ದೆಹಲಿ ಮೆಟ್ರೋದಲ್ಲಿ ನಡೆದಿದೆ ಎನ್ನಲಾದ ಮತ್ತೊಂದು ವೀಡಿಯೋ ವೈರಲ್ ಆಗಿದ್ದು, ವೀಡಿಯೋದಲ್ಲಿ ಯುವಕರಿಬ್ಬರು ಮೆಟ್ರೋ ಬಾಗಿಲು ಹಾಕದಂತೆ ತಡೆಯುತ್ತಿರುವ ದೃಶ್ಯ ಸೆರೆ ಆಗಿದೆ.
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಮೆಟ್ರೋ ಪ್ರಾಧಿಕಾರಕ್ಕೆ ಯುವ ಸಮೂಹದ್ದೇ ದೊಡ್ಡ ಕಿರುಕುಳವಾಗಿದೆ. ವಿದ್ಯಾರ್ಥಿಗಳು, ಯುವಕರು ಯುವತಿಯರು ಸೋಶಿಯಲ್ ಮೀಡಿಯಾ ಸ್ಟಾರ್‌ಗಳು ಹೀಗೆ ಒಬ್ಬರಲ್ಲ ಒಬ್ಬರು ಏನಾದರೊಂದು ಕಿತಾಪತಿ ಮಾಡುತ್ತಿದ್ದು, ಇದು ಆಗಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತದೆ. ಜೊತೆಗೆ ನೆಟ್ಟಿಗರ ಆಕ್ರೋಶಕ್ಕು ಕಾರಣವಾಗುತ್ತಿದೆ. ದಿನಗಳ ಹಿಂದಷ್ಟೇ ಯುವತಿಯೊಬ್ಬಳು ಅರೆಬರೆ ಬಟ್ಟೆ ತೊಟ್ಟು ಮೆಟ್ರೋದಲ್ಲಿ ಬಿಂದಾಸ್ ಆಗಿ ಕುಣಿಯುತ್ತಿದ್ದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈಗ ದೆಹಲಿ ಮೆಟ್ರೋದಲ್ಲಿ ನಡೆದಿದೆ ಎನ್ನಲಾದ ಮತ್ತೊಂದು ವೀಡಿಯೋ ವೈರಲ್ ಆಗಿದ್ದು, ವೀಡಿಯೋದಲ್ಲಿ ಯುವಕರಿಬ್ಬರು ಮೆಟ್ರೋ ಬಾಗಿಲು ಹಾಕದಂತೆ ತಡೆಯುತ್ತಿರುವ ದೃಶ್ಯ ಸೆರೆ ಆಗಿದೆ.
ಮೆಟ್ರೋ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಮೆಟ್ರೋ ಬಾಗಿಲುಗಳಿಗೆ ಆಟೋಮೇಟಿಕ್ ಸೆನ್ಸೆಷನ್ ಇದ್ದು, ಯಾವುದಾದರೂ ವಸ್ತುಗಳು ಅಥವಾ ಜನ ಅಡ್ಡ ಇದ್ದಾರೆ ಎಂದರೆ ಬಾಗಿಲು ಹಾಕಲಾಗುವುದಿಲ್ಲ, ಬಾಗಿಲು ಹಾಕಲಾಗದಿದ್ದರೆ ಮೆಟ್ರೋ ಮುಂದೆ ಹೋಗುವುದಿಲ್ಲ,ಇದರಿಂದ ಮೆಟ್ರೋ ರೈಲುಗಳ ಪ್ರಯಾಣವೂ ವಿಳಂಬವಾಗುತ್ತದೆ. ಪ್ರಯಾಣಿಕರ ಹಿತದೃಷ್ಟಿಯಿಂದಾಗಿ ಮೆಟ್ರೋ ಬಾಗಿಲು ಹಾಕದೇ ಮುಂದೆ ಸಾಗದಂತೆ ತಂತ್ರಜ್ಞಾನ ಅಳವಡಿಕೆ ಇದೆ. ಮೆಟ್ರೋ ನಿಲ್ದಾಣಗಳಲ್ಲಿ ಜನ ಹತ್ತುತ್ತಿದ್ದಂತೆ ಬಾಗಿಲು ಸ್ವಯಂ ಚಾಲಿತವಾಗಿ ಕ್ಲೋಸ್ ಆಗುತ್ತವೆ. ಹಾಗೂ ಮುಂದಿನ ನಿಲ್ದಾಣ ಬಂದಾಗ ಸ್ವಯಂ ಚಾಲಿತವಾಗಿ ಮೆಟ್ರೋದ ಬಾಗಿಲುಗಳು ತೆರೆದುಕೊಳ್ಳುತ್ತವೆ. ಆದರೆ ಈ ಯುವಕರು ಅವುಗಳನ್ನು ಮುಚ್ಚಿಕೊಳ್ಳಲು ಬಿಡದೇ ಮಧ್ಯೆ ಕಾಲನ್ನು ತೂರಿ ಕಿಡಿಗೇಡಿತನ ತೋರಿದ್ದಾರೆ.
ಸದ್ಯಕ್ಕೆ ಮೆಟ್ರೋ ಪ್ರಯಾಣ ದರ ಹೆಚ್ಚಿಸುವುದಿಲ್ಲ: ಪರ್ವೇಜ್ ಸ್ಪಷ್ಟನೆ
ಯುವಕರೇನೋ ಮೋಜಿನ ಕಾರಣಕ್ಕೆ ಈ ಕೃತ್ಯವೆಸಗಿದ್ದಾರೆ. ಆದರೆ ಬಾಗಿಲು ಮುಚ್ಚದ ಹೊರತು ಮೆಟ್ರೋ ಮುಂದೆ ಸಾಗದ ಕಾರಣ ಮೆಟ್ರೋದಲ್ಲಿ ಸಂಚರಿಸುವ ಇತರ ಪ್ರಯಾಣಿಕರಿಗೂ ತೊಂದರೆಯಾಗುತ್ತಿದೆ. ಈ ವೀಡಿಯೋವನ್ನು ಅಮನ್ ಎಂಬುವವರು ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಇವರಂತಹವರ ಕಾರಣಕ್ಕೆ ಮೆಟ್ರೋ ವಿಳಂಬವಾಗಿ ಪ್ರಯಾಣಿಸುತ್ತಿದೆ ಎಂದು ಬರೆದು ಈ ವೀಡಿಯೋವನ್ನು ಡೆಲ್ಲಿ ಮೆಟ್ರೋ ಕಾರ್ಪೋರೇಷನ್‌ಗೆ ಟ್ಯಾಗ್ ಮಾಡಿದ್ದಾರೆ. 20 ಸೆಕೆಂಡ್‌ಗಳ ಈ ವಿಡಿಯೋವನ್ನು ಡೆಲ್ಲಿ ಮೆಟ್ರೋ ಕೂಡ ಗಮನಿಸಿದ್ದು, ಅಮನ್ ಅವರ ಪೋಸ್ಟ್‌ಗೆ ಸ್ಪಂದಿಸಿದೆ.
ಮೆಟ್ರೋ ರೈಲಿನ ಬಾಗಿಲುಗಳು ಮುಚ್ಚದಂತೆ ಅಡ್ಡಿಪಡಿಸುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಇಂತಹವರು ಕಂಡು ಬಂದಲ್ಲಿ ಮೆಟ್ರೋ ಪ್ರಯಾಣಿಕರು ಕೂಡಲೇ ಮೆಟ್ರೋ ಹೆಲ್ಪ್‌ಲೈನ್‌ಗೆ 155370 ಗೆ ಕರೆ ಮಾಡಿ ದೂರು ನೀಡಬಹುದು ಎಂದು ದೆಹಲಿ ಮೆಟ್ರೋ ಪ್ರಾಧಿಕಾರ ಮನವಿ ಮಾಡಿದೆ. ಇನ್ನು ಈ ವೀಡಿಯೋ ನೋಡಿದ ಅನೇಕರು ಯುವಕರ ಈ ಕೃತ್ಯಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಇಂತಹ ಅನಾಗರಿಕ ವರ್ತನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅನೇಕರು ಆಗ್ರಹಿಸಿದ್ದಾರೆ. ದೆಹಲಿಯ ಕರೋಲ್ ಬಾಘ್ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಮೆಟ್ರೋದಲ್ಲಿ ಜಡೆಜಗಳ; ಚಪ್ಪಲಿ, ವಾಟರ್ ಬಾಟಲ್‌ನಲ್ಲಿ ಹೊಡೆದಾಡಿಕೊಂಡ ರೌಡಿ ಬೇಬೀಸ್!
Ase logo ki wajhse metro () late hoti hai🤦 pic.twitter.com/l7nopyU6UK
— Aman (@imb0yaman)