
ಬಿಹಾರ: ಮಹಿಳಾ ಪೊಲೀಸ್ ಒಬ್ಬರು ಅತ್ತೆ ಹಾಗೂ ತನ್ನಿಬ್ಬರು ಮಕ್ಕಳನ್ನು ಕೊಂದಿದ್ದು, ಇದರಿಂದ ಸಿಟ್ಟಿಗೆದ್ದ ಪತಿ ಆಕೆಯನ್ನು ಕತ್ತುಸೀಳಿ ಕೊಂದು ನೇಣಿಗೆ ಶರಣಾದ ಆಘಾತಕಾರಿ ಘಟನೆ ಬಿಹಾರದಲ್ಲಿ ನಡೆದಿದೆ. ಕೊಲೆಯಾದ ಪೊಲೀಸ್ ಮಹಿಳಾ ಕಾನ್ಸ್‌ಟೇಬಲ್, ತನ್ನ ಕುಟುಂಬದೊಂದಿಗೆ ಪೊಲೀಸ್ ಕ್ವಾರ್ಟರ್ಸ್‌ನಲ್ಲಿ ವಾಸವಿದ್ದರು. ಬಿಹಾರದ ಭಗಲ್ಪುರದ ಪೊಲೀಸ್ ಲೇನ್‌ನಲ್ಲಿ ಈ ಘಟನೆ ನಡೆದಿದೆ.
ವರದಿಯ ಪ್ರಕಾರ, ನಾಲ್ವರ ಶವ ಕತ್ತು ಸೀಳಿದ ಸ್ಥಿತಿಯಲ್ಲಿ ಹಾಗೂ ಒರ್ವನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಘಟನಾ ಸ್ಥಳದಲ್ಲಿ ಪತ್ತೆಯಾಗಿತ್ತು. ಜೊತೆಗೆ ಮನೆಯಲ್ಲಿ ಒಂದು ಡೆತ್‌ನೋಟ್ ಸಿಕ್ಕಿದ್ದು, ಅದರಲ್ಲಿರುವಂತೆ ಮಹಿಳಾ ಪೊಲೀಸ್ ಪೇಸೆ ತನ್ನ ಅತ್ತೆ ಹಾಗೂ ಇಬ್ಬರು ಮಕ್ಕಳನ್ನು ಕೊಂದಿದ್ದಾಳೆ. ಇದನ್ನು ನೋಡಿ ಸಿಟ್ಟಿಗೆದ್ದ ಆಕೆಯ ಗಂಡ ಆಕೆಯನ್ನು ಕೊಂದು ಬಳಿಕ ನೇಣಿಗೆ ಶರಣಾಗಿದ್ದಾನೆ.
ವಿಜಯಪುರ: ಭೀಮಾತೀರದಲ್ಲಿ ವಕೀಲನ ಹತ್ಯೆ: ಅಕ್ಸಿಡೆಂಟ್ ಮಾಡಿ ಮರ್ಡರ್! ರಹಸ್ಯ ಭೇದಿಸಿದ ಖಾಕಿಪಡೆ
ಆದರೆ ಘಟನಾ ಸ್ಥಳ ನೋಡಿದ ಪೊಲೀಸರು, ಗಂಡನೇ ಎಲ್ಲರನ್ನು ಕೊಲೆಮಾಡಿ ಬಳಿಕ ನೇಣಿಗೆ ಶರಣಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಹೀಗೆ ಕೊಲೆಯಾದ ಮಹಿಳಾ ಪೊಲೀಸ್ ಪೇದೆಯನ್ನು ನೀತು ಕುಮಾರಿ ಎಂದು ಗುರುತಿಸಲಾಗಿದೆ. ಕೊಲೆಯಾದ ಮಕ್ಕಳನ್ನು 4.5 ವರ್ಷದ ಗಂಡು ಮಗು ಶಿವಾಂಶ್ ಹಾಗೂ ಮೂರುವರೆ ವರ್ಷದ ಹೆಣ್ಣು ಮಗು ಶ್ರೇಯಾ ಎಂದು ಗುರುತಿಸಲಾಗಿದೆ. ಹಾಗೆಯೇ 65 ವರ್ಷದ ಅತ್ತೆ ಆಶಾದೇವಿ ಕೂಡ ಕೊಲೆಯಾಗಿದ್ದಾರೆ. ನೀತು ಕುಮಾರಿ ಅವರು ತನ್ನ ಗಂಡ ಪಂಕಜ್, ಅತ್ತೆ ಆಶಾದೇವಿ ಹಾಗೂ ಇಬ್ಬರು ಮಕ್ಕಳ ಜೊತೆ ಒಂದೇ ಮನೆಯಲ್ಲಿ ವಾಸ ಮಾಡುತ್ತಿದ್ದರು. ಆದರೆ ಡೆತ್‌ನೋಟ್‌ನಲ್ಲಿ ಪಂಕಜ್ ಬರೆದಿರುವ ಪ್ರಕಾರ, ನೀತುಕುಮಾರಿ ತನ್ನಿಬ್ಬರು ಮಕ್ಕಳು ಹಾಗೂ ಅತ್ತೆಯನ್ನು ಕೊಲೆ ಮಾಡಿದ್ದಾಳೆ. ಇದರಿಂದ ಸಿಟ್ಟಿಗೆದ್ದು ನೀತುಕುಮಾರಿಯನ್ನು ಕೊಲೆ ಮಾಡಿ ತಾನು ನೇಣಿಗೆ ಶರಣಾಗಿದ್ದಾಗಿ ಪಂಕಜ್ ಡೆತ್‌ನೋಟ್‌ನಲ್ಲಿ ಬರೆದಿದ್ದಾನೆ.
Ramanagara: ಡಿವೋರ್ಸ್ ಬೇಕು ಎಂದ ಹೆಂಡತಿಯ ಉಸಿರನ್ನೇ ನಿಲ್ಲಿಸಿದ ಗಂಡ
ಪಂಕಜ್ ಶವ ಫ್ಯಾನಿಗೆ ನೇತು ಹಾಕಿದ್ದರೆ, ಕುಟುಂಬದ ಇತರ ಸದಸ್ಯರೆಲ್ಲರನ್ನು ಕತ್ತು ಸೀಳಿ ಕೊಲೆ ಮಾಡಲಾಗಿದೆ. ತನ್ನ ಪತ್ನಿ ನೀತುಗೆ ಬೇರೆ ಅನೈತಿಕ ಸಂಬಂಧವೂ ಇತ್ತು ಎಂದು ಪಂಕಜ್ ಆರೋಪಿಸಿದ್ದಾನೆ. ಇದೇ ಕಾರಣಕ್ಕೆ ಆಕೆ ತನ್ನ ಮಕ್ಕಳು ಹಾಗೂ ಅತ್ತೆಯನ್ನು ಕೊಂದಿದ್ದಾಳೆ ಎಂದು ಪಂಕಜ್ ಆರೋಪಿಸಿದ್ದಾನೆ. ಆಗಸ್ಟ್ 13ರ ಮುಂಜಾನೆ 9 ಗಂಟೆಗೆ ಹಾಲು ಮಾರುವ ಹುಡುಗ ಇವರ ಮನೆ ಬಾಗಿಲಿಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಹಲವು ಬಾರಿ ಮನೆ ಬಾಗಿಲು ಬಡಿದರು ಉತ್ತರ ಬಾರದೇ ಇದ್ದಾಗ ಆತ ನೆರೆಹೊರೆಯವ ಗಮನಕ್ಕೆ ಈ ವಿಚಾರ ತಂದಿದ್ದಾನೆ. ಈ ವೇಳೆ ಅನುಮಾನಗೊಂಡು ಮನೆ ಬಾಗಿಲು ಒಡೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಶವಗಳನ್ನು ಮಹಜರು ಮಾಡಿ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ ಜೊತೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ