Pandora Papers, ವಿದೇಶದಲ್ಲಿರುವ ಭಾರತೀಯರ ರಹಸ್ಯ ಸಂಪತ್ತಿನ ತನಿಖೆಗೆ ಮುಂದಾದ ಕೇಂದ್ರ!

By Suvarna NewsFirst Published Oct 4, 2021, 7:54 PM IST
Highlights
  • ರಹಸ್ಯ ಸಂಪತ್ತಿನ ದಾಖಲೆ ಪಂಡೋರ ಪೇಪರ್ ಬಹಿರಂಗ
  • ಭಾರತ ಸೇರಿ 91 ರಾಷ್ಟ್ರದ ನಾಯಕರು, ದಿಗ್ಗಜರ ಹೆಸರು
  • ಸಚಿನ್ ತೆಂಡುಲ್ಕರ್ ಸೇರಿ ಹಲವು ಭಾರತೀಯರ ಹೆಸರು ಬಹಿರಂಗ
  • ಪಂಡೋರ ಪೇಪರ್ ರಹಸ್ಯ ಸಂಪತ್ತಿನ ತನಿಖೆಗೆ ಮುಂದಾಗ ಕೇಂದ್ರ

ನವದೆಹಲಿ(ಅ.04): ಅಂತಾರಾಷ್ಟ್ರೀಯ ಪತ್ರಕರ್ತರ ಒಕ್ಕೂಟ(ICJ) ನಡೆಸಿದ ತನಿಖಾ ವರದಿ ಭಾರತ(India), ಪಾಕಿಸ್ತಾನ ಸೇರಿದಂತೆ ಹಲವು ರಾಷ್ಟ್ರಗಳನ್ನು ಬೆಚ್ಚಿ ಬೀಳಿಸಿದೆ. 200ಕ್ಕೂ ಹೆಚ್ಚು ದೇಶಗಳ ನಾಯಕರು, ಉದ್ಯಮಿಗಳು, ಶ್ರೀಮಂತರ ವಿದೇಶದಲ್ಲಿನ ರಹಸ್ಯ ಸಂಪತನ್ನು ಈ ಪಂಡೋರ ಪೇಪರ್(Pandora Papers) ಬಹಿರಂಗ ಮಾಡಿದೆ. ಸೇವಾ ಪೂರೈಕೆದಾರರ ಗೌಪ್ಯ ದಾಖಲೆ ಸೋರಿಕೆ ಆಧರಿಸಿ ವರದಿ ಬಿಡುಗಡೆ ಮಾಡಲಾಗಿದೆ. ಭಾರತೀಯರು ವಿದೇಶದಲ್ಲಿ ಹೊಂದಿರುವ ರಹಸ್ಯ ಸಂಪತ್ತಿನ ಕುರಿತು ಸರ್ಕಾರ ತನಿಖೆ(Investigation) ನಡೆಸಲಿದೆ.  

Pandora Paper: ಸಚಿನ್ ತೆಂಡೂಲ್ಕರ್ ಸೇರಿದಂತೆ ವಿಶ್ವದ ದಿಗ್ಗಜರ ಅಕ್ರಮ ಬಯಲು!

ಪಂಡೋರಾ ಪೇಪರ್ ವರದಿ ಹಾಗೂ ಭಾರತೀಯರ ರಹಸ್ಯ ಸಂಪತ್ತಿನ ಕುರಿತ ಬೆಳವಣಿಗೆಗಳನ್ನು ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದೆ. ಇದಕ್ಕೆ ಸಂಬಂಧಿಸಿದ ತನಿಖಾ ಸಂಸ್ಥೆಗಳು ಈ ಕುರಿತು ಗಮನಹರಿಸಲಿದೆ. ಈ ಪ್ರಕರಣ ಕೈಗೆತ್ತಿಕೊಂಡು ತನಿಖೆ ನಡೆಸಲಿದೆ. ಕಾನೂನಿ ಪ್ರಕಾರ ಸೂಕ್ತ ಕ್ರಮಕೈಗೊಳ್ಳುತ್ತದೆ. ಈ ಪ್ರಕರಣದಲ್ಲಿ ಭಾರತೀಯರ ವಿದೇಶಿದಲ್ಲಿನ ರಹಸ್ಯ ಸಂಪತ್ತು, ಆಸ್ತಿ ಕುರಿತು ವಿವರಕ್ಕಾಗಿ ವಿದೇಶಿಗಳೊಂಂದಿಗೆ ಮಾತುಕತೆ ನಡೆಸಲಿದೆ. ಇಂತಹ ಪ್ರಕರಣಗಳನ್ನು ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಸಂಬಂಧಿಸಿದ ವಿಭಾಗ ಶಕ್ತವಾಗಿದೆ. ಈ ಕುರಿತು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) ಸೇರಿದಂತೆ ಇತರ ಸಂಸ್ಥೆಗಳು ತನಿಖೆ ನಡೆಸಲು ಮುಂದಾಗಿದೆ.

ಸ್ವಿಸ್‌ ಬ್ಯಾಂಕಲ್ಲಿ ಭಾರತೀಯರ ಠೇವಣಿ ಹೆಚ್ಚಾಗಿಲ್ಲ, ಕುಸಿದಿದೆ: ಕೇಂದ್ರ

ಪಂಡೋರ ಪೇಪರ್ ಕುರಿತು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಕಾರಣ ಈಗಾಗಲೇ ICIJ, HSBC, ಪನಾಮ ಪೇಪರ್ಸ್ ಮತ್ತು ಪ್ಯಾರಡೈಸ್ ಪೇಪರ್‌ ಬಹಿರಂಗ ಮಾಡಿದ ಕಪ್ಪು ಹಣ ಮಾಹಿತಿ, ವಿದೇಶಿ ಆದಾಯ, ಸ್ವತ್ತುಗಳು ಕುರಿತು ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಕಪ್ಪು ಹಣ ಮತ್ತು ತೆರಿಗೆ ಕಾಯ್ದೆ 2015 ಜಾರಿಗೊಳಿಸಿರುವ ಕೇಂದ್ರ ಸರ್ಕಾರ ಇದೀಗ ಈ ಪ್ರಕರಣದಲ್ಲೂ ಅದೇ ರೀತಿಯ ಹೆಜ್ಜೆ ಇಡುವ ಸಾಧ್ಯತೆ ಇದೆ.  ವಿದೇಶಿ ಸ್ವತ್ತುಗಳು ಮತ್ತು ಆದಾಯ, ಅಘೋಷಿತ ಸಾಲಗಳು ಪನಾಮ ಮತ್ತು ಪ್ಯಾರಡೈಸ್ ಪೇಪರ್‌ಗಳಲ್ಲಿ ನಡೆಸಿದ ತನಿಖೆಯಲ್ಲಿ ಅಂದಾಜು 20,352 ಕೋಟಿ ಪತ್ತೆಯಾಗಿದೆ.

ಭಾರತೀಯರ ವಿದೇಶಿ ಕಪ್ಪು ಹಣ ಬೇಟೆಗೆ ಹೊಸ ಟೀಂ!

ಮಾಧ್ಯಮದಲ್ಲಿ ಕೆಲ ಭಾರತೀಯರ ಹೆಸರು ಕಾಣಿಸಿಕೊಂಡಿದೆ. ಆದರೆ ಹೆಚ್ಚಿನ ವಿವರಗಳು ಬಹಿರಂಗವಾಗಿಲ್ಲ. ಈ ಮಾಹಿತಿಗಳನ್ನು ಹಂತ ಹಂತವಾಗಿ ಬಿಡುಗಡೆ ಮಾಡುವುದಾಗಿ ಮಾಧ್ಯಮ ಒಕ್ಕೂಟ ಹೇಳಿದೆ. ಪಂಡೋರಾ ಪೇಪರ್ಸ್ ತನಿಖೆಗೆ ಸಂಬಂಧಿಸಿದ ರಚನಾತ್ಮಕ ಡೇಟಾವನ್ನು ಅದರ ಆಫ್‌ಶೋರ್ ಲೀಕ್ಸ್ ಡೇಟಾಬೇಸ್‌ನಲ್ಲಿ ಬರುವ ದಿನಗಳಲ್ಲಿ ಮಾತ್ರ ಬಿಡುಗಡೆ ಮಾಡಲಾಗುವುದು ಎಂದು ಸೂಚಿಸುತ್ತದೆ.

ಪಂಡೋರಾ ಪೇಪರ್ಸ್ ಸೋರಿಕೆಯ ಪ್ರಕರಣಗಳ ತನಿಖೆಯನ್ನು ಮಾಧ್ಯಮಗಳಲ್ಲಿ 'ಪಂಡೋರಾ ಪೇಪರ್ಸ್' ಹೆಸರಿನಲ್ಲಿ ಸಿಬಿಡಿಟಿ, ಇಡಿ, ಪ್ರತಿನಿಧಿಗಳನ್ನು ಹೊಂದಿರುವ ಮಲ್ಟಿ ಏಜೆನ್ಸಿ ಗ್ರೂಪ್ ಮೂಲಕ ಮೇಲ್ವಿಚಾರಣೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.

click me!