ಇದು ದೇಶದ ಇತಿಹಾಸದಲ್ಲಿ ಇತ್ತೀಚೆಗೆ ನಡೆದ ಅತೀ ದೊಡ್ಡ ಜಪ್ತಿ. ಮನೆಯೊಂದರ ಮೇಲೆ ದಾಳಿ ಮಾಡಿದ ಅಧಿಕಾರಿಗಳು ಬರೋಬ್ಬರಿ 88ಕೆಜಿ ಚಿನ್ನ, 19.6 ಕೆಜಿ ಆಭರಣ, 1.3 ಕೋಟಿ ರೂ ನಗದು ಸೇರಿದಂತೆ 100 ಕೋಟಿ ಮೌಲ್ಯದ ವಸ್ತುಗಳು ಸೀಝ್ ಮಾಡಿದ್ದಾರೆ. ಇದರ ಮಾಲೀಕ ಯಾರು?
ಅಹಮ್ಮದಾಬಾದ್(ಮಾ.21) ಭ್ರಷ್ಟಾಚಾರಿಗಳ ಮೇಲೆ ಮೇಳೆ ದಾಳಿ, ಅಕ್ರಮವಾಗಿ ಕ್ರೋಢಿಕರಿಸಿದ ಸಂಪತ್ತಿನ ಮೇಲೆ ದಾಳಿ ಸೇರಿದಂತೆ ಹಲವು ದಾಳಿಗಳ ಕುರಿತು ಸುದ್ದಿಯಾಗಿದೆ. ಆದರೆ ಇದೀಗ ದೇಶದ ಇತಿಹಾಸದಲ್ಲಿ ಇತ್ತೀಚೆಗೆ ನಡೆದ ದಾಳಿ ಹಾಗೂ ಜಪ್ತಿಯಲ್ಲಿ ಇದೀಗ ನಡೆದ ಘಟನೆ ದಾಖಲೆ ಬರೆದಿದೆ. ಕಾರಣ ಅಪಾರ್ಟ್‌ಮೆಂಟ್‌ನ ಮನೆಯೊಂದರ ಮೇಲೆ ಅಧಿಕಾರಿಗಳು ದಾಳಿ ನಡೆಸಿದಾಗ ಅಕ್ಷರಶ ದಂಗಾಗಿದ್ದಾರೆ. ಕಾರಣ ಬರೋಬ್ಬರಿ 88 ಕೆಜಿ ಚಿನ್ನ, 19.6 ಕೆಜಿ ಚಿನ್ನಾಭರಣ, 1.3 ಕೋಟಿ ರೂಪಾಯಿ ನಗದು, 11 ಅತ್ಯಂತ ಲಕ್ಷುರಿ ವಾಚ್ ಸೇರಿದಂತೆ ಒಟ್ಟು 100 ಕೋಟಿಗೂ ಅಧಿಕ ಮೌಲ್ಯದ ವಸ್ತುಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಈ ದಾಳಿ ನಡೆದಿರುವುದು ಅಹಮ್ಮದಾಬಾದ್‌ನಲ್ಲಿ. ಅಹಮ್ಮದಾಬಾದ್ ಭ್ರಷ್ಟಾಚಾರ ನಿಗ್ರ ದಳ(ಎಟಿಎಸ್) ಈ ದಾಳಿ ನಡೆಸಿ ದಾಖಲೆ ಮೊತ್ತದಲ್ಲಿ ಜಪ್ತಿ ಮಾಡಿದೆ. ಪಾಡ್ಲಿಯ ಆವಿಷ್ಕಾರ್ ಅಪಾರ್ಟ್‌ಮೆಂಟ್‌ನಲ್ಲಿರುವ ಮಹೀಂದ್ರ ಹಾಗೂ ಆತನ ಪುತ್ರ ಮೇಘ್ ಶಾಹ ಮನೆ ಮೇಲೆ ದಾಳಿ ನಡೆಸಲಾಗಿದೆ. ಮೇಘ್ ಶಾಹ ಮುಂಬೈನಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹಾಗೂ ಟ್ರೇಡಿಂಗ್ ವ್ಯವಹಾರ ಮಾಡುತ್ತಿದ್ದ. ಮೂಲತಃ ಅಹಮ್ಮದಾಬಾದ್‌ನವರಾಗಿರುವ ತಂದೆ ಮಗ, ಈ ಮನೆಯಲ್ಲಿ ವಾಸವಿರಲಿಲ್ಲ.
ಕಳ್ಳಸಾಗಾಣಿಕೆ ಮೂಲಕ ತಂದಿರುವ ಗೋಲ್ಡ್ ಬಿಸ್ಕೆಟ್‌ಗಳು, ಅಕ್ರಣ ಹಣ, ಇತರ ಚಿನ್ನಾಭರಣಗಳನ್ನು ದಾಳಿ ವೇಳೆ ವಶಪಡಿಸಿಕೊಳ್ಳಲಾಗಿದೆ. ಅಕ್ರಮ ಚಿನ್ನ ಕಳ್ಳಾಸಾಗಾಣಿಕೆ ಕುರಿತು ಮಾಹಿತಿ ಪಡೆದು ಎಟಿಎಸ್ ಪೊಲೀಸರ ತಂಡ ವ್ಯವಸ್ಥಿತವಾಗಿ ಕಾರ್ಯಾಚರಣೆ ನಡೆಸಿತ್ತು. ಕಸ್ಟಮ್ಸ್ ಕಾಯ್ದೆ ಅಡಿಯಲ್ಲಿ ಚಿನ್ನಗಳನ್ನು ಸೀಝ್ ಮಾಡಲಾಗಿದೆ. 88 ಕೆಜಿ ಚಿನ್ನದಲ್ಲಿ 52 ಕೆಜಿ ಚಿನ್ನ ವಿದೇಶದಿಂದ ಕಳ್ಳ ಸಾಗಾಣಿಕೆ ಮೂಲಕ ತಂದ ಬಿಸ್ಕೆಟ್‌ಗಳಾಗಿವೆ ಎಂದು ಎಟಿಎಸ್ ಅಧಿಕಾರಿಗಳು ಹೇಳಿದ್ದಾರೆ.
ಇದೀಗ ಎಟಿಎಸ್ ಅಧಿಕಾರಿಗಳು ಮೇಘ್ ಶಾ ಹಾಗೂ ಮಹೀಂದ್ರ ಅವರ ಕುಟುಂಬಸ್ಥರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಈ ವೇಳೆ ಚಿನ್ನಾಭರಣಗಳ ಕುರಿತು ದಾಖಲೆ ನೀಡಲು ವಿಫಲರಾಗಿದ್ದಾರೆ. ಮಹೀಂದ್ರ ಹಾಗೂ ಮೇಘ ಶಾ ನಾಪತ್ತೆಯಾಗಿದ್ದಾರೆ. ಪೊಲೀಸರು ತೀವ್ರ ಹುಡುಕಾಟ ಆರಂಭಿಸಿದ್ದಾರೆ. ಇದೇ ವೇಳೆ ತನಿಖೆ ತೀವ್ರಗೊಂಡಿದೆ. ಇದರ ಮೂಲ, ಜೊತೆಗೆ ಚಿನ್ನ ಕಳ್ಳ ಸಾಗಾಣಿಕೆ ಜಾಲ ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ದಾರೆ. ಎಟಿಎಸ್ ತನಿಖೆ ತೀವ್ರಗೊಳಿಸಲಾಗಿದೆ.
ಬೆಂಗಳೂರು ಲೋಕಾಯುಕ್ತ ದಾಳಿ: ಡಿಪಿಎಆರ್ ಇಂಜಿನಿಯರ್ ಮನೆಯಲ್ಲಿ ಲಕ್ಷ ಲಕ್ಷ ಹಣ, ಚಿನ್ನಾಭರಣ ಪತ್ತೆ!