CBSE Primary Education: ಕನ್ನಡಿಗರಿಗೆ ಗುಡ್ ನ್ಯೂಸ್: ಇನ್ಮುಂದೆ ಕನ್ನಡದಲ್ಲೇ CBSE ಪ್ರಾಥಮಿಕ ಶಿಕ್ಷಣ!

Kannadaprabha News   | Kannada Prabha
Published : May 27, 2025, 06:02 AM ISTUpdated : May 27, 2025, 12:27 PM IST
CBSE in kannada

ಸಾರಾಂಶ

ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) ಮಕ್ಕಳಿಗೆ ಮೊದಲ 5 ವರ್ಷದ ಶಿಕ್ಷಣವನ್ನು ಮಾತೃಭಾಷೆಯಲ್ಲೇ ಬೋಧಿಸುವಂತೆ ತನ್ನ ವ್ಯಾಪ್ತಿಯ ಶಾಲೆಗಳಿಗೆ ಸೂಚಿಸಿದೆ. 

ನವದೆಹಲಿ (ಮೇ.27): ಮಕ್ಕಳಿಗೆ ಮಾತೃಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣಕ್ಕೆ ಒತ್ತು ನೀಡುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಮುಂದಾಗಿರುವ ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ), ಮಕ್ಕಳಿಗೆ ಮೊದಲ 5 ವರ್ಷದ ಶಿಕ್ಷಣವನ್ನು ಮಾತೃಭಾಷೆಯಲ್ಲೇ ಬೋಧಿಸುವಂತೆ ತನ್ನ ವ್ಯಾಪ್ತಿಯ ಶಾಲೆಗಳಿಗೆ ಸೂಚಿಸಿದೆ. ಈ ಕುರಿತು ಅದು ದೇಶವ್ಯಾಪಿ ಇರುವ 30000 ಶಾಲೆಗಳಿಗೆ ಮಾಹಿತಿ ರವಾನಿಸಿದ್ದು, ಅದಕ್ಕೆ ಅಗತ್ಯ ಸಿದ್ಧತೆಗಳನ್ನೂ ನಡೆಸಿದೆ.

ಇದರ ಪ್ರಕಾರ, ಪೂರ್ವ ಪ್ರಾಥಮಿಕದಿಂದ (ಪ್ರೀಕೆಜೆ, ಎಲ್‌ಕೆಜಿ, ಯುಕೆಜಿ) 2ನೇ ತರಗತಿಯವರೆಗೆ ತಾಯ್ಭಾಷೆಯಲ್ಲಿ ಮಕ್ಕಳಿಗೆ ಬೋಧಿಸಲಾಗುವುದು. ಈ ನಿರ್ಧಾರದಿಂದ ಮಾತೃಭಾಷೆ ಬಳಕೆಗೆ ಉತ್ತೇಜನ ಸಿಗುವುದಲ್ಲದೆ, ಮಕ್ಕಳಿಗೆ ವಿಷಯಗಳನ್ನು ಪರಿಣಾಮಕಾರಿಯಾಗಿ ಅರ್ಥ ಮಾಡಿಕೊಳ್ಳಲೂ ಸಹಕಾರಿಯಾಗುತ್ತದೆ.

ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ)ಯ ಪ್ರಕಾರ, ನರ್ಸರಿಯಿಂದ 2ನೇ ತರಗತಿಯ ತನಕ ಮಾತೃಭಾಷೆ ಅಥವಾ ಆ ಪ್ರದೇಶದಲ್ಲಿ ಪ್ರಚಲಿತದಲ್ಲಿರುವ ಭಾಷೆಯಲ್ಲಿ ಬೋಧಿಸಬೇಕು. ಇಲ್ಲವೇ, ರಾಜ್ಯದ ಅಧಿಕೃತ ಭಾಷೆಯಲ್ಲಿ ಪಾಠ ಮಾಡಬೇಕು. 2ನೇ ತರಗತಿ ಬಳಿಕ ಮಕ್ಕಳು ಮಾತೃಭಾಷೆಯಲ್ಲಿ ಅಥವಾ ಇತರೆ ಭಾಷೆಗಳಲ್ಲಿ ಬೋಧನೆಗೆ ಒಳಪಡಬಹುದು. 5ನೇ ತರಗತಿ ಬಳಿಕ ಒಂದು ಭಾಷೆಯನ್ನು ಹೆಚ್ಚುವರಿಯಾಗಿ ಕಲಿಯುವ ಆಯ್ಕೆಯೂ ಇರಲಿದೆ. ಇದನ್ನು ಎಂದಿನಿಂದ ಜಾರಿ ಮಾಡಬೇಕು ಎಂಬುದನ್ನು ನಿರ್ಧರಿಸುವ ಅಧಿಕಾರವನ್ನು ಶಾಲೆಗಳಿಗೆ ನೀಡಲಾಗಿದೆ. ನಿರ್ಧಾರ ತಿಳಿಸಲು ಮೇ ತಿಂಗಳ ಕೊನೆಯ ತನಕ ಸಮಯಾವಕಾಶ ನೀಡಲಾಗಿದೆ.

ಈಗಾಗಲೇ 1 ಮತ್ತು 2ನೇ ತರಗತಿಯ ವರೆಗಿನ 22 ಭಾಷೆಗಳ ಪಠ್ಯಪುಸ್ತಕಗಳು ಸಿದ್ಧವಾಗಿವೆ

ಸಿಬಿಎಸ್‌ಇ ಸೂಚನೆ

  • -1 ಮತ್ತು 2ನೇ ತರಗತಿಯವರೆಗಿನ 22 ಭಾಷೆಗಳ ಪಠ್ಯಪುಸ್ತಕಗಳು ಸಿದ್ಧ
  • - 2ನೇ ತರಗತಿ ಬಳಿಕ ಮಾತೃಭಾಷೆ ಇಲ್ಲವೇ ಇತರೆ ಭಾಷೆಯ ಅವಕಾಶ
  • - ಮಾತೃಭಾಷೆ ಶಿಕ್ಷಣಕ್ಕೆ ಉತ್ತೇಜನ ನೀಡಲು ಸರ್ಕಾರದಿಂದ ಈ ಕ್ರಮ
  • - ಎಂದಿನಿಂದ ಜಾರಿ ಮಾಡಬೇಕು ಎಂಬ ಆಧಿಕಾರ ಶಾಲೆಗಳಿ ವಿವೇಚನೆಗೆ
  • - ರಾಷ್ಟ್ರೀಯ ಶಿಕ್ಷಣ ನೀತಿಯಂತೆ ಕೇಂದ್ರೀಯ ಶಿಕ್ಷಣ ಮಂಡಳಿ ವಿಶಿಷ್ಟ ನಡೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ
ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ