ಸ್ವಾತಂತ್ರ್ಯೋತ್ಸವದಲ್ಲಿ ಸುದೀರ್ಘ ಭಾಷಣ ದಾಖಲೆ ಬರೆದ ಮೋದಿ: ಇಲ್ಲಿದೆ ಪ್ರಧಾನಿ ಗರಿಷ್ಠ ಸ್ಪೀಚ್ ಲಿಸ್ಟ್!

78ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪ್ರಧಾನಿ ಮೋದಿ ದೇಶದದ ಜನತೆಯನ್ನುದ್ದೇಶಿ ಮಾಡಿದ ಭಾಷಣ ಹೊಸ ದಾಖಲೆ ಬರೆದಿದೆ. ಇದು ಸ್ವಾತಂತ್ರೋತ್ಸವದಲ್ಲಿ ಗರಿಷ್ಠ ಭಾಷಣ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಜವಾಹರ್‌ಲಾಲ್ ನೆಹರೂವಿನಿಂದ ಮೋದಿ ವರೆಗೆ ಗರಿಷ್ಠ ಭಾಷಣ ಮಾಡಿದವರ ಪಟ್ಟಿ ಇಲ್ಲಿದೆ.


ನವದೆಹಲಿ(ಆ.15) ದೇಶ 78ನೇ ಸ್ವಾತಂತ್ರೋತ್ಸವ ಸಂಭ್ರಮದಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಮಾಡಿದ್ದಾರೆ. ಬಳಿಕ ದೇಶದ ಜನರನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ. ಈ ಬಾರಿ ಮೋದಿ ಭಾಷಣ ಹೊಸ ದಾಖಲೆ ಬರೆದಿದೆ. ಕೆಂಪು ಕೋಟೆ ಮೇಲೆ ಮಾಡಿದ ಭಾಷಣ ಅತೀ ಸುದೀರ್ಘ ಸ್ವಾತಂತ್ರೋತ್ಸವದ ಭಾಷಣ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಮೋದಿ ನಿರರ್ಗಳವಾಗಿ 98 ನಿಮಿಷ ಮಾತನಾಡಿದ್ದಾರೆ. ಇದು ಕೆಂಪು ಕೋಟೆ ಮೇಲೆ ನಿಂತು ಮಾಡಿದ ಅತೀ ಸುದೀರ್ಘ ಭಾಷಣ ಎಂದು ದಾಖಲಾಗಿದೆ.

ನರೇಂದ್ರ ಮೋದಿ ಪ್ರಧಾನಿಯಾಗಿ 11ನೇ ಬಾರಿಗೆ ಕೆಂಪು ಕೋಟೆ ಮೇಲೆ ಸ್ವಾತಂತ್ರ ದಿನಾಚರಿಸಿದ್ದಾರೆ. 2016ರಲ್ಲಿ ಮೋದಿ 96 ನಿಮಿಷಗಳ ಕಾಲ ಭಾಷಣ ಮಾಡಿ ದಾಖಲೆ ಬರೆದಿದ್ದರು. ಇದೀಗ ಮೋದಿ ತಮ್ಮ ದಾಖಲೆಯನ್ನು ಮುರಿದಿದ್ದಾರೆ. 98 ನಿಮಿಷ ಭಾಷಣ ಮಾಡಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಪ್ರಧಾನಿ ಮೋದಿ ಕಳೆದ 11 ಸ್ವಾತಂತ್ರೋತ್ಸವ ಭಾಷಣಗಳ ಸರಾಸರಿ 82 ನಿಮಿಷ. ಈ ಸರಾಸರಿಯನ್ನೂ ಮೀರಿ ಮೋದಿ ಈ ಭಾರಿ ಭಾಷಣ ಮಾಡಿದ್ದಾರೆ. ಸ್ವತಂತ್ರ ಭಾರತದ ಇತಿಹಾಸದಲ್ಲೇ  ಸುದೀರ್ಘ ಭಾಷಣ ಮಾಡಿದ ಪ್ರಧಾನಿ ಅನ್ನೋ ಕಿರೀಟ ಗಿಟ್ಟಿಸಿಕೊಂಡಿದ್ದಾರೆ.

Latest Videos

ಈ ಬಾರಿ ಲೆಹೆರಿಯಾ ಟರ್ಬನ್ ಮೂಲಕ ಮಿಂಚಿದ ಪ್ರಧಾನಿ ಮೋದಿ: ಇದರ ಹಿಂದಿದೆ ಕುತೂಹಲ ಕತೆ!

2017ರಲ್ಲಿ ಪ್ರಧಾನಿ ಮೋದಿ ಅತೀ ಕಡಿಮೆ ಸಮಯದಲ್ಲಿ ಭಾಷಣ ಮುಗಿಸಿದ್ದರು. 56 ನಿಮಿಷದಲ್ಲಿ ಮೋದಿ 2017ರ ಸ್ವಾತಂತ್ರೋತ್ಸವ ಭಾಷಣ ಮುಗಿಸಿದ್ದರು. ಇದನ್ನು ಹೊರತುಪಡಿಸಿದರೆ ಇತರ ಎಲ್ಲಾ ಸ್ವಾತಂತ್ರೋತ್ಸವದಲ್ಲಿ ಮೋದಿ 1 ಗಂಟೆಗೂ ಹೆಚ್ಚು ಕಾಲ ಮಾತನಾಡಿದ್ದಾರೆ. ಪ್ರಧಾನಿಯಾಗಿ ಮೊದಲ ಬಾರಿಯ ಸ್ವಾತಂತ್ರೋತ್ಸವದಲ್ಲಿ ಮೋದಿ 65 ನಿಮಿಷ ಭಾಷಣ ಮಾಡಿದ್ದರು.

ಪ್ರಧಾನಿ ಮೋದಿ ಸ್ವಾತಂತ್ರೋತ್ಸವ ಭಾಷಣ
2014: 65 ನಿಮಿಷಗಳ ಕಾಲ ಭಾಷಣ
2015: 88 ನಿಮಿಷಗಳ ಕಾಲ ಭಾಷಣ
2016: 96 ನಿಮಿಷಗಳ ಕಾಲ ಭಾಷಣ
2017: 56 ನಿಮಿಷಗಳ ಕಾಲ ಭಾಷಣ(ಅತೀ ಕಡಿಮೆ ಸಮಯ)
2018: 83 ನಿಮಿಷಗಳ ಕಾಲ ಭಾಷಣ
2019: 92 ನಿಮಿಷಗಳ ಕಾಲ ಭಾಷಣ
2020: 90 ನಿಮಿಷಗಳ ಕಾಲ ಭಾಷಣ
2021: 88 ನಿಮಿಷಗಳ ಕಾಲ ಭಾಷಣ
2022: 74 ನಿಮಿಷಗಳ ಕಾಲ ಭಾಷಣ
2023: 90 ನಿಮಿಷಗಳ ಕಾಲ ಭಾಷಣ
2024: 98  ನಿಮಿಷಗಳ ಕಾಲ ಭಾಷಣ (ಸುದೀರ್ಘ ಭಾಷಣ ದಾಖಲೆ)

1947ರಲ್ಲಿ ನೆಹರೂ 72 ನಿಮಿಷ ಭಾಷಣ
ಬ್ರಿಟಿಷರ ಆಡಳಿತದಿಂದ ಭಾರತ 1947ರಲ್ಲಿ ಮುಕ್ತಿಗೊಂಡಿತು. ಸ್ವತಂತ್ರ ಭಾರತಕ್ಕೆ ಜವಾಹರ್‌ಲಾಲ್ ನೆಹರೂ ಮೊದಲ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಈ ವೇಳೆ ನೆಹರೂ 72 ನಿಮಿಷ ಭಾಷಣ ಮಾಡಿದ್ದರು. 1997ರಲ್ಲಿ ಐಕೆ ಗುಜ್ರಾಲ್ 71 ನಿಮಿಷಗಳ ಕಾಲ ಭಾಷಣ ಮಾಡಿದ್ದರು. ಇದು ಈ ಹಿಂದಿನ ಪ್ರಧಾನಿಗಳ ಗರಿಷ್ಠ ಭಾಷಣವಾಗಿದೆ.

ಕೆಂಪು ಕೋಟೆಯಲ್ಲಿ ರಾರಾಜಿಸಿದ ತಿರಂಗ: ಯೋಧರು, ರೈತರು, ಯುವ ಸಮೂಹಕ್ಕ ಮೋದಿ ಸಲ್ಯೂಟ್!

11ನೇ ಬಾರಿ ಸ್ವಾತಂತ್ರೋತ್ಸವದ ಧ್ವಜಾರೋಹಣ ಮಾಡುವ ಮೂಲಕ ಪ್ರಧಾನಿ ಮೋದಿ, ಮನ್‌ಮೋಹನ್ ಸಿಂಗ್ ದಾಖಲೆ ಮುರಿದಿದ್ದಾರೆ.  ಮನ್‌ಮೋಹನ್ ಸಿಂಗ್ 10 ಬಾರಿ ಧ್ವಜಾರೋಹಣ ಮಾಡಿದ್ದರು. ಗರಿಷ್ಠ ಬಾರಿ ಸ್ವಾತಂತ್ರೋತ್ಸದ ಧ್ವಜಾರೋಹಣ ಮಾಡಿದ ದಾಖಲೆ ಜವಾಹರ್‌ಲಾಲ್ ನೆಹೂರುಗಿದೆ. ನೆಹರೂ 17 ಬಾರಿ ಧ್ವಜಾರೋಹಣ ಮಾಡಿದ್ದರೆ, ಮಾಜಿ ಪ್ರಧಾನಿ ಇಂದಿರಾ ಗಾಂಧಿ 16 ಬಾರಿ ಧ್ವಜಾರೋಹಣ ಮಾಡಿದ್ದಾರೆ.  
 

click me!