ವಿಮಾನದಲ್ಲಿ ಕುಳಿತು ಬಾಂಬ್ ಮಾತು: ದುಬೈಗೆ ಹೊರಟಿದ್ದವನ ಬಂಧನ

By Anusha KbFirst Published Jun 9, 2023, 2:18 PM IST
Highlights

ಪೋನ್‌ನಲ್ಲಿ ಬಾಂಬ್ ಬಗ್ಗೆ ಮಾತನಾಡುತ್ತಿದ್ದ ಕಾರಣಕ್ಕೆ ದೆಹಲಿ ಏರ್‌ಪೋರ್ಟ್‌ನಲ್ಲಿ (Delhi airport) ಪ್ರಯಾಣಿಕನೋರ್ವನನ್ನು ಬಂಧಿಸಲಾಗಿದೆ. ಉತ್ತರಪ್ರದೇಶದ ಫಿಲಿಭಿತ್ ನಿವಾಸಿ ಅಜೀಮ್ ಖಾನ್ (Azeem Khan)ಬಂಧಿತ ವ್ಯಕ್ತಿ.

ದೆಹಲಿ: ಪೋನ್‌ನಲ್ಲಿ ಬಾಂಬ್ ಬಗ್ಗೆ ಮಾತನಾಡುತ್ತಿದ್ದ ಕಾರಣಕ್ಕೆ ದೆಹಲಿ ಏರ್‌ಪೋರ್ಟ್‌ನಲ್ಲಿ (Delhi airport) ಪ್ರಯಾಣಿಕನೋರ್ವನನ್ನು ಬಂಧಿಸಲಾಗಿದೆ. ಉತ್ತರಪ್ರದೇಶದ ಫಿಲಿಭಿತ್ ನಿವಾಸಿ ಅಜೀಮ್ ಖಾನ್ (Azeem Khan)ಬಂಧಿತ ವ್ಯಕ್ತಿ. ಈತ ಫೋನ್‌ನಲ್ಲಿ ಬಾಂಬ್ ಬಗ್ಗೆ ಮಾತನಾಡುತ್ತಿರುವುದನ್ನು ಕೇಳಿಸಿಕೊಂಡ ಸಹ ಪ್ರಯಾಣಿಕರೊಬ್ಬರು ಏರ್‌ಪೋರ್ಟ್‌ನ ಭದ್ರತಾ ಸಿಬ್ಬಂದಿಗೆ ಆತನ ಬಗ್ಗೆ ಮಾಹಿತಿ ನೀಡಿದ್ದು, ನಂತರ ಏರ್‌ಪೋರ್ಟ್‌ ಭದ್ರತಾ ಸಿಬ್ಬಂದಿ ಆತನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Indira Gandhi International Airport) ಈ ಘಟನೆ ನಡೆದಿದೆ. ವಿಸ್ತಾರ ಫ್ಲೈಟ್ (UK-941) ಅಲ್ಲಿ ಕುಳಿತುಕೊಂಡು ಅಜೀಮ್ ಖಾನ್ ಬಾಂಬ್ ಬಗ್ಗೆ ಮಾತನಾಡಿದ್ದಾನೆ. ಇದರಿಂದ ಹೆದರಿದ ಸಹ ಪ್ರಯಾಣಿಕರೊಬ್ಬರು ವಿಮಾನ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ನಂತರ ಅಜೀಮ್‌ ಖಾನ್‌ನನ್ನು ವಿಮಾನದಿಂದ ಕೆಳಗಿಳಿಸಿ ವಿಚಾರಣೆ ನಡೆಸಲಾಗಿದೆ. 

ಜೂನ್ 7 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ (Uttar Pradesh) ಫಿಲಿಭಿತ್ ನಿವಾಸಿಯಾದ ಅಜೀಂ ಖಾನ್‌ ಕನೆಕ್ಟಿಂಗ್ ಫ್ಲೈಟ್ ಮೂಲಕ ದೆಹಲಿಯಿಂದ (Delhi) ಮುಂಬೈ (Mumbai) ಮುಂಬೈನಿಂದ ದುಬೈಗೆ ಹೊರಟಿದ್ದ, ವಿಸ್ತಾರ ಫ್ಲೈಟ್ ಯುಕೆ-941 ಆತ ಪ್ರಯಾಣ ಬೆಳೆಸಿದ್ದ, ಆದರೆ ಈತ ಆಗಾಗ ಬಾಂಬ್ ವಿಚಾರ ಮಾತನಾಡುತ್ತಿದ್ದು, ಇದರಿಂದ ಈತನ ಪಕ್ಕ  ಕುಳಿತಿದ್ದ ಸಹ ಪ್ರಯಾಣಿಕರೊಬ್ಬರು ವಿಮಾನದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಮಹಿಳೆಯ ದೂರನ್ನು ಆಧರಿಸಿ ವಿಮಾನದ ಸಿಬ್ಬಂದಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆಗೆ ಆತನನ್ನು ಒಪ್ಪಿಸಿದ್ದಾರೆ. ಇದಾದ ಬಳಿಕ ಆತನನ್ನು ದೆಹಲಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. 

ಬೆಂಗ್ಳೂರಿನ ರಿಸರ್ವ್‌ ಬ್ಯಾಂಕ್‌ ಕಚೇರಿಗೆ ಬಾಂಬ್‌ ಕರೆ: ಯುವಕ ಸೆರೆ

ಪಾಕಿಸ್ತಾನ ಹೆಸರಲ್ಲಿ ಅಂಕೋಲಾದಲ್ಲಿ ಪೋಸ್ಟರ್ ಪತ್ತೆ: ಜನತೆಗೆ ಬಾಂಬ್‌ನ ಆತಂಕ

 ಪಾಕಿಸ್ತಾನದ ಹೆಸರಿನಲ್ಲಿ ಅಂಗಡಿಯೊಂದರ ಗೋಡೆಗೆ ಪೋಸ್ಟರ್ ಅಂಟಿಸುವ ಮೂಲಕ ಕಿಡಿಗೇಡಿಗಳು ಜನರಲ್ಲಿ ಭೀತಿ ಸೃಷ್ಠಿಸುವ ಕೃತ್ಯ ಎಸಗಿದ ಘಟನೆ ಉತ್ತರಕನ್ನಡ ಅಂಕೋಲಾ ಪಟ್ಟಣದ ಬಂಡಿಬಜಾರ್ ನಲ್ಲಿ ನಡೆದಿದೆ‌. ಅಂಕೋಲಾದ ಸ್ಪೋರ್ಟ್ಸ್ ಮಳಿಗೆಯ ಗೋಡೆಗೆ ಮೂರು ಪೋಸ್ಟರ್ ಅಂಟಿಸಲಾಗಿದ್ದು, ಬಿಳಿ ಹಾಳೆಯ ಮೇಲೆ ಕೆಂಪು ಬಣ್ಣದ ಮಾರ್ಕರ್ ನಿಂದ ಕನ್ನಡ ಮತ್ತು ಇಂಗ್ಲೀಷ್ ಅಕ್ಷರದಲ್ಲಿ ಬರೆಯಲಾಗಿದೆ. ಪೋಸ್ಟರ್ ನಲ್ಲಿ ಸಾಂಗ್ಲಾನಿ ವೆಲ್ ಫೇರ್ ಟ್ರಸ್ಟ್ ಎಂದು ಬರೆದು ಬ್ರಾಕೇಟ್‌ನಲ್ಲಿ ಪಾಕಿಸ್ತಾನ ಕಾಂಟ್ರ್ಯಾಕ್ಟ್ ಎಂದು ಬರೆಯಲಾಗಿದೆ. ಬರಹದಲ್ಲಿ ಪಿ.ಎಂ ಹೈಸ್ಕೂಲ್ , ಜೈಹಿಂದ್ ಹೈಸ್ಕೂಲ್  ಎಂದು ಸ್ಥಳೀಯ ಶಾಲೆಯ ಉಲ್ಲೇಖ ಮಾಡಲಾಗಿದ್ದು ಇದರಿಂದ ಇಡೀ ನಗರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.   ಇನ್ನು ಸ್ಥಳಕ್ಕೆ ಆಗಮಿಸಿದ ಅಂಕೋಲಾ ಪೊಲೀಸರು ಪೋಸ್ಟರ್ ತೆರವು ಗೊಳಿಸಿದ್ದಾರೆ. ಪೋಸ್ಟರ್ ನೋಡಿ ಸ್ಥಳೀಯರಂತೂ ಭೀತಿಗೊಳಗಾಗಿದ್ದು, ಕೃತ್ಯ ಎಸಗಿದವರನ್ನು ಪತ್ತೆ ಹಚ್ಚಲು ಒತ್ತಾಯಿಸಿದ್ದಾರೆ.

ಎಕ್ಸ್ಟಾ ಲಗೇಜ್‌ಗೆ ಶುಲ್ಕ ಕಟ್ಟುವಂತೆ ಕೇಳಿದ್ದಕ್ಕೆ ಬಾಂಬ್ ಬಾಂಬ್ ಎಂದು ಕೂಗಿದ ಮಹಿಳೆ

click me!