Lalbaug murder case: ಕ್ರೈಮ್ ಶೋ ನೋಡಿ ತಾಯಿಯ ಮೃತದೇಹ ತುಂಡು ತುಂಡಾಗಿ ಕತ್ತರಿಸಿದ ಮಗಳು..!

ಪೊಲೀಸರು ವೀಣಾ ಪ್ರಕಾಶ್‌ ಜೈನ್‌ ಅವರ ಮೃತದೇಹವನ್ನು ಅವರ ನಿವಾಸದಲ್ಲಿ ಪತ್ತೆ ಮಾಡಿದ್ದು, ಈ ವೇಳೆ ಮೃತದೇಹವನ್ನು ತುಂಡುಗಳಾಗಿ ಕತ್ತರಿಸಿ ಕಬೋರ್ಡ್ ಮತ್ತು ಬಾತ್ರೂಮಿನಲ್ಲಿ ಪ್ಲಾಸ್ಟಿಕ್‌ ಚೀಲಗಳಲ್ಲಿ ಸುತ್ತಲಾಗಿತ್ತು. ತನ್ನ ತಾಯಿಯೊಂದಿಗೆ ವಾಸಿಸುತ್ತಿದ್ದ ರಿಂಪಲ್ ಪ್ರಕಾಶ್‌ ಜೈನ್‌ ಮೊದಲು ತನ್ನ ತಾಯಿ ಮೃತಪಟ್ಟಿರುವ ಬಗ್ಗೆ ಗೊತ್ತೇ ಇಲ್ಲ ಎನ್ನುವಂತೆ ವರ್ತಿಸಿದ್ದಾರೆ. ಬಳಿಕ,   ತನ್ನ ತಾಯಿಯ ಸಾವಿನ ಸುದ್ದಿಯನ್ನು ಮುಚ್ಚಿಡಲು ತಾನು ಹಾಗೆ ಮಾಡಿದ್ದೇನೆ ಎಂದು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾಳೆ. 

lalbaug murder case rimples idea of slicing off mothers body was inspired by crime patrol ash

ಮುಂಬೈ (ಮಾರ್ಚ್‌ 19, 2023): ಮಾರ್ಚ್ 15 ರಂದು ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಅದು ಲಾಲ್‌ಬಾಗ್‌ ಮರ್ಡರ್‌ ಕೇಸ್‌ ಎಂದೇ ಕುಖ್ಯಾತಿಯಾಗಿದೆ. ಈ ಕೊಲೆ ಕೇಸ್‌ನ ಹಿಂದಿನ ಟ್ವಿಸ್ಟೊಂದು ಬಹಿರಂಗವಾಗಿದೆ. ಈ ಪ್ರಕರಣದಲ್ಲಿ 24 ವರ್ಷದ ಮಗಳು 55 ವರ್ಷದ ತಾಯಿಯನ್ನು ತುಂಡು ತುಂಡಾಗಿ ಕತ್ತರಿಸಿದ್ದಾರೆ. ಇಂತಹ ಭೀಕರ ಕೃತ್ಯಕ್ಕೆ ಪ್ರೇರಣೆ ಏನು ಎಂಬುದನ್ನು ಆರೋಪಿ ಈಗ ಬಾಯ್ಬಿಟ್ಟಿದ್ದಾಳಂತೆ. 

ತನ್ನ 55 ವರ್ಷದ ತಾಯಿಯ ಶವವನ್ನು ಕತ್ತರಿಸಲು 24 ವರ್ಷದ ಆರೋಪಿ ಪುತ್ರಿ ರಿಂಪಲ್ ಪ್ರಕಾಶ್ ಜೈನ್ 'ಸ್ಫೂರ್ತಿ' ಪಡೆದಿದ್ದಾನೆ ಎಂದು ಪೊಲೀಸ್ ಮೂಲಗಳು ಸೂಚಿಸಿವೆ. ದೂರದರ್ಶನ ಕಾರ್ಯಕ್ರಮ ಕ್ರೈಮ್ ಪ್ಯಾಟ್ರೋಲ್‌ ಎಪಿಸೋಡ್‌ನಿಂದ ಪ್ರೇರಿತರಾಗಿ ತಾಯಿ ವೀಣಾ ಪ್ರಕಾಶ್ ಜೈನ್ ಅವರನ್ನು ಕೊಲೆ ಮಾಡಲಾಗಿದೆಯಂತೆ.

ಇದನ್ನು ಓದಿ: MUMBAI ACCIDENT: ಮಹಿಳಾ ಸಿಇಒ ಬಲಿ; ಕಾರು ಡಿಕ್ಕಿ ಹೊಡೆದ ರಭಸಕ್ಕೆ ಹಲವು ಅಡಿ ದೂರ ಹಾರಿದ ಜಾಗರ್ ದೇಹ

ಪೊಲೀಸರು ವೀಣಾ ಪ್ರಕಾಶ್‌ ಜೈನ್‌ ಅವರ ಮೃತದೇಹವನ್ನು ಅವರ ನಿವಾಸದಲ್ಲಿ ಪತ್ತೆ ಮಾಡಿದ್ದು, ಈ ವೇಳೆ ಮೃತದೇಹವನ್ನು ತುಂಡುಗಳಾಗಿ ಕತ್ತರಿಸಿ ಕಬೋರ್ಡ್ ಮತ್ತು ಬಾತ್ರೂಮಿನಲ್ಲಿ ಪ್ಲಾಸ್ಟಿಕ್‌ ಚೀಲಗಳಲ್ಲಿ ಸುತ್ತಲಾಗಿತ್ತು. ತನ್ನ ತಾಯಿಯೊಂದಿಗೆ ವಾಸಿಸುತ್ತಿದ್ದ ರಿಂಪಲ್ ಪ್ರಕಾಶ್‌ ಜೈನ್‌ ಮೊದಲು ತನ್ನ ತಾಯಿ ಮೃತಪಟ್ಟಿರುವ ಬಗ್ಗೆ ಗೊತ್ತೇ ಇಲ್ಲ ಎನ್ನುವಂತೆ ವರ್ತಿಸಿದ್ದಾರೆ. ಬಳಿಕ,   ತನ್ನ ತಾಯಿಯ ಸಾವಿನ ಸುದ್ದಿಯನ್ನು ಮುಚ್ಚಿಡಲು ತಾನು ಹಾಗೆ ಮಾಡಿದ್ದೇನೆ ಎಂದು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾಳೆ. 

ಈ ಮಧ್ಯೆ, ರಿಂಪಲ್‌ ಪ್ರಕಾಶ್‌ ಜೈನ್‌ ತನ್ನ ತಾಯಿಯನ್ನು ಕೊಂದಿಲ್ಲ ಮತ್ತು ಅದು ಅಪಘಾತ ಎಂದು ಪೊಲೀಸ್‌ ಮೂಲಗಳು ಮೊದಲು ದೃಢಪಡಿಸಿದ್ದವು. ಕಟ್ಟಡದ ಮೆಟ್ಟಿಲುಗಳಿಂದ ಆಕಸ್ಮಿಕವಾಗಿ ಬಿದ್ದು ವೀಣಾ ಪ್ರಕಾಶ್‌ ಜೈನ್‌ ಸಾವು ಡಿಸೆಂಬರ್ ಕೊನೆಯ ವಾರದಲ್ಲಿ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿದ್ದವು. ಚೈನೀಸ್‌ ಆಹಾರ ಸ್ಟಾಲ್ ನಡೆಸುತ್ತಿದ್ದ ಇಬ್ಬರು ವ್ಯಕ್ತಿಗಳು ರಿಂಪಲ್ ಜೈನ್‌ಗೆ ತನ್ನ ತಾಯಿಯನ್ನು ಅವರ ಮನೆಗೆ ಹಿಂತಿರುಗಿಸಲು ಸಹಾಯ ಮಾಡಿದ್ದರು. ಅಲ್ಲದೆ, ಮೆಟ್ಟಿಲುಗಳಿಂದ ಬಿದ್ದ ನಂತರ ವೀಣಾ ಜೈನ್‌ಗೆ ಗಾಯಗಳಾದ ಹಿನ್ನೆಲೆ ರಿಂಪಲ್ ಅವರ ತಾಯಿಯನ್ನು ಆಸ್ಪತ್ರೆಗೆ ಕರೆದೊಯ್ಯುವಂತೆ ಅವರು ಸೂಚಿಸಿದ್ದರು. 

ಇದನ್ನೂ ಓದಿ: ರಸ್ತೆ ಮಧ್ಯದಲ್ಲೇ ಮಹಿಳೆಗೆ ಥಳಿತ; ಬಲವಂತವಾಗಿ ಕ್ಯಾಬ್‌ನೊಳಗೆ ತಳ್ಳಿದ ಕಿರಾತಕ..! ವಿಡಿಯೋದಲ್ಲಿ ಸೆರೆ..

ಆದರೆ, ಆಕೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುವ ಬದಲು, ಹಣಕಾಸಿನ ಅಡಚಣೆಗಳಿಂದಾಗಿ ರಿಂಪಲ್ ತಾಯಿಯನ್ನು ಮನೆಯಲ್ಲೇ ಇರಿಸಿದರು. ಗಾಯಗಳು ತೀವ್ರವಾಗಿದ್ದ ಕಾರಣ ವೀಣಾ ಅದೇ ದಿನ ಅಥವಾ ಮರುದಿನ ಮೃತಪಟ್ಟಿರಬಹುದು ಎಂದು ಮೂಲಗಳು ಖಚಿತಪಡಿಸಿವೆ. “ಸಂತ್ರಸ್ತ ಮಹಿಳೆ ಸತ್ತ ನಂತರ, ಆರೋಪಿ ಮಗಳು ಗಾಬರಿಗೊಳ್ಳಲು ಪ್ರಾರಂಭಿಸಿದಳು. ಈಗಾಗಲೇ ಇವರಿಬ್ಬರು ಸಂಬಂಧಿಕರ ಮನೆಯಲ್ಲಿ ವಾಸವಿದ್ದು, ಅವರಿಗೆ ಯಾವುದೇ ಆದಾಯದ ಮೂಲವಿರಲಿಲ್ಲ. ತನ್ನ ತಾಯಿಯ ಸಾವಿನ ವಿಷಯ ಹೊರಬಂದರೆ, ತನ್ನನ್ನು ಹೊರಹಾಕುತ್ತಾರೆ ಮತ್ತು ತಾನು ನಿರಾಶ್ರಿತಳಾಗುತ್ತೇನೆ, ಹಣವಿರಲ್ಲ ಎಂದು ಆತಂಕಗೊಂಡ ಅವಳು ದೇಹವನ್ನು ತಾನೇ ಎಸೆಯಲು ನಿರ್ಧರಿಸಿದಳು’’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮನೆಯಲ್ಲಿದ್ದಾಗ, ಅವಳು ನಿಜ ಜೀವನದ ಅಪರಾಧಗಳನ್ನು ಚಿತ್ರಿಸುವ ಕ್ರೈಮ್ ಪ್ಯಾಟ್ರೋಲ್‌ ಅನ್ನು ನೋಡುತ್ತಿದ್ದಳು ಮತ್ತು ದೇಹವನ್ನು ವಿವೇಚನೆಯಿಂದ ವಿಲೇವಾರಿ ಮಾಡುವ ಕಲ್ಪನೆಯನ್ನು ಕಲಿತಿದ್ದಾಳೆ ಎಂದು ತಿಳಿದುಬಂದಿದೆ. ಅವಳು ಹತ್ತಿರದ ಅಂಗಡಿಯಿಂದ ಎಲೆಕ್ಟ್ರಿಕ್ ಮಾರ್ಬಲ್ ಕಟ್ಟರ್, ಚಾಪರ್ ಮತ್ತು ಚಾಕುವನ್ನು ಪಡೆದುಕೊಂಡಿದ್ದು, ಅವುಗಳ ಮೂಲಕ ತನ್ನ ತಾಯಿಯ ಕೈ, ಕಾಲುಗಳು, ಮುಂಡ ಮತ್ತು ಮೂಳೆಗಳನ್ನು ಕತ್ತರಿಸಲು ಬಳಸಿದ್ದಾಳೆ. ನಂತರ ಅವಳು ಇವುಗಳನ್ನು ಸುತ್ತಿ ಕಬೋರ್ಡ್‌ನಲ್ಲಿ ಶೇಖರಿಸಿಟ್ಟಿದ್ದು, ಮನೆಯಿಂದ ದೂರ ಎಸೆಯುವ ಅವಕಾಶಕ್ಕಾಗಿ ಕಾಯುತ್ತಿದ್ದಳು ಎಂಬುದು ಸಹ ತಿಳಿದುಬಂದಿದೆ.

ಇದನ್ನೂ ಓದಿ; ಕೈದಿಗಳೊಂದಿಗೆ ಜೈಲಲ್ಲೇ ಮಹಿಳಾ ಗಾರ್ಡ್ಸ್‌ ಸೆಕ್ಸ್‌: 18 ಮಂದಿ ವಜಾ, ಮೂವರು ಕಂಬಿ ಹಿಂದೆ..!

Latest Videos
Follow Us:
Download App:
  • android
  • ios