ಮಹಿಳೆಯರಿಗೆ ಲೈಂಗಿಕ ಕಿರುಕುಳ: ಸೋಷಿಯಲ್‌ ಮೀಡಿಯಾದಲ್ಲಿ ಸೆಕ್ಸ್ ವಿಡಿಯೋ ವೈರಲ್‌; ಕ್ರೈಸ್ತ ಪಾದ್ರಿ ಬಂಧನ

By BK AshwinFirst Published Mar 21, 2023, 10:24 AM IST
Highlights

ಕೆಲವು ದಿನಗಳ ಹಿಂದೆ ಅವರ ಮೇಲೆ ಜನರ ಗುಂಪೊಂದು ಅಟ್ಯಾಕ್‌ ಮಾಡಿ ಅವರ ಲ್ಯಾಪ್‌ಟಾಪ್ ಅನ್ನು ಕಿತ್ತುಕೊಂಡಿದ್ದ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋಗಳನ್ನು ಹಾಕಿದ್ದಾರೆ ಎಂದು ತಿಳಿದುಬಂದಿದೆ. 

ಕನ್ಯಾಕುಮಾರಿ (ಮಾರ್ಚ್‌ 21, 2023): ತಮಿಳುನಾಡಿನ ಕನ್ಯಾಕುಮಾರಿಯ ಸಿರೋ ಮಲಂಕರ ಕ್ಯಾಥೋಲಿಕ್ ಚರ್ಚ್‌ನ ಕ್ರೈಸ್ತ ಪಾದ್ರಿಯೊಬ್ಬರನ್ನು ಬಂಧಿಸಲಾಗಿದೆ. ಹಲವಾರು ಮಹಿಳೆಯರೊಂದಿಗಿನ ಬೆತ್ತಲೆ ವಿಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ನಂತರ ಅವರನ್ನು ಬಂಧಿಸಲಾಗಿದೆ. ಬಂಧಿತ ಪಾದ್ರಿಯನ್ನು ಬೆನೆಡಿಕ್ಟ್ ಆಂಟೋ ಎಂದು ಗುರುತಿಸಲಾಗಿದ್ದು, ಅವರು ಹಲವು ವರ್ಷಗಳಿಂದ ಚರ್ಚ್‌ನಲ್ಲಿ ಪಾದ್ರಿಯಾಗಿ ಸೇವೆ ಸಲ್ಲಿಸುತ್ತಿದ್ದರು ಎಂದು ತಿಳಿದುಬಂದಿದೆ.

ಕೆಲವು ದಿನಗಳ ಹಿಂದೆ ಅವರ ಮೇಲೆ ಜನರ ಗುಂಪೊಂದು ಅಟ್ಯಾಕ್‌ ಮಾಡಿ ಅವರ ಲ್ಯಾಪ್‌ಟಾಪ್ ಅನ್ನು ಕಿತ್ತುಕೊಂಡಿದ್ದ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋಗಳನ್ನು ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಿಡಿಯೋಗಳು ಮತ್ತು ಫೋಟೋಗಳು ಬಿಡುಗಡೆ ಸ್ಥಳೀಯವಾಗಿ ದೊಡ್ಡ ಹಗರಣವಾಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಬೆನೆಡಿಕ್ಟ್ ಆಂಟೋ ಅನೇಕ ಮಹಿಳೆಯರೊಂದಿಗೆ ಸೆಕ್ಸ್‌ ನಡೆಸಿರುವ ಫೋಟೋ ಹಾಗೂ ವಿಡಿಯೋಗಳು ರಿಲೀಸ್‌ ಆಗಿವೆ. 

ಇದನ್ನು ಓದಿ: ಛೀ ಪಾಪಿ..! ಬಿಹಾರದಲ್ಲಿ ಬೀದಿ ನಾಯಿಯ ಮೇಲೆ ಕಾಮುಕನಿಂದ ಅತ್ಯಾಚಾರ: ವಿಡಿಯೋ ವೈರಲ್‌ ಬಳಿಕ ಪೊಲೀಸರಿಂದ ತನಿಖೆ

Kanyakumari | Special Police arrested a church priest Benedict Anto after his alleged obscene photos and videos with women emerged on social media: Tamil Nadu police pic.twitter.com/GLKOlRi74f

— ANI (@ANI)

ಕ್ರೈಸ್ತ ಪಾದ್ರಿ ಮಹಿಳೆಯರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಾನೆ ಮತ್ತು ಕೆಟ್ಟದಾಗಿ ಚುಂಬಿಸುವುದು ಮತ್ತು ಸ್ಪರ್ಶಿಸುತ್ತಾನೆ ಎಂದೂ ವರದಿಯಾಗಿದೆ. ಅಲ್ಲದೆ, ಲೈಂಗಿಕ ಬಯಕೆ ತೀರಿಸಿಕೊಳ್ಳುವ ಮಹಿಳೆಯರೊಂದಿಗೆ ವಿಡಿಯೋಗಳನ್ನು ಸ್ವತಃ ರೆಕಾರ್ಡ್ ಮಾಡಿಕೊಳ್ಳುತ್ತಿದ್ದರು ಮತ್ತು ಸಂತ್ರಸ್ತರಿಗೆ ಬೆದರಿಕೆ ಹಾಕಲು ಈ ವಿಡಿಯೋಗಳನ್ನು ಬಳಸುತ್ತಿದ್ದರು ಎಂದೂ ತಿಳಿದುಬಂದಿದೆ. ಅಲ್ಲದೆ, ಅಪ್ರಾಪ್ತ ಬಾಲಕಿಯರ ಜತೆಗೂ ಕಾಮ ತೃಷೆ ತೀರಿಸಿಕೊಂಡಿದ್ದಾನೆ ಎಂದೂ ತಮಿಳು ಮಾಧ್ಯಮಗಳು ವರದಿ ಮಾಡಿವೆ.

ವೈದ್ಯಕೀಯ ವಿದ್ಯಾರ್ಥಿನಿಯಾಗಿರುವ ತನ್ನ ಮಹಿಳಾ ಸ್ನೇಹಿತೆಗೆ ಕಿರುಕುಳ ನೀಡಿದ್ದನ್ನು ಹಾಗೂ ಆಕೆಗೆ ಜೀವ ಬೆದರಿಕೆ ಹಾಕಿದ್ದನ್ನು ಪ್ರಶ್ನಿಸಿದ್ದಕ್ಕಾಗಿ ಪಾದ್ರಿ ಆಂಟೋ ತನ್ನ ಮಗ ಆಸ್ಟಿನ್ ಜಿನೋ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಮಿನಿ ಅಜಿತಾ ಎಂಬ ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು. ಬೆನೆಡಿಕ್ಟ್ ಆಂಟೋ ಕನ್ಯಾಕುಮಾರಿ ಪಶ್ಚಿಮ ಜಿಲ್ಲೆಯ ಸೈರೋ ಮಲಂಕಾರ ಕ್ಯಾಥೋಲಿಕ್ ಚರ್ಚ್ ಪಾದ್ರಿಯಾಗಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ. 30 ವರ್ಷದ ಕ್ರಿಶ್ಚಿಯನ್ ಪಾದ್ರಿ ಕನ್ಯಾಕುಮಾರಿ ಜಿಲ್ಲೆಯ ನಾಗರಕೋಯಿಲ್ ಬಳಿಯ ಮಾರ್ತಾಂಡಂ ಮೂಲದವರು ಎಂದೂ ತಿಳಿದುಬಂದಿದೆ.

ಇದನ್ನೂ ಓದಿ: Lalbaug murder case: ಕ್ರೈಮ್ ಶೋ ನೋಡಿ ತಾಯಿಯ ಮೃತದೇಹ ತುಂಡು ತುಂಡಾಗಿ ಕತ್ತರಿಸಿದ ಮಗಳು..!

ಕ್ರೈಸ್ತ ಪಾದ್ರಿಯೊಬ್ಬರ ಮೇಲೆ ಇಂತಹ ಆರೋಪ ಹೊರಿಸಿರುವುದು ಇದೇ ಮೊದಲಲ್ಲ. 2022 ರಲ್ಲಿ  ಅಪ್ರಾಪ್ತ ಬಾಲಕಿಯ ಮೇಲೆ ಚರ್ಚ್‌ನಲ್ಲಿ ಒಂದು ಬಾರಿ ಹಾಗೂ ಸಂತ್ರಸ್ಥೆಯ ಮನೆಯಲ್ಲಿ ಒಮ್ಮೆ ಸೇರಿ ಎರಡು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಕ್ಕಾಗಿ ಪಾಂಡ್ಸನ್‌ ಜಾನ್‌ ಎಂಬ ಪಾದ್ರಿ ಬಂಧನವಾಗಿದ್ದರು 

ಅಲ್ಲದೆ, 2018 ರಲ್ಲಿ ಪುಣೆಯ ಪ್ರತಿಷ್ಠಿತ ಆಂಗ್ಲ ಮಾಧ್ಯಮದ ಕಾನ್ವೆಂಟ್ ಶಾಲೆಯಲ್ಲಿ ಪ್ರಾಂಶುಪಾಲರೂ ಆಗಿದ್ದ ಪಾದ್ರಿಯೊಬ್ಬರು ಮುಂಬೈ ವಿದ್ಯಾರ್ಥಿನಿಯೊಬ್ಬರನ್ನು ಲೈಂಗಿಕವಾಗಿ ನಿಂದಿಸಿದ ಆರೋಪದ ಮೇಲೆ ಬಂಧಿಸಲಾಗಿತ್ತು. 

ಇದನ್ನೂ ಓದಿ: ರಸ್ತೆ ಮಧ್ಯದಲ್ಲೇ ಮಹಿಳೆಗೆ ಥಳಿತ; ಬಲವಂತವಾಗಿ ಕ್ಯಾಬ್‌ನೊಳಗೆ ತಳ್ಳಿದ ಕಿರಾತಕ..! ವಿಡಿಯೋದಲ್ಲಿ ಸೆರೆ..

ಭಾರತದಲ್ಲಿ ಮಾತ್ರವಲ್ಲ 2019 ರಲ್ಲಿ, ಅರ್ಜೆಂಟೀನಾದ ನ್ಯಾಯಾಲಯವು ಇಬ್ಬರು ಕ್ಯಾಥೋಲಿಕ್ ಪಾದ್ರಿಗಳಿಗೆ ಮೆಂಡೋಜಾದಲ್ಲಿ 40 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಕ್ಯಾಥೋಲಿಕ್ ನಡೆಸುತ್ತಿರುವ ಶಾಲೆಯ 10 ಕಿವುಡ ಮಕ್ಕಳ ಲೈಂಗಿಕ ದೌರ್ಜನ್ಯದ ತಪ್ಪಿತಸ್ಥರೆಂದು ಕಂಡುಬಂದ ನಂತರ ಈ ಶಿಕ್ಷೆ ವಿಧಿಸಲಾಗಿದೆ. ಇದೇ ರೀತಿಯ ಘಟನೆಗಳು ಪ್ರಪಂಚದ ಇತರ ಭಾಗಗಳಲ್ಲಿಯೂ ವರದಿಯಾಗಿದೆ.

ಇದನ್ನೂ ಓದಿ:  MUMBAI ACCIDENT: ಮಹಿಳಾ ಸಿಇಒ ಬಲಿ; ಕಾರು ಡಿಕ್ಕಿ ಹೊಡೆದ ರಭಸಕ್ಕೆ ಹಲವು ಅಡಿ ದೂರ ಹಾರಿದ ಜಾಗರ್ ದೇಹ

click me!