ಶಾರುಖ್‌ ಮಗನೊಂದಿಗೆ ಸೆಲ್ಪೀ ತೆಗೆದ ವ್ಯಕ್ತಿ ಅಧಿಕಾರಿ ಅಲ್ಲ ಎಂದ NCB!

Published : Oct 04, 2021, 12:28 PM ISTUpdated : Oct 04, 2021, 12:33 PM IST
ಶಾರುಖ್‌ ಮಗನೊಂದಿಗೆ ಸೆಲ್ಪೀ ತೆಗೆದ ವ್ಯಕ್ತಿ ಅಧಿಕಾರಿ ಅಲ್ಲ ಎಂದ NCB!

ಸಾರಾಂಶ

* ಡ್ರಗ್ಸ್‌ ಪಾರ್ಟಿ ಮೇಲೆ ಎನ್‌ಸಿಬಿ ಅಧಿಕಾರಿಗಳ ದಾಳಿ * ದಾಳಿ ವೇಳೆ ಶಾರುಖ್ ಮಗ ಆರ್ಯನ್ ಸೇರಿ ಎಂಟು ಮಂದಿ ವಶಕ್ಕೆ * ಎನ್‌ಸಿಬಿ ಆಫೀಸ್‌ನಲ್ಲಿ ಆರ್ಯನ್ ಪುತ್ರನೊಂದಿಗೆ ಸೆಲ್ಪೀ ಪಡೆದ ವ್ಯಕ್ತಿ * ಫೋಟೋದಲ್ಲಿರುವ ವ್ಯಕ್ತಿ ಎನ್‌ಸಿಬಿ ಅಧಿಕಾರಿಯಲ್ಲ

ಮುಂಬೈ(ಅ.04): ಶಾರುಖ್ ಖಾನ್(Shah Rukh Khan) ಪುತ್ರ ಆರ್ಯನ್ ಖಾನ್(Aryan Khan) ಅವರ ಡ್ರಗ್ ಕೇಸ್ ಪ್ರಕರಣದ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಆದರೆ ಈ ಬೆಳವಣಿಗೆಗಳ ನಡುವೆ, ಫೋಟೋ ಒಂದು ಭಾರೀ ಸದ್ದು ಮಾಡುತ್ತಿದೆ. ಇದರಲ್ಲಿ ವ್ಯಕ್ತಿಯೊಬ್ಬ ಆರ್ಯನ್ ಖಾನ್ ಜೊತೆ ಸೆಲ್ಫೀ ತೆಗೆದುಕೊಳ್ಳುತ್ತಿರುವ ದೃಶ್ಯವಿದೆ. ಹೀಗಿರುವಾಗಲೇ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್ ಜೊತೆ ಫೋಟೋದಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿ NCBಯ ಅಧಿಕಾರಿ, ಉದ್ಯೋಗಿ ಅಲ್ಲ ಎಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಸ್ಪಷ್ಟಪಡಿಸಿದೆ.

ಬಾಲಿವುಡ್‌ಗೆ ಸಿಂಹ ಸ್ವಪ್ನವಾದ IRS ಅಧಿಕಾರಿ ಸಮೀರ್‌ ವಾಂಖೆಡೆ!

ಎನ್‌ಸಿಬಿ ಅಧಿಕೃತ ಹೇಳಿಕೆ 

ಕ್ರೂಸ್‌ನಲ್ಲಿ ನಡೆದ ದಾಳಿ ಬಳಿಕ, ಆರ್ಯನ್‌ನನ್ನು ಎನ್ ಸಿಬಿ ವಶಕ್ಕೆ ಪಡೆದು ಬಳಿಕ ಅರೆಸ್ಟ್‌ ಮಾಡಿದೆ. ಈ ನಡುವೆ ಆರ್ಯನ್ ಜೊತೆ ಸೆಲ್ಪೀ(Selfie) ತೆಗೆದುಕೊಂಡ ವ್ಯಕ್ತಿ ಯಾರೆಂಬ ಪ್ರಶ್ನೆ ಕೆಳಿ ಬಂದಿದೆ. ಇನ್ನು ಜನಸಾಮಾನ್ಯರು ವೈರಲ್ ಆದ ಈ ಫೋಟೋದಲ್ಲಿರುವ ವ್ಯಕ್ತಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಅಧಿಕಾರಿಯಾಗಿ ಪರಿಗಣಿಸಿದ್ದಾರೆ. ಆದರೀಗ ಈ ಎಕಲ್ಲಾ ಅನುಮಾನಗಳಿಗೆ ತೆರೆ ಎಳೆದಿರುವ ಎನ್‌ಸಿಬಿ ಅಧಿಕೃತ ಹೇಳಿಕೆ ನೀಡಿ ಈ ಫೋಟೋದಲ್ಲಿರುವ ವ್ಯಕ್ತಿಗೂ ಎನ್‌ಸಿಬಿಗೂ ಯಾವುದೇ ನಂಟಿಲ್ಲ ಎಂದಿದೆ. ಹೀಗಿರುವಾಗ ಎನ್‌ಸಿಬಿ ಕಚೇರಿಯಲ್ಲಿ ಆರ್ಯನ್ ಜೊತೆ ಸೆಲ್ಪೀ ತೆಗೆದ ವ್ಯಕ್ತಿ ಯಾರೆಂಬ ಮತ್ತೊಂದು ಪ್ರಶ್ನೆ ಹುಟ್ಟಿಕೊಂಡಿದೆ.

15 ದಿನದಿಂದ ಹೊಂಚು ಹಾಕಿ ಡ್ರಗ್ಸ್ ಪಾರ್ಟಿ ಮಾಡುತ್ತಿದ್ದವರನ್ನು ಹಿಡಿದ ಎನ್‌ಸಿಬಿ!

8 ಜನರನ್ನು ವಿಚಾರಣೆಗೆ

ಮುಂಬೈನಲ್ಲಿ ಸಮುದ್ರದ ಮಧ್ಯೆ ಡ್ರಗ್ಸ್ ಪಾರ್ಟಿ ನಡೆಯುತ್ತಿದ್ದ ಹಡಗಿನ ಮೇಲೆ ಶನಿವಾರ ದಾಳಿ ನಡೆದಿದೆ, ಆ ಹಡಗಿನಲ್ಲಿ 600 ಕ್ಕೂ ಹೆಚ್ಚು ಜನರಿದ್ದರು. ಹೀಗಿರುವಾಗ 8 ಧಾರುಖ್ ಪುತ್ರ ಆರ್ಯನ್ ಖಾನ್, ಅರ್ಬಾಜ್ ಮರ್ಚೆಂಟ್, ಮುನ್ಮುನ್ ಧಮೇಚಾ, ನೂಪುರ್ ಸಾರಿಕಾ, ಇಸ್ಮೀತ್ ಸಿಂಗ್, ಮೊಹಕ್ ಜೈಸ್ವಾಲ್, ವಿಕ್ರಾಂತ್ ಚೋಕರ್, ಗೋಮಿತ್ ಚೋಪ್ರಾ ಹೀಗೆ ಎಂಟು ಮಂದಿಯನ್ನು ಅವರನ್ನು ವಿಚಾರಣೆಗೊಳಪಡಿಸಲಾಗಿದೆ. ಅದರಲ್ಲಿ ಆರ್ಯನ್ ಖಾನ್, ಅರ್ಬಾಜ್ ಮರ್ಚೆಂಟ್, ಮುನ್ಮುನ್ ಧಮೇಚಾ ಇನ್ನೂ NCB ವಶದಲ್ಲಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪೌರತ್ವಕ್ಕೂ ಮುನ್ನ ಮತಪಟ್ಟೀಲಿ ಹೆಸರು : ಸೋನಿಯಾಗೆ ನೋಟಿಸ್‌
ಲೋಕಸಭೆಯಲ್ಲಿ ಮತಚೋರಿ ಕದನ : ಕೈ ಮತಗಳವಿಂದ ಅಂಬೇಡ್ಕರ್‌ಗೆ ಸೋಲು-ಬಿಜೆಪಿ