ಚಾಲಕನ ನಿಯಂತ್ರಣ ತಪ್ಪಿ 19,400 ವಾಹನ ಅಪಘಾತ: ರಿಷಭ್‌ ಪಂತ್‌ ಅಪಘಾತದ ಸುದ್ದಿ ಬೆನ್ನಲ್ಲೇ ವರದಿ

Published : Dec 31, 2022, 11:16 AM IST
ಚಾಲಕನ ನಿಯಂತ್ರಣ ತಪ್ಪಿ 19,400 ವಾಹನ ಅಪಘಾತ: ರಿಷಭ್‌ ಪಂತ್‌ ಅಪಘಾತದ ಸುದ್ದಿ ಬೆನ್ನಲ್ಲೇ ವರದಿ

ಸಾರಾಂಶ

ಚಾಲಕನ ನಿಯಂತ್ರಣ ತಪ್ಪಿ 19,400 ವಾಹನ ಅಪಘಾತ ನಡೆದಿದ್ದು, ಕ್ರಿಕೆಟಿಗ ರಿಷಭ್‌ ಪಂತ್‌ ರಸ್ತೆ ಅಪಘಾತದ ಸುದ್ದಿ ಬೆನ್ನಲ್ಲೇ ಈ ವರದಿ ಪ್ರಕಟವಾಗಿದೆ. ಈ ಪೈಕಿ ಶೇ.21.2 ಹಿಂದಿನಿಂದ ಗುದ್ದಿ ಅಪಘಾತ ಸಂಭವಿಸಿದ್ದು, ಶೇ.18.5 ಪ್ರಕರಣಗಳಲ್ಲಿ ಮುಂಭಾಗದಿಂದ ಬಂದು ಡಿಕ್ಕಿ ಹೊಡೆದಿದ್ದಾರೆ. ಹಾಗೆ, ಶೇ.16.8 ಹಿಟ್‌ ಆ್ಯಂಡ್‌ ರನ್‌ ಪ್ರಕರಣಗಳಿದ್ದರೆ, ಶೇ.11.9 ರಷ್ಟು ಅಪಘಾತಗಳು ಪಕ್ಕದಿಂದ ಬಂದು ಡಿಕ್ಕಿ ಹೊಡೆದು ಸಂಭವಿಸಿದೆ.  

ನವ​ದೆ​ಹ​ಲಿ: 2021ನೇ ಸಾಲಿ​ನಲ್ಲಿ ದೇಶ​ದಲ್ಲಿ (Country) ಒಟ್ಟು 4,12,432 ರಸ್ತೆ ಅಪ​ಘಾ​ತ​ (Road Accident) ನಡೆದಿದ್ದು, ಇದರಲ್ಲಿ 19400 ಅಪಘಾತಗಳು (Accidents) ಚಾಲಕನ ನಿಯಂತ್ರಣ ತಪ್ಪಿ (Driver Lost Control)ಸಂಭವಿಸಿದ್ದು ಎಂದು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಚಿವಾಲಯದ (Ministry of Road Transport and Highays) (MoRTH) ವರದಿ ಹೇಳಿದೆ. ಕ್ರಿಕೆಟಿಗ ರಿಷಭ್‌ ಪಂತ್‌ (Rishabh Pant) ವಾಹನ ಅಪಘಾತಕ್ಕೀಡಾದ ಬೆನ್ನಲ್ಲೇ ಪ್ರಕಟವಾಗಿರುವ ವರದಿ (Report) ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಅತಿಯಾದ ವೇಗ, ವಾಹನ ಚಲಾಯಿಸುವಾಗ ಬೇರೆಡೆ ಗಮನ, ವಾಹನದ ನಿಯಂತ್ರಣ ತಪ್ಪುವುದು, ತಿರುವನ್ನು ತಪ್ಪಾಗಿ ನಿರ್ಣಯಿಸುವುದು ಮೊದಲಾದವುಗಳು ಅಪಘಾತಕ್ಕೆ ಪ್ರಮುಖ ಕಾರಣವಾಗಿದ್ದು, ಈ ಕಾರಣಗಳಿಂದಾಗಿ 19,478 ರಸ್ತೆ ಅಪಘಾತಗಳು ಸಂಭವಿಸಿದೆ. ಈ ಅಪಘಾತಗಳಲ್ಲಿ ಒಟ್ಟು 9,150 ಜನರು ಬಲಿಯಾಗಿದ್ದು, 19,077 ಜನರು ಗಾಯಗೊಂಡಿದ್ದಾರೆ ಎಂದು ‘ಭಾರತದಲ್ಲಿ ರಸ್ತೆ ಅಪಘಾತಗಳು- 2021’ ಎಂಬ ವರದಿಯಲ್ಲಿ ಪ್ರಕಟಿಸಲಾಗಿದೆ.

ಅಪಘಾತವಾದವರಲ್ಲಿ ಶೇ. 21.2ರಷ್ಟು ಹಿಂದಿನಿಂದ ವಾಹನ ಗುದ್ದಿದ ಪ್ರಕರಣಗಳಾಗಿವೆ. ಶೇ.18.5ರಷ್ಟು ಪ್ರಕರಣಗಳಲ್ಲಿ ಮುಂಭಾಗದಿಂದ ವಾಹನಗಳು ಡಿಕ್ಕಿಯಾಗಿ ಅಪಘಾತವಾಗಿದೆ. ಸುಮಾರು ಶೇ.16.8 ಹಿಟ್‌ ಆ್ಯಂಡ್‌ ರನ್‌ ಪ್ರಕರಣಗಳು ಶೇ.11.9 ರಷ್ಟು ಪಕ್ಕದಿಂದ ಬಂದು ವಾಹನ ಗುದ್ದಿದ ಪ್ರಕರಣಗಳು ವರದಿಯಾಗಿವೆ ಎಂದು ವರದಿ ತಿಳಿಸಿದೆ.

ಇದನ್ನು ಓದಿ: ಭಾರತದಲ್ಲಿ ಸೀಟ್‌ ಬೆಲ್ಟ್‌ ಧರಿಸದೇ 16,397, ಹೆಲ್ಮೆಟ್‌ ಧರಿಸದೇ 47,000 ಸಾವು

ಭಾರತದಲ್ಲಿ ಸೀಟ್‌ ಬೆಲ್ಟ್‌ ಧರಿಸದೇ 16,397, ಹೆಲ್ಮೆಟ್‌ ಧರಿಸದೇ 47,000 ಸಾವು

ಇನ್ನು, ಇದಕ್ಕೂ ಮುನ್ನ ಕಳೆದ ವರ್ಷ ದೇಶಾದ್ಯಂತ 4.12 ಲಕ್ಷ ರಸ್ತೆ ಅಪಘಾತ ಸಂಭವಿಸಿದ್ದು ಇದರಲ್ಲಿ 1.53 ಲಕ್ಷ ಜನರು ಮೃತಪಟ್ಟಿದ್ದಾರೆ, ಈ ಪೈಕಿ ಹೆಲ್ಮೆಟ್‌ ಧರಿಸದೇ 46,593 ಮತ್ತು ಸೀಟ್‌ ಬೆಲ್ಟ್‌ ಧರಿಸದೆ 16,397 ಜನರು ಬಲಿಯಾಗಿದ್ದಾರೆ ಎಂಬ ಆಘಾತಕಾರಿ ಮಾಹಿತಿಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ವರದಿ ತಿಳಿಸಿದೆ. ಇದು ವಾಹನ ಪ್ರಯಾಣದ ವೇಳೆ ಕಡ್ಡಾಯ ಸಂಚಾರ ನಿಯಮಗಳನ್ನು ಪಾಲಿಸುವುದರ ಅಗತ್ಯವನ್ನು ಮತ್ತೊಮ್ಮೆ ಸಾರಿ ಹೇಳಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ಮಹಾರಾಷ್ಟ್ರದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಟಾಟಾ ಸನ್ಸ್‌ ಮಾಜಿ ಮುಖ್ಯಸ್ಥ ಸೈರಸ್‌ ಮಿಸ್ತ್ರಿ ಕೂಡಾ ಇದೇ ರೀತಿ ಕಾರಿನಲ್ಲಿ ಸೀಟ್‌ಬೆಲ್ಟ್‌ ಧರಿಸದ ಕಾರಣದಿಂದಾಗಿಯೇ ಪ್ರಾಣ ಕಳೆದುಕೊಂಡಿದ್ದರು.
ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಬಿಡುಗಡೆ ಮಾಡಿರುವ ‘ಭಾರತದಲ್ಲಿನ ರಸ್ತೆ ಅಪಘಾತ- 2021’ ವರದಿ ಅನ್ವಯ ಕಳೆದ ವರ್ಷ ದೇಶದಲ್ಲಿ ಒಟ್ಟು 4,12,432 ಅಪಘಾತಗಳು ಸಂಭವಿಸಿವೆ. ಇದರಲ್ಲಿ 1,53,972 ಜನರು ಮೃತಪಟ್ಟಿದ್ದರೆ, 3,84,448 ಜನರು ಗಾಯಗೊಂಡಿದ್ದಾರೆ.

ಹೆಲ್ಮೆಟ್‌ ಶಾಕ್‌:
ಕಳೆದ ವರ್ಷ 46593 ಬೈಕ್‌ ಸವಾರರು ಹೆಲ್ಮೆಟ್‌ ಧರಿಸದ ಕಾರಣ ತೀವ್ರ ಗಾಯಗೊಂಡು ಅಪಘಾತದಲ್ಲಿ ಬಲಿಯಾಗಿದ್ದಾರೆ. ಇದರಲ್ಲಿ 32,877 ಜನರು ಬೈಕ್‌ ಚಾಲಕರಾಗಿದ್ದರೆ, 13,716 ಜನರು ಹಿಂಬದಿ ಸವಾರರು. ಹೆಲ್ಮೆಟ್‌ ಧರಿಸದ ಕಾರಣ 93,763 ಜನರು ಗಾಯಗೊಂಡಿದ್ದಾರೆ.

ಇದನ್ನೂ ಓದಿ: ರಸ್ತೆ ಅಪಘಾತದಲ್ಲಿ ಸಾವು: ದೇಶದಲ್ಲೇ ಬೆಂಗಳೂರು ನಂ.3..!

ಸೀಟ್‌ ಬೆಲ್ಟ್‌ :
ಇನ್ನು ಕಾರಿನಲ್ಲಿ ಸೀಟ್‌ಬೆಲ್ಟ್‌ ಧರಿಸದ ಕಾರಣ ಕಳೆದ ವರ್ಷ 16,397 ಜನರು ಪ್ರಾಣ ಕಳೆದುಕೊಂಡಿದ್ದರೆ, 39,231 ಜನರು ಗಾಯಗೊಂಡಿದ್ದಾರೆ ಎಂದು ವರದಿ ತಿಳಿಸಿದೆ. ಹೆಲ್ಮೆಟ್‌ ಧರಿಸದೇ ವಾಹನ ಚಲಾಯಿಸುವುದು ಮತ್ತು ಸೀಟ್‌ ಬೆಲ್ಟ್‌ ಧರಿಸದೆ ವಾಹನ ಚಲಾಯಿಸುವುದು ವಾಹನ ಅಪಘಾತಕ್ಕೆ ಕಾರಣವಾಗುವುದಿಲ್ಲವಾದರೂ, ಇಂಥ ಸುರಕ್ಷತಾ ಕ್ರಮಗಳ ಪಾಲನೆಯಿಂದ ಅಪಘಾತದ ವೇಳೆ ದೇಹಕ್ಕೆ ದೊಡ್ಡಮಟ್ಟದ ಹಾನಿಯಾಗುವುದು ತಪ್ಪಿ, ಜೀವ ಉಳಿಸಿಕೊಳ್ಳುವುದು ಸಾಧ್ಯವಾಗುತ್ತದೆ ಎಂದು ವರದಿ ಹೇಳಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ
ಕಾರವಾರ ಜೈಲಲ್ಲಿ ಡ್ರಗ್ಸ್‌ಗಾಗಿ ಜೈಲ‌ರ್ ಮೇಲೆ ಕೈದಿಗಳಿಂದ ಹಲ್ಲೆ: ಬೆಂಗಳೂರು ಜೈಲೊಳಗೆ ಸಿಗರೇಟ್ ಸಾಗಿಸಲೆತ್ನಿಸಿ ಸಿಕ್ಕಿಬಿದ್ದ ವಾರ್ಡನ್