ದೇವರ ಪಾಲಿಗೆ ಎಲ್ಲರೂ ಒಂದೇ; ಜಾತಿ ಸೃಷ್ಟಿ ಮಾಡಿದ್ದು ಧರ್ಮ ಗುರುಗಳು: ಮೋಹನ್‌ ಭಾಗವತ್‌

By Kannadaprabha News  |  First Published Feb 6, 2023, 10:48 AM IST

ದೇವರ ಮುಂದೆ ಎಲ್ಲರೂ ಸಮಾನರು. ಆತನ ಮುಂದೆ ಜಾತಿ, ಪಂಗಡ ಎಂಬುದೆಲ್ಲಾ ಇಲ್ಲ. ಇದು ಸೃಷ್ಟಿಯಾಗಿದ್ದು ಧರ್ಮ ಗುರುಗಳಿಂದ. ಇದು ತಪ್ಪು ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದಾರೆ.


ಮುಂಬೈ (ಫೆಬ್ರವರಿ 6, 2023) : ದೇಶದಲ್ಲಿ ಆತ್ಮಸಾಕ್ಷಿ ಮತ್ತು ಪ್ರಜ್ಞೆ ಎಲ್ಲವೂ ಒಂದೇ, ಅಭಿಪ್ರಾಯಗಳು ಮಾತ್ರ ಭಿನ್ನವಾಗಿವೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಭಾನುವಾರ ಹೇಳಿದ್ದಾರೆ. ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ರವೀಂದ್ರ ನಾಟ್ಯ ಮಂದಿರದ ಸಭಾಂಗಣದಲ್ಲಿ ಸಂತ ಶಿರೋಮಣಿ ರೋಹಿದಾಸರ 647ನೇ ಜನ್ಮದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಭಾಗವತ್‌ ಈ ರೀತಿ ಹೇಳಿದ್ದಾರೆ.

ದೇವರ ಮುಂದೆ ಎಲ್ಲರೂ ಸಮಾನರು. ಆತನ ಮುಂದೆ ಜಾತಿ, ಪಂಗಡ ಎಂಬುದೆಲ್ಲಾ ಇಲ್ಲ. ಇದು ಸೃಷ್ಟಿಯಾಗಿದ್ದು ಧರ್ಮ ಗುರುಗಳಿಂದ. ಇದು ತಪ್ಪು ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದಾರೆ. ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮೋಹನ್‌ ಭಾಗವತ್‌, ಕಾರ್ಮಿಕರ ಕೆಲಸದ ಬಗ್ಗೆ ಗೌರವ ಇಲ್ಲದಿರುವುದೇ ದೇಶದಲ್ಲಿ ನಿರುದ್ಯೋಗ ಸಮಸ್ಯೆಗೆ ಕಾರಣ. ಎಲ್ಲಾ ಕೆಲಸಗಳನ್ನೂ ಗೌರವಿಸುವ ಕೆಲಸ ಆಗಬೇಕು. ಒಟ್ಟಾರೆ ಉದ್ಯೋಗದಲ್ಲಿ ಶೇ.10ರಷ್ಟು ಮಾತ್ರವೇ ಸರ್ಕಾರಿ ಉದ್ಯೋಗ, ಉಳಿದ ಉದ್ಯೋಗದ ಪಾಲು ಶೇ. 20. ವಿಶ್ವದ ಯಾವುದೇ ದೇಶ ಶೇ. 30ಕ್ಕಿಂತ ಹೆಚ್ಚಿನ ಉದ್ಯೋಗ ನೀಡುವುದು ಸಾಧ್ಯವಿಲ್ಲ. ಹೀಗಾಗಿ ಜನರು ಉದ್ಯೋಗದ ಹಿಂದೆ ಓಡುವುದು ಬಿಡಬೇಕು ಎಂದು ಹೇಳಿದ್ದಾರೆ.

Tap to resize

Latest Videos

ಇದನ್ನು ಓದಿ: ಹಿಂದುಸ್ತಾನ ಹಿಂದುಸ್ತಾನವಾಗಿಯೇ ಇದ್ದರೆ ಭಾರತದಲ್ಲಿ ಮುಸ್ಲಿಮರು ಸುರಕ್ಷಿತ: ಮೋಹನ್ ಭಾಗವತ್‌

ನಾವು ಜೀವನೋಪಾಯವನ್ನು ಗಳಿಸಿದಾಗ, ಸಮಾಜದ ಬಗ್ಗೆ ನಮಗೆ ಜವಾಬ್ದಾರಿಯೂ ಇರುತ್ತದೆ. ಪ್ರತಿಯೊಂದು ಕೆಲಸವೂ ಸಮಾಜದ ಒಳಿತಿಗಾಗಿ ಇರುವಾಗ, ಯಾವುದೇ ಕೆಲಸವು ಹೇಗೆ ದೊಡ್ಡದು, ಚಿಕ್ಕದು ಅಥವಾ ವಿಭಿನ್ನವಾಗಿರುತ್ತದೆ? ಎಂದೂ ಮೋಹನ್‌ ಭಾಗವತ್‌ ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ನಮ್ಮ ಸೃಷ್ಟಿಕರ್ತರಿಗೆ ನಾವು ಸಮಾನರು. ಜಾತಿ, ಪಂಗಡ ಎಂಬುದೆಲ್ಲ ಇಲ್ಲ. ಈ ವ್ಯತ್ಯಾಸಗಳನ್ನು ನಮ್ಮ ಪುರೋಹಿತರು ಸೃಷ್ಟಿಸಿದ್ದಾರೆ, ಅದು ತಪ್ಪು ಎಂದೂ ಮೋಹನ್‌ ಭಾಗವತ್ ಹೇಳಿದ್ದಾರೆ. 

ಸಂತ ರೋಹಿದಾಸ್ ಅವರು ತುಳಸೀದಾಸ್, ಕಬೀರ್ ಮತ್ತು ಸೂರದಾಸ್‌ಗಿಂತ ಹೆಚ್ಚಿನ ಸ್ಥಾನಮಾನ ಹೊಂದಿದ್ದಾರೆ, ಅದಕ್ಕಾಗಿಯೇ ಅವರನ್ನು ಸಂತ ಶಿರೋಮಣಿ ಎಂದು ಪರಿಗಣಿಸಲಾಗಿದೆ ಎಂದೂ ಮೋಹನ್‌ ಭಾಗವತ್‌ ಹೇಳಿದರು. ಹಾಗೆ, ಶಾಸ್ತ್ರದಲ್ಲಿ ಅವರು ಬ್ರಾಹ್ಮಣರನ್ನು ಗೆಲ್ಲಲು ಸಾಧ್ಯವಾಗದಿದ್ದರೂ, ಅವರು ಅನೇಕ ಹೃದಯಗಳನ್ನು ಮುಟ್ಟಲು ಸಾಧ್ಯವಾಯಿತು ಮತ್ತು ಅವರರೆಲ್ಲ ದೇವರರನ್ನು ನಂಬುವಂತೆ ಮಾಡಿದರು" ಎಂದು ಅವರು ಹೇಳಿದರು. ಸಂತ ರೋಹಿದಾಸರು ಸಮಾಜಕ್ಕೆ ನಾಲ್ಕು ಮಂತ್ರಗಳನ್ನು ನೀಡಿದರು. ಅದುವೇ, ಸತ್ಯ, ಸಹಾನುಭೂತಿ, ಆಂತರಿಕ ಶುದ್ಧತೆ ಮತ್ತು ನಿರಂತರ ಶ್ರಮ ಹಾಗೂ ಪ್ರಯತ್ನ ಎಂದು ಮೋಹನ್‌ ಭಾಗವತ್ ಹೇಳಿದರು. 

ಇದನ್ನು ಓದಿ: LRC ಮತ್ತೆ ಭಾರತ ಆಳುವ ಕನಸು ಬಿಟ್ಟುಬಿಡಿ, RSS ಮುಖ್ಯಸ್ಥರ ಮಾತಿಗೆ ಮುಸ್ಲಿಮ್ ನಾಯಕರು ಕೆಂಡ!

ಇನ್ನೊಂದೆಡೆ, ನಿಮ್ಮ ಸುತ್ತಲೂ ನಡೆಯುತ್ತಿರುವ ಎಲ್ಲದರ ಬಗ್ಗೆ ಗಮನ ಕೊಡಿ, ಆದರೆ ಯಾವುದೇ ಸಂದರ್ಭದಲ್ಲಿ ಧರ್ಮವನ್ನು ಬಿಡಬೇಡಿ ಎಂದೂ ಆರ್‌ಎಸ್‌ಎಸ್‌ ಮುಖ್ಯಸ್ಥರು ಹೇಳಿದರು.

ಇದನ್ನೂ ಓದಿ: ಮುಸ್ಲಿಮರ ಜನಸಂಖ್ಯೆ ಕಡಿಮೆಯಾಗ್ತಿದೆ; ನಮ್ಮಿಂದಲೇ ಹೆಚ್ಚು ಕಾಂಡೋಮ್‌ ಬಳಕೆ: Asaduddin Owaisi

ಭಾರತದ ಯಾವ ಪ್ರದೇಶದಲ್ಲಿದೆ ಜನಸಂಖ್ಯಾ ಅಸಮತೋಲನ, ಕೇಳುತ್ತಿದೆ ಪ್ರತ್ಯೇಕತಾ ಕೂಗು!

 

click me!