ರೈಲಡಿ ಸಿಲುಕಿ ಪುಡಿ ಪುಡಿಯಾದ ಬೈಕ್: ಸವಾರ ಕ್ಷಣದಲ್ಲಿ ಪಾರು

By Anusha KbFirst Published Aug 31, 2022, 7:31 PM IST
Highlights

ರೈಲ್ವೆ ಲೆವೆಲ್ ಕ್ರಾಸಿಂಗ್ ನಲ್ಲಿ ನಡೆದ ಅಪಘಾತದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮೈ ಜುಮ್ಮೆನಿಸುವಂತಿದೆ. 

ರೈಲ್ವೆ ಲೆವೆಲ್‌ ಕ್ರಾಸಿಂಗ್‌ನಲ್ಲಿ ಆಗಾಗ ಅನಾಹುತಗಳಾಗುವುದನ್ನು ನೋಡಿದ್ದೇವೆ. ರೈಲು ಬರುತ್ತಿದ್ದರೂ ವೇಗವಾಗಿ ಸಾಗುವ ಧಾವಂತದಲ್ಲಿ ಜೀವವನ್ನು ಅನೇಕರು ಅಪಾಯಕ್ಕೊಡಿದ್ದನ್ನು ನೋಡಬಹುದು. ರೈಲ್ವೆ ಇಲಾಖೆ ಈ ಅಪಾಯಗಳ ಬಗ್ಗೆ ಸದಾಕಾಲ ಮುನ್ನೆಚ್ಚರಿಕೆ ನೀಡುವ ಮೂಲಕ ಅಪಾಯಕ್ಕೊಳಗಾಗದಂತೆ ಜಾಗೃತಿ ಮೂಡಿಸುತ್ತಿರುತ್ತದೆ. ಆದಾಗ್ಯೂ ಕೆಲವರು ವೇಗವಾಗಿ ಹೋಗುವ ಭರದಲ್ಲಿ ಬಾರದ ಲೋಕ ಸೇರುತ್ತಾರೆ. ಅದೇ ರೀತಿ ಇಲ್ಲೊಂದು ಲೆವೆಲ್ ಕ್ರಾಸಿಂಗ್ ವೇಳೆ ನಡೆದ ಅಪಘಾತದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮೈ ಜುಮ್ಮೆನಿಸುವಂತಿದೆ. 

ಭಾರತೀಯ ಪೊಲೀಸ್ ಸೇವೆಯ ಅಧಿಕಾರಿ ಅವನೀಶ್ ಶರ್ಮಾ ಟ್ವಿಟ್ಟರ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ರೈಲ್ವೆ ಲೆವೆಲ್ ಕ್ರಾಸಿಂಗ್‌ನಲ್ಲಿ ಒಂದು ಹಳಿಯ ಮೇಲೆ ರೈಲೊಂದು ಆಗಸ್ಟೇ ಪಾಸ್ ಆಗಿದೆ. ಅದರ ಪಕ್ಕದ ಹಳಿಯಲ್ಲಿ ರೈಲೊಂದು ಬರುತ್ತಿದೆ. ಈ ಹಳಿಗಳ ಪಕ್ಕದಲ್ಲಿ ಹಲವು ಬೈಕ್ ಸವಾರರು ಹಳಿ ಕ್ರಾಸ್‌ ಮಾಡಲು ಬೈಕ್‌ನ್ನು ನಿಲ್ಲಿಸಿಕೊಂಡಿದ್ದಾರೆ. ಹೀಗೆ ನಿಂತವರು ಇನ್ನೊಂದು ರೈಲು ಬರುವ ಹಳಿಯ ಮೇಲೆಯೇ ತಮ್ಮ ವಾಹನಗಳನ್ನು ನಿಲ್ಲಿಸಿಕೊಂಡು ನಿಂತಿದ್ದಾರೆ. ಈ ವೇಳೆ ರೈಲು ದೂರದಲ್ಲಿ ಬರುತ್ತಿರುವುದನ್ನು ನೋಡಿ ಬಹುತೇಕರು ತಮ್ಮ ಬೈಕ್‌ಗಳನ್ನು ಹಿಂದಕ್ಕೆ ಸರಿಸುತ್ತಾರೆ. ಹೀಗೆ ಹಿಂದಕ್ಕೆ ಬೈಕನ್ನು ಸರಿಸುವ ವೇಳೆ ಒಬ್ಬರ ಬೈಕ್ ಟ್ರಾಕ್‌ನಲ್ಲೇ ಸಿಲುಕಿದ್ದು, ಅಷ್ಟರಲ್ಲಿ ರೈಲು ಹತ್ತಿರ ಸಮೀಪಿಸಿದೆ. ಕೂಡಲೇ ಬೈಕ್‌ ಸವಾರ ತಮ್ಮ ಬೈಕ್‌ನ್ನು ಅಲ್ಲೇ ಬಿಟ್ಟು ಹಿಂದೆ ಸರಿದಿದ್ದಾರೆ. ಪರಿಣಾಮ ಇವರು ಕೂದಲೆಳೆ ಅಂತರದಿಂದ ಪ್ರಾಣ ಉಳಿಸಿಕೊಂಡಿದ್ದರೆ, ಅತ್ತ ಅವರ ಬೈಕ್ ರೈಲಿಗೆ ಸಿಲುಕಿ ಪುಡಿ ಪುಡಿ ಆಗಿದೆ. 

इतनी भी क्या जल्दी है. ज़िंदगी आपकी है, बाइक भी आपका ‘था’. pic.twitter.com/BxMPUbQGLM

— Awanish Sharan (@AwanishSharan)

 

ಈ ಘಟನೆಯ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಡಿಯೋ ನೋಡಿದವರು ಆಘಾತ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಶೇರ್ ಮಾಡಿರುವ ಅವನೀಶ್ ಶರ್ಮಾ, ಇಷ್ಟೊಂದು ವೇಗ ಏಕೆ, ಜೀವ ನಿಮ್ಮದು ಬೈಕ್ ಕೂಡ ನಿಮ್ಮದಾಗಿತ್ತು ಎಂದು ಬರೆದಿದ್ದಾರೆ. ಈ ವಿಡಿಯೋವನ್ನು ಎರಡು ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ. ಅಲ್ಲದೇ ಅನೇಕರು ಬೈಕ್ ಚಾಲಕನ ಅಜಾಗರೂಕತೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ರೈಲು ನಿಲ್ದಾಣದಲ್ಲಿ ತಾಯಿಯೊಂದಿಗೆ ಮಲಗಿದ್ದ ಹಸುಗೂಸಿನ ಕಿಡ್ನಾಪ್‌: ದೃಶ್ಯ ಕ್ಯಾಮರಾದಲ್ಲಿ ಸೆರೆ

ಕಳೆದ ಮೇ ತಿಂಗಳಲ್ಲಿ ರಾಜ್ಯದ ಹುಬ್ಬಳ್ಳಿಯಲ್ಲಿ ವ್ಯಕ್ತಿಯೋರ್ವ ಚಲಿಸುತ್ತಿದ್ದ ರೈಲಿಗೆ (Train) ಅಡ್ಡ ನಿಂತು ಆತ್ಮಹತ್ಯೆಗೆ (Suicide) ಯತ್ನಿಸಿದ್ದ. ಪರಿಣಾಮ ರೈಲಿನಡಿ ಸಿಲುಕಿದ ವ್ಯಕ್ತಿಯ ಎರಡೂ ಕಾಲುಗಳು ತುಂಡಾಗಿದ್ದವು. ಹುಬ್ಬಳ್ಳಿಯ (Hubballi) ಕಿಮ್ಸ್ ಹಿಂಭಾಗ ಪ್ರವೇಶ ದ್ವಾರದ ರೈಲ್ವೆ ಮಾರ್ಗದಲ್ಲಿ ಈ ಘಟನೆ ನಡೆದಿತ್ತು. ಶಾಲಿಮಾರ್-ವಾಸ್ಕೋಡಿಗಾಮಾ ರೈಲಿಗೆ ಹೆಗ್ಗೇರಿ ನಿವಾಸಿಯೊರ್ವ ಸಿಲುಕಿದ್ದ, ರೈಲು ಹುಬ್ಬಳ್ಳಿ ನಿಲ್ದಾಣದಿಂದ‌ ಹೊರಟ ನಾಲ್ಕೈದು ನಿಮಿಷದಲ್ಲಿ ಈ ಘಟನೆ ನಡೆದಿದೆ. ರೈಲು ಚಲಿಸುತ್ತಿದ್ದ ಹಳಿ ಮೇಲೆ ವ್ಯಕ್ತಿ ನಿಂತಿರುವುದನ್ನು ಲೋಕೋ ಪೈಲೆಟ್ ಗಮನಿಸಿ ಹಾರ್ನ್ ಮಾಡಿದ್ದಾರೆ. ಆದರೆ ವ್ಯಕ್ತಿ ಹಳಿಯ ಮೇಲಿಂದ ಆಚೆ ಸರಿಯದೇ ಅಲ್ಲೇ ನಿಂತಿದ್ದಾನೆ. ಕೂಡಲೇ ಎಚ್ಚೆತ್ತುಕೊಂಡ ರೈಲ್ವೆ ಸಿಬ್ಬಂದಿ ಚಲಿಸುತ್ತಿದ್ದ ರೈಲನ್ನು ನಿಲ್ಲಿಸಿದ್ದಾರೆ. ಆದರೆ ಎಂಜಿನ್ ಹಾಗೂ ಮೂರ್ನಾಲ್ಕು ಬೋಗಿಗಳು ಕಾಲ ಮೇಲೆ ಹರಿದ ಕಾರಣ ಒಂದು ಕಾಲು ಸಂಪೂರ್ಣ ತುಂಡಾಗಿದ್ದು, ಇನ್ನೊಂದು ಕಾಲು ಅರ್ಧ ತುಂಡಾಗಿದ್ದವು. 

ರೈಲು ಬರುತ್ತಿದ್ದಾಗ ಹಳಿಗೆ ದೂಡಿ ಪತ್ನಿಯ ಹತ್ಯೆ: ಮಕ್ಕಳೆದುರೇ ದುರಂತ

ಬೆಂಕಿ ಬಿದ್ದ ಭೋಗಿಯನ್ನು ಬೇರ್ಪಡಿಸಿದ ಪ್ರಯಾಣಿಕರು

ಕಳೆದ ಮಾರ್ಚ್‌ನಲ್ಲಿ ರೈಲೊಂದರ ಭೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು, ಕೂಡಲೇ ರೈಲು ನಿಲ್ಲಿಸಿದ ಬಳಿಕ ರೈಲಿನಿಂದ ಕೆಳಗಿಳಿದ ಪ್ರಯಾಣಿಕರೆಲ್ಲರೂ ಸೇರಿ ಬೆಂಕಿ ಬಿದ್ದ ಭೋಗಿಯನ್ನು ಇತರ ಬೋಗಿಗಳಿಂದ ಎಳೆದು ಪ್ರತ್ಯೇಕಿಸಿದ್ದರು. ಉತ್ತರಪ್ರದೇಶದ ಮೀರತ್‌(Meerut)ನಲ್ಲಿ ಈ ಘಟನೆ ಸಂಭವಿಸಿತ್ತು, ಸಹರಾನ್‌ಪುರದಿಂದ ದೆಹಲಿಗೆ ಹೋಗುತ್ತಿದ್ದ ಸಹರಾನ್‌ಪುರ-ದೆಹಲಿ ರೈಲಿನ  ಇಂಜಿನ್ ಮತ್ತು ಎರಡು ಭೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಈ ವೇಳೆ ಧೈರ್ಯ ಪ್ರದರ್ಶಿಸಿದ ಪ್ರಯಾಣಿಕರು ಬೆಂಕಿ ಹೊತ್ತಿಕೊಂಡ ಎರಡು ಬೋಗಿಗಳನ್ನು  ಮತ್ತು ಎಂಜಿನ್ ಅನ್ನು ಉಳಿದ ಬೋಗಿಗಳಿಂದ ಪ್ರತ್ಯೇಕಿಸುವ ಸಲುವಾಗಿ ಎಲ್ಲರೂ ಸೇರಿ ಬೋಗಿಗಳನ್ನು ಎಳೆದು ಪ್ರತ್ಯೇಕಗೊಳಿಸುವಲ್ಲಿ ಯಶಸ್ವಿಯಾದರು.
 

click me!