
ಲಖನೌ (ಜ.09) ಕಳೆದ ಮೂರ ದಶಕಗಳಿಗೂ ಹೆಚ್ಚು ಕಾಲ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳೆ ಇನ್ನೇನು ನಿವೃತ್ತಿಯಾಗಬೇಕು ಅನ್ನೋವಷ್ಟರಲ್ಲಿ ಅಮಾನತುಗೊಂಡಿದ್ದಾರೆ. ತನಿಖೆ ನಡೆಸಿದ ಪೊಲೀಸರಿಗೆ ಅಚ್ಚರಿಯಾಗಿದೆ. ಕಾರಣ ಮೂರುವರೇ ದಶಕಗಳ ಕಾಲ ಸೇವೆ ಸಲ್ಲಿಸಿದ ಈಕೆ ಭಾರತದ ಪ್ರಜೆ ಅಲ್ಲ, ಪಾಕಿಸ್ತಾನ ಪ್ರಜೆ ಅನ್ನೋ ಅಸಲಿ ಮಾಹಿತಿ ಬಯಲಾಗಿದೆ. ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕೆಲಸ ಗಿಟ್ಟಿಸಿಕೊಂಡ ಈ ಮಹಿಳೆ ಇದೀಗ ನಿವೃತ್ತಿ ಅಂಚಿನಲ್ಲಿ ಅಮಾನತುಗೊಂಡು ಘಟನೆ ಉತ್ತರ ಪ್ರದೇಶದ ರಾಂಪುರದ ಅಜೀಮ್ ನಗರದಲ್ಲಿ ನಡೆದಿದೆ.
ಈಕೆಯ ಹೆಸರು ಮಹಿರಾ ಅಕ್ತರ್ ಅಲಿಯಾಸ್ ಫರ್ಜಾನಾ. ಉತ್ತರ ಪ್ರದೇಶದ ಅಜೀಮ್ ನಗರದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮಹಿರಾ ಅಕ್ತರ್ ಇದೀಗ ತನಿಖೆ ಎದುರಿಸುತ್ತಿದ್ದಾರೆ. ಈಕೆ 1979 ರಲ್ಲಿ ಪಾಕಿಸ್ತಾನ ವ್ಯಕ್ತಿಯನ್ನು ಮದುವೆಯಾಗಿ ಲಾಹೋರ್‌ಗೆ ಸ್ಥಳಾಂತರಗೊಂಡದ್ದರು. ಅದೇ ವರ್ಷ ಪಾಕಿಸ್ತಾನ ನಾಗರೀಕತ್ವ ಪಡೆದಿದ್ದಾರೆ. ಸರಿಸುಮಾರು 6 ವರ್ಷಗಳ ಕಾಲ ಪಾಕಿಸ್ತಾನದಲ್ಲಿ ನೆಲೆಸಿದ್ದ ಈಕೆ ಪಾಕಿಸ್ತಾನ ಗಂಡನಿಗೆ ಡಿವೋರ್ಸ್ ನೀಡಿ ಭಾರತಕ್ಕೆ ಮರಳಿದ್ದಾಳೆ. 1985ರಲ್ಲಿ ಭಾರತಕ್ಕೆ ಮರಳಿದ ಮಹಿರಾ ಅಕ್ತರ್ ಫರ್ಜನಾ ನಕಲಿ ದಾಖಲೆ ಸೃಷ್ಟಿಸಿದ್ದಾರೆ. ಬಳಿಕ ಕೆಲ ವರ್ಷದಲ್ಲೇ ಉತ್ತರ ಪ್ರದೇಶದ ಕುಮ್ಹಾರಿಯಾ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ.
ಮಹಿರಾ ಅಕ್ತರ್‌ಗೆ ಭಾರತದ ಅದಿಕೃತ ನಾಗರೀಕತ್ವ ಸಿಕ್ಕಿಲ್ಲ. ಆದರೆ ಈಕೆಯ ಬಳಿಕ ನಕಲಿ ಮತದಾನದ ಚೀಟಿ, ರೇಶನ್ ಕಾರ್ಡ್, ಆಧಾರ್ ಕಾರ್ಡ್ ಸೇರಿದಂತೆ ಎಲ್ಲಾ ದಾಖಲೆಗಳು ಇವೆ. ಜೊತೆಗೆ ಪಾಕಿಸ್ತಾನಗ ನಾಗರೀಕತ್ವ ಕೂಡ ಇದೆ. ಭಾರತದ ದಾಖಲೆಗಳನ್ನು ನಕಲಿ ಸೃಷ್ಟಿಸಿ ಉತ್ತರ ಪ್ರದೇಶದ ಸರ್ಕಾರಿ ನೌಕರಿ ಗಿಟ್ಟಿಸಿಕೊಂಡಿದ್ದಾಳೆ. ಕಳೆದ ಮೂರೆವರೆ ದಶಕಗಳಿಂದ ಅಜಿಮ್ ನಗರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದಾರೆ.
ಅಜೀಮ್ ನಗರ ಪೊಲೀಸ್ ಠಾಣೆಯಲ್ಲಿ ಮಹಿರಾ ಅಕ್ತರ್ ವಿರುದ್ದ ದೂರು ದಾಖಲಾಗಿತ್ತು. ಹೀಗಾಗಿ ಪೊಲೀಸರು ತನಿಖೆ ನಡೆಸಿದ್ದಾರೆ. ಈ ವೇಳೆ ಮಹಿರಾ ಅಕ್ತರ್ ಹಲವು ನಕಲಿ ದಾಖಲೆ ಸೃಷ್ಟಿಸಿ ಉದ್ಯೋಗ ಗಿಟ್ಟಿಸಿಕೊಂಡಿರುವುದು ಸ್ಪಷ್ಟವಾಗಿದೆ. ಹೀಗಾಗಿ ಪೊಲೀಸರ ಭಾರತೀಯ ನ್ಯಾಯ ಸಂಹಿತೆ 318(4), 336, 338 ಹಾಗೂ 340ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ನಿವೃತ್ತಿ ಅಂಚಿನಲ್ಲಿದ್ದ ಮಹಿರಾ ಅಕ್ತರ್ ಅಲಿಯಾಸ ಫರ್ಜಾನ ವಿರುದ್ದ ತನಿಖೆ ತೀವ್ರಗೊಲ್ಳುತ್ತಿದ್ದಂತೆ ಶಾಲೆಯಿಂದ ಅಮಾನತುಗೊಂಡಿದ್ದಾರೆ. ಇದೀಗ ಹೆಚ್ಚಿನ ತನಿಖೆ ಮುಂದುವರಿದಿದೆ. ಇಷ್ಟೇ ಅಲ್ಲ ಸರ್ಕಾರಿ ನೌಕರಿ ಗಿಟ್ಟಿಸಿಕೊಂಡ ಹಲವರ ಮೇಲು ಅನುಮಾನ ಮೂಡಿದೆ. ಹೀಗಾಗಿ ಪೊಲೀಸರು ತನಿಖೆ ತೀವ್ರಗೊಳಿಸಲು ಮುಂದಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ