
ಮಧ್ಯಪ್ರದೇಶ(ಆ.31): ತುಂಬು ಗರ್ಭಿಣಿ ಪತ್ನಿಗೆ ಹೊಟ್ಟೆ ನೋವು ಆರಂಭಗೊಂಡಿದೆ. ತಕ್ಷಣವೇ ಆ್ಯಂಬುಲೆನ್ಸ್‌ಗೆ ಕರೆ ಮಾಡಿದ ಪತಿ 2 ಗಂಟೆ ಕಾದರೂ ಆ್ಯಂಬುಲೆನ್ಸ್ ಪತ್ತೆ ಇಲ್ಲ. ಇತ್ತ ಪತ್ನಿ ಆರೋಗ್ಯ ಹದಗೆಡುತ್ತಿದ್ದಂತೆ ಪತಿ ತಳ್ಳೋ ಗಾಡಿಯಲ್ಲಿ ಪತ್ನಿಯ ಮಲಗಿಸಿ 2 ಕಿಲೋಮೀಟರ್‌ಗೆ ಹೆಚ್ಚು ದೂರ ತಳ್ಳುತ್ತಾ ಬಂದಿದ್ದಾರೆ. ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದ ಪತಿಗೆ ಮತ್ತೆ ಆಘಾತ. ಕಾರಣ ಪ್ರಾಥಮಿ ಆರೋಗ್ಯ ಕೇಂದ್ರ ಬಾಗಿಲು ಹಾಕಲಾಗಿತ್ತು. ಇಲ್ಲಿಂದ ಆರೋಗ್ಯ ಕೇಂದ್ರಕ್ಕೆ ಮತ್ತೆ ಗಾಡಿ ತಳ್ಳುತ್ತಾ ಹೋದ ಪತಿಗೆ ಅಲ್ಲಿಯೂ ಅದೇ ಉತ್ತರ. ಆರೋಗ್ಯ ಕೇಂದ್ರವೂ ಬಾಗಿಲು ಮುಚ್ಚಿದೆ. ಇತ್ತ ಪತ್ನಿ ಆರೋಗ್ಯ ಕ್ಷೀಣಿಸಿದೆ. ಸ್ಥಳೀಯರ ನೆರವಿನಿಂದ ಖಾಸಗಿ ಆ್ಯಂಬುಲೆನ್ಸ್ ಬುಕ್ ಮಾಡಿ ಕಮ್ಯೂನಿಟಿ ಹೆಲ್ತ್ ಸೆಂಟರ್‌ಗೆ ದಾಖಲಿಸಲಾಗಿದೆ. ಆದರೆ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದ ಕಾರಣ ಆರೋಗ್ಯ ಹದಗೆಟ್ಟಿತ್ತು. ಹೀಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮಧ್ಯಪ್ರದೇಶದ ದಮೋಹ್ ಜಿಲ್ಲೆಯ ರನೇಹ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇದೀಗ ಪತ್ನಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಇತ್ತ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ. ಈ ಕುರಿತು ಸರ್ಕಾರ ತನಿಖೆಗೆ ಆದೇಶಿಸಿದೆ.
ಕೈಲಾಶ್ ಅಹಿರ್ವಾರ್ ಅನ್ನೋ ವ್ಯಕ್ತಿ ಗರ್ಭಿಣಿ ಪತ್ನಿಯನ್ನು(Pregnant Women) ಆಸ್ಪತ್ರೆ ದಾಖಲಿಸಲು ಹರಸಾಪಟ್ಟ ಘಟನೆಯನ್ನು ಜಿಲ್ಲಾ ಆರೋಗ್ಯ ಅಧಿಕಾರಿ ಗಂಭೀರವಾಗಿ ಪರಿಗಣಿಸಿದ್ದಾರೆ. ಸೂಕ್ತ ಸಮಯದಲ್ಲಿ ಆ್ಯಂಬುಲೆನ್ಸ್ (Ambulance) ಯಾಕ ತಲುಪಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರ(primary health centre), ಸಮುದಾಯ ಆರೋಗ್ಯ ಕೇಂದ್ರ ಯಾಕೆ ಬಾಗಿಲು ಹಾಕಿತ್ತು? ತುರ್ತು ಹಾಗೂ ಆರೋಗ್ಯ ಸೇವೆಯಲ್ಲಿ ಒಂದು ಕ್ಷಣವೂ ವಿಳಂಬವಾಗುವಂತಿಲ್ಲ. ಸೂಕ್ತ ಸಮಯದಲ್ಲಿ ಎಲ್ಲರಿಗೂ ಆರೋಗ್ಯ ಸೇವೆ ಸಿಗಬೇಕು. ಆದರೆ ಇಲ್ಲಿ ಸೇವೆ ಸಿಕ್ಕಿಲ್ಲ. ಇದಕ್ಕೆ ಸಂಬಂಧಪಟ್ಟವರು ಕಠಿಣ ಕ್ರಮಕ್ಕೆ ಅರ್ಹರು ಎಂದು ಬ್ಲಾಕ್ ಮೆಡಿಕಲ್ ಆಫೀಸರ್ ಆರ್‌ಪಿ ಕೊರಿ ಹೇಳಿದ್ದಾರೆ.
ಗರ್ಭಿಣಿಯನ್ನು ತುರ್ತು ಆಸ್ಪತ್ರೆಗೆ(Hospital) ದಾಖಲಿಸಲು ಉಚಿತ ಆ್ಯಂಬುಲೆನ್ಸ್ ಸೇವೆ ಲಭ್ಯವಿದೆ. ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ(Madhya Pradesh) ಗರ್ಭಿಣಿ ತಪಾಸಣೆ, ಚಿಕಿತ್ಸೆ ಕೂಡ ಉಚಿತವಾಗಿದೆ. ಸರ್ಕಾರ ಹಲವು ಸೌಲಭ್ಯಗಳನ್ನು ನೀಡಿದೆ. ಇಷ್ಟೆಲ್ಲೌ ಸೌಲಭ್ಯ ನೀಡಿದರೂ ಅದು ಸಾಮಾನ್ಯ ವ್ಯಕ್ತಿಗೆ ಯಾಕೆ ಸಿಗುತ್ತಿಲ್ಲ ಎಂದು ಆರ್‌ಪಿ ಕೊರಿ ಪ್ರಶ್ನಿಸಿದ್ದಾರೆ.
ಇದೀಗ ಸ್ಥಳೀಯ ಆಡಳಿತ, ಆರೋಗ್ಯ ಸಮುದಾಯದ ವಿರುದ್ದ ಆಕ್ರೋಶ ಹೆಚ್ಚಾಗಿದೆ. ಪತ್ನಿಯನ್ನು ತಳ್ಳೋ ಗಾಡಿಯಲ್ಲಿ ತಳ್ಳುತ್ತಾ ಆಸ್ಪತ್ರೆಗೆ ಬಂದ ಕೈಲಾಶ್ ವಿಡಿಯೋ ಕೂಡ ದಮೋಹ್ ಜಿಲ್ಲೆಯಲ್ಲಿ ವೈರಲ್ ಆಗಿದೆ. ಇದರಿಂದ ಸಾರ್ವಜನಿಕರ ಆಕ್ರೋಶ ಹೆಚ್ಚಾಗಿದೆ.
ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ: ಭರವಸೆ ಕೊಟ್ಟು ಮರೆತ ಸಿಎಂ, ಚುನಾವಣೆ ಬಹಿಷ್ಕಾರದ ಎಚ್ಚರಿಕೆ
ಹಣ ದುರುಪಯೋಗ; ಸೂಕ್ತ ತನಿಖೆಗೆ ಆಗ್ರಹ
ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಸಿರುವ ಹಣ ದುರುಪಯೋಗದ ಬಗ್ಗೆ ಜಿಲ್ಲಾಧಿಕಾರಿಗಳು ತನಿಖಾ ತಂಡವನ್ನು ರಚಿಸಿದ್ದು, ಈ ಪ್ರಕರಣ ಸೂಕ್ತ ತನಿಖೆ ನಡೆಯುವುದಿಲ್ಲ ಎಂಬ ಅನುಮಾನ ಮೂಡಿದ್ದು, ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ಇಲ್ಲದಿದ್ದರೆ ಮುಂದಿನ ವಾರ ಬೆಂಗಳೂರಿನ ವಿಧಾನಸೌಧ ಹಾಗೂ ಮುಖ್ಯಮಂತ್ರಿಗಳ ಮನೆ ಮುಂದೆ ಪ್ರತಿಭಟನಾ ಧರಣಿ ನಡೆಸಲಾಗುವುದು ಎಂದು ಕರುನಾಡ ವಿಜಯಸೇನೆ ಜಿಲ್ಲಾ ಗೌರವಾಧ್ಯಕ್ಷರಾದ ಬಿ.ಬಿ.ಮಹದೇವಯ್ಯ ಎಚ್ಚರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ