ಮಾರ್ಚ್‌ನಲ್ಲಿ ಹೊಸ ಸಂಸತ್‌ ಭವನ ಉದ್ಘಾಟನೆ: ಹಳೆಯ ಸಂಸತ್‌ ಭವನದಲ್ಲೇ ಬಜೆಟ್‌ ಮಂಡನೆ..!

By Kannadaprabha NewsFirst Published Dec 31, 2022, 9:30 AM IST
Highlights

ಮಾರ್ಚ್‌ನಲ್ಲಿ ಹೊಸ ಸಂಸತ್‌ ಭವನ ಉದ್ಘಾಟನೆಯಾಗುತ್ತಿದ್ದು, ಬಜೆಟ್‌ ಅಧಿವೇಶನದ 2ನೇ ಭಾಗ ಹೊಸ ಕಟ್ಟಡದಲ್ಲಿ ನಡೆಯಲಿದೆ ಎನ್ನಲಾಗುತ್ತಿದೆ. ಆದರೆ, ಬಜೆಟ್‌ ಮಂಡನೆ ಹಳೆಯ ಸಂಸತ್‌ ಭವನದಲ್ಲೇ ನಡೆಯಲಿದೆ. 

ನವದೆಹಲಿ: ಮುಂಬರುವ ಬಜೆಟ್‌ ಅಧಿವೇಶನ (Budget Session) ನೂತನ ಸಂಸತ್‌ ಭವನದಲ್ಲೇ (New Parliament Building) ಆಗಬಹುದು ಎಂಬ ನಿರೀಕ್ಷೆಗಳು ಹುಸಿಯಾಗಿವೆ. ಬೃಹತ್‌ ಕಟ್ಟಡದಲ್ಲಿ ಇನ್ನೂ ಕೆಲ ಕಾಮಗಾರಿಗಳು ಬಾಕಿ ಉಳಿದಿರುವ ಕಾರಣ, ಜನವರಿ ಅಂತ್ಯದ ಬದಲು ಮಾರ್ಚ್‌ (March) ವೇಳೆ ಹೊಸ ಕಟ್ಟಡ (Building) ಉದ್ಘಾಟನೆಗೊಳ್ಳಬಹುದು ಎಂದು ಕೇಂದ್ರ ಸರ್ಕಾರದ (Central Government) ಮೂಲಗಳು ತಿಳಿಸಿವೆ. ಹೀಗಾಗಿ ಬಜೆಟ್‌ ಅಧಿವೇಶನದ ಮೊದಲ ಭಾಗ ಹಳೆಯ ಸಂಸತ್‌ ಭವನದಲ್ಲೇ ನಡೆಯಲಿದ್ದು, ವಿರಾಮದ ನಂತರ ನಡೆಯುವ 2ನೇ ಅವಧಿ ಹೊಸ ಕಟ್ಟಡದಲ್ಲಿ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಬಜೆಟ್‌ ಅಧಿವೇಶನ ಸಾಂಪ್ರದಾಯಿಕವಾಗಿ 2 ಹಂತಗಳಲ್ಲಿ ನಡೆಯುತ್ತದೆ. ಮೊದಲ ಹಂತ ಜನವರಿ 30 ಅಥವಾ 31ರಂದು ರಾಷ್ಟ್ರಪತಿಗಳು (President) ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡುವುದರೊಂದಿಗೆ ಆರಂಭವಾಗುತ್ತದೆ. ಫೆಬ್ರವರಿ 1ರಂದು ಕೇಂದ್ರ ಬಜೆಟ್‌ (Central Budget) ಮಂಡಿಸಲಾಗುತ್ತದೆ. ನಂತರ ಅಧಿವೇಶನವನ್ನು ಫೆಬ್ರವರಿ 8 ಅಥವಾ 9 ರಂದು ಮುಕ್ತಾಯಗೊಳಿಸಲಾಗುತ್ತದೆ. 2ನೇ ಅವಧಿ ಮಾರ್ಚ್‌ 2ನೇ ವಾರದಲ್ಲಿ ಆರಂಭವಾಗಿ ಮೇ ಮೊದಲ ವಾರದವರೆಗೂ ನಡೆಯುತ್ತದೆ.

ಇದನ್ನು ಓದಿ: ಗಣರಾಜ್ಯೋತ್ಸವ ಪರೇಡ್‌ಗೆ ಸೆಂಟ್ರಲ್‌ ವಿಸ್ತಾ ಯೋಜನೆಯ ಕಾರ್ಮಿಕರಿಗೆ ಆಹ್ವಾನ: ಪ್ರಧಾನಿ ಮೋದಿ!

ಕಳೆದ ತಿಂಗಳು, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಹೊಸ ಸಂಸತ್ತಿನ ಕಟ್ಟಡದ ನಿರ್ಮಾಣ ಕಾರ್ಯವು ಅತ್ಯಂತ ವೇಗದಲ್ಲಿ ನಡೆಯುತ್ತಿದೆ ಎಂದು ಹೇಳಿದ್ದರು .ಹೊಸ ಸಂಸತ್‌ ಭವನವೂ ಸಹ ಸೆಂಟ್ರಲ್‌ ವಿಸ್ತಾ ಯೋಜನೆಯ ಭಾಗವಾಗಿದೆ. 2020ರ ಡಿಸೆಂಬರ್‌ನಲ್ಲಿ ಪ್ರಧಾನಿ ಮೋದಿ ಇದಕ್ಕೆ ಚಾಲನೆ ನೀಡಿದ್ದರು. ಟಾಟಾ ಪ್ರಾಜೆಕ್ಟ್ ಲಿಮಿಟೆಡ್‌ನಿಂದ ನಿರ್ಮಿಸಲಾಗುತ್ತಿರುವ ಹೊಸ ಕಟ್ಟಡವು ಭಾರತದ ಪ್ರಜಾಪ್ರಭುತ್ವ ಪರಂಪರೆಯನ್ನು ಪ್ರದರ್ಶಿಸಲು ಭವ್ಯವಾದ ಸಂವಿಧಾನ ಸಭಾಂಗಣ, ಸಂಸತ್ತಿನ ಸದಸ್ಯರ ವಿಶ್ರಾಂತಿ ಕೋಣೆ, ಗ್ರಂಥಾಲಯ, ಬಹು ಕಮಿಟಿ ಕೊಠಡಿಗಳು, ಊಟದ ಪ್ರದೇಶಗಳು ಮತ್ತು ಸಾಕಷ್ಟು ಪಾರ್ಕಿಂಗ್ ಸ್ಥಳವನ್ನು ಹೊಂದಿರುತ್ತದೆ.

ಸೆಂಟ್ರಲ್ ವಿಸ್ಟಾ ಯೋಜನೆಯು ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಫಾರ್ ಆರ್ಟ್ಸ್, ಕಾಮನ್ ಸೆಂಟ್ರಲ್ ಸೆಕ್ರೆಟರಿಯೇಟ್, ಸೆಂಟ್ರಲ್ ವಿಸ್ಟಾ ಅವೆನ್ಯೂ ಮತ್ತು ಕೊನೆಯದಾಗಿ ನೂತನ ಪಾರ್ಲಿಮೆಂಟ್ ಕಟ್ಟಡದ ನಾಲ್ಕು ಪ್ರಮುಖ ಸ್ಥಳಗಳನ್ನು ಅಭಿವೃದ್ಧಿಪಡಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ಪ್ರಸ್ತುತ ಕಟ್ಟಡವು 1927 ರಲ್ಲಿ ಪ್ರಾರಂಭವಾಗಿದ್ದು, ಅಂದರೆ ಇದು ಸುಮಾರು ನೂರು ವರ್ಷಗಳಷ್ಟು ಹಳೆಯದಾಗಿದೆ ಮತ್ತು ಅದರಲ್ಲಿ ಕೆಲಸ ಮಾಡುವ ಜನರ ಸಂಖ್ಯೆ ಮತ್ತು ಸಂದರ್ಶಕರ ಸಂಖ್ಯೆಯು ಹಲವಾರು ಪಟ್ಟು ಹೆಚ್ಚಾಗಿದೆ. ಈ ಹಿನ್ನೆಲೆ ನೂತನ ಸಂಸತ್ತಿನ ಕಟ್ಟಡದ ಅವಶ್ಯಕತೆಯಿದೆ.

ಇದನ್ನೂ ಓದಿ: ಹಳೆಯ ಸಂಸತ್‌ ಭವನ ಇನ್ನು ಇತಿಹಾಸ ಪುಟಕ್ಕೆ? ಚಳಿಗಾಲದ ಕಲಾಪಕ್ಕೆ ಮುನ್ನ ಹೊಸ ಕಟ್ಟಡ ಸಿದ್ಧ?

ನೂತನ ಸಂಸತ್ ಭವನದ ಬಗ್ಗೆ
ಹೊಸ ಕಟ್ಟಡವು ಭಾರತದ ಆಡಳಿತ ರಾಜಧಾನಿಯಾದ ಸೆಂಟ್ರಲ್ ವಿಸ್ಟಾದ ಪುನರಾಭಿವೃದ್ಧಿ ಯೋಜನೆಯ ಭಾಗವಾಗಿದೆ. ಈ ಯೋಜನೆಯು ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‌ವರೆಗಿನ 3-ಕಿಮೀ ರಾಜಪಥವನ್ನು ನವೀಕರಿಸುವುದು, ಪ್ರಧಾನ ಮಂತ್ರಿಯ ಹೊಸ ಕಚೇರಿ ಮತ್ತು ನಿವಾಸ ಹಾಗೂ ಹೊಸ ಉಪರಾಷ್ಟ್ರಪತಿ ಎನ್‌ಕ್ಲೇವ್ ಮತ್ತು ಸಾಮಾನ್ಯ ಕೇಂದ್ರ ಸಚಿವಾಲಯವನ್ನು ನೋಡುತ್ತದೆ. ಟಾಟಾ ಪ್ರಾಜೆಕ್ಟ್ ಲಿಮಿಟೆಡ್‌ನಿಂದ ನಿರ್ಮಿಸಲಾಗುತ್ತಿರುವ ಹೊಸ ಕಟ್ಟಡವು ಸಂಸತ್ತಿನ ಸದಸ್ಯರಿಗೆ ವಿಶ್ರಾಂತಿ ಕೋಣೆ, ಗ್ರಂಥಾಲಯ, ಬಹು ಕಮಿಟಿ ಕೊಠಡಿಗಳು, ಊಟದ ಪ್ರದೇಶಗಳು ಮತ್ತು ಸಾಕಷ್ಟು ಪಾರ್ಕಿಂಗ್ ಸ್ಥಳವನ್ನು ಸಹ ಹೊಂದಿದೆ.

click me!