
20 ವರ್ಷದ ಭಜರಂಗದಳದ ಕಾರ್ಯಕರ್ತನೋರ್ವನನ್ನು ಇನ್ಸ್ಟಾಗ್ರಾಮ್ ಪೋಸ್ಟ್‌ಗೆ ಸಂಬಂಧಿಸಿದಂತೆ ಗುಂಡಿಕ್ಕಿ ಹತ್ಯೆ ಮಾಡಿದಂತಹ ಘಟನೆ ಉತ್ತರ ಪ್ರದೇಶ ಮೊರದಾಬಾದ್‌ನಲ್ಲಿ ನಡೆದಿದೆ. ಸೋಮವಾರ ರಾತ್ರಿ ಕಾಟ್‌ಗರ ಪೊಲೀಸ್ ಠಾಣೆ ವ್ಯಾಪ್ತಿಯ ಬಲದೇವ್‌ಪುರಿ ವಸಂತ್ ವಿಹಾರ್ ಛೇದಕದಲ್ಲಿ ಈ ಘಟನೆ ನಡೆದಿದ್ದು,ಘಟನಾ ಸ್ಥಳಕ್ಕೆ ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಭೇಟಿ ನೀಡಿದ್ದು, ತನಿಖೆ ಆರಂಭಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಟ್‌ಗರ್ ಸರ್ಕಲ್ ಅಧಿಕಾರಿ ವರುಣ್ ಕುಮಾರ್ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದು, ಶಂಕಿತ ಕೊಲೆ ಆರೋಪಿ ಪರಾರಿಯಾಗಿದ್ದು, ಕುಟುಂಬದವವರನ್ನು ವಿಚಾರಣೆ ನಡೆಸಲಾಗುತ್ತಿದೆ. ಆತನ ಪತ್ತೆಗಾಗಿ ಶೋಧ ನಡೆದಿದೆ ಎಂದು ಹೇಳಿದ್ದಾರೆ. 20 ವರ್ಷದ ಶೋಭಿತ್ ಕೊಲೆಯಾದವ. ಈತ ಸೂರಜ್ ನಗರದ ಪೀತಲ್ ಬಸ್ತಿ ನಿವಾಸಿಯಾಗಿದ್ದು, ಈತನನ್ನು ಇನ್ಸ್ಟ್ರಾಮ್ ಪೋಸ್ಟ್‌ಗೆ ಸಂಬಂಧಿಸಿದಂತೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಘಟನೆಯ ಬಳಿಕ ಆಕ್ರೋಶಗೊಂಡ ಭಜರಂಗದಳ ಕಾರ್ಯಕರ್ತರು ಕಾಟ್‌ಗರ್ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದ್ದು, ಕೂಡಲೇ ಆರೋಪಿಯನ್ನು ಬಂಧಿಸುವಂತೆ ಪ್ರತಿಭಟನೆ ನಡೆಸಿದರು. ಪೊಲೀಸರ ಜೊತೆ ಕಾರ್ಯಕರ್ತರು ವಾಗ್ವಾದ ನಡೆಸಿದ್ದರಿಂದ ಪೊಲೀಸ್ ಠಾಣೆಯ ಮುಂದೆ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪ್ರಸ್ತುತ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಸರ್ಕಲ್ ಅಧಿಕಾರಿ ಹೇಳಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಮೃತನ ಅಂತ್ಯಕ್ರಿಯೆ ಸುಸೂತ್ರವಾಗಿ ಸಾಗಲು ಘಟನಾ ಸ್ಥಳದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಶೋಭಿತ್ ಠಾಕೂರ್ ಬಜರಂಗದಳದ ಸೂರಜ್ ನಗರ ಘಟಕದ ಸಂಚಾಲಕನಾಗಿದ್ದ. ಈತ ಸೂರಜ್ ನಗರದ ಗುಲಾಬ್ಬರಿ ಚುಂಗಿ ನಿವಾಸಿ ಘನಶ್ಯಾಮ್ ಠಾಕೂರ್ ಅವರ ಏಕೈಕ ಪುತ್ರನಾಗಿದ್ದ. ಘಟನೆಗೂ ಮೊದಲು ಮಧ್ಯಾಹ್ನ 3 ಗಂಟೆಗೆ ಆತ ತನ್ನ ಸ್ನೇಹಿತ ಗೌತಮ್ ಕಶ್ಯಪ್ ಜೊತೆ ವಾಕ್ ಮಾಡಲು ಹೊಗಿದ್ದ ಎಂದು ತಂದೆ ಘನಶ್ಯಾಮ್ ಹೇಳಿದ್ದಾರೆ.
ಹೀಗೆ ಹೊರಟು ಹೋಗಿದ್ದಾಗ ಇವರಿಗೆ ಇನ್ನಿಬ್ಬರು ಗೆಳೆಯರಾದ ಆದಿತ್ಯ ಹಾಗೂ ರೋಹಿತ್ ಎಂಬುವವರು ಸಿಕ್ಕಿದ್ದಾರೆ. ನಂತರ ನಾಲ್ವರು ಕಟ್ಘರ್ ಪ್ರದೇಶದ ಬಲದೇವಪುರಿ ವಸಂತ ವಿಹಾರ್ ಛೇದಕವನ್ನು ತಲುಪಿದ್ದಾರೆ. ಅಲ್ಲಿಗೆ ಜತಿನ್ ಅಲಿಯಾಸ್ ಲಾಲಾ, ಅಕ್ಕು ಶರ್ಮಾ, ಅವಿನಾಶ್ ಪಾಸಿ, ಮತ್ತು ರೋಹಿತ್ ಜಾತವ್ ಸಂಜೆ 5 ಗಂಟೆಗೆ ಬಂದಿದ್ದು, ಶೋಭಿತ್‌ನನ್ನು ಸುತ್ತುವರೆದಿದ್ದಾರೆ. ನಂತರ ಅಕ್ಕು ಶರ್ಮಾ ಎಂಬಾತ ಶೋಭಿತ್ ಹಣೆಗೆ ಪಿಸ್ತೂಲ್ ಇಟ್ಟು ಗುಂಡು ಹಾರಿಸಿದ್ದಾನೆ ಎಂದು ವರದಿಯಾಗಿದೆ.
ಈ ವಿಚಾರ ತಿಳಿದ ಕೂಡಲೇ ಶೋಭಿತ್ ಅವರ ಸೋದರಸಂಬಂಧಿ ಪ್ರಿನ್ಸ್ ಎಂಬಾತ ಶೋಭಿತ್ ಅವರನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ. ವಿಚಾರ ತಿಳಿದು ಕೋಪಗೊಂಡ ಬಜರಂಗದಳ ಕಾರ್ಯಕರ್ತರು ಕಟ್ಘರ್ ಪೊಲೀಸ್ ಠಾಣೆ ಗೇಟ್ ಬಳಿ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ನಾಲ್ಕು ತಿಂಗಳ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ಹುಡುಗಿಯೊಬ್ಬಳ ವಿಚಾರವಾಗಿ ಅವಿನಾಶ್ ಮತ್ತು ಶೋಭಿತ್ ನಡುವೆ ಜಗಳ ನಡೆದಿತ್ತು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಈ ವಿವಾದವೇ ಕೊಲೆಗೆ ಕಾರಣವಾಯಿತು. ಆರೋಪಿಗಳನ್ನು ಬಂಧಿಸಲು ಪೊಲೀಸ್ ತಂಡಗಳು ಕಾರ್ಯಾಚರಣೆ ನಡೆಸಿವೆ ಎಂದು ನಗರ ಪೊಲೀಸ್ ವರಿಷ್ಠಾಧಿಕಾರಿಕುಮಾರ್ ರನ್ ವಿಜಯ್ ಸಿಂಗ್ ತಿಳಿಸಿದ್ದಾರೆ.
ಇತ್ತ ಒಬ್ಬನೇ ಮಗನ ಸಾವಿನಿಂದ ಶೋಭಿತ್ ಕುಟುಂಬ ಕಣ್ಣೀರು ಹಾಕುತ್ತಿದ್ದಾರೆ. ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಘನಶ್ಯಾಮ್ ಅವರ ಏಕೈಕ ಪುತ್ರ ಶೋಭಿತ್ ತನ್ನ ಸ್ನೇಹಿತನೊಂದಿಗೆ ಮನೆಯಿಂದ ಹೊರಡುತ್ತಿದ್ದಾಗ, ಅವನ ತಾಯಿ ನೀರಜಾ ಹಾಗೂ ಸಹೋದರಿಯರು ಅವನನ್ನು ತಡೆಯಲು ಪ್ರಯತ್ನಿಸಿದರು ಆದರೆ ಅವನು ಸ್ವಲ್ಪ ಸಮಯದ ನಂತರ ಹಿಂತಿರುಗುತ್ತೇನೆ ಎಂದು ಹೇಳಿ ಬೈಕ್ ಸ್ಟಾರ್ಟ್ ಮಾಡಿ ಹೊರಟು ಹೋದ ಎಂದುಅವರು ಕಣ್ಣೀರಿಟ್ಟಿದ್ದಾರೆ.
ಇದನ್ನೂ ಓದಿ: ಪೊಲೀಸರಲ್ಲ ಪಾಪಿಗಳು, ಹಣ್ಣು ಮಾರುತ್ತಿದ್ದ 25ರ ಯುವತಿ ಮೇಲೆ ಅತ್ಯಾಚಾರವೆಸಗಿದ ಇಬ್ಬರು ಪೊಲೀಸರು
ಇದನ್ನೂ ಓದಿ: 35ರ ಯುವತಿ ಮದ್ವೆಯಾಗಿ ಮರುದಿನವೇ 75ರ ವೃದ್ಧ ಸಾವು: ಸಾವಿನ ಬಗ್ಗೆ ಕುಟುಂಬಸ್ಥರ ಅನುಮಾನ
ಇದನ್ನೂ ಓದಿ: ನಿಮ್ಮಿಂದಾಗಿ ನಾನು ನನ್ನ ಗಂಡ ಜೊತೆಗಿದ್ದೇವೆ: ಮೇಕಪ್ ಆರ್ಟಿಸ್ಟ್ ಮಾತಿಗೆ ಶಾಕ್ ಆದ ಐಶ್ ರೈ
ಇದನ್ನೂ ಓದಿ: ಸಾಹಸದ ವೇಳೆ ಕೆಳಗೆ ಬಿದ್ದು ಸರ್ಕಸ್ ಕಲಾವಿದೆ ಮರೀನಾ ಸಾವು
ಇದನ್ನೂ ಓದಿ: 35 ಕೋಟಿ ಮೌಲ್ಯದ ಡ್ರಗ್ಸ್‌ನೊಂದಿಗೆ ಸಿಕ್ಕಿಬಿದ್ದ 'ಸ್ಟೂಡೆಂಟ್ ಆಫ್ ದಿ ಇಯರ್' ನಟ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ