavi: ಆಟವಾಡಲು ಹೋಗಿದ್ದ ಇಬ್ಬರು ಮಕ್ಕಳು ನೀರಿನ ಸಂಪ್‌ಗೆ ಬಿದ್ದು ದುರಂತ ಸಾವು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿರೋಧದ ಮಧ್ಯೆ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಶಂಕು
ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌