
ಮುಂಬೈ: ಮದುವೆಯಾಗುತ್ತೇನೆ ಎಂದು ದೈಹಿಕ ಸಂಬಂಧ ಬೆಳೆಸಿ ಬಳಿಕ ಮೋಸ ಮಾಡಿದ್ದಾನೆ ಎಂದು ಹೇಳಿ ಲೀವಿಂಗ್ ರಿಲೇಷನ್ ಶಿಪ್ ಪಾರ್ಟನರ್ ಮೇಲೆ ಮಹಿಳೆಯೊಬ್ಬರು ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ಆದರೆ ಆರೋಪಿ ಇದು ಅತ್ಯಾಚಾರ ಪ್ರಕರಣ ಅಲ್ಲ ಸಮ್ಮತಿಯ ಲೈಂಗಿಕ ಸಂಬಂಧ. ಇಬ್ಬರು ಪರಸ್ಪರ ಒಪ್ಪಿ ಲೀವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದು, ಈ ಲೀವಿಂಗ್ ರಿಲೇಷನ್‌ಶಿಪ್‌ಗೆ ಅಗ್ರಿಮೆಂಟ್ ಕೂಡ ಮಾಡಲಾಗಿದೆ ಎಂದು ಲೀವಿಂಗ್ ರಿಲೇಷನ್ ಶಿಪ್‌ನ ಅಗ್ರಿಮೆಂಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದಾರೆ. ಈ ಲೀವಿಂಗ್ ರಿಲೇಷನ್ ಶಿಪ್ ಅಗ್ರಿಮೆಂಟ್( ಒಪ್ಪಂದ) ನೋಡಿದ ನ್ಯಾಯಾಲಯವೂ ಆತನಿಗೆ ಈ ಅತ್ಯಾಚಾರ ಪ್ರಕರಣದಲ್ಲಿ ಜಾಮೀನು ಮಂಜೂರು ಮಾಡಿದೆ. ಮುಂಬೈನಲ್ಲಿ ಈ ಘಟನೆ ನಡೆದಿದ್ದು, ಮಹಿಳೆ ವಯಸ್ಸಾದವರ ಆರೈಕೆ ಮಾಡುವ ಕೇರ್ ಗೀವರ್ ಮಹಿಳೆಯಾಗಿ ಕೆಲಸ ಮಾಡುತ್ತಿದ್ದರೆ, ಪುರುಷ ಸರ್ಕಾರಿ ನೌಕರನಾಗಿದ್ದಾನೆ.
ಲೀವಿಂಗ್ ರಿಲೇಷನ್ ಶಿಪ್ ಅಗ್ರಿಮೆಂಟ್‌ನಲ್ಲಿ ಏನಿದೆ?
ಅಗ್ರಿಮೆಂಟ್‌ನಲ್ಲಿರುವ ಸಹಿ ನನ್ನದಲ್ಲ ಎಂದ ಮಹಿಳೆ
ಆದರೆ ಈ ಲೀವಿಂಗ್ ರಿಲೇಷನ್ ಶಿಪ್ ಅಗ್ರಿಮೆಂಟ್‌ನಲ್ಲಿರುವ ಸಹಿ ನನ್ನದಲ್ಲ ಎಂದು 29 ವರ್ಷದ ಮಹಿಳೆ ಮುಂಬೈ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಆದರೆ ಈಗ ಮುಂಬೈ ನ್ಯಾಯಾಲಯವೂ ಅತ್ಯಾಚಾರ ಪ್ರಕರಣದಲ್ಲಿ ಸರ್ಕಾರಿ ನೌಕರನಿಗೆ ಅಗಸ್ಟ್ 29ರವರೆಗೆ ನಿರೀಕ್ಷಣಾ ಜಾಮೀನು ನೀಡಿದ್ದಾರೆ. ಹೀಗಾಗಿ ಪೊಲೀಸರು ಈಗ ಈ ಲೀವಿಂಗ್ ರಿಲೇಷನ್ ಶಿಪ್ ಒಪ್ಪಂದ ಎಂದು ಕರೆಯಲ್ಪಡುವ ದಾಖಲೆಯ ನಿಜಾಂಶದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.
ಮದ್ವೆ ಆದ್ರೂ ಸಿಂಗಲ್ ಲೈಫ್, ವೀಕೆಂಡಲ್ಲಿ ಮಾತ್ರ ಗಂಡ -ಹೆಂಡ್ತಿ! ಸಂಬಂಧದಲ್ಲಿ ಹೊಸ ಟ್ರೆಂಡ್!
ತನ್ನ ಲೀವಿಂಗ್ ಪಾರ್ಟನರ್ ತನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದರು ಹಾಗೂ ಜೊತೆಯಾಗಿ ವಾಸಿಸುತ್ತಿದ್ದ ಸಮಯದಲ್ಲಿ ಹಲವು ಬಾರಿ ಅವರು ನನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಮಹಿಳೆ ದೂರಿದ್ದಾರೆ. ಆದರೆ ಆರೋಪಿ ವ್ಯಕ್ತಿ ಪರ ವಾದ ಮಂಡಿಸಿದ ವಕೀಲ ಇದೊಂದು ಪ್ರಾಡ್ ಎಂದು ಹೇಳಿದ್ದಾರೆ. ತನ್ನ ಕಕ್ಷಿದಾರನನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಅವರು ಕೆಲ ಪರಿಸ್ಥಿತಿಗಳಿಗೆ ಸಿಲುಕಿ ತೊಂದರೆಗೊಳಗಾಗಿದ್ದಾರೆ. ಅವರು ಲಿವ್ ಇನ್ ಸಂಬಂಧದಲ್ಲಿದ್ದರು. ಹಾಗೂ ಇದಕ್ಕೆ ಇಬ್ಬರ ಒಪ್ಪಿಗೆಯೂ ಇತ್ತು. ಇದಕ್ಕಾಗಿ ಒಪ್ಪಂದವನ್ನು ಮಾಡಲಾಗಿದ್ದು,ಇದಕ್ಕೆ ಮಹಿಳೆ ಸಹಿಯನ್ನು ಹಾಕಿದ್ದಾರೆ ಎಂದು ವ್ಯಕ್ತಿ ಪರ ವಕೀಲ ಸುನೀಲ್ ಪಾಂಡೆ ನ್ಯಾಯಾಲಯಕ್ಕೆ ಹೇಳಿದ್ದಾರೆ.
ಮದ್ವೆಯಾಗಿದ್ರೂ ಲಿವ್ ಇನ್ ರಿಲೇಶನ್‌ಶಿಪ್; ಹಾಲಿ ಗೆಳತಿಯೊಂದಿಗೆ ಸೇರಿ ಮಾಜಿ ಗೆಳತಿಯನ್ನು ಕೊಂದು ಜೈಲುಪಾಲು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ