ನಾಗಪುರದ ಪ್ರಸಿದ್ಧ ಚಾಯ್‌ವಾಲಾ, ಬಿಲ್ ಗೇಟ್ಸ್‌ಗೆ ಚಹಾ ಕುಡಿಸಿದ ನಂತರ ಖ್ಯಾತಿಯನ್ನು ಗಳಿಸಿದ ಇವರು, ಈಗ ಕಾರ್ಯಕ್ರಮಗಳಿಗೆ ಹಾಜರಾಗಲು ದೊಡ್ಡ ಮೊತ್ತವನ್ನು ವಿಧಿಸುತ್ತಿದ್ದಾರೆ. ಒಂದು ಕಾರ್ಯಕ್ರಮಕ್ಕೆ ಡಾಲಿ ಕೇಳಿದ ಸಂಭಾವನೆ ಎಲ್ಲರನ್ನೂ ಆಶ್ಚರ್ಯಗೊಳಿಸಿದೆ.
ಮುಂಬೈ: ನಾಗಪುರದ ಫೇಮಸ್ ಚಾಯ್‌ವಾಲಾ ಇದೀಗ ಇವೆಂಟ್ಸ್ ಮತ್ತು ಕಾರ್ಯಕ್ರಮಗಳಿಗೆ ವಿಶೇಷ ಅತಿಥಿಯಾಗಿ ತೆರಳುತ್ತಿದ್ದಾರೆ. ಹೈದರಾಬಾದ್‌ನಲ್ಲಿ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಅವರಿಗೆ ಚಹಾ ಕುಡಿಸಿದ ಮೇಲೆ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದಾರೆ. ಈ ಜನಪ್ರಿಯತೆ ಬಳಿಕ ಕಾರ್ಯಕ್ರಮಗಳಿಗೆ ವಿಶೇಷ ಅತಿಥಿಯಾಗಿ ತೆರಳಲು ದೊಡ್ಡಮಟ್ಟದ ಹಣವನ್ನು ಪಡೆದುಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಓರ್ವ ಫುಡ್ ವ್ಲಾಗರ್, ಚಾಯ್‌ವಾಲಾ ಡಾಲಿ ಒಂದು ಕಾರ್ಯಕ್ರಮಕ್ಕೆ ಎಷ್ಟು ಹಣ ಪಡೆಯುತ್ತಾರೆ ಎಂಬುದನ್ನು ರಿವೀಲ್ ಮಾಡಿದ್ದಾರೆ. ಡಾಲಿ ಕೇಳುವ ಸಂಭಾವನೆ ಕೇಳಿದ್ರೆ ಒಂದು ಕ್ಷಣ ನೀವು ಶಾಕ್ ಆಗೋದು ನಿಶ್ಚಿತವಾಗಿದೆ.
AK Food Vlog ಹೆಸರಿನ ವ್ಲಾಗರ್, ಚಾಯ್‌ವಾಲ್ ಡಾಲಿಯನ್ನು ಆಹ್ವಾನಿಸಿದರೆ ಅವರ ಖರ್ಚುಗಳನ್ನೆಲ್ಲಾ ಕಾರ್ಯಕ್ರಮ ಅಯೋಜಕರು ಪಾವತಿಸಬೇಕಾಗುತ್ತದೆ. ನನ್ನ ಕಾರ್ಯಕ್ರಮಕ್ಕೆ ಆಹ್ವಾನಿಸಲು ಡಾಲಿಯವರಿಗೆ ಕಾಲ್ ಮಾಡಿದ್ದೆ. ಕಾರ್ಯಕ್ರಮಕ್ಕೆ ಬರಲು ಡಾಲಿ ಡಿಮ್ಯಾಂಡ್ ಕೇಳಿದಾಗ ನನಗೆ ನನ್ನ ಅಸ್ತಿತ್ವದ ಬಗ್ಗೆಯೇ ಪ್ರಶ್ನೆ ಉಂಟಾಯ್ತು ಎಂದು ಹೇಳಿಕೊಂಡಿದ್ದಾರೆ.
ಡಾಲಿ ಡಿಮ್ಯಾಂಡ್ ಕೇಳಿದಾಗ, ನಿಜವಾಗ್ಲೂ ನೀವು ಕೇಳುತ್ತಿದ್ದೀರಿ ಎಂದು ಗೊತ್ತಿದೆಯಾ ಎಂದೆ. ಡಾಲಿ ಕೇಳಿದ್ದು ಬರೋಬ್ಬರಿ 2,000 ದಿನಾರ್ ಅಂದ್ರೆ 5 ಲಕ್ಷ ರೂಪಾಯಿ. ಇಷ್ಟು ಹಣ ಮಾತ್ರವಲ್ಲದೇ ಡಾಲಿ ಜೊತೆ ಬರೋ ವ್ಯಕ್ತಿಯ ಖರ್ಚುಗಳನ್ನು ನಾವೇ ಪಾವತಿಸಬೇಕು ಹಾಗೂ ಫೈವ್ ಸ್ಟಾರ್ ಹೋಟೆಲ್‌ನಲ್ಲಿಯೇ ಉಳಿದುಕೊಳ್ಳುವ ವ್ಯವಸ್ಥೆ ಮಾಡಿಕೊಡಬೇಕು. ಇದೆಲ್ಲವೂ ಕೇವಲ ಒಂದು ದಿನದ ಕಾರ್ಯಕ್ರಮಕ್ಕಾಗಿ. ನನ್ನ ಜೊತೆ ಡಾಲಿ ಮ್ಯಾನೇಜರ್ ಮಾತನಾಡಿದ್ದರು ಎಂದು ಫುಡ್ ವ್ಲಾಗರ್ ಹೇಳಿದ್ದಾರೆ.
ಪಾತಾಳಲೋಕ ನೋಡಲು ಹೋದವರಿಗಾಯ್ತು ಕೆಲವೇ ಕ್ಷಣದಲ್ಲಾಯ್ತು ಪಶ್ಚಾತ್ತಾಪ: ಹೊರಬಂತು ಭಯಾನಕ ವಿಡಿಯೋ!
ಇನ್‌ಸ್ಟಾಗ್ರಾಂನಲ್ಲಿ ಈ ವಿಡಿಯೋ ಶೇರ್ ಮಾಡಿಕೊಂಡ ಬಳಿಕ 2 ಕೋಟಿಗೂ ಅಧಿಕ ವ್ಯೂವ್ ಪಡೆದುಕೊಂಡಿದೆ. ಇಷ್ಟು ದಿನ ಡಾಲಿ ಮಾಡುವ ಚಾಯ್ ತಯಾರಿಸುವ ಬಗ್ಗೆ ಜನರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ಫೇಮಸ್ ಆದ ಬಳಿಕ ಡಾಲಿ ಚಾರ್ಜ್ ಕೇಳಿ ಸಾರ್ವಜನಿಕರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಜನಪ್ರಿಯತೆ ಬಳಿಕ ಭಾರತದಲ್ಲಿ ಮಾತ್ರವಲ್ಲದೇ ವಿದೇಶಕ್ಕೂ ತೆರಳುತ್ತಿದ್ದಾರೆ. ಚಾಯ್ ತಯಾರಿಸುವ ಹಾಗೂ ಅವರ ಡ್ರೆಸಿಂಗ್, ಹೇರ್ ಸ್ಟೈಲ್‌ನಿಂದ ಡಾಲಿ ಫೇಮಸ್. ಅದರಲ್ಲಿಯೂ ಬಿಲ್ ಗೇಟ್ಸ್ ಅವರಿಗೆ ಟೀ ಮಾಡಿಕೊಟ್ಟ ನಂತರ ಡಾಲಿ ಜನಪ್ರಿಯತೆ ದ್ವಿಗುಣವಾಗಿದೆ.
ಡಾಲಿ ಚಾಯ್‌ವಾಲ್ ಅವರ ನಿಜವಾದ ಹೆಸರು ಏನು ಎಂದು ಎಲ್ಲಿಯೂ ಹೇಳಿಕೊಂಡಿಲ್ಲ. ತಮ್ಮ ಚಹಾ ಅಂಗಡಿಗೂ ಸಹ "ಚಾಯ್ ಕಿ ಟಪ್ರಿ" ಅಂತ ಹೆಸರಿಟ್ಟಿದ್ದಾರೆ. ಜನಪ್ರಿಯತೆ ಹೆಚ್ಚಾಗುಯತ್ತಲೇ ಸಾರ್ಜಜನಿಕ ಕಾರ್ಯಕ್ರಮಗಳಲ್ಲಿ ಡಾಲಿ ಕಾಣಿಸಿಕೊಳ್ಳುತ್ತಿದ್ದಾರೆ. ಗೂಗಲ್‌ನಲ್ಲಿಯೂ ಡಾಲಿ ಚಾಯ್ ಯಾರು ಎಂದು ನೆಟ್ಟಿಗರು ಹುಡುಕುತ್ತಿರುತ್ತಾರೆ.
ಜಪಾನ್‌ನಲ್ಲಿ ವೃದ್ಧರ ಆರೈಕೆಗೆ ಜನರೇ ಇಲ್ಲ: ಕೇವಲ 6 ತಿಂಗಳಲ್ಲಿ 40000 ಒಬ್ಬಂಟಿ ವೃದ್ಧರ ಸಾವು!