ಬೇಡಿಕೆ ಈಡೇರಿಸದಿದ್ದರೆ ಮತ್ತೆ ದಿಲ್ಲಿಗೆ ಮುತ್ತಿಗೆ: ರೈತರ ಎಚ್ಚರಿಕೆ

By Kannadaprabha NewsFirst Published Mar 21, 2023, 9:06 AM IST
Highlights

ಕನಿಷ್ಠ ಬೆಂಬಲ ಖಾತರಿ, ಸಾಲ ಮನ್ನಾ ಮತ್ತು ಪಿಂಚಣಿ ನೀಡಬೇಕೆಂದು ಒತ್ತಾಯಿಸಿ ಕಿಸಾನ್‌ ಸಂಯುಕ್ತ ಮೋರ್ಚಾ ಸೋಮವಾರ ದೆಹಲಿ ರಾಮ್‌ಲೀಲಾ ಮೈದಾನದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿತು.

ನವದೆಹಲಿ: ಕನಿಷ್ಠ ಬೆಂಬಲ ಖಾತರಿ, ಸಾಲ ಮನ್ನಾ ಮತ್ತು ಪಿಂಚಣಿ ನೀಡಬೇಕೆಂದು ಒತ್ತಾಯಿಸಿ ಕಿಸಾನ್‌ ಸಂಯುಕ್ತ ಮೋರ್ಚಾ ಸೋಮವಾರ ದೆಹಲಿ ರಾಮ್‌ಲೀಲಾ ಮೈದಾನದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿತು. ಬಳಿಕ ಕೇಂದ್ರ ಸಚಿವರನ್ನು ಭೇಟಿ ಮಾಡಿದ ರೈತರ ನಿಯೋಗ ನಮ್ಮ ಬೇಡಿಕೆ ಈಡೇರಿಸದೇ ಹೋದಲ್ಲಿ ಮತ್ತೊಮ್ಮೆ ದೆಹಲಿಯಲ್ಲಿ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

ಪ್ರಸ್ತುತ ರದ್ದು ಮಾಡಲಾಗಿರುವ ಕೃಷಿ ಕಾಯ್ದೆಯನ್ನು ವಿರೋಧಿಸಿ 2021ರಲ್ಲಿ ನಡೆಸಿದ ಬೃಹತ್‌ ಹೋರಾಟದಲ್ಲಿ,  ಕನಿಷ್ಠ ಬೆಂಬಲ ಬೆಲೆಗೆ ಲಿಖಿತ ಖಾತರಿ ಸೇರಿದಂತೆ ಅನೇಕ ಬೇಡಿಕೆಗಳನ್ನು ರೈತರು ಸರ್ಕಾರದ ಮುಂದಿಟ್ಟಿದ್ದರು. ಬೇಡಿಕೆ ಈಡೇರಿಸುವುದಾಗಿ ಸರ್ಕಾರ ಭರವಸೆ ನೀಡಿದ ಬಳಿಕ ಹೋರಾಟ ಕೈಬಿಡಲಾಗಿತ್ತು. ಆದರೆ ಈ ವರೆಗೆ ಈ ನಿಗದಿತ ಬೇಡಿಕೆಯನ್ನು ಈಡೇರಿಸಲಾಗಿಲ್ಲ. ಹೀಗಾಗಿ ಸೋಮವಾರ ಬೃಹತ್‌ ಸಂಖ್ಯೆಯಲ್ಲಿ ದೆಹಲಿಗೆ ರಾರ‍ಯಲಿ ಕೈಗೊಂಡಿದ್ದರು. ಬಳಿಕ ಕೇಂದ್ರ ಕೃಷಿ ಸಚಿವ (Union Agriculture Minister) ನರೇಂದ್ರ ಸಿಂಗ್‌ ತೋಮರ್‌ (Narendra Singh Tomar) ಅವರನ್ನು ಭೇಟಿ ಮಾಡಿದ 15 ಮಂದಿಯ ನಿಯೋಗ ಬೇಡಿಕೆಗಳ ಪಟ್ಟಿಯನ್ನು ಸಲ್ಲಿಕೆ ಮಾಡಿದೆ.

TumKur : 29 ದಿನ ಪೂರೈಸಿದ ರೈತರ ಧರಣಿ

ರೈತರ ವಿರುದ್ಧ ವಿಧಿಸಲಾದ ಬಹಳಷ್ಟು ಪ್ರಕರಣಗಳು ಬಾಕಿ ಇವೆ. ಸುಮಾರು 750 ರೈತರು ಪ್ರತಿಭಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಈವರೆಗೂ ಅವರ ಕುಟುಂಬಗಳಿಗೆ ಪರಿಹಾರವನ್ನು ನೀಡಲಾಗಿಲ್ಲ. ಅಲ್ಲದೇ ಸಕಾರದ ಮುಂದಿಟ್ಟಿರುವ ಇನ್ನೂ ಹಲವು ಬೇಡಿಕೆಗಳನ್ನು ಈಡೇರಿಸಲಾಗಿಲ್ಲ ಎಂದು ಜೈ ಕಿಸಾನ್‌ ಆಂದೋಲನದ ರಾಷ್ಟ್ರೀಯ ಅಧ್ಯಕ್ಷ ಅವಿಕ್‌ ಸಹಾ ಹೇಳಿದರು.

ರಾಯಚೂರು: ಬೆಲೆ ಕುಸಿತ, ಹೆದ್ದಾರಿಯಲ್ಲಿ ಹತ್ತಿ ಸುರಿದು ಪ್ರತಿಭಟನೆ

click me!