ಒಲಿಂಪಿಕ್‌ನಲ್ಲಿ ನೂರೇ ಗ್ರಾಂ ತೂಕ ಹೆಚ್ಚಳದಿಂದ ಸ್ಪರ್ಧೆಯಿಂದ ವಂಚಿತರಾಗಿ ಪದಕ ಕಳೆದುಕೊಂಡು ದೇಶದೆಲ್ಲೆಡೆ ಸಾಕಷ್ಟು ಸದ್ದು ಮಾಡಿದ್ದ ಕುಸ್ತಿಪಟು ವಿನೇಶ್ ಫೋಗಟ್ ಮತ್ತು ಮತ್ತೊಬ್ಬ ಕುಸ್ತಿಪಟು ಬಜರಂಗ್ ಪುನಿಯಾ ಇಂದು ನಿರೀಕ್ಷೆಯಂತೆ ಕಾಂಗ್ರೆಸ್ ಸೇರಿದ್ದಾರೆ.
ನವದೆಹಲಿ: ಒಲಿಂಪಿಕ್‌ನಲ್ಲಿ ನೂರೇ ಗ್ರಾಂ ತೂಕ ಹೆಚ್ಚಳದಿಂದ ಸ್ಪರ್ಧೆಯಿಂದ ವಂಚಿತರಾಗಿ ಪದಕ ಕಳೆದುಕೊಂಡು ದೇಶದೆಲ್ಲೆಡೆ ಸಾಕಷ್ಟು ಸದ್ದು ಮಾಡಿದ್ದ ಕುಸ್ತಿಪಟು ವಿನೇಶ್ ಫೋಗಟ್ ಮತ್ತು ಮತ್ತೊಬ್ಬ ಕುಸ್ತಿಪಟು ಬಜರಂಗ್ ಪುನಿಯಾ ಇಂದು ನಿರೀಕ್ಷೆಯಂತೆ ಕಾಂಗ್ರೆಸ್ ಸೇರಿದ್ದಾರೆ. ಮುಂದಿನ ತಿಂಗಳು ನಡೆಯಲಿರುವ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಇವರಿಬ್ಬರು ಕುಸ್ತಿಪಟ್ಟುಗಳು ಕಾಂಗ್ರೆಸ್‌ನಿಂದ ಸ್ಪರ್ಧಿಸಲಿದ್ದಾರೆ. ವಿನೇಶ್ ಫೋಗಟ್ ಹರ್ಯಾಣದ ಜೂಲಾನಾದಿಂದ ಸ್ಪರ್ಧೆ ಮಾಡುವ ನಿರೀಕ್ಷೆ ಇದೆ. ಇಲ್ಲಿ ಜನನಾಯಕ್ ಜನತಾ ಪಕ್ಷದ ಅಮರ್‌ಜೀತ್ ಧಂಡಾ ಅವರು ಹಾಲಿ ಶಾಸಕರಾಗಿದ್ದಾರೆ.
ಆದರೆ ಬಜರಂಗ್ ಪೂನಿಯಾ ಪುನಿಯಾ ಅವರು ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರೆ ಎಂಬ ಬಗ್ಗೆ ಇನ್ನು ಸ್ಪಷ್ಟವಾಗಿಲ್ಲ. ಈ ಬಾರಿಯ ಒಲಿಂಪಿಕ್‌ನಲ್ಲಿ ವಿನೇಶ್ ಪೋಗಟ್ ಪದಕ ಗೆಲ್ಲುವ ಅವಕಾಶ ಸ್ವಲ್ಪದರಲ್ಲಿ ಮಿಸ್ ಅಗಿತ್ತು. ಇದಾದ ನಂತರ ವಿನೇಶ್ ತಮ್ಮ ಕುಸ್ತಿ ಬದುಕಿಗೆ ವಿದಾಯ ಹೇಳಿದ್ದಾರೆ. ಇದಕ್ಕೂ ಮೊದಲು ವಿನೇಶ್ ಪೋಗಟ್ ಹಾಗೂ ಭಜರಂಗ್ ಪೂನಿಯಾ ಅವರು ಕುಸ್ತಿ ಸಂಸ್ಥೆಯ ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿ ತೀವ್ರ ಪ್ರತಿಭಟನೆ ನಡೆಸಿದ್ದರು. ಇದರಿಂದಾಗಿ ಬಿಜೆಪಿ ಸಂಸದನಾಗಿದ್ದ ಬ್ರಿಜ್ ಭೂಷಣ್ ಸಿಂಗ್‌ಗೆ ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ಕೈಸರ್‌ಗಂಜ್ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ನಿರಾಕರಿಸಲಾಗಿತ್ತು.
ವಿನೇಶ್ ಫೋಗಟ್ ಕಾಂಗ್ರೆಸ್‌ಗೆ?; ಉರಿಯೋ ಬೆಂಕಿಗೆ ತುಪ್ಪ ಸುರಿದಂತಾದ ಕುಸ್ತಿಪಟು ನಡೆ!
ಕಾಂಗ್ರೆಸ್ ಸೇರುವ ಮೊದಲು ಈ ಇಬ್ಬರು ಕುಸ್ತಿಪಟುಗಳು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ದೆಹಲಿಯಲ್ಲಿ ಭೇಟಿ ಮಾಡಿದ್ದರು. ಪ್ಯಾರಿಸ್ ಒಲಿಂಪಿಕ್‌ನಿಂದ ಭಾರತಕ್ಕೆ ಆಗಮಿಸಿದ ನಂತರ ಈ ಇಬ್ಬರು ನಾಯಕರು ಹರ್ಯಾಣ ಹಾಲಿ ಸಿಎಂ ಭೂಪಿಂದರ್ ಸಿಂಗ್ ಹೂಡಾ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ಪಕ್ಷಕ್ಕೆ ಬರುವ ಎಲ್ಲರನ್ನು ಪಕ್ಷ ಸ್ವಾಗತಿಸುತ್ತದೆ ಎಂದು ಅವರು ಹೇಳಿದ್ದರು. ಹರ್ಯಾಣ ವಿಧಾನಸಭೆ ಚುನಾವಣೆ ಅಕ್ಟೋಬರ್ 5 ರಂದು ನಡೆಯಲಿದೆ.
ವಿನೇಶ್ ಫೋಗಟ್ ಅನರ್ಹಗೊಂಡ ಬೆನ್ನಲ್ಲೇ ಮಹತ್ವದ ನಿರ್ಧಾರ ಪ್ರಕಟಿಸಿದ ಹರ್ಯಾಣ ಸರ್ಕಾರ!