ವಾರದಲ್ಲಿ 70 ಗಂಟೆ ಕೆಲಸ ಮಾಡಿ, 90 ಗಂಟೆ ಕೆಲಸ ಮಾಡಿ ಎಂದು ಹಲವು ಕಂಪನಿಗಳು ಸಿಇಒ, ಮುಖ್ಯಸ್ಥರು ಸಲಹೆ ನೀಡಿದ್ದಾರೆ. ಈ ಚರ್ಚೆ ತಣ್ಣಾಗಾದ ಬೆನ್ನಲ್ಲೇ ಬೆಂಗಳೂರಿಗ ಇದೀಗ ವರ್ಕ್ ಲೈಫ್ ಬ್ಯಾಲೆನ್ಸ್‌ಗೆ ಭರ್ಜರಿ ಪರಿಹಾರ ಸೂಚಿಸಿದ್ದಾನೆ. ಈತ ಕೊಟ್ಟ ಐಡಿಯಾಗೆ ಹಲವು ಕಂಪನಿಗಳ ಬಾಸ್ ಕಕ್ಕಾಬಿಕ್ಕಿಯಾಗಿದ್ದಾರೆ.
ಬೆಂಗಳೂರು(ಮಾ.21) ಭಾರತದಲ್ಲಿ ಇತ್ತೀಚೆಗೆ ಭಾರಿ ಚರ್ಚೆಯಾದ ವಿಷಗಳಲ್ಲಿ ವಾರದಲ್ಲಿ ಹೆಚ್ಚುವರಿ ಕೆಲಸ. ಇನ್ಫೋಸಿಸ್ ನಾರಾಯಣ ಮೂರ್ತಿ ವಾರದಲ್ಲಿ 70 ಗಂಟೆ ಕೆಲಸ ಅನಿವಾರ್ಯ ಎಂದಿದ್ದರು. ಇನ್ನು ಎಲ್ ಆ್ಯಂಡ್ ಟಿ ಮುಖ್ಯಸ್ಥರ ಎಸ್ಎನ್ ಸುಬ್ರಹ್ಮಣ್ಯನ್ ವಾರದಲ್ಲಿ 90 ಗಂಟೆ ಕೆಲಸ ಮಾಡಬೇಕು ಎಂದಿದ್ದರು. ಇಷ್ಟೇ ಅಲ್ಲ ಭಾನುವಾರ ಕೂಡ ಕೆಲಸ ಮಾಡಲು ಸೂಚಿಸಿದ್ದರು. ಹೀಗಾಗಿ ವರ್ಕ್ ಲೈಫ್ ಬ್ಯಾಲೆನ್ಸ್ ಕುರಿತು ಭಾರಿ ಚರ್ಚೆಯಾಗಿತ್ತು. ಕೆಲ ಕಂಪನಿ ಸಿಇಒಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರೆ, ಮತ್ತೆ ಕೆಲವರು ಪರವಾಗಿ ಮಾತನಾಡಿದ್ದರು. ಇದರ ನಡುವೆ ಉದ್ಯೋಗಿಗಳ ವರ್ಗ ಭಾರಿ ವಿರೋಧ ವ್ಯಕ್ತಪಡಿಸಿತ್ತು. ಇದೀಗ ಬೆಂಗಳೂರಿಗ ಹೊಸ ಐಡಿಯಾ ಕೊಟ್ಟಿದ್ದಾನೆ. 70, 90 ಗಂಟೆ ವಾರದಲ್ಲಿ ಕೆಲಸ ಮಾಡಿ ಜೀವನ ಸರಿದೂಗಿಸಲು ಸಾಧ್ಯವಾಗುತ್ತಿಲ್ಲ ಎಂದಾದರೆ ಈತನ ಐಡಿಯಾ ಪಾಲಿಸುವುದು ಉತ್ತಮ.
ಬೆಂಗಳೂರಿನ ಹರ್ಷಿತ್ ಮಹಾವರ್ ಅನ್ನೋ ವ್ಯಕ್ತಿ ಲಿಂಕ್ಡ್‌ಇನ್ ಮೂಲಕ ಮಹತ್ವದ ವಿಚಾರ ಹಂಚಿಕೊಂಡಿದ್ದಾನೆ. ಹರ್ಷಿತ್ ಮಹಾವರ್ ಪ್ರಕಾರ, ನೀವು ಕಂಪನಿಗಳ ಬಾಸ್ ಹೇಳಿದಂತೆ, ಕಂಪನಿ ನಿಯಮದ ಪ್ರಕಾರ, ಟಾರ್ಗೆಟ್ ಪೂರ್ಣಗೊಳಿಸಲು ಹೆಚ್ಚು ಹೊತ್ತು ಆಫೀಸ್‌ನಲ್ಲಿ ಕೆಲಸ ಮಾಡಬೇಕಾದ ಅನಿವಾರ್ಯತೆ ಎದುರಾಗುತ್ತಿದೆ. ಹೀಗಾಗಿ ಕೆಲಸ ಹಾಗೂ ವೈಯುಕ್ತಿಕ ಬದುಕಿನಲ್ಲಿ ಸಮತೋಲನ ಕಾಪಾಡಿಕೊಳ್ಳಲು ಕಷ್ಟವಾದರೆ ಸಹದ್ಯೋಗಿಯನ್ನೇ ಮದುವೆಯಾಗಿ ಎಂದು ಹರ್ಷಿತ್ ಮಹಾವರ್ ಸೂಚಿಸಿದ್ದಾನೆ.
ಎಲಾನ್ ಮಸ್ಕ್ ಸೂಚನೆಯಿಂದ ನಾರಾಯಣ ಮೂರ್ತಿ, ಸುಬ್ರಹ್ಮಣ್ಯನ್ ಫುಲ್ ಖುಷ್; ಕಾರಣ 120
ಹರ್ಷಿತ್ ಮಹಾವರ್ ಪ್ರಕಾರ, ಸಹದ್ಯೋಗಿಯನ್ನು ಮದುವೆಯಾಗುವುದರಿಂದ ಇಬ್ಬರು ಹೆಚ್ಚು ಹೊತ್ತು ಆಫೀಸ್‌ನಲ್ಲಿದ್ದರೂ ಏನೂ ಅನಿಸುವುದಿಲ್ಲ. ಇದೊಂದೆ ಅಲ್ಲ, ಹಲವು ಕಾರಣಗಳಿದೆ ಎಂದು ಹೇಳಿದ್ದಾರೆ. ಇಬ್ಬರು ಒಂದೇ ಕ್ಯಾಬ್‌ನಲ್ಲಿ ಕಚೇರಿಗೆ ತೆರಳಬಹುದು. ಮನೆಗೆ ಮರಳಬಹುದು. ಇದರಿಂದ ಹಣ ಉಳಿತಾಯ ಮಾಡಬಹುದು. ಇಬ್ಬರು ಒಂದೇ ಕಚೇರಿಯಲ್ಲಿ ಹೆಚ್ಚು ಹೊತ್ತು ಕೆಲಸ ಮಾಡುವಾಗ ವರ್ಕ್ ಫ್ರಮ್ ಹೋಮ್ ಮಾಡಿದ ಅನುಭವಾಗಲಿದೆ. ಇಷ್ಟೇ ಅಲ್ಲ ಕಚೇರಿಯಲ್ಲಿ ಮತ್ತೊಂದು ಸಂಬಂಧ ಇಟ್ಟುಕೊಳ್ಳುವ ಪ್ರಯತ್ನಕ್ಕೂ ಬ್ರೇಕ್ ಬೀಳಲಿದೆ ಎಂದು ಹರ್ಷಿತ್ ಮಹಾವರ್ ಹೇಳಿದ್ದಾರೆ.
ನೀವು ನಿಮ್ಮ ಸಹದ್ಯೋಗಿಯನ್ನೇ ಮದುವೆಯಾಗಿದ್ದೀರಾ? ಹೀಗಿದ್ದಲ್ಲಿ, ನಿಮ್ಮ ವೃತ್ತಿಪರ ಸಾಧನೆಗೆ ಮುನ್ನಡಿ ಬರೆಯಿರಿ ಎಂದು ಹರ್ಷಿತ್ ಮಹಾವರ್ ಹೇಳಿದ್ದಾರೆ. ಈತನ ಈ ಪೋಸ್ಟ್ ಇದೀಗ ಸಂಚಲನ ಸೃಷ್ಟಿಸಿದೆ ಹಲವರು ಪ್ರತಿಕ್ರಿಯಿಸಿದ್ದಾರೆ. ವಿಚಿತ್ರ ಅನಿಸಿದರೂ ಉತ್ತಮವಾಗಿದೆ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಈ ಸಲಹೆ ಹಲವು ಸಮಸ್ಯೆಗಳಿಗೆ ಉತ್ತರವಾಗಲಿದೆ ನಿಜ. ಆದರೆ ಮನೆಯ ಜಗಳ ಕಚೇರಿಯಲ್ಲೂ ಮುಂದುವರಿಯಲಿದೆ. ಕಚೇರಿ ಜಗಳ ಮನೆಯಲ್ಲೂ ಮುಂದುವರಿಯಲಿದೆ ಎಂದಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಈ ಸಲಹೆ ಒಕೆ, ಎಲ್ಲಾದರೂ ಒಂದು ತಪ್ಪಾದರೂ ವರ್ಕ್ ಲೈಫ್, ಪರ್ಸನಲ್ ಲೈಫ್ ಎಲ್ಲವೂ ಉಲ್ಟಾ ಆಗಲಿದೆ ಎಂದು ಹಲವರು ಎಚ್ಚರಿಕೆ ನೀಡಿದ್ದಾರೆ.
ಒಂದಷ್ಟು ಮಂದಿ ಇದು ಇನ್ನು ಮದುವೆಯಾಗದವರಿಗೆ ಒಕೆ. ಈಗಾಗಲೇ ಮದುವೆಯಾದವರು ಏನು ಮಾಡಬೇಕು ಎಂದು ಪ್ರಶ್ನಿಸಿದ್ದಾರೆ. ಈ ಸಲಹೆಯಂತೆ ಕಚೇರಿಯಲ್ಲೂ ಒಂದು ಮದುವೆಯಾಗವುದು ಉತ್ತಮವೇ ಎಂದು ಪ್ರಶ್ನಿಸಿದ್ದಾರೆ.
ನೀವು ಸ್ಯಾಲರಿ ಉದ್ಯೋಗಿಯಾ? ವಾರದಲ್ಲಿ 80 ಗಂಟೆ ಕೆಲಸ ಸೂಚಿಸಿದ ನೀತಿ ಆಯೋಗ ಮಾಜಿ ಸಿಇಒ