
ಚಂಡೀಗಢ: ದೇಶದ ಹಲವು ರಾಜ್ಯಗಳು ವಿವಿಧ ಬಗೆಯ ಉಚಿತ ಕೊಡುಗೆಗಳನ್ನು ನೀಡತೊಡಗಿದ್ದು, ಚುನಾವಣೆ ಹೊಸ್ತಿಲಲ್ಲಿ ಹರ್ಯಾಣದ ಬಿಜೆಪಿ ಸರ್ಕಾರ ಇಂಥದ್ದೇ ಘೋಷಣೆ ಮಾಡಿದೆ. ಅವಿವಾಹಿತ ಪುರುಷರು, ಮಹಿಳೆಯರಿಗೆ ಹಾಗೂ ಪತ್ನಿ ಕಳೆದುಕೊಂಡ ವಿಧುರರಿಗೆ ಮಾಸಿಕ ತಲಾ 2750 ರು. ಭತ್ಯೆ ನೀಡುವುದಾಗಿ ಘೋಷಿಸಿದೆ. ಭತ್ಯೆ ಪಡೆಯಲು ಅವಿವಾಹಿತರಿಗೆ 45ರಿಂದ 60 ವಯಸ್ಸು ಹಾಗೂ ವಾರ್ಷಿಕ 1.8 ಲಕ್ಷ ರು.ಗಿಂತ ಕಡಿಮೆ ಆದಾಯದ ಮಿತಿ ನಿಗದಿಪಡಿಸಲಾಗಿದೆ. ಇದೇ ವೇಳೆ ವಿಧುರರಿಗೆ 40ರಿಂದ 60 ವಯಸ್ಸು ನಿಗದಿಪಡಿಸಲಾಗಿದೆ ಹಾಗೂ ವಾರ್ಷಿಕ ಆದಾಯ 3 ಲಕ್ಷ ಮೀರಬಾರದು ಎಂಬ ಷರತ್ತು ವಿಧಿಸಲಾಗಿದೆ. ಇದರಿಂದ ರಾಜ್ಯದ 65 ಸಾವಿರ ಅವಿವಾಹಿತರು ಜಾಗೂ 5697 ವಿಧುರರು ಪ್ರಯೋಜನ ಪಡೆಯಲಿದ್ದಾರೆ. ಇದೇ ವೇಳೆ 60 ವರ್ಷದ ಅವಧಿ ದಾಟಿದ ಮೇಲೆ ಅವರಿಗೆ ಹಿರಿಯ ನಾಗರಿಕರಿಗೆ ನೀಡುವ ಭತ್ಯೆ ನೀಡಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ. ಇದರಿಂದಾಗಿ ರಾಜ್ಯದ ಬೊಕ್ಕಸಕ್ಕೆ ತಿಂಗಳಿಗೆ 240 ಕೋಟಿ ಹೊರೆ ಬೀಳಲಿದೆ.
ಶಕ್ತಿ ಯೋಜನೆ ಸಾರಿಗೆ ಸಂಸ್ಥೆಯನ್ನು ಆರ್ಥಿಕವಾಗಿ ಅಶಕ್ತವಾಗಿಸಿದೆಯೆ?: ಸಿಬ್ಬಂದಿ ಕೈ ಸೇರಿಲ್ಲ ಜೂನ್ ತಿಂಗಳ ಪಗಾರ!
Gruha Jyothi:1 ಕೋಟಿಗೂ ಅಧಿಕ ಜನರಿಂದ ಗೃಹಜ್ಯೋತಿ ಯೋಜನೆಗೆ ನೋಂದಣಿ ಪೂರ್ಣ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ