ಮೋದಿಯ ಬಿಬಿಸಿ ಸಾಕ್ಷ್ಯಚಿತ್ರ ವಿರೋಧಿಸಿದ ಬೆನ್ನಲ್ಲೇ ಕಾಂಗ್ರೆಸ್‌ ತೊರೆದ ಮಾಜಿ ಕೇಂದ್ರ ಸಚಿವ ಆಂಟನಿ ಪುತ್ರ

By BK AshwinFirst Published Jan 25, 2023, 10:18 AM IST
Highlights

ನಿನ್ನೆಯ ಘಟನೆಗಳನ್ನು ಪರಿಗಣಿಸಿ, ನಾನು ಕಾಂಗ್ರೆಸ್‌ನಲ್ಲಿನ ನನ್ನ ಎಲ್ಲಾ ಪಾತ್ರಗಳನ್ನು ತೊರೆಯುವುದು ಸೂಕ್ತ ಎಂದು ನಾನು ನಂಬುತ್ತೇನೆ ಎಂದು ಅನಿಲ್ ಆಂಟನಿ ತಮ್ಮ ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ.

ನವದೆಹಲಿ (ಜನವರಿ 25, 2023): ಭಾರತ್ ಜೋಡೋ ಯಾತ್ರೆ ಅಂತಿಮ ಹಂತ ತಲುಪಿದ ಬೆನ್ನಲ್ಲೆ ಕಾಂಗ್ರೆಸ್‌ಗೆ ಮತ್ತೊಂದು ಆತಂಕ ಎದುರಾಗಿದೆ. ಪಿಎಂ ಮೋದಿ -- ಇಂಡಿಯಾ: ದಿ ಮೋದಿ ಕ್ವೆಶ್ಚನ್ ಕುರಿತು ಬಿಬಿಸಿ ಸಾಕ್ಷ್ಯಚಿತ್ರವನ್ನು ಟೀಕಿಸಿದ ಒಂದು ದಿನದ ನಂತರ ಕಾಂಗ್ರೆಸ್‌ಗೆ ಮಾಜಿ ಕೇಂದ್ರ ಸಚಿವ ಎಕೆ ಆಂಟನಿ ಅವರ ಪುತ್ರ ಹಾಗು ಕಾಂಗ್ರೆಸ್‌ ನಾಯಕರಾಗಿದ್ದ ಅನಿಲ್ ಕೆ ಆಂಟನಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಮೋದಿಯ ಬಿಬಿಸಿ ಸಾಕ್ಷ್ಯಚಿತ್ರ ವಿರೋಧಿಸಿದ ತಮ್ಮ ಟ್ವೀಟ್‌ ಅನ್ನು ಹಿಂತೆಗೆದುಕೊಳ್ಳಲು "ಅಸಹಿಷ್ಣು ಕರೆಗಳನ್ನು" ಎದುರಿಸುತ್ತಿದ್ದೇನೆ. ಆದರೆ, ಅದಕ್ಕೆ ನಾನು ಮಣಿಯಲಿಲ್ಲ ಎಂದು ಹೇಳಿದ್ದಾರೆ.. ಬದಲಿಗೆ, ಅವರು ಬುಧವಾರ ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ಪತ್ರವನ್ನು ನೀಡಿದ್ದಾರೆ.

"ನಿನ್ನೆಯ ಘಟನೆಗಳನ್ನು ಪರಿಗಣಿಸಿ, ನಾನು ಕಾಂಗ್ರೆಸ್‌ನಲ್ಲಿನ ನನ್ನ ಎಲ್ಲಾ ಪಾತ್ರಗಳನ್ನು ತೊರೆಯುವುದು ಸೂಕ್ತ ಎಂದು ನಾನು ನಂಬುತ್ತೇನೆ" ಎಂದು ಅನಿಲ್ ಆಂಟನಿ ತಮ್ಮ ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ. ಕೆಪಿಸಿಸಿ ಡಿಜಿಟಲ್ ಮಾಧ್ಯಮದ ಸಂಚಾಲಕ ಮತ್ತು  ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ಹಾಗೂ ಡಿಜಿಟಲ್ ಸಂವಹನ ಸೆಲ್‌ನ ರಾಷ್ಟ್ರೀಯ ಸಂಯೋಜಕ ಹುದ್ದೆ ಸೇರಿ ಎರಡೂ ಹುದ್ದೆಯನ್ನು ತ್ಯಜಿಸಿರುವುದಾಗಿಯೂ ತಿಳಿದುಬಂದಿದೆ. 

ಇದನ್ನು ಓದಿ: Modi Documentary Controversy: ಬಿಬಿಸಿ ವಿರುದ್ಧ ಆಕ್ರೋಶ ಹೊರಹಾಕಿದ ಕಾಂಗ್ರೆಸ್‌ ನಾಯಕ ಎಕೆ ಆಂಟನಿ ಪುತ್ರ!

I have resigned from my roles in .Intolerant calls to retract a tweet,by those fighting for free speech.I refused. wall of hate/abuses by ones supporting a trek to promote love! Hypocrisy thy name is! Life goes on. Redacted resignation letter below. pic.twitter.com/0i8QpNIoXW

— Anil K Antony (@anilkantony)

ಈ ಸಂಬಂಧ ಕಾಂಗ್ರೆಸ್‌ ಹಿರಿಯ ನಾಯಕ ಎ.ಕೆ. ಆಂಟನಿ ಪುತ್ರ ಟ್ವೀಟ್‌ ಮೂಲಕ ಮಾಹಿತಿ ನೀಡಿದ್ದಾರೆ. ಜತೆಗೆ, ರಾಜೀನಾಮೆ ಪತ್ರವನ್ನು ಸಹ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕಳೆದ 24 ಗಂಟೆಗಳಲ್ಲಿ ನಡೆದ ಬಹಳಷ್ಟು ಸಂಗತಿಗಳು, ವಿಶೇಷವಾಗಿ ಕಾಂಗ್ರೆಸ್‌ನ ಕೆಲವರಿಂದ ಬಂದ ಸಂದೇಶಗಳು ನನಗೆ ತುಂಬಾ ನೋವುಂಟು ಮಾಡಿದೆ. ನನ್ನ ಟ್ವೀಟ್ ನಂತರ, ರಾತ್ರಿಯಿಡೀ ನನಗೆ ಬೆದರಿಕೆ ಕರೆಗಳು ಮತ್ತು ದ್ವೇಷದ ಸಂದೇಶಗಳು ಬರುತ್ತಿವೆ ಎಂದೂ ಅವರು ನೋವು ತೋಡಿಕೊಂಡಿದ್ದಾರೆ.

A lot of things that happened in the last 24 hours, especially from certain corners of Congress have hurt me a lot. After my tweet, I was getting threat calls and hate messages all through the night: Anil K Antony, Digital communications, Kerala Congress on his resignation pic.twitter.com/TEhMbnuCVG

— ANI (@ANI)

ನಮ್ಮಲ್ಲಿ ಯಾವುದೇ ಆಂತರಿಕ ಭಿನ್ನಾಭಿಪ್ರಾಯಗಳಿದ್ದರೂ, ಈ ದೇಶದಲ್ಲಿ ವಿಭಜನೆಯನ್ನು ಸೃಷ್ಟಿಸಲು ಬಾಹ್ಯ ಏಜೆನ್ಸಿಗಳಿಂದ ಅದನ್ನು ಬಳಸಿಕೊಳ್ಳಲು ನಾವು ಬಿಡಬಾರದು ಎಂದು ಬಿಬಿಸಿ ಸಾಕ್ಷ್ಯಚಿತ್ರಕ್ಕೆ ಅನಿಲ್ ಕೆ. ಆಂಟನಿ ವಿರೋಧಿಸಿದ್ದರು. 

| No matter whatever internal differences we may have, we should not let that be exploited by external agencies to create division in this country: Anil K Antony, Digital communications, Kerala Congress over BBC documentary on PM Modi pic.twitter.com/AYYtKrgAkK

— ANI (@ANI)

ಇದನ್ನೂ ಓದಿ: ವಿವಾದಿತ ಮೋದಿ ಸಾಕ್ಷ್ಯಚಿತ್ರಕ್ಕೆ ಬಿಬಿಸಿ ಸಂಸ್ಥೆ ಸಮರ್ಥನೆ: ಭಾರತ, ರಿಷಿ ಸುನಕ್‌ ಟೀಕೆಗೆ ಸ್ಪಷ್ಟನೆ

ಈ ಮಧ್ಯೆ, ತಮ್ಮ ರಾಜೀನಾಮೆ ಪತ್ರದಲ್ಲಿ, ನಾಯಕತ್ವದ ಸುತ್ತಲಿನ ಕೂಟವು 'ಸೈಕೋಫ್ಯಾಂಟ್‌ಗಳು ಮತ್ತು ಚಮ್ಚಾ'ಗಳ ಗುಂಪಿನೊಂದಿಗೆ ಮಾತ್ರ ಕೆಲಸ ಮಾಡಲು ಉತ್ಸುಕವಾಗಿದ್ದಾರೆ ಎಂದು ನಾನು ಅರಿತುಕೊಂಡಿದ್ದೇನೆ. ದುಃಖಕರವೆಂದರೆ, ನಮಗೆ ಹೆಚ್ಚು ಸಾಮಾನ್ಯ ನೆಲೆಯಿಲ್ಲ ಎಂದೂ ಅನಿಲ್ ಕೆ. ಆಂಟನಿ ಬರೆದಿದ್ದಾರೆ. 

ನಾನು ನನ್ನದೇ ಆದ ವಿಶಿಷ್ಟ ಶಕ್ತಿಯನ್ನು ಹೊಂದಿದ್ದೇನೆ ಎಂದು ನನಗೆ ಖಾತ್ರಿಯಿದೆ. ಅದು ಹಲವಾರು ರೀತಿಯಲ್ಲಿ ಪಕ್ಷಕ್ಕೆ ಅತ್ಯಂತ ಪರಿಣಾಮಕಾರಿಯಾಗಿ ಕೊಡುಗೆ ನೀಡಲು ನನಗೆ ಅನುವು ಮಾಡಿಕೊಟ್ಟಿದೆ. ಆದರೆ, ಈಗ ನೀವು, ನಿಮ್ಮ ಸಹೋದ್ಯೋಗಿಗಳು ಮತ್ತು ನಾಯಕತ್ವದ ಸುತ್ತಲಿನ ಕೂಟಗಳು ಮಾತ್ರ ಎಂದು ನನಗೆ ಚೆನ್ನಾಗಿ ತಿಳಿದಿದೆ. ಪ್ರಶ್ನಾತೀತವಾಗಿ ನಿಮ್ಮ ಕರೆಗೆ ಬದ್ಧರಾಗಿರುವ ಸೈಕೋಫ್ಯಾಂಟ್‌ಗಳು ಮತ್ತು ಚಮ್ಚಾಗಳ ಗುಂಪಿನೊಂದಿಗೆ ಕೆಲಸ ಮಾಡಲು ಉತ್ಸುಕರಾಗಿದ್ದಾರೆ. ಇದು ಅರ್ಹತೆಯ ಏಕೈಕ ಮಾನದಂಡವಾಗಿದೆ. ದುಃಖಕರವೆಂದರೆ ನಮಗೆ ಹೆಚ್ಚು ಸಾಮಾನ್ಯ ನೆಲೆಯಿಲ್ಲ ಎಂದು ಅವರ ರಾಜೀನಾಮೆ ಪತ್ರದಲ್ಲಿ ಬರೆಯಲಾಗಿದೆ.

ಇದನ್ನೂ ಓದಿ: ಮೋದಿ ಸಾಕ್ಷ್ಯಚಿತ್ರ ಮತ್ತಷ್ಟು ಕಿಚ್ಚು; ಕೆಲವೆಡೆ ಪ್ರದರ್ಶನ: ಸತ್ಯ ಹೊರಗೆ ಬಂದೇ ಬರುತ್ತದೆ ಎಂದ ರಾಹುಲ್‌ ಗಾಂಧಿ

 2002 ರ ಗುಜರಾತ್ ಗಲಭೆಗಳ ಸಾಕ್ಷ್ಯಚಿತ್ರದ ವಿವಾದದ ನಡುವೆ, ಬಿಬಿಸಿಯನ್ನು ಪೂರ್ವಾಗ್ರಹಗಳ ಸುದೀರ್ಘ ಇತಿಹಾಸ ಹೊಂದಿರುವ ರಾಜ್ಯ ಪ್ರಾಯೋಜಿತ ಚಾನೆಲ್ ಎಂದು ಪರಿಗಣಿಸುವುದಾಗಿ ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಟೀಕಿಸಿದ ಅನಿಲ್ ಆಂಟೋನಿ ಅವರು ಮಂಗಳವಾರ ಹೇಳಿದ್ದಾರೆ.  

ಬಿಜೆಪಿಯೊಂದಿಗಿನ ದೊಡ್ಡ ಭಿನ್ನಾಭಿಪ್ರಾಯಗಳ ಹೊರತಾಗಿಯೂ, ಭಾರತದಲ್ಲಿನವರು ಪೂರ್ವಾಗ್ರಹಗಳ ಸುದೀರ್ಘ ಇತಿಹಾಸ ಹೊಂದಿರುವ ಯುಕೆ ರಾಜ್ಯ ಪ್ರಾಯೋಜಿತ ಚಾನೆಲ್ ಬಿಬಿಸಿ ಮತ್ತು ಇರಾಕ್ ಯುದ್ಧದ ಹಿಂದಿನ ಮಾಸ್ಟರ್‌ಮೈಂಡ್‌ ಜಾಕ್ ಸ್ಟ್ರಾ ಅವರ ಸಾಕ್ಷ್ಯಚಿತ್ರವನ್ನು ಭಾರತೀಯ ವಿವಿಗಳಲ್ಲಿ ವೀಕ್ಷಿಸುವುದು ಅಪಾಯಕಾರಿ ಆದ್ಯತೆ ಎಂದು ನಾನು ಭಾವಿಸುತ್ತೇನೆ. ಇದು ನಮ್ಮ ಸಾರ್ವಭೌಮತ್ವವನ್ನು ಹಾಳುಮಾಡುತ್ತದೆ ಎಂದೂ ಮಂಗಳವಾರ ಟ್ವೀಟ್ ಮಾಡಿದ್ದಾರೆ.
 

Despite large differences with BJP, I think those in 🇮🇳 placing views of BBC, a 🇬🇧 state sponsored channel with a long history of 🇮🇳 prejudices,and of Jack Straw, the brain behind the Iraq war, over 🇮🇳 institutions is setting a dangerous precedence,will undermine our sovereignty.

— Anil K Antony (@anilkantony)

ಇದನ್ನೂ ಓದಿ: ಬ್ಯಾನ್‌ ಆದರೂ ಹೈದರಾಬಾದ್‌ ವಿವಿಯಲ್ಲಿ ಮೋದಿ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ: ಕೇರಳ, ಜೆಎನ್‌ಯೂನಲ್ಲೂ ಸ್ಕ್ರೀನಿಂಗ್..! 

click me!